ರೈತನ್ನ ಮದ್ವೆ ಆಗ್ತಿನಿ ಅಂತೇಳಿ ಕೋಟ್ಯಾಧಿಪತಿ ಮದ್ವೆ ಆಗಿದ್ದಿರ ಅಂದೋರಿಗೆ ಅದಿತಿ ಕೊಟ್ಟ ಉತ್ತರ. ಅಧಿತಿ ಪ್ರಭುದೇವ್ (Actress Adithi Prabhudev) ಅವರು ಕಳೆದ ವರ್ಷಾಂತ್ಯದಲ್ಲಿ ವೈವಾಹಿಕ ಜೀವನಕ್ಕೆ (marriage life) ಕಾಲಿಟ್ಟರು. ಸದ್ಯಕ್ಕೆ ಕನ್ನಡದಲ್ಲಿ ಅತಿ ಹೆಚ್ಚು ಬೇಡಿಕೆ ನಟಿಯಾಗಿರುವ ಅಧಿತಿ ಪ್ರಭುದೇವ್ ಅವರು ತಮ್ಮ ಕೆರಿಯರ್ ಅವರನ್ನು ಬಿಟ್ಟು ಉದ್ಯಮಿ ಯಶಸ್ (Yashas) ಅನ್ನುವವರನ್ನು ಕೈ ಹಿಡಿದರು. ಮೂಲತಃ ಚಿಕ್ಕಮಂಗಳೂರಿನವರಾದ ಯಶಸ್ ಅವರು ರೈತ ಕೂಡ ಆಗಿದ್ದಾರೆ ಎಂದು ಅಧಿತಿ ಪ್ರಭುದೇವ್ ಅವರು ಹೇಳಿಕೊಳ್ಳುತ್ತಾರೆ.
ಯಾಕೆಂದರೆ ಈ ಹಿಂದೆ ಅಧಿತಿ ಪ್ರಭುದೇವ್ ಅವರು ಮದುವೆ ವಿಚಾರ ಬಂದಾಗ ತಾನು ಮದುವೆ ಆಗುವುದಾದರೆ ರೈತರನ್ನೇ (farmer) ಮದುವೆಯಾಗುವುದು ಯಾಕೆಂದರೆ ತಾನು ಕೂಡ ರೈತ ಕುಟುಂಬದಿಂದ ಬಂದಿರುವವಳು ಅವರ ಬೆಲೆ ನನಗೆ ಗೊತ್ತು ಹೆಮ್ಮೆಯಿಂದ ರೈತನ ಕೈ ಹಿಡಿಯುತ್ತೇನೆ ಎಂದು ಹೇಳಿಕೊಂಡಿದ್ದರು. ಈಗ ಅವರ ಪತಿ ಜೊತೆ ತೆಗೆಸಿಕೊಂಡಿರುವ ಫೋಟೋಗಳನ್ನು ನೋಡಿದರೆ ಅವರು ಯಾವೊಬ್ಬ ಸೆಲೆಬ್ರಿಟಿಗು ಕಡಿಮೆ ಇಲ್ಲದಂತೆ ಕಾಣುತ್ತಾರೆ.
ಸದಾ ಫ್ಯಾಷನ್ ಲುಕ್ ಅಲ್ಲಿ ಕಂಗೊಳಿಸುತ್ತಿರುವ ಇವರನ್ನು ರೈತರು ಎಂದು ಹೇಳುವುದು ಕಷ್ಟ ಮೊದ ಮೊದಲಿಗೆ ಎಲ್ಲರಿಗೂ ಸಮಜಾಯಿಸಿಕೊಡುವ ಪ್ರಯತ್ನ ಮಾಡಿದರು ಇತ್ತೀಚೆಗೆ ಅವರ ತಾಳ್ಮೆ ಕಟ್ಟೆ ಹೊಡೆದಂತೆ ಕಾಣುತ್ತಿದೆ. ಹಾಗಾಗಿ ಈ ಬಾರಿ ಸ್ವಲ್ಪ ಖಾರವಾಗಿಯೇ ಉತ್ತರಿಸಿದ್ದಾರೆ. ಒಂದು ಕಡೆ ಅವರ ಮದುವೆ ವಿಚಾರವನ್ನು ತೆಗೆದುಕೊಂಡು ಪ್ರಶ್ನೆ ಮಾಡಲಾಗಿದೆ, ಅದಕ್ಕೆ ನಾನು ಎಷ್ಟು ಹೇಳಿದರು ಯಾರು ನಂಬುವುದಿಲ್ಲ, ರೈತ ಎಂದರೇನು ನಿಮ್ಮ ಪ್ರಕಾರ ಹರಿದು ಹೋಗಿರುವ ಬಟ್ಟೆ ಹಾಕಿಕೊಂಡು ಇರಬೇಕಾ.?
ಸ್ಟೈಲ್ ಆಗಿ ಕಾಣಿಸಿಕೊಳ್ಳುವವರು, ಕೂಲಿಂಗ್ ಗ್ಲಾಸ್ ಹಾಕಿಕೊಳ್ಳುವವರು, ಫ್ಯಾಶನ್ ಮಾಡುವವರು ರೈತರಾಗಿರಬಾರದಾ.? ನನ್ನ ತಂದೆ ಮನೆಯಲ್ಲಿ ತಂದೆ ದೊಡ್ಡಪ್ಪ ಚಿಕ್ಕಪ್ಪ ಮಾವ ಎಲ್ಲರೂ ರೈತರೇ ಆಗಿದ್ದಾರೆ. ಅವರು ಹೈ-ಸಫಸ್ಟಿಕೇಟ್ ಬದುಕು ಬದುಕುತ್ತಿದ್ದಾರೆ. ರೈತರು ಎಂದರೆ ದೇಶಕ್ಕೆ ಊಟ ಕೊಡುವವರು, ಅನ್ನ ಹಾಕೋ ಶ್ರೀಮಂತರು. ಅವರು ಘನತೆಯಿಂದ ಬದುಕಬೇಕು. ಯಾವ ವಿಚಾರದ ಲೆಕ್ಕ ಹಾಕಿ ನನ್ನ ಪತಿ ರೈತ ಅಲ್ಲ ಎನ್ನುತ್ತಿದ್ದೀರಾ ಈಗಷ್ಟೇ ಹೋಗಿ ಕಾಫಿ ತೋಟ, ಕಬ್ಬು ಬೆಳೆ ಎಲ್ಲವನ್ನು ನೋಡಿಕೊಂಡು ಬಂದಿದ್ದಾರೆ ಇದೆಲ್ಲ ನನ್ನ ಕರ್ಮ ಎಂದು ಬೇಸರಿಸಿಕೊಂಡು ಉತ್ತರ ಕೊಟ್ಟಿದ್ದಾರೆ.
ಕೊರೋನ ಲಾಕ್ ಡೌನ್ ಸಮಯದಲ್ಲಿ ಚಿತ್ರರಂಗದ ಕೆಲಸ ಕಾರ್ಯಗಳು ಸ್ಥಗಿತ ಆಗಿದ್ದ ಕಾರಣ ಎಲ್ಲರಂತೆ ಅಧಿತಿ ಪ್ರಭುದೇವ್ ಕೂಡ ತಮ್ಮ ಊರು ಸೇರಿದ್ದರು. ರೈತ ಕುಟುಂಬವಾದ ಕಾರಣ ತಮ್ಮನು ತಾವು ಕೃಷಿ ಸಂಬಂಧಿತ ಕೆಲಸಗಳಲ್ಲಿ ತೊಡಿಸಿಕೊಂಡು ಆ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋಗಳನ್ನು ನೋಡಿದ ಕನ್ನಡಿಗರು ಇವರನ್ನು ಹಾಡಿ ಹೊಗಳಿದ್ದರು. ಆ ಸಮಯದಲ್ಲಿ ನಾನು ಇದೇ ರೀತಿ ಬಂದವಳು, ಇದನ್ನೆಲ್ಲಾ ಮಾಡುವುದರಲ್ಲಿ ಮುಜುಗರ ಏನು ಇಲ್ಲ, ಸಂತೋಷ ಸಿಗುತ್ತದೆ.
ನಾನು ನಟಿಯಾಗಿದ್ದರೆ ಅದು ಸಿನಿಮಾದಲ್ಲಿ ಮಾತ್ರ ಅದನ್ನು ಹೊರತು ಪಡಿಸಿ ವೈಯಕ್ತಿಕ ಬದುಕಿನಲ್ಲಿ ಹೀಗೆ ಇರಲು ಇಷ್ಟ ಮದುವೆ ಆಗುವುದಾದರೆ ರೈತನನ್ನೇ ಆಗುವುದು ಎಂದು ಹೇಳಿದ್ದರು. ಆದರೆ ಈಗ ವರಸೆ ಬದಲಾಯಿಸಿ ನನ್ನ ಹಣೆ ಬರಹದಲ್ಲಿ ಯಾರ ಹೆಸರು ಇದೆಯೋ ಅವರನ್ನು ಮದುವೆಯಾಗಿದ್ದೇನೆ. ಅರೆಂಜ್ ಮ್ಯಾರೇಜ್ ಆಗಿದ್ದರು ನನ್ನ ಮದುವೆ ಜೀವನ ಚೆನ್ನಾಗಿದೆ ಅಷ್ಟೇ ಸಾಕು ಎಂದು ಹೇಳುತ್ತಿದ್ದಾರೆ ಈ ಹಿಂದೆ ಇವರಿಗೂ ಮೊದಲು ಶುಭ ಪೂಂಜಾ ಎನ್ನುವ ನಟಿ ಕೂಡ ಇದೇ ರೀತಿ ಮಾಡಿದ್ದರು.
ನಾನು ರೈತನೇ ಮದುವೆಯಾಗುತ್ತೇನೆ ಎಂದು ಹೇಳಿದ ಕಾರಣ ಅವರಿಗೂ ಸಹ ಅನೇಕ ಪ್ರಪೋಸಲ್ಗಳು ರೈತರ ಕುಟುಂಬದಿಂದ ಬಂದಿತ್ತು. ಆದರೆ ನಂತರ ಮಾತು ತಪ್ಪಿ ಇನ್ನೊಬ್ಬರ ಜೊತೆ ಮದುವೆಯಾಗಿ ಈಗ ಸಂತೋಷವಾಗಿದ್ದಾರೆ. ನಟಿ ಮಣಿಯರು ಪ್ರಚಾರಕ್ಕಾಗಿ ಮಾತ್ರ ರೈತರ ಹೆಸರು ಬಳಸಿಕೊಳ್ಳುತ್ತಾರೆ, ಶಾತ್ಸವವಾಗಿ ಅನುಸರಿಸುವುದಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎನ್ನುವುದು ಜನಸಾಮಾನ್ಯರ ಅಸಮಾಧಾನ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.