ದರ್ಶನ್ ಗೂ ಮೊದಲೇ ಅಭಿಮಾನಿ ಎಂದು ಹಚ್ಚೆ ಹಾಕಿಸಿಕೊಂಡಿದ್ದ ಕನ್ನಡದ ಆ ಸ್ಟಾರ್ ನಟ ಯಾರು ಗೊತ್ತಾ? ಒಬ್ಬ ಸ್ಟಾರ್ ಗೆ (Star) ಅಭಿಮಾನಿಗಳು (Fan’s) ಎಷ್ಟು ಮುಖ್ಯ ಎನ್ನುವುದು ಬಹಳ ಗಂಭೀರವಾದ ವಿಷಯ. ಯಾಕೆಂದರೆ ಸಿನಿಮಾದ ಅರ್ಧ ಗೆಲುವು ನಿರ್ಧಾರ ಆಗುವುದು ಅಭಿಮಾನಿಗಳಿಂದಲೇ. ಇಂದು ಇದು ಕಮರ್ಷಿಯಲ್ ವಿಷಯ ಆಗಿರಬಹುದು, ಆದರೆ ಕಾಲದಿಂದಲೂ ಅಭಿಮಾನಿಗಳಿಂದಲೇ ಕಲಾವಿದರ ಬದುಕು ನಡೆಯುತ್ತಿರುವುದು. ಇದನ್ನು ಅರಿತಿದ್ದ, ಕನ್ನಡದ ಸರಳ ಸಜ್ಜನಿಕೆಯ ಮೇರು ಪರ್ವತ ಕಲಾ ಕಂಠೀರವ ಡಾಕ್ಟರ್ ರಾಜಕುಮಾರ್ (Dr.Rajkumar) ಅವರು ಅಭಿಮಾನಿಗಳನ್ನೇ ದೇವರು ಎಂದು ಕರೆದಿದ್ದು.
ಅಭಿಮಾನಿಗಳನ್ನು ದೇವರ ಸಮಕ್ಕೆ ಕಾಣುತ್ತಿದ್ದ ಅಣ್ಣಾವ್ರಿಂದ ಇಂತಹದೊಂದು ಸಂಸ್ಕೃತಿಗೆ ನಾಂದಿ ಸಿಕ್ಕಿದ್ದು ಎಂದರೆ ಅದು ಸುಳ್ಳಲ್ಲ. ಇಂದಿಗೂ ಸಹ ರಾಜವಂಶದ ಎಲ್ಲರೂ ಅಭಿಮಾನಿಗಳೇ ನಮ್ಮ ಮನೆ ದೇವರು ಎಂದು ಹೇಳಿಕೊಳ್ಳುತ್ತಾರೆ. ಮುಂದುವರೆದು ಈಗ ಎಲ್ಲಾ ಸ್ಟಾರ್ ನಟರು ಕೂಡ ತಮ್ಮ ತಮ್ಮ ಅಭಿಮಾನಿಗಳ ಮೇಲೆ ಅಪಾರ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಇದಕ್ಕೆ ಸಾವಿರಾರು ರೀತಿಯ ಉದಾಹರಣೆಗಳು ಸಿಗುತ್ತವೆ.
ಒಬ್ಬ ಕಲಾವಿದನನ್ನು ಸ್ನೇಹಿತನಿಗಿಂತ ಸಹೋದರರಿಗಿಂತ ಹೆಚ್ಚಾಗಿ ಕಂಡು ಅವರನ್ನೇ ರೋಲ್ ಮಾಡಲ್ ಆಗಿ ಮಾಡಿಕೊಂಡು ಆತನ ಮೇಲೆ ಹುಚ್ಚು ಪ್ರೀತಿ ಇಟ್ಟುಕೊಳ್ಳುವ ಆ ಭಾವನೆಯನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಈಗ ಸ್ಟಾರ್ ನಟರಿಂದಲೂ ಕೂಡ ಅಭಿಮಾನಿಗಳಿಗೆ ಅಷ್ಟೇ ಮಟ್ಟದ ಪ್ರೀತಿ ಸಿಗುತ್ತಿದೆ ಅದಕ್ಕೆ ಸಿಕ್ಕಿರುವ ಸಾಕ್ಷಿ ಎಂದರೆ ಕನ್ನಡದ ಸ್ಟಾರ್ ಹೀರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರು ತಮ್ಮ ಅಭಿಮಾನಿಗಳಿಗೋಸ್ಕರ ಅವರ ಹೆಸರನ್ನೆಲ್ಲ ಒಟ್ಟಿಗೆ ಸೇರಿಸಿ ಹಚ್ಚೆ (Tatto) ಹಾಕಿಸಿಕೊಂಡಿರುವುದು.
ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಹೀರೋ ಎನ್ನುವ ಖ್ಯಾತಿಗೆ ದರ್ಶನ್ ಅವರು ಒಳಗಾಗಿದ್ದಾರೆ. ದರ್ಶನ್ ಅವರಿಗೆ ಅಭಿಮಾನಿಗಳ ಮೇಲೆ ಅಷ್ಟೇ ಪ್ರೀತಿ ಇದೆ. ಹಾಗಾಗಿ ಅವರನ್ನು ನನ್ನ ಸಲೆಬ್ರೆಟಿಸ್ ಎಂದು ಪ್ರೀತಿಯಿಂದ ಕರೆಯುತ್ತಾರೆ ಇನ್ನು ದರ್ಶನ್ ಮೇಲೆ ಅಭಿಮಾನಿಗಳಿಗೆ ಇಟ್ಟಿರುವ ಪ್ರೀತಿಗೆ ಈಗ ಮಾಧ್ಯಮಗಳಿಗೆ ಸೆಡ್ಡು ಹೊಡೆದು ಕ್ರಾಂತಿ (Kranthi) ಸಿನಿಮಾವನ್ನು ಪ್ರಚಾರ ಮಾಡಿ ಗೆಲ್ಲಿಸಿರುವುದೇ ಸಾಕ್ಷಿ. ಹೀಗೆ ಸದಾ ಕಾಲ ದರ್ಶನ್ ಅವರಿಗೆ ಬೆನ್ನಿಗೆ ನಿಂತಿರುವ ಅವರ ಅಭಿಮಾನಿಗಳು ದರ್ಶನ್ ಮೇಲೆ ಇಟ್ಟಿರುವ ಪ್ರೀತಿಗೆ ಟ್ರ್ಯುಬ್ಯೂಟ್ ಕೊಡುವ ಸಲುವಾಗಿ ದರ್ಶನ್ ಅವರು ಈ ರೀತಿ ಎದೆ ಮೇಲೆ ನನ್ನ ಸೆಲೆಬ್ರಿಟಿಸ್ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ.
ಇದನ್ನು ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ಸ್ಟಾರ್ ನಟನೊಬ್ಬ ಅಭಿಮಾನಿಗಳಾಗಿ ತೋರಿಸಿರುವ ಪ್ರೀತಿ ಎಂದು ಕರೆಯಲಾಗುತ್ತಿದೆ. ಆದರೆ ಇದಕ್ಕೂ ಮೊದಲೇ ಕನ್ನಡದ ಮತ್ತೊಬ್ಬ ನಟ ಇದೇ ರೀತಿ ಮಾಡಿದ್ದರು. ಸಾಹಸ ನಿರ್ದೇಶಕರಾಗಿ, ನಾಯಕ ನಟನಾಗಿ ಈಗ ನಿರ್ದೇಶನದಲ್ಲೂ ಸಹ ಪಳಗುತ್ತಿರುವ ದುನಿಯಾ ವಿಜಯ್ (Duniya Vijay) ಅವರು ಸಹ ಇದೇ ರೀತಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ದುನಿಯಾ ವಿಜಯ ಅವರು ಅವರ ತಾಯಿಯ ಮೇಲೆ ಇರುವ ಪ್ರೀತಿಯಷ್ಟೇ ಅಭಿಮಾನಿಗಳ ಮೇಲು ಪ್ರೀತಿ ಹೊಂದಿದ್ದಾರೆ.
ಹಾಗಾಗಿ ಅವ್ವ ಅಭಿಮಾನಿ ಎರಡನ್ನು ಸೇರಿಸಿ ಅವರು ಸಹ ಹಚ್ಚೆ ಹಾಕಿಸಿಕೊಂಡಿದ್ದಾರೆ. ಈಗ ಅವರ ದೇಹದ ಮೇಲಿರುವ ಆ ಹಚ್ಚೆ ವೈರಲ್ ಆಗುತ್ತಿದೆ ಮತ್ತು ಇತ್ತೀಚೆಗೆ ನಿ’ಧ’ನರಾದ ನಮ್ಮೆಲ್ಲರ ಪ್ರೀತಿಯ ದೈವ ಮಾನವ ಪುನೀತ್ ರಾಜಕುಮಾರ್ (Punith rajkumar) ಅವರಿಗೆ ಸಹ ಇಂಥದೊಂದು ಆಸೆ ಇತ್ತು ಎಂದು ತಿಳಿದು ಬಂದಿದೆ. ಅಭಿಮಾನಿಗಳೇ ನಮ್ಮ ಮನೆ ದೇವರು ಎಂದು ಅವರು ಸಹ ಎದೆ ಮೇಲೆ ಹಚ್ಚೆ ಹಾಕಿಸಿಕೊಳ್ಳಬೇಕು ಎಂದು ಆಸೆ ಪಟ್ಟಿದ್ದರಂತೆ ಆದರೆ. ಆ ಆಸೆ ಪೂರ್ತಿಗೊಳ್ಳುವ ಮುನ್ನವೇ ಅವರು ನಮ್ಮನ್ನೆಲ್ಲ ಅ’ಗ’ಲಿದ್ದಾರೆ .ಇದನ್ನು ಜೇಮ್ಸ್ ಚಿತ್ರದ ನಿರ್ಮಾಪಕರಾದ ಕಿಶೋರ್ ಪತ್ತಿಕೊಂಡ ಅವರು ಸಿನಿಮಾ ರಿಲೀಸ್ ವೇಳೆ ಹೇಳಿದ್ದರು.