ನಾಗಕನ್ನಿಕೆ ಧಾರವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟಿ ಅಧಿತಿ ಪ್ರಭುದೇವ್ ಅವರು ಸದ್ಯಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ಬೇಡಿಕೆ ಇರುವ ನಟಿ. ಈಗಷ್ಟೇ ತೋತಾಪುರಿ ಸಿನಿಮಾದಲ್ಲಿ ಒಂದು ಪ್ರಯೋಗಾತ್ಮಕ ಪಾತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಗೆದ್ದಿರುವ ಇವರು ಎಂತಹ ಪಾತ್ರ ಕೊಟ್ಟರೂ ನಿಭಾಯಿಸಬಲ್ಲ ಧೈರ್ಯವಂತೆ, ಪ್ರತಿಭಾವಂತೆ.
ಅದಿತಿ ಪ್ರಭುದೇವ್ ಅವರು ಯಾವುದೇ ಸಂದರ್ಶನದಲ್ಲಿ ಭಾಗಿಯಾದರು ಮೊದಲು ಕೇಳುತ್ತಿದ್ದಿದ್ದ ಪ್ರಶ್ನೆ ಅವರ ಮದುವೆ ಬಗ್ಗೆ, ಇದೀಗ ನಟಿ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಯುಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟಿರುವ ಅವರು ತಮ್ಮ ಭಾವಿ ಅತ್ತೆ ಮಾವ ಹಾಗೂ ಬಾವಿ ಪತಿಯನ್ನು ಕೂಡ ಪರಿಚಯಿಸಿದ್ದಾರೆ. ಇದೇ ತಿಂಗಳ 27ರಂದು ಅರಮನೆ ಮೈದಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಅಧಿತಿ ಉದ್ಯಮಿ ಯಶಸ್ವಿ ಅವರನ್ನು ಕೈ ಹಿಡಿಯುತ್ತಿದ್ದಾರೆ.
ಈ ಖುಷಿಯಲ್ಲಿ ತಮ್ಮ ಪತಿ ದೇವರ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಾನೇ ಹುಡುಕಿಕೊಂಡಿದ್ದರು ಇಷ್ಟೊಂದು ಒಳ್ಳೆಯ ಹುಡುಗನನ್ನು ಆರಿಸಿಕೊಳ್ಳುತ್ತಿರಲಿಲ್ಲ. ನನ್ನ ಅಪ್ಪ ಅಮ್ಮ ನನಗೆ ಒಂದು ಒಳ್ಳೆಯ ಜೋಡಿಯನ್ನು ಹುಡುಕಿಕೊಟ್ಟಿದ್ದಾರೆ. ಈಗಾಗಲೇ ನಾವು ಎಂಗೇಜ್ಮೆಂಟ್ ಆಗಿ ವರ್ಷ ಕಳೆದಿದೆ, ಒಂದು ವರ್ಷದಿಂದ ನಾವು ಸಾಕಷ್ಟು ಅರ್ಥ ಮಾಡಿಕೊಂಡಿದ್ದೇವೆ.
ಸದ್ಯಕ್ಕೆ ನನ್ನ ಪತಿಯೇ ನನ್ನ ಬೆಸ್ಟ್ ಫ್ರೆಂಡ್. ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯಬೇಕು ಎಂಬುದು ನನ್ನ ಆಸೆ ಅದಕ್ಕೆ ಸಪೋರ್ಟ್ ಮಾಡುವ ಉತ್ತಮ ಫ್ಯಾಮಿಲಿ ಸಿಕ್ಕಿದೆ. ಮುಂದೆ ಇವರು ನನ್ನ ಕನಸುಗಳಿಗೆ ಜೊತೆಯಾಗಲಿದ್ದಾರೆ. ಇಷ್ಟು ದಿನ ಒಬ್ಬಳೇ ಹೋರಾಟ ಮಾಡಬೇಕಿತ್ತು ಇವರು ಸಿಕ್ಕಿರುವುದರಿಂದ ಶಕ್ತಿ ಹೆಚ್ಚಾಗಲಿದೆ ಎನ್ನುವ ಖುಷಿಯಲ್ಲಿದ್ದೇನೆ.
ಇದರ ಜೊತೆ ಮದುವೆ ಬಗ್ಗೆ ಕೂಡ ಮಾತನಾಡಿದ ಅವರು ಮದುವೆ ಅನ್ನೋದು ಬಹಳ ದೊಡ್ಡ ಜವಾಬ್ದಾರಿ ಮದುವೆ ಆದ ಮೇಲೆ ಗಂಡನಿಗೆ ಮೊದಲ ಆದ್ಯತೆ ನಂತರ ಕೆರಿಯರ್ ಇರುತ್ತದೆ, ನಾನು ಹೇಗಾಗುತ್ತೀನಿ ನೋಡೋಣ. ಈವರೆಗೆ ನಾನು ನನ್ನ ಜೀವನವನ್ನು ಉತ್ತಮ ಕಟ್ಟಿಕೊಳ್ಳಲು ಬಹಳಷ್ಟು ಕಷ್ಟ ಪಟ್ಟಿದ್ದೇನೆ. ನಾನು ಯಾವಾಗ ನಗುತ್ತಿರುತ್ತೇನೆ ಆದರೆ ಆ ನಗುವಿನ ಹಿಂದೆ ಬಹಳ ಪರಿಶ್ರಮ ಇದೆ.
ಇಲ್ಲಿಯವರೆಗೆ ನಾನು ಯಾವುದೇ ಪಾರ್ಟಿಗಳಲ್ಲಿ ಆಗಲಿ ಕಾಣಿಸಿಕೊಂಡಿಲ್ಲ ನನ್ನನ್ನು ನಾನು ರಿಸ್ಟಿಕ್ಟ್ ಮಾಡಿಕೊಂಡು ಬದುಕನ್ನು ಸುಂದರವಾಗಿಸಿಕೊಳ್ಳಲು ಹಲವು ವಿಷಯಗಳಿಂದ ದೂರವಿದ್ದೇನೆ. ನನ್ನ ಪತಿ ಕೂಡ ಅದೇ ರೀತಿ ಇದ್ದಾರೆ. ದೇವರನ್ನು ನಂಬಿದವರಿಗೆ ಎಂದು ಮೋಸವಾಗುವುದಿಲ್ಲ ಇಂದು ನಂಬಿದವಳು ನಾನು ಈಗ ದೇವರು ಒಳ್ಳೆಯ ಜೋಡಿಯನ್ನು ಕರುಣಿಸಿದ್ದಾರೆ.
ನನ್ನ ಮದುವೆಯ ಹಿಂದಿನ ದಿನ ಕೂಡ ನಾನು ಶೂಟಿಂಗ್ ಅಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಕೂಡ ಹೇಳಿಕೊಂಡಿರುವ ಅಧಿತಿ ಅವರು ಈ ಇಂಟೆರ್ವ್ಯೂ ಮೂಲಕ ಮದುವೆ ಬಗ್ಗೆ ಮದುವೆಯಾಗುವ ಹುಡುಗನ ಬಗ್ಗೆ ತಮ್ಮ ಮನಸ್ಸಿನಲ್ಲಿ ಏನಿತ್ತು ಎನ್ನುವುದೆಲ್ಲವನ್ನು ಹೊರ ಹಾಕಿದ್ದಾರೆ. ಈ ಹಿಂದೆ ಇಸ್ಮಾರ್ಟ್ ಜೋಡಿ ಎನ್ನುವ ಸುವರ್ಣ ಟಿವಿಯ ರಿಯಾಲಿಟಿ ಶೋ ಅಲ್ಲಿ ಕೂಡ ಅತಿಥಿಯಾಗಿ ಭಾಗವಹಿಸಿದ ಇವರು ಉತ್ತಮ ಜೋಡಿ ಆಗುವುದಕ್ಕೆ ಏನೆಲ್ಲ ಗುಣ ಬೇಕು ಎನ್ನುವುದರ ಬಗ್ಗೆ ಹಾಗೂ ಮದುವೆ ಬಗ್ಗೆ ಮಾತನಾಡಿದ್ದರು.
ಇದೀಗ ಅರೆಂಜ್ ಕಂ ಲವ್ ಮ್ಯಾರೇಜ್ ಆಗುತ್ತಿರುವ ಅದಿತಿ ಪ್ರಭುದೇವ್ ಅವರ ವೈವಾಹಿಕ ಜೀವನಕ್ಕೆ ಶುಭವಾಗಲಿ ತಮ್ಮ ಕನಸಿನಂತೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇನ್ನು ಒಳ್ಳೊಳ್ಳೆ ಪಾತ್ರಗಳು ಅವಕಾಶಗಳು ಅರಸಿ ಬರಲಿ, ಅದರಂತೆ ವೈಯಕ್ತಿಕ ಜೀವನದಲ್ಲಿ ಕೂಡ ನಟಿ ಜೀವನ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸೋಣ.