ಮನೆಯಲ್ಲಿರುವಂತಹ ಗೃಹಿಣಿಯರು ಮನೆಯ ವಿಚಾರವಾಗಿ ಯಾವ ಕೆಲಸವನ್ನು ಹೇಗೆ ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಬಹುದು ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ತುಂಬಾ ಒಳ್ಳೆ ಯದು. ಹೌದು ಸಮಯವನ್ನು ಉಳಿತಾಯ ಮಾಡುವ ಹಾಗೆ ನೀವು ಇಂತಹ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದು ಮುಖ್ಯ.
ಅದರಲ್ಲೂ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗೆ ಇಂತಹ ಕೆಲವೊಂದಷ್ಟು ಮಾಹಿತಿ ಹೇಳಿದರೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳ ಬಹುದು. ಇದರಿಂದ ಅವರು ಕೆಲಸವನ್ನು ಬೇಗನೆ ಮುಗಿಸಿ ಕೆಲಸಕ್ಕೆ ಹೊರಡಬಹುದು ಹಾಗೂ ಹಿಂದಿನ ದಿನ ಇಂತಹ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸಿದರೆ ಮಾರನೇ ದಿನ ಅವರಿಗೆ ಆ ಕೆಲಸ ಸುಲಭವಾಗಿ ಬೇಗನೇ ಮುಗಿಯುತ್ತದೆ ಎಂದೇ ಹೇಳಬಹುದು.
ಹಾಗಾದರೆ ಈ ದಿನ ಗೃಹಿಣಿಯರಿಗೆ ಯಾವ ಕೆಲವು ವಿಚಾರಗಳು ತುಂಬಾ ಅನುಕೂಲವಾಗುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ಕೆಳಗೆ ತಿಳಿಯೋಣ.
* ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುತ್ತದೆ. ಇದರಿಂದ ತಪ್ಪಿಸಿ ಕೊಳ್ಳಲು ನೀವು ಈರುಳ್ಳಿ ಕತ್ತರಿಸುವ ಮುನ್ನ ಅದನ್ನು 15 ನಿಮಿಷ ಫ್ರಿಡ್ಜ್ ನಲ್ಲಿ ಇಟ್ಟು ನಂತರ ಕತ್ತರಿಸಿ. ಈ ರೀತಿ ಮಾಡುವುದರಿಂದ ಈರುಳ್ಳಿಯಲ್ಲಿ ರುವಂತಹ ಘಾಟಿನ ಅಂಶ ಸಂಪೂರ್ಣವಾಗಿ ಹೋಗುತ್ತದೆ ಆನಂತರ ಸುಲಭವಾಗಿ ನೀವು ಈರುಳ್ಳಿಯನ್ನು ಕತ್ತರಿಸಬಹುದು.
ಎಲ್ಲರ ಮನೆಯ ಲ್ಲಿಯೂ ಕೂಡ ಫ್ರಿಡ್ಜ್ ಇರುವುದಿಲ್ಲ ಅಂತವರು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದರ ಒಳಗಡೆ ಈರುಳ್ಳಿಯನ್ನು ಕತ್ತರಿಸಿ ಇಟ್ಟು ಆನಂತರ ನೀವು ಈರುಳ್ಳಿಯನ್ನು ಕತ್ತರಿಸುವುದರಿಂದಲೂ ಕೂಡ ಕಣ್ಣೀರು ಬರುವುದಿಲ್ಲ. ಈ ವಿಧಾನವನ್ನು ಪ್ರತಿಯೊಬ್ಬರೂ ಕೂಡ ಅನುಸರಿಸಬಹುದಾಗಿದೆ.
* ಅಡುಗೆ ಮಾಡುವಾಗ ಉಪ್ಪು ಜಾಸ್ತಿ ಆದರೆ ಆಲೂಗಡ್ಡೆಯನ್ನು ಕತ್ತರಿಸಿ ಸೇರಿಸಿ. ಇದರಿಂದ ಉಪ್ಪಿನ ಪ್ರಮಾಣ ಕಡಿಮೆ ಯಾಗುತ್ತದೆ. ಹಾಗೂ ಅದರ ರುಚಿಯು ಕೂಡ ಮತ್ತಷ್ಟು ಹೆಚ್ಚಾಗುತ್ತದೆ.
* ಚಪಾತಿ, ರೋಟಿ ಮೃದುವಾಗಿ ಬರಬೇಕಾದರೆ ಹಿಟ್ಟನ್ನು ಬೆರೆಸುವಾಗ, ಒಂದು ಚಮಚ ಎಣ್ಣೆ ಅಥವಾ ಹಾಲನ್ನು ಬೆರೆಸಿಕೊಳ್ಳಿ.
* ಗ್ರೇವಿ ತುಂಬಾ ಖಾರವಾಗಿದ್ದರೆ, ಅದಕ್ಕೆ ಸ್ವಲ್ಪ ಹಾಲನ್ನು ಸೇರಿಸ ಬಹುದು. ಇದು ಖಾರದ ಪ್ರಮಾಣವನ್ನು ಸರಿದೂಗಿಸುತ್ತದೆ.
* ಕುಕ್ಕರ್ ನಲ್ಲಿ ಅಡುಗೆ ಮಾಡುವಾಗ ಸೌಟಿನಿಂದ ಕುಕ್ಕರ್ ಗೆ ಬಡಿಯಬಾರದು. ಇದರಿಂದ ಕುಕ್ಕರ್ ಸವೆದು ಸರಿಯಾಗಿ ಕೆಲಸ ಮಾಡದೇ ಇರಬಹುದು.
* ಯಾವುದೇ ಅಡುಗೆ ಮಾಡುವಾಗ ಆಹಾರವನ್ನು ಅತಿಯಾಗಿ ಬೇಯಿಸ ಬಾರದು ಅದು ರುಚಿಯನ್ನು ಕಳೆದುಕೊಳ್ಳುತ್ತದೆ.
* ಯಾವುದೇ ಮಸಾಲಾ ಪದಾರ್ಥಗಳನ್ನು ಗಾಳಿಯಲ್ಲಿ ಇಟ್ಟರೆ ಹಾಳಾಗುತ್ತದೆ. ಆದ್ದರಿಂದ ಅದನ್ನು ಒಂದು ಡಬ್ಬಿಯಲ್ಲಿ ಹಾಕಿ ಟೈಟ್ ಆಗಿ ಮುಚ್ಚಿ ಇಡಿ.
* ಅಕ್ಕಿ ಬೇಗನೆ ಬೇಯಲು ಅದಕ್ಕೆ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಸೇರಿಸಿ ಇದರಿಂದ ಬೇಗ ಬೇಯುವುದರ ಜೊತೆಗೆ ಅನ್ನ ಕೂಡ ಮೃದುವಾಗಿ ಬರುತ್ತದೆ.
* ಬೆಳ್ಳುಳ್ಳಿ ಯನ್ನು ಬಿಸಿ ನೀರಿನಲ್ಲಿ ಹಾಕಿ ಇಟ್ಟರೆ ನಂತರ ಸಿಪ್ಪೆ ಸುಲಿ ಯಲು ಸುಲಭವಾಗಿ ಬರುತ್ತದೆ.
* ಮಾವಿನ ಕಾಯಿ ಉಪ್ಪಿನಕಾಯಿ ರಸವೂ ದೀರ್ಘ ಕಾಲ ಕೆಂಪಾಗಿ ಇರಬೇಕು ಅಂದರೆ ಒಂದು ಚಿಟಿಕೆಯಷ್ಟು ಅಡುಗೆ ಸೋಡಾ ಹಾಕಬೇಕು.
* ಅಕ್ಕಿ ದೀರ್ಘ ಕಾಲ ಇಟ್ಟರೆ ಹಾಳಾಗುತ್ತದೆ. ಅದಕ್ಕೆ ಅದು ಕೆಡದೆ ಇರಲು ಅಕ್ಕಿ ಡಬ್ಬದೊಳಗೆ ಸ್ವಲ್ಪ ಕರಿಬೇವು ಹಾಕಿ ಇಡಿ. ಈ ರೀತಿ ಮಾಡುವುದರಿಂದ ಹಕ್ಕಿಯಲ್ಲಿ ಯಾವುದೇ ಹುಳ ಬರುವುದಿಲ್ಲ.
* ನಿಂಬೆ ಹಣ್ಣನ್ನು ನೆಲಕ್ಕೆ ತಿಕ್ಕಿ ನಂತರ ತೊಳೆದು ರಸ ಹಿಂಡಿದರೆ ಹೆಚ್ಚು ನಿಂಬೆ ರಸ ಬರುತ್ತದೆ.