30 ವರ್ಷದ ನಂತರ ಪ್ರತಿಯೊಬ್ಬ ಮಹಿಳೆ ಹಾಗೂ ಪುರುಷ ವಯಸ್ಸಾದಂತೆ ಅವರ ಶಕ್ತಿಯು ಕುಂದುತ್ತಾ ಹೋಗುತ್ತದೆ. ಆದ್ದರಿಂದ 30 ವರ್ಷ ದಾಟಿದ ಪುರುಷ ಹಾಗೂ ಮಹಿಳೆಯರು ತಮ್ಮ ಆರೋಗ್ಯದ ವಿಚಾರವಾಗಿ ಕೆಲವೊಂದಷ್ಟು ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳುವುದು ಉತ್ತಮ.
ಅದರಲ್ಲೂ ಯಾವ ಆಹಾರಗಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ಹೆಚ್ಚು ದಿನಗಳವರೆಗೆ ಕಾಪಾಡಿಕೊಳ್ಳಬಹುದು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಒಂದಲ್ಲ ಒಂದು ಕಾರಣದಿಂದ ಆರೋಗ್ಯ ಸಮಸ್ಯೆ ಎದುರಾಗಿ ಮುಂದಿನ ದಿನದಲ್ಲಿ ಇನ್ನು ಹೆಚ್ಚಿನ ದೊಡ್ಡ ಪ್ರಮಾಣದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆದ್ದರಿಂದ ಉತ್ತಮವಾದ ಆಹಾರ ಕ್ರಮವನ್ನು ಅನುಸರಿಸುವುದು ಒಳ್ಳೆಯದು ಹಾಗೂ ಉತ್ತಮವಾದ ಜೀವನಶೈಲಿಯನ್ನು ಕೂಡ ಅನುಸರಿಸುವುದು ಒಳ್ಳೆಯದು ಹಾಗಾದರೆ ಈ ದಿನ 30 ವರ್ಷ ದಾಟಿದ ಪುರುಷ ಹಾಗೂ ಮಹಿಳೆಯರು ಯಾವ ಕೆಲವೊಂದಷ್ಟು ಆಹಾರ ಕ್ರಮಗಳನ್ನು ಅನುಸರಿ ಸಬೇಕು ಹಾಗೂ ಯಾವ ಡ್ರೈ ಫ್ರೂಟ್ಸ್ ಗಳನ್ನು ತಿನ್ನಬೇಕು ಹಾಗೂ ಅದನ್ನು ತಿನ್ನುವುದರಿಂದ ಯಾವುದೆಲ್ಲ ರೀತಿಯ ಪೋಷಕಾಂಶಗಳು ನಮಗೆ ಸಿಗುತ್ತಾ ಹೋಗುತ್ತದೆ.
ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. 35 ರಿಂದ 40 ವರ್ಷದ ನಂತರ ಮೂಳೆಗಳು ದುರ್ಬಲಗೊಳ್ಳುತ್ತಾ ಬರುತ್ತದೆ. ಈ ಸಮಯದಲ್ಲಿ ಆರೋಗ್ಯಕರವಾದ ಆಹಾರಗಳು, ದಿನಕ್ಕೆ 30 ನಿಮಿಷಗಳ ವ್ಯಾಯಾಮ, ಉತ್ತಮ ಜೀವನಶೈಲಿಯ ಅಭ್ಯಾಸಗಳು ಅತಿ ಮುಖ್ಯವಾಗಿದೆ.
ಕೆಲವು ಆಹಾರಗಳು ನಿಮ್ಮ ಚರ್ಮ, ಮೂಳೆ ಹಾಗು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಗಳಾಗಿವೆ. ಬೇಕಾದಷ್ಟು ಪೋಷಕಾಂಶಗಳು ಹೊಂದಿರುವ ಒಣಹಣ್ಣುಗಳನ್ನು ನೀವು ಪ್ರತಿನಿತ್ಯ ಸೇವಿಸುವುದರಿಂದ ಅನೇಕ ಲಾಭಗಳನ್ನು ಪಡೆಯುತ್ತೀರಿ. 30 ರ ನಂತರ ನೀವು ಪ್ರತಿನಿತ್ಯ ಕುರುಕಲು ತಿಂಡಿಯಂತೆ ಒಣ ಹಣ್ಣುಗಳನ್ನು ಸೇವಿಸಲು ನಾವು ಸಲಹೆಯನ್ನು ನೀಡುತ್ತೇವೆ.
• ಒಣ ಅಂಜೂರ :- ಒಣ ಹಣ್ಣು ಅಥವಾ ಡ್ರೈ ಫ್ರೂಟ್ಸ್ ಗಳಲ್ಲಿಯೇ ಅತ್ಯಂತ ರುಚಿಕರವಾದ ಹಣ್ಣುಗಳಲ್ಲಿ ಒಣ ಅಂಜೂರ ಒಂದು. ಇದು ಹೆಚ್ಚು ಪೌಷ್ಟಿಕಾಂಶದ ಹಣ್ಣು ಎಂದು ಸಾಬೀತಾಗಿದೆ. ಇದರಲ್ಲಿ ಯಥೇಚ್ಚ ವಾದ ಫೈಬರ್, ಪೊಟ್ಯಾಸಿಯಮ್, ಉತ್ಕರ್ಷಣ ನಿರೋಧಕ ಅಂಶ ಹೊಂದಿದೆ. ದಿನಕ್ಕೆ 3 ರಿಂದ 4 ಒಣ ಅಂಜೂರ ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು, ಜೀರ್ಣಕ್ರಿಯೆ ಸುಧಾರಿಸಲು, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ನಿಮ್ಮ ಹೃದಯವನ್ನು ರಕ್ಷಿಸುತ್ತದೆ. ಬಲವಾದ ಕೀಲುಗಳನ್ನು ಬೆಂಬಲಿಸುವುದಲ್ಲದೆ ಮಲಬದ್ಧತೆಯನ್ನು ತಡೆಯುತ್ತದೆ.
• ಪಿಸ್ತಾ :- ಡ್ರೈ ಫ್ರೂಟ್ಸ್ ಗ ತಪ್ಪದೇ ಸೇವಿಸಲೇಬೇಕಾದ ಆಹಾರ ಗಳಲ್ಲಿ ಪಿಸ್ತಾ ಕೂಡ ಒಂದಾಗಿದೆ. ಇದು ನಿಮ್ಮ ಆಹಾರಕ್ಕೆ ಪೌಷ್ಟಿಕಾಂಶದ ಸೇರ್ಪಡೆಯಾಗಿದೆ. ಇದರಲ್ಲಿ ಪ್ರೋಟೀನ್ ಅತ್ಯುತ್ತಮ ಮೂಲವನ್ನು ಹೊಂದಿದೆ. ಕೆಲವು ಪಿಸ್ತಾ ಸೇವನೆಯು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರ ಮೂಲಕ ನೀವು ಸುಲಭವಾಗಿ ತೂಕವನ್ನು ಕಳೆದು ಕೊಳ್ಳಬಹುದು. ಜೊತೆಗೆ ಪಿಸ್ತಾವು ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋದಕಗಳನ್ನು ಹೊಂದಿದೆ.
• ವಾಲ್ನಟ್ :- ಪೋಷಕಾಂಶಗಳಿಂದ ತುಂಬಿದ ವಾಲ್ನಟ್ ಆರೋಗ್ಯಕರ ಕೊಬ್ಬನ್ನುಹೊಂದಿದೆ. ಇದು ಹೃದಯದ ತೊಂದರೆಯನ್ನು ತಡೆಯುತ್ತದೆ ಎನ್ನಲಾಗಿದೆ. ಇತ್ತೀಚೆಗೆ ಚಿಕ್ಕ ಚಿಕ್ಕ ವಯಸ್ಸಿನಲ್ಲಿಯೇ ಹೃದ್ರೋಗಗಳು ಹೆಚ್ಚಾಗುತ್ತಿದೆ. ಈ ತೊಂದರೆಯನ್ನು ವಾಲ್ನಟ್ ತಡೆಯುತ್ತದೆ. ವಾಲ್ನಟ್ ಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ, ಮೆದುಳಿನ ಆರೋಗ್ಯಕ್ಕೆ ಪ್ರಯೋಜನ ಉಂಟುಮಾಡುತ್ತದೆ. ಜೊತೆಗೆ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇದು ಬಹಳ ಉತ್ತಮವಾಗಿದೆ.
• ಬಾದಾಮಿ :- ಬಾದಾಮಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ವಾಸ್ತವವಾಗಿ, ಕೊಲೆಸ್ಟ್ರಾಲ್ ಪಾರ್ಶ್ವವಾಯು, ಹೃದ್ರೋಗವನ್ನು ತಡೆಯಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಕೆಲವು ಬಾದಾಮಿಗಳನ್ನು ಸೇವಿಸುವುದರಿಂದ ಹೃದಯಕ್ಕೆ ಒಳ್ಳೆಯದು. ಹಾಗೆಯೇ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ರಕ್ತದೊತ್ತಡದ ಮಟ್ಟ, ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.