ಮನೆಯಲ್ಲಿರುವಂತಹ ಮಹಿಳೆಯರಿಗೆ ಕೆಲಸದ ವಿಷಯವಾಗಿ ಅಂದರೆ ಯಾವ ಕೆಲಸವನ್ನು ಹೇಗೆ ಮಾಡುವುದರಿಂದ ಆ ಕೆಲಸವನ್ನು ಕಡಿಮೆ ಸಮಯದಲ್ಲಿ ಹೇಗೆ ಮುಗಿಸಬಹುದು ಎನ್ನುವಂತಹ ಮಾಹಿತಿ ತಿಳಿದಿರುವುದಿಲ್ಲ. ಹೌದು ಅದರಲ್ಲೂ ಕೆಲಸಕ್ಕೆ ಹೋಗುವಂತಹ ಮಹಿಳೆಯರು ಯಾವ ಕೆಲಸವನ್ನು ಹೇಗೆ ಸುಲಭವಾಗಿ ಮಾಡಬಹುದು ಎನ್ನುವಂತಹ ವಿಷಯಗಳನ್ನು ತಿಳಿದುಕೊಳ್ಳುತ್ತಿರುತ್ತಾರೆ.
ಅಂತವರಿಗೆ ಈ ದಿನ ನಾವು ಹೇಳುವಂತಹ ಕೆಲವೊಂದಷ್ಟು ಮಾಹಿತಿಗಳು ತುಂಬಾ ಅನುಕೂಲವಾಗುತ್ತದೆ ಎಂದು ಹೇಳಬಹುದು. ಹಾಗಾದರೆ ಆ ಒಂದು ಟಿಪ್ಸ್ ಗಳು ಯಾವುದು.? ಹಾಗೂ ಅದನ್ನು ಹೇಗೆ ಮಾಡುವುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.
ಮದುವೆಗೂ ಮುನ್ನ ಇದನ್ನು ತಪ್ಪದೆ ಎಲ್ಲರೂ ತಿಳಿದುಕೊಂಡಿರಬೇಕು.!
ಮನೆ ಎಂದ ಮೇಲೆ ಅಲ್ಲಿ ಪ್ರತಿದಿನ ಆಹಾರವನ್ನು ತಯಾರಿಸಲೇಬೇಕು ಹೌದು ಮನೆಯಲ್ಲಿ ಇರುವಂತಹ ಪ್ರತಿಯೊಬ್ಬರೂ ಕೂಡ ಪ್ರತಿದಿನ ಹೊರಗಡೆ ಆಹಾರವನ್ನು ಸೇವನೆ ಮಾಡಲು ಸಾಧ್ಯವಿಲ್ಲ ಹಾಗಾಗಿ ಮನೆಯಲ್ಲಿಯೇ ಶುದ್ಧವಾಗಿ ರುಚಿಯಾಗಿ ಆಹಾರವನ್ನು ತಯಾರಿಸುತ್ತಾರೆ. ಅದರಲ್ಲೂ ನಮ್ಮ ಪ್ರತಿನಿತ್ಯದ ಆಹಾರ ತಯಾರಿಸುವುದಕ್ಕೆ ಬೆಳ್ಳುಳ್ಳಿಯ ಅವಶ್ಯಕತೆ ಅತ್ಯಗತ್ಯವಾಗಿದೆ ಹಾಗಾಗಿ ಅದನ್ನು ಅಡುಗೆ ಮಾಡುವಂತಹ ಸಮಯದಲ್ಲಿ ತಕ್ಷಣವೇ ಅದರ ಸಿಪ್ಪೆಯನ್ನು ಬಿಡಿಸುವುದು ಸ್ವಲ್ಪಮಟ್ಟಿಗೆ ನಿಧಾನವಾಗಬಹುದು.
ಆದ್ದರಿಂದ ಅದನ್ನು ಕೆಲವೊಂದಷ್ಟು ಜನ ಹಿಂದಿನ ದಿನವೇ ಬಿಡಿಸಿಟ್ಟುಕೊಳ್ಳುತ್ತಾರೆ. ಹಾಗೇನಾದರೂ ನೀವು ಹಿಂದಿನ ದಿನ ಬಿಡಿಸಲು ಸಾಧ್ಯವಾಗಲಿಲ್ಲ ಎಂದರೆ ನೀವು ಒಂದು ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಅದನ್ನು ತೇವ ಮಾಡಿ ಅದರ ಮೇಲೆ ಬೆಳ್ಳುಳ್ಳಿ ಎಸಳನ್ನು ಹಾಕಿ ಅದರ ಮೇಲೆ ಆ ಬಟ್ಟೆಯನ್ನು ಮುಚ್ಚಿ ಐದರಿಂದ 10 ನಿಮಿಷ ಬಿಟ್ಟು ಆನಂತರ ನೀವು ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಭವಾಗಿ ಯಾವುದೇ ಶ್ರಮಪಡದೆ ಬೇಗ ಬಿಡಿಸಬಹುದು.
* ಇನ್ನು ಎರಡನೆಯದಾಗಿ ಮನೆಯಲ್ಲಿ ಪ್ರತಿ ಬಾರಿ ಬಟ್ಟೆಯನ್ನು ಒಗೆದ ನಂತರ ಅದನ್ನು ಸ್ವಚ್ಛವಾಗಿ ಮಡಚಿ ಒಂದು ಕಡೆ ಇಡುತ್ತೇವೆ ಆದರೆ ಕೆಲವೊಮ್ಮೆ ಹಾಗೆ ಇಡುವುದರಿಂದ ಬಟ್ಟೆಗಳು ಮುದುರಿಕೊಳ್ಳುತ್ತಿರು ತ್ತದೆ ಅಂದರೆ ಅದು ಸ್ವಚ್ಛವಾಗಿ ಕಾಣುವುದಿಲ್ಲ. ಹಾಗಾಗಿ ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿದರೆ ನಿಮ್ಮ ಬಟ್ಟೆ ಐರನ್ ಮಾಡಿದ ರೀತಿಯಲ್ಲಿಯೇ ಕಾಣಿಸುತ್ತದೆ.
ಹೌದು ಮನೆಯಲ್ಲಿ ಯಾವುದಾದರು ಹೊಸ ಬಟ್ಟೆಯನ್ನು ತೆಗೆದುಕೊಂಡರೆ ಅದಕ್ಕೆ ಕೊಟ್ಟಿರುವಂತಹ ಕವರ್ ಅನ್ನು ಬಳಸಿ ಅಂದರೆ ಆ ಕವರ್ ಒಳಗಡೆ ಬಟ್ಟೆಯನ್ನು ಮಡಚಿ ಅದರ ಒಳಗಡೆ ಇಟ್ಟು ಅದನ್ನು ನಿಮ್ಮ ಹಾಸಿಗೆಯ ಕೆಳಗಡೆ ಇಡುವುದು ಅಥವಾ ನೀವು ಕೂರುವಂತಹ ಕುರ್ಚಿಯ ಮೇಲೆ ಇಟ್ಟು ಅದರ ಮೇಲೆ ಕುಳಿತುಕೊಳ್ಳುವುದರ ಮೂಲಕ ಆ ಬಟ್ಟೆ ಐರನ್ ಮಾಡಿದ ರೀತಿಯಲ್ಲಿ ಇರುತ್ತದೆ.
ಹಾಗೂ ಬಟ್ಟೆ ಆಚೆ ಈಚೆ ಎಲ್ಲೂ ಕೂಡ ಹೋಗುವುದಿಲ್ಲ ಹಾಗಾಗಿ ಈ ಒಂದು ವಿಧಾನ ತುಂಬಾ ಉಪಯೋಗವಾಗುತ್ತದೆ ಎನ್ನಬಹುದಾಗಿದೆ.
ನಾವು ಪ್ರತಿ ಬಾರಿ ಬಟ್ಟೆಯನ್ನು ವಾಷಿಂಗ್ ಮಷೀನ್ ನಲ್ಲಿ ಒಗೆಯುವ ಸಮಯದಲ್ಲಿ ಕೆಲವೊಮ್ಮೆ ಬಟ್ಟೆಯಲ್ಲಿರುವಂತಹ ಕೊಳೆ ಸಂಪೂರ್ಣ ವಾಗಿ ಹೋಗಿರುವುದಿಲ್ಲ ಆದ್ದರಿಂದ ಕೆಲವೊಂದಷ್ಟು ಜನ ಮೊದಲೇ ಶರ್ಟ್ ಕಾಲರ್ ಅನ್ನು ಉಜ್ಜಿ ಆನಂತರ ವಾಷಿಂಗ್ ಮಷೀನ್ ಒಳಗಡೆ ಹಾಕುತ್ತಾರೆ.
ಆದರೆ ಈಗ ನಾವು ಹೇಳುವಂತಹ ಈ ಒಂದು ವಸ್ತುವನ್ನು ನೀವು ವಾಷಿಂಗ್ ಮಷೀನ್ ಗೆ ಮಿಕ್ಸ್ ಮಾಡಿ ಆನಂತರ ಬಟ್ಟೆಯನ್ನು ಒಗೆಯುವುದರಿಂದ ಬಟ್ಟೆಯಲ್ಲಿರುವಂತಹ ಕೊಳೆ ಸಂಪೂರ್ಣವಾಗಿ ದೂರವಾಗುತ್ತದೆ. ವಾಷಿಂಗ್ ಮಷೀನ್ ಗೆ ಬಟ್ಟೆ ಹಾಕಿದ ನಂತರ ನೀವು ಸೋಪ್ ಪೌಡರ್ ಅಥವಾ ಸೋಪ್ ಆಯಿಲ್ ಹಾಕಿದ ಮೇಲೆ ಒಂದರಿಂದ ಎರಡು ಚಮಚ ಪುಡಿ ಉಪ್ಪನ್ನು ಹಾಕಿ ಆನಂತರ ನೀವು ಬಟ್ಟೆಯನ್ನು ಒಗೆಯುವುದ ರಿಂದ ಬಟ್ಟೆಯಲ್ಲಿರುವಂತಹ ಕೊಳೆ ಸಂಪೂರ್ಣವಾಗಿ ದೂರವಾಗುತ್ತದೆ.