ಕೇವಲ 5 ನಿನಿಷದಲ್ಲಿ ನಿಮ್ಮ ಮೊಬೈಲ್ ಮೂಲಕವೇ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್, ಅಡ್ರೆಸ್, ಹೆಸರು ಸೇರಿಸುವ ವಿಧಾನ.!

 

ಆಧಾರ್ ಕಾರ್ಡ್ ಈಗ ದೇಶದ ಅತಿ ಪ್ರಮುಖ ದಾಖಲೆ ಆಗಿದೆ. ಯಾವುದೇ ಖಾಸಗಿ ವಲಯದ ಅಥವಾ ಸರ್ಕಾರಿ ವಲಯದ ಕೆಲಸಗಳು ಕೂಡ ಆಧಾರ್ ಕಾರ್ಡ್ ಇದ್ದರೆ ಮಾತ್ರ ಮಾನ್ಯ. ಇಷ್ಟೊಂದು ಅವಶ್ಯಕತೆ ಇರುವ ಈ ಗುರುತಿನ ಚೀಟಿಯ ಎಲ್ಲ ಮಾಹಿತಿಗಳು ಸರಿಯಾಗಿರುವುದು ಅಷ್ಟೇ ಮುಖ್ಯ ಇವುಗಳ ಜೊತೆಗೆ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಅಷ್ಟೇ ಮುಖ್ಯ. ಯಾಕೆಂದರೆ ಸರ್ಕಾರವು ತನ್ನ ಹಲವು ಯೋಜನೆಗಳಲ್ಲಿ ಈ ರೀತಿಯ ಒಂದು ನಿಯಮವನ್ನು ಹೇರಿದೆ.

ಆಧಾರ್ ಕಾರ್ಡ್ ಅಲ್ಲಿ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ ಅನೇಕ ವಿಷಯಗಳ ಅಪ್ಡೇಟ್ ಮೊಬೈಲ್ ಸಂಖ್ಯೆ ಮೂಲಕ ಮೆಸೇಜ್ ರೂಪದಲ್ಲಿ ವ್ಯಕ್ತಿಗೆ ತಲುಪುತ್ತದೆ. ಆದ ಕಾರಣ ಇದನ್ನು ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಭವಿಷ್ಯದ ದಿನಗಳಲ್ಲಿ ಯಾವುದೇ ಬದಲಾವಣೆಗಳನ್ನು ಅಥವಾ ಅಪ್ಡೇಟ್ಗಳನ್ನು ಆಧಾರ್ ಕಾರ್ಡ್ ಅಲ್ಲಿ ಮಾಡಬೇಕು ಎಂದಾಗ ಆ ಸಮಯದಲ್ಲೂ ಕೂಡ ಮೊಬೈಲ್ ಸಂಖ್ಯೆ ಎಂಟ್ರಿ ಮಾಡಿ OTP ಪಡೆದು ಆ ಮೂಲಕ ಮಾಡಬೇಕು.

ಆದ ಕಾರಣ ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡುವುದು ಮುಖ್ಯವಾದ. ಕೆಲಸ ಹಳ್ಳಿಗಳಲ್ಲಿ ಆಧಾರ್ ಕ್ಯಾಂಪ್ ಎಂದು ನಡೆಯುತ್ತದೆ. ಅಲ್ಲಿಗೆ ಹೋಗಿ ಆಧಾರ್ ಕಾರ್ಡ್ ಅಲ್ಲಿ ಯಾವುದೇ ಬದಲಾವಣೆಗಳು ಇದ್ದರೆ ಅಥವಾ ಇನ್ಯಾವುದೇ ಸಮಸ್ಯೆಗಳು ಇದ್ದರೂ ಇನ್ನೂ ಯಾವುದಾದರೂ ಸೇರ್ಪಡೆ ಆಗದೆ ಬಿಟ್ಟು ಹೋಗಿದ್ದರು ಅದರ ಪುರಾವೆಗಳನ್ನು ಕೊಟ್ಟು, ಬಯೋಮೆಟ್ರಿಕ್ ಮಾಹಿತಿ ಕೊಟ್ಟು ಅಪ್ಡೇಟ್ ಮಾಡಿಸಿಕೊಳ್ಳಬಹುದು.

ಇದು ಸಾಧ್ಯವಾಗಿಲ್ಲ ಎಂದರೆ ನೀವು ಆನ್ಲೈನ್ ಮೂಲಕವೂ ಕೂಡ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದು. ನಿಮ್ಮ ಮೊಬೈಲ್ ಸಂಖ್ಯೆ ಎಂಟ್ರಿ ಮಾಡುವುದಕ್ಕೆ ಆನ್ಲೈನ್ ಮೂಲಕ ಯಾವ ರೀತಿ ಹೋಗಬೇಕು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ನೋಡಿ. ಮೊದಲಿಗೆ UIDAIನ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಿ. ನೀವು ಬದಲಾಯಿಸಬೇಕಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಕ್ಯಾಪ್ಚ ಎಂಟ್ರಿ ಮಾಡಿದರೆ ಆ ಸಂಖ್ಯೆಗೆ ಒಂದು OTP ಜನರೇಟ್ ಆಗುತ್ತದೆ. ಅದನ್ನು ಹಾಕಿ ಸಬ್ಮಿಟ್ ಕ್ಲಿಕ್ ಮಾಡಿದಾಗ ಹೊಸ ಪೇಜ್ ತೆಗೆಯುತ್ತದೆ.

ಹೆಸರು ಮತ್ತು ಆಧಾರ್ ಸಂಖ್ಯೆಯನ್ನು ತಪ್ಪದೆ ಆಧಾರ್ ಕಾರ್ಡ್ನಲ್ಲಿ ಇರುವಂತೆ ಹಾಕಿ ನಂತರ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಹೀಗೆ ಅದರಲ್ಲಿ ಆಪ್ಷನ್ಗಳು ಇರುತ್ತವೆ, ನೀವು ಯಾವುದನ್ನು ಬದಲಾಯಿಸಬೇಕು ಆ ಆಪ್ಷನ್ ಅನ್ನು ಕ್ಲಿಕ್ ಮಾಡಿ ನಂತರ ಅಲ್ಲಿ ತೆಗೆದುಕೊಳ್ಳುವ ಹೊಸ ಪೇಜ್ ಅಲ್ಲಿ ಎಲ್ಲ ವಿವರಗಳನ್ನು ಸರಿಯಾಗಿ ತುಂಬಿಸಿ. ನೀವು ಬದಲಾಯಿಸ ಬೇಕಾಗಿರುವ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಇತ್ಯಾದಿಗಳನ್ನು ಕೂಡ ಸರಿಯಾಗಿ ಫಿಲ್ ಮಾಡಿ ಸಬ್ಮಿಟ್ ಮಾಡಿದಾಗ ನೆಕ್ಸ್ಟ್ ಪೇಜ್ ಗೆ ಹೋಗುತ್ತದೆ.

ತೆರೆದುಕೊಳ್ಳುವ ಹೊಸ ಪುಟದಲ್ಲಿ ನೀವು ಹೊಸದಾಗಿ ಅಪ್ ಡೇಟ್ ಮಾಡಿದ ಎಲ್ಲಾ ಮಾಹಿತಿಗಳು ಕೂಡ ರಿಫ್ಲೆಕ್ಟ್ ಆಗುತ್ತಿರುತ್ತದ್ದೆ ಆ ಪೇಜ್ ಕೆಳಗೆ ಡಿಸ್ಕ್ಲೋಸರ್ ಇರುತ್ತದೆ ಅವುಗಳನ್ನು ಸಹ ಸರಿಯಾಗಿ ಓದಿ ಮಾಹಿತಿ ತಿಳಿದುಕೊಳ್ಳಿ. ಸಬ್ಮಿಟ್ ಕೊಟ್ಟಾಗ ನಿಮ್ಮ ಅಪ್ಲಿಕೇಶನ್ ಹಾಕುವ ಪ್ರಕ್ರಿಯ ಪೂರ್ತಿಯಾಗಿ ಐಡಿ ಜನರೇಟ್ ಆಗಿರುತ್ತದೆ. ಅದರಲ್ಲಿ ಅಪಾಯಿಂಟ್ಮೆಂಟ್ ಡೀಟೇಲ್ಸ್ ಗಳು ಬಂದಿರುತ್ತವೆ, ಅದರ ಮೂಲಕ ಮುಂದಿನ ಹಂತಕ್ಕೆ ಯಾವ ರೀತಿ ಹೋಗಬೇಕು ಎನ್ನುವ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋ ಪೂರ್ತಿಯಾಗಿ ನೋಡಿ.

Leave a Comment