Sunday, June 4, 2023
HomeEntertainmentಸಿನಿಮಾರಂಗದ ನಂಟು ತೊರೆದು ಕೃಷಿ ಮಾಡುತ್ತಿರುವ ಲೀಲಾವತಿ ಹಾಗೂ ವಿನೋದ್ ರಾಜ್ ಕೃಷಿಯಿಂದ ಎಷ್ಟು ಆದಾಯ...

ಸಿನಿಮಾರಂಗದ ನಂಟು ತೊರೆದು ಕೃಷಿ ಮಾಡುತ್ತಿರುವ ಲೀಲಾವತಿ ಹಾಗೂ ವಿನೋದ್ ರಾಜ್ ಕೃಷಿಯಿಂದ ಎಷ್ಟು ಆದಾಯ ಪಡೆಯುತ್ತಿದ್ದಾರೆ ಗೊತ್ತಾ.?

 

ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಇಂತಹ ಮೇರು ನಟರ ಸಿನಿಮಾಗಳಲ್ಲಿ ಮುಖ್ಯಪಾತ್ರಗಳಲ್ಲಿ ನಟಿಸಿದ್ದ ಹಿರಿಯ ನಟಿ ಲೀಲಾವತಿಯವರು (actress Leelavathi) ಕನ್ನಡ ಚಿತ್ರರಂಗ ಕಟ್ಟುವ ಹಾದಿಯಲ್ಲೂ ಕೂಡ ಕೈ ಜೋಡಿಸಿದ್ದಾರೆ ಎಂದರೆ ಅದು ತಪ್ಪಾಗಲಾರದು. ಕನ್ನಡ ಸಿನಿಮಾ ರಂಗದ ಆರಂಭಿಕ ದಿನಗಳಲ್ಲಿ ಕಪ್ಪು ಬಿಳುಪು ಸಿನಿಮಾದ (black and white movies) ಕಾಲದಿಂದಲೂ ಕನ್ನಡಿಗರನ್ನು ನಾನಾ ಪಾತ್ರಗಳ ಮೂಲಕ ರಂಜಿಸಿದ್ದ ಲೀಲಾವತಿಯವರು ಈಗ ಅವಕಾಶಗಳಿಲ್ಲದೆ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

ಅಲ್ಲದೆ ಚಿತ್ರರಂಗಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರ ಬದಲು ಕೃಷಿಯತ್ತ ತಮ್ಮ ಒಲವನ್ನು ಬದಲಾಯಿಸಿಕೊಂಡಿದ್ದಾರೆ. ಈ ಕೆಲಸಗಳಿಗೆ ಇವರಿಗೆ ಜೊತೆ ಆಗಿರುವುದು ಇವರ ಪುತ್ರ ವಿನೋದ್ ರಾಜಕುಮಾರ್ (son Vinod Rajkumar) ಅವರು. ವಿನೋದ್ ರಾಜ್ ಕುಮಾರ್ ಅವರು ಸಹ ಕನ್ನಡದ ಹೆಸರಾಂತ ನಾಯಕ. ಮಹಭಾರತ, ಸ್ನೇಹಲೋಕ, ಡ್ಯಾನ್ಸ್ ರಾಜ ಡ್ಯಾನ್ಸ್ ಮುಂತಾದ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದ ಇವರು ಡ್ಯಾನ್ಸ್ ಅಲ್ಲಿ ಅಪಪ್ರತೀಮರು.

ಆದರೂ ಕೂಡ ಅದ್ಯಾಕೋ ಇವರ ಟ್ಯಾಲೆಂಟ್ ಗೆ ತಕ್ಕ ಅವಕಾಶ ಸಿಗಲೇ ಇಲ್ಲ. ಅವಕಾಶ ವಂಚಿತರಾಗಿ ಚಿತ್ರರಂಗದ ನಂಟನ್ನು ಕಳೆದುಕೊಂಡಿರುವ ಈ ಅಮ್ಮ ಮತ್ತು ಮಗ ದೂರದ ಊರಿನಲ್ಲಿ ಕೃಷಿ ಮಾಡುತ್ತಾ ಸಾಮಾನ್ಯರಂತೆ ತಮ್ಮ ಜೀವನ ಕಳೆಯುತ್ತಿದ್ದಾರೆ. ಬೆಂಗಳೂರಿನ ನೆಲಮಂಗಲ ಸಮೀಪ 10 ಎಕರೆ ಪ್ಲಾಟ್ ಅಲ್ಲಿ ತೋಟ ಮಾಡಿ ಕೃಷಿ (Agriculture) ಸಂಬಂಧಿತ ಕೆಲಸಗಳನ್ನು ಮಾಡುತ್ತಾ ನೆಮ್ಮದಿಯ ಜೀವನ ಸಾಧಿಸುತ್ತಿದ್ದಾರೆ. ಕೃಷಿ ಮೂಲಕವೇ ಬರುವ ಆದಾಯದಲ್ಲಿ ಇವರ ಕೈಲಾದಷ್ಟು ಸಮಾಜ ಸೇವೆಯನ್ನು ಮಾಡುತ್ತಿರುವ ಲೀಲಾವತಿ ಹಾಗೂ ವಿನೋದ್ ಅವರ ಹೃದಯ ಶ್ರೀಮಂತಿಕೆ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ.

ಇತ್ತೀಚೆಗೆ ಲಿಲಾವತಿಯವರು ಸರ್ಕಾರಿ ಆಸ್ಪತ್ರೆ ಒಂದನ್ನು ಕಟ್ಟಿಸಿ ಜನಸಾಮಾನ್ಯರಿಗೆ ಸಹಾಯ ಮಾಡಿದರು, ವಿನೋದ್ ರಾಜ್ ಅವರು ಇನ್ನೂ ಸಹ ವಿವಾಹವಾಗದೆ ಹಾಗೆ ಉಳಿದಿದ್ದು ತಮ್ಮ ಜೀವನಪೂರ್ತಿ ಇತರ ಜೀವನವನ್ನು ಸಂತೋಷವಾಗಿಡುವ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎನ್ನುವ ನಿರ್ಧಾರ ಮಾಡಿದ್ದಾರೆ. ಕೃಷಿಯಲ್ಲಿ ಬಂದ ಆದಾಯದಲ್ಲೂ ಸಹ ಆದಷ್ಟು ಸಮಾಜ ಸೇವೆಗೆ ಮೀಸಲು ಇಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಅದೆಷ್ಟೋ ಪ್ರಮಾಣದ ದಿನಸಿ ಧಾನ್ಯಗಳನ್ನು ಬಡವರಿಗೆ ಹಂಚಿದ್ದರು.

ಈ ರೀತಿ ಯಾವುದೇ ಪ್ರತಿಫಲ ಬಯಸದೆ ಬದುಕನ್ನು ಒಂದು ಉತ್ತಮ ಉದ್ದೇಶಕ್ಕಾಗಿ ಈ ಅಮ್ಮ ಮಗ ಮೀಸಲಿಟ್ಟಿದ್ದಾನೆ. ಇವರ ಈ ಕೆಲಸ ಈಗಿನ ಯುವಜನತೆಗೆ ಸ್ಪೂರ್ತಿ ಸೆಲೆ ಆಗಬಹುದು. ಇಂದು ಮನುಷ್ಯ ಎಷ್ಟೋ ಸ್ವಾರ್ಥಿಯಾಗಿದ್ದಾನೆ ಎಂದರೆ ತನ್ನ ಕುಟುಂಬ ಹಾಗೂ ಪರಿವಾರದ ಬಗ್ಗೆ ಕೂಡ ಕಿಂಚಿತ್ತು ಕಾಳಜಿ ಇಲ್ಲದವನಂತೆ ತೋರುತ್ತಿದ್ದಾನೆ, ಅಂಥವರ ನಡುವೆ ಈ ಅಮ್ಮ ಮಗ ಬಹಳ ವಿಶೇಷ ಎನಿಸುತ್ತಿದ್ದಾರೆ. ಒಂದು ಕಾಲದಲ್ಲಿ ತಾವಿಬ್ಬರು ಕೂಡ ಕನ್ನಡ ಚಿತ್ರರಂಗದ ಸ್ಟಾರ್ಗಳಾಗಿ ಮೆರೆದಿದ್ದರೂ ಈಗ ಅದ್ಯಾವುದರ ಹಮ್ಮು ಬಿಮ್ಮು ಇಲ್ಲದೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುತ್ತಾ ಅಸಾಮಾನ್ಯ ಸಾಧನೆ ಮಾಡಿರುವ ಇವರಿಬ್ಬರನ್ನು ಪಡೆದ ಕರುನಾಡು ಧನ್ಯ.

ಚಿತ್ರರಂಗಕ್ಕೆ ಸಂಬಂಧಪಟ್ಟ ಯಾವುದೇ ಆದಾಯ ಇರದ ಕಾರಣ ಇವರಿಗೆ ಇರುವ ಒಂದೇ ಆದಾಯದ ನೆಲೆ ಕೃಷಿಯಾಗಿದೆ. ಇವರು ತಮ್ಮ ಬಳಿ ಇರುವ ಹತ್ತು ಎಕರೆ ಜಮೀನಿನಲ್ಲಿ ಕೃಷಿ ಮಾಡಿ ವರ್ಷಕ್ಕೆ 8 ಕೋಟಿ ಎಷ್ಟು ಆದಾಯ ಗಳಿಸುತ್ತಿದ್ದಾರೆ ಎಂದು ಕೆಲಮೂಲಗಳಿಂದ ಮಾಹಿತಿ ಇದೆ. ಲೀಲಾವತಿ ಅವರು ತಮ್ಮ ವಯಸ್ಸನ್ನು ಕೂಡ ಲೆಕ್ಕಿಸದೆ ಇನ್ನು ಸಹ ತಾವೇ ಜಮೀನಿನಲ್ಲಿ ಕೆಲಸ ಮಾಡುತ್ತಾ ಕೆಲಸಗಾರರು ನಿರ್ವಹಿಸುತ್ತಾ ಲವಲವಿಕೆಯಿಂದ ಓಡಾಡಿಕೊಂಡಿದ್ದಾರೆ. ಮತ್ತು ಇಂತಹ ಇಳಿ ವಯಸ್ಸಿನಲ್ಲೂ ಸಮಾಜದ ಬಗ್ಗೆ ಕಾಳಜಿ ಮಾಡುತ್ತಾ ತಮ್ಮ ಮಗನಿಗೆ ಮಾರ್ಗದರ್ಶಕರಾಗಿದ್ದಾರೆ ಎನ್ನುವುದು ಶ್ಲಾಘನಾರ್ಹ.