ಅಕ್ಕ ಪವಿತ್ರ ಲೋಕೇಶ್ 3ನೇ ಮದ್ವೆ ಆಗುತ್ತಿರುವ ವಿಚಾರ ಕೇಳಿದಕ್ಕೆ ತಮ್ಮ ಆದಿ ಲೋಕೇಶ್ ಕೊಟ್ಟ ಉತ್ತರವೇನು ಗೊತ್ತ.? ನಿಜಕ್ಕೂ ನಿಂತಲ್ಲೇ ನಲುಗು ಹೋಗ್ತಿರಾ. ಕನ್ನಡದ ಪ್ರತಿಭಾನ್ವಿತ ನಟ ಮೈಸೂರು ಲೋಕೇಶ್ ರವರ ಇಬ್ಬರು ಮಕ್ಕಳಾದ ಆದಿ ಲೋಕೇಶ್ ಹಾಗೂ ಪವಿತ್ರ ಲೋಕೇಶ್ ಇಬ್ಬರು ಸಹ ಆಕ್ಟಿಂಗನ್ನು ಕೆರಿಯರ್ ಆಗಿ ಆಯ್ಕೆ ಮಾಡಿಕೊಂಡರು. ಅದರಲ್ಲಿ ಪವಿತ್ರ ಲೋಕೇಶ್ ಅವರು ನಾಯಕಿ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದು ಅಷ್ಟೇ ಪ್ರತಿಭಾನ್ವಿತೆಯೂ ಆಗಿದ್ದರು.
ನಾಯಕಿ ಆಗಲೆಂದೇ ಬಂದ ಇವರಿಗೆ ಇಂಡಸ್ಟ್ರಿಯಲ್ ಸಿಕ್ಕಿದ್ದು ಮಾತ್ರ ಸಹಕಲಾವಿದೆಯ ಪಾತ್ರಗಳು. ಸಿಕ್ಕ ಅವಕಾಶಗಳನ್ನು ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ಅವರು ಬಹಳ ವರ್ಷಗಳ ನಂತರ ಪೋಷಕ ಪಾತ್ರಗಳಲ್ಲಿ ಒಳ್ಳೊಳ್ಳೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲೂ ಕೂಡ ಪೋಷಕ ಪಾತ್ರಕ್ಕೆ ಬಹಳ ಬೇಡಿಕೆಯ ನಟಿ ಆಗಿರುವ ಇವರು ಮಹೇಶ್ ಬಾಬು, ಅಲ್ಲು ಅರ್ಜುನ್, ಜೂನಿಯರ್ ಎನ್ಟಿಆರ್ ಮುಂತಾದ ನಾಯಕ ನಟರುಗಳಿಗೆ ತಾಯಿಯಾಗಿ ಅಭಿನಯಿಸುತ್ತಿದ್ದಾರೆ.
ಆದಿ ಲೋಕೇಶ್ ಅವರು ಸಹ ಆರಂಭದಿಂದಲೇ ಸಿನಿಮಾಗಾಗಿ ತಯಾರು ಮಾಡಿಕೊಂಡು ಬಂದವರಲ್ಲ. 12 ವರ್ಷಕ್ಕೆ ಅಪನನ್ನು ಕಳೆದುಕೊಂಡ ಇವರು ಅವರ ತಂದೆಯ ಹೆಸರನ್ನು ಉಳಿಸುವ ಕಾರಣ ತಾವು ಸಹ ಇಂಡಸ್ಟ್ರಿಗೆ ಹೋಗಬೇಕು ಎಂದು ನಿರ್ಧಾರ ಭಯ ಬದಲಿಸಿ, ಈ ಫೀಲ್ಡ್ ಗೆ ಇಳಿದವರು. ಮೊದಮೊದಲು ಇವರಿಗೆ ಸಿನಿಮಾ ನಾಯಕನಾಗಿಯೇ ಅವಕಾಶಗಳು ಸಿಗುತ್ತಿರುತ್ತದೆ.
ಪೂಜಾರಿ ಅಂತಹ ಉತ್ತಮ ಚಿತ್ರಕಥೆ ಉಳ್ಳ ಸಿನಿಮಾದಲ್ಲಿ ಇವರು ನಾಯಕನಾಗಿ ಹೆಸರು ಮಾಡುತ್ತಿರುತ್ತಾರೆ. ಆದರೆ ನಂತರ ಬಂದ ಪಾತ್ರಗಳೆಲ್ಲಾ ಇವರಿಗೆ ಖಳನಾಯಕನ ಪಾತ್ರ ಆಗಿದ್ದವು. ಆದರೂ ಕೂಡ ಜೋಗಿ, ರಾಜ್, ಆರ್ ಎಕ್ಸ್ ಸೂರಿ, ಸರ್ಕಸ್ ಮುಂತಾದ ಸಿನಿಮಾಗಳಲ್ಲಿ ಖಳನಾಯಕನಾಗಿ ಅಭಿನಯಿಸಿ ಪಾತ್ರಕ್ಕೆ ಜೀವ ತುಂಬಿದ ಇವರು ಅವರ ಇಂಡಸ್ಟ್ರಿ ಜರ್ನಿ ಹಾಗೂ ವೈಯಕ್ತಿಕ ಜೀವನದ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.
ಈ ಸಂದರ್ಶನದಲ್ಲಿ ಅವರು ಕುಟುಂಬದ ಬಗ್ಗೆ ಕೂಡ ಮಾತನಾಡಿದ್ದು ಅಪ್ಪ ಎನ್ನುವ ಪದದ ಅರ್ಥ ತಿಳಿಯುವ ಮುನ್ನವೇ ಅವರನ್ನು ಕಳೆದುಕೊಂಡೆ. ನನ್ನ ಅಪ್ಪನಿಗಿಂತ ನನ್ನ ಅಮ್ಮ ಅದ್ಭುತ ಕಲಾವಿದೆ. ಅವರು ಬಹಳ ಚಿಕ್ಕ ವಯಸ್ಸಿಗೆ ಮದುವೆ ಆದ ಕಾರಣ ಅವರು ಬೆಳಕಿಗೆ ಬರಲಿಲ್ಲ ಇಲ್ಲದಿದ್ದರೆ ಅವರು ಸಹ ಸಾಧನೆ ಮಾಡುತ್ತಿದ್ದರು. ಅಪ್ಪನನ್ನು ಬಿಟ್ಟರೆ ನನಗೆ ನನ್ನ ಅಕ್ಕನೇ ಎಲ್ಲಾ.
ನಮ್ಮ ಅಕ್ಕ ಎಷ್ಟೇ ಎತ್ತರಕ್ಕೆ ಹೆಸರು ಮಾಡಿದರು ಆ ಎಲ್ಲಾ ಸಂಭ್ರಮವನ್ನು ಮೊದಲಿಗೆ ಪಡುವವನು ನಾನೇ. ನಾನು ಮತ್ತು ನಮ್ಮ ಅಕ್ಕ ಇಂಡಸ್ಟ್ರಿಗೆ ಬರಬೇಕು ಎಂದು ಅಂದುಕೊಂಡವರಲ್ಲ. ಯಾಕೆಂದರೆ ನನ್ನ ತಂದೆ ಇಂಡಸ್ಟ್ರಿಗೆ ಯಾವುದೇ ಕಾರಣಕ್ಕೂ ನೀವು ಬರಬಾರದು ನಿಮಗೆ ಎಂದಿಗೂ ಈ ಫೀಲ್ಡ್ ಬೇಡ ಅಂದಿದ್ದವರು. ಆದರೆ ಅವರ ಹೆಸರು ಹಾಳಾಗುತ್ತಿದೆ ಎನ್ನುವ ಸಮಯ ಬಂದಾಗ ನಾವು ಸಹ ಇಂಡಸ್ಟ್ರಿಯಲ್ಲಿ ಇದ್ದುಕೊಂಡೇ ಅವರಂತೆ ಕಲಾವಿದರಾಗಿ ಹೆಸರು ಮಾಡಬೇಕು ಎಂದು ಈ ಫೀಲ್ಡ್ ಗೆ ಬಂದೆವು.
ನಾನು ನನ್ನ ತಾಯಿಯ ಹೊಟ್ಟೆಯಲ್ಲಿ ಇದ್ದ ದಿನದಿಂದಲೂ ಕೂಡ ಇಂಡಸ್ಟ್ರಿಯ ಋಣದಿಂದಲೇ ಬದುಕಿದ್ದೇನೆ ಎಂದರೆ ಅದು ಸುಳ್ಳಲ್ಲ. ನಾವು ಇಲ್ಲಿಗೆ ಕಲಾವಿದರಾಗಲು ಬಂದಿದೆವು. ಯಾವ ಪಾತ್ರ ಸಿಗುತ್ತದೆಯೋ ಅದರಲ್ಲೇ ಸಂತೋಷ ಪಟ್ಟುಕೊಂಡು ಕಲಾವಿದರಾಗಿ ಬದುಕು ಸವಿಸುತ್ತೇವೆ ಅಷ್ಟೇ ಎಂದು ಹೇಳಿದ್ದಾರೆ. ಈ ಸಂದರ್ಶನವು ಬಹಳ ಅರ್ಥಪೂರ್ಣವಾಗಿದ್ದು ಈ ವಿಡಿಯೋ ಬೈಟ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.