ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಮ್ಮ ಹೆಮ್ಮೆಯ ನಟ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ. ರಾಜ್ ಕುಟುಂಬದ ಘನತೆಗೆ ತಕ್ಕ ಕಿರಿಯ ಸೊಸೆ. ಪ್ರೀತಿಸಿ ಮದುವೆಯಾದ ಈ ಜೋಡಿಯು ಕಳೆದ 21 ವರ್ಷಗಳಿಂದ ಯಾವುದೇ ಸಣ್ಣ ವಿವಾದವು ಕೂಡ ಇಲ್ಲದೆ ಕನ್ನಡ ಚಲನಚಿತ್ರರಂಗದ ಎಲ್ಲಾ ಜೋಡಿಗಳಿಗೂ ಸ್ಫೂರ್ತಿ ಆಗುವಂತಹ ಆದರ್ಶ ಜೀವನ ನಡೆಸಿದರು. ಮೊದಮೊದಲು ಪುನೀತ್ ರಾಜಕುಮಾರ್ ಅವರ ಜೊತೆ ಮಗಳ ಮದುವೆ ಮಾಡಲು ಅಶ್ವಿನಿ ಅವರ ಕುಟುಂಬದವರು ಒಪ್ಪದಿದ್ದರೂ ಸಹ ನಂತರ ಡಾಕ್ಟರ್ ರಾಜಕುಮಾರ್ ಅವರ ಮಧ್ಯಸ್ಥಿಕೆಯಿಂದ ಇಬ್ಬರ ವಿವಾಹವನ್ನು ಸಂತೋಷದಿಂದ ನೆರವೇರಿಸಿದರು. ಡಿಸೆಂಬರ್ 1, 1999 ರಲ್ಲಿ ಅಶ್ವಿನಿ ಹಾಗೂ ಅಪ್ಪು ಅವರ ವಿವಾಹ ಅದ್ದೂರಿಯಾಗಿ ನೆರವೇರಿತು. ಅಂದಿನಿಂದ ಅಪ್ಪು ಗೆ ಎಲ್ಲವೂ ಆಗಿದ್ದರೂ ಅಶ್ವಿನಿ ಅವರು.
ಅಪ್ಪು ಹಾಗೂ ಅಶ್ವಿನಿ ಅವರ ನಡುವೆ ಆತ್ಮೀಯ ಬಾಂಧವ್ಯವಿತ್ತು. ಅಶ್ವಿನಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡು ಮಾತನಾಡುವುದೇ ಆಗಲಿ ಅಥವಾ ಮಾಧ್ಯಮಗಳ ಮುಂದೆ ಮಾತನಾಡುವುದೇ ಆಗಲಿ ಅಥವಾ ಕ್ಯಾಮರಾ ಮುಂದೆ ಮಾತನಾಡುವುದಕ್ಕಾಗಲಿ ಎಂದೂ ಇಷ್ಟ ಪಟ್ಟವರಲ್ಲ. ಯಾವಾಗಲೂ ಕೂಡ ತಾವು ಸಾಮಾನ್ಯ ಮಹಿಳೆಯಂತೆ ಇದ್ದ ಅಶ್ವಿನಿ ಅವರನ್ನು ಪುನೀತ್ ರಾಜಕುಮಾರ್ ಅವರು ಬಹಳ ಇಷ್ಟ ಪಡುತ್ತಿದ್ದರು. ಅಪ್ಪು ಅವರಂತೆ ಅಶ್ವಿನಿ ಅವರದು ಕೂಡ ತೀರ ಸರಳ ವ್ಯಕ್ತಿತ್ವ. ದೊಡ್ಮನೆ ಸೊಸೆ ಅಂತ ಆಗಲಿ ಅಥವಾ ಪವರ್ ಸ್ಟಾರ್ ನ ಹೆಂಡತಿಯಂತಾಗಲಿ ಎಂದು ಕೂಡ ಬೀಗಿದವರಲ್ಲ. ಆದರೆ ಅಪ್ಪು ಅವರು ಮಾತ್ರ ತಮಗೆ ಆಹ್ವಾನ ಬರುತ್ತಿದ್ದ ಎಲ್ಲಾ ಕಾರ್ಯಕ್ರಮಗಳು ಮದುವೆ ಸಮಾರಂಭಗಳು ಅಥವಾ ಇನ್ನಿತರ ಯಾವುದೇ ಇವೆಂಟ್ಗಳು ಇದ್ದರು ತಪ್ಪದೇ ಅಶ್ವಿನಿ ಅವರನ್ನು ಕೂಡ ಜೊತೆಯಲ್ಲೇ ಕರೆದುಕೊಂಡು ಹೋಗುತ್ತಿದ್ದರು.
ಅವರು ಸಿನಿಮಾದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ಕುಟುಂಬಕ್ಕಾಗಿ ಸಮಯ ಮೀಸಲಿಡುತ್ತಿದ್ದರು ಅಪ್ಪು ಮತ್ತು ಅಶ್ವಿನಿ ದಂಪತಿಗೆ ಎರಡು ಮುದ್ದಾದ ಹೆಣ್ಣು ಮಕ್ಕಳಿದ್ದು ದೊಡ್ಡ ಮಗಳು ಧೃತಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮತ್ತು ಕಿರಿಯ ಮಗಳು ವಂದನ ಅಪ್ಪಅಮ್ಮನ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಅಪ್ಪು ಅವರು ಪ್ರತಿ ದಿನ ಶೂಟಿಂಗ್ ಮುಗಿದ ಬಳಿಕ ಮಡದಿ ಹಾಗೂ ಮಕ್ಕಳ ಮುಖ ನೋಡದೆ ಮಲಗುತ್ತಿರಲಿಲ್ಲವಂತೆ. ಎಷ್ಟೇ ತಡವಾದರೂ ಕೂಡ ಬಂದು ಮಗಳ ಜೊತೆ ಒಂದು ರೌಂಡ್ ವಾಕಿಂಗ್ ಮಾಡಿ ಮಾತನಾಡಿಕೊಂಡು ನಂತರ ಮಲಗುತ್ತಿದ್ದರಂತೆ. ಇದರಲ್ಲೇ ತಿಳಿಯುತ್ತದೆ ಅಪ್ಪು ಅವರು ಕುಟುಂಬದ ಮೇಲೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದರು ಎಂದು ಆದರೆ ಅಪ್ಪು ಅವರ ಅನುಪಸ್ಥಿತಿ ಇಂದು ಮಡದಿ ಹಾಗೂ ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರಿದೆ. ಒಂದು ರೀತಿಯಲ್ಲಿ ಆ ಕುಟುಂಬದ ನಗುವೆ ಕಣ್ಮರೆಯಾಗಿದೆ ಎನ್ನಬಹುದು.
ಅವರು ನಮ್ಮನ್ನು ಅಗಲಿದ ದಿನದಿಂದ ಇಡೀ ಕರ್ನಾಟಕದಲ್ಲಿ ಒಂದು ರೀತಿಯ ಸೂತಕದ ವಾತಾವರಣ ಇದೆ. ಎಲ್ಲವನ್ನು ಮರೆತು ವಾಸ್ತವವನ್ನು ಒಪ್ಪಿಕೊಂಡು ಎಲ್ಲರೂ ಕೂಡ ಅವರವರ ಚಟುವಟಿಕೆಗಳಲ್ಲಿ ಮತ್ತೆ ತೊಡಗಿಕೊಂಡಿದ್ದರೂ ಕೂಡ ಮನದಾಳದಲ್ಲಿ ಎಲ್ಲೋ ಅಪ್ಪು ಅವರು ಇನ್ನಿಲ್ಲ ಎನ್ನುವ ನೋವು ಆಳವಾಗಿ ಎಲ್ಲರನ್ನು ಕಾಡುತ್ತಿದೆ. ಅಭಿಮಾನಿಗಳಾದ ನಮಗೆ ಈ ವಿಷಯ ಇಷ್ಟೊಂದು ಅರಗಿಸಿಕೊಳ್ಳಲು ಕಷ್ಟ ಇಷ್ಟೊಂದು ದುಃಖ ತರುತ್ತದೆ ಎಂದರೆ ಇನ್ನು ಅಪ್ಪು ಅವರ ಕುಟುಂಬದ ಜನರ ಮನಸ್ಥಿತಿಯನ್ನು ಊಹಿಸಲು ಕೂಡ ಅಸಾಧ್ಯ. ಅಪ್ಪು ಅವರಿಗೆ ಸಂಬಂಧಪಟ್ಟ ಎಲ್ಲ ಕಾರ್ಯಗಳು ಹಾಗೂ ಸಮಾರಂಭಗಳಿಗೂ ಶಿವಣ್ಣ ರಾಘಣ್ಣ ಕುಟುಂಬ ಸಮೇತ ಎಲ್ಲರೂ ಕೂಡ ಭಾಗವಹಿಸುತ್ತಿದ್ದಾರೆ ಆದರೆ ಎಲ್ಲರ ಮುಖದ ಮೇಲು ಕೂಡ ಅಪ್ಪು ಅವರು ಇಲ್ಲ ಎನ್ನುವ ನೋ.ವಿನ ಛಾಯೆ ಎದ್ದು ಕಾಣುತ್ತಿದೆ.
ಇದೀಗ ಅಪ್ಪು ಸರ್ ಇಲ್ಲದೆ ಕರುನಾಡು ಎಂಟು ತಿಂಗಳನ್ನು ನೋ.ವಿನಿಂದ ಕಳೆದಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪ್ರತಿ ತಿಂಗಳು ಕೂಡ ಅಪ್ಪು ಅವರ ಸ.ಮಾ.ಧಿ ಬಳಿ, ಮಕ್ಕಳೊಂದಿಗೆ ಹೋಗಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ ಹಾಗೂ ಶಿವಣ್ಣ ಮತ್ತು ರಾಘಣ್ಣ ಕೂಡ ಅವರ ಜೊತೆ ನಿಲ್ಲುತ್ತಾರೆ ರಾಘಣ್ಣ ಅವರು ಯಾವಾಗ ತಮ್ಮನ ನೆನಪಾಗುತ್ತದೆ ಆಗೆಲ್ಲಾ ಅಲ್ಲಿ ಸಮಯ ಕಳೆದು ಬರುತ್ತಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅವರ ಅನುಪಸ್ಥಿತಿಯಲ್ಲಿ ಅವರೆಲ್ಲ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಪಿ ಆರ್ ಕೆ ಪ್ರೊಡಕ್ಷನ್ ಅಪ್ಪು ಅವರ ಬಹುದೊಡ್ಡ ಕನಸಾಗಿತ್ತು ಈ ಮೂಲಕ ಕನ್ನಡ ಚಲನಚಿತ್ರ ಹಾಗೂ ಕಿರುತರಿಗೆ ಹಲವಾರು ಕಲಾವಿದರು ಗಳನ್ನು ಕೊಡಬೇಕು ಎನ್ನುವುದು ಅಪ್ಪು ಅವರ ಆಸೆಯಾಗಿತ್ತು.
ಈಗ ಅಶ್ವಿನಿ ಅವರು ಅಪ್ಪು ಕಛೇರಿ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದು ಅಪ್ಪು ಅವರು ಇದ್ದಾಗ ಹೇಗೆ ಜನರು ಅಪ್ಪು ಅವರ ಬಳಿ ಸಹಾಯ ಕೇಳಿಕೊಂಡು ಬರುತ್ತಿದ್ದರು ಹಾಗೆಯೇ ಈಗಲೂ ಸಹ ಅಶ್ವಿನಿ ಅವರ ಬಳಿ ಬಂದು ತಮ್ಮ ನೋವುಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಅಪ್ಪು ಅವರ ಹಾದಿಯಲ್ಲಿ ಸಾಗುತ್ತಿರುವ ಅಶ್ವಿನಿ ಅವರು ಕೂಡ ತಮ್ಮಿಂದ ಆದಷ್ಟು ಎಲ್ಲರಿಗೂ ಸಹಾಯ ಮಾಡುತ್ತಿದ್ದಾರೆ ಮತ್ತು ಇತ್ತೀಚೆಗೆ ಅಶ್ವಿನಿ ಅವರು ಮೊದಲ ಬಾರಿ ನಗುತ್ತಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಬಹಳ ದಿನಗಳ ನಂತರ ಅಪ್ಪು ಅವರ ಮಡದಿ ಮುಖದಲ್ಲಿ ಈ ನಗು ಮೂಡಿಬಂದಿದೆ ಅದು ಕೂಡ ನಮ್ಮ ಪವರ್ ರನ್ ಎನ್ನುವ ಕಾರ್ಯಕ್ರಮದ ಮೂಲಕ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಗುನಗುತ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಆದರೆ ಅವರು ಎಲ್ಲರೆದುರು ನಗುತ್ತಿರಬಹುದು ಅಷ್ಟೇ ಮನಸ್ಸಿನ ದುಃ.ಖ ಕಡಿಮೆಯಾದಂತೆ ಕಾಣುತ್ತಿಲ್ಲ. ಅಶ್ವಿನಿ ಅವರ ಈ ಕಾರ್ಯ ಮೆಚ್ಚುವುದಾದರೇ ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ.