ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಅಂದಿನ ಕಾಲದಲ್ಲಿ ಹಿರಿಯರು ಹೇಳುತ್ತಿದ್ದರು ಆದರೆ ನಿಜಕ್ಕೂ ಇತ್ತೀಚಿನ ದಿನದಲ್ಲಿ ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುವುದಿಲ್ಲ ಬದಲಾಗಿ ಭೂಲೋಕದಲ್ಲಿ ನಿಶ್ಚಯವಾಗಿರುತ್ತದೆ, ಅದರಲ್ಲಿಯೂ ಕೂಡ ಹುಡುಗಿಯರ ಮನಸ್ಸಿನಲ್ಲಿ ನಿಶ್ಚಯವಾಗಿರುತ್ತದೆ ಎಂಬುದು ನೂರಕ್ಕೆ ನೂರು ಸತ್ಯ. ಹೌದು ಇತ್ತೀಚಿನ ದಿನದಲ್ಲಿ ಹುಡುಗ ಆಗಿರಬಹುದು ಅಥವಾ ಹುಡುಗಿ ಆಗಿರಬಹುದು ಯಾರೂ ಕೂಡ ಸಂಬಂಧಕ್ಕೆ ಬೆಲೆ ನೀಡುವುದಿಲ್ಲ ಬದಲಾಗಿ ಎಲ್ಲವನ್ನು ಕೂಡ ಹಣ ಆಸ್ತಿ ಅಂತಸ್ತಿನ ದೃಷ್ಟಿಯಿಂದಲೇ ನೋಡುತ್ತಾರೆ ಇದಕ್ಕೆ ಸಾಕ್ಷಿ ಎಂದರೆ ಇತ್ತೀಚಿನ ದಿನದಲ್ಲಿ ನಡೆಯುತ್ತಿರುವಂತಹ ಮದುವೆ ಅಂತನೇ ಹೇಳಬಹುದು.
ಮೊದಲೆಲ್ಲ ಮದುವೆಯಾಗಬೇಕಾದರೆ ಹುಡುಗ ಹುಡುಗಿಯ ಜಾತಕವನ್ನು ಹೊಂದಾಣಿಕೆ ಮಾಡುತ್ತಿದ್ದರು ಅವರಿಬ್ಬರ ಗುಣವನ್ನು ಹೋಲಿಕೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಅವರ ಎತ್ತರ ಆಗಿರಬಹುದು ಬಣ್ಣ ಆಗಿರಬಹುದು ಇವೆಲ್ಲವನ್ನು ಕೂಡ ಅಳೆದು ತೂಗಿ ತದನಂತರ ಮನೆಯಲ್ಲಿ ಮದುವೆಯನ್ನು ಏರ್ಪಡಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಹುಡುಗನ ಗುಣವಾಗಿರಬಹುದು ಅಥವಾ ಆತನ ಉದ್ಯೋಗ ಆಗಿರಬಹುದು ಆತನ ರೂಪ ಆಗಿರಬಹುದು ವಯಸ್ಸು ಆಗಿರಬಹುದು ಇದ್ಯಾವುದನ್ನು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಕೇವಲ ಆತನ ಬ್ಯಾಗ್ರೌಂಡ್ ಅನ್ನು ಮಾತ್ರ ನೋಡುತ್ತಾರೆ.
ಆತ ಸಿರಿವಂತನಾಗಿದ್ದಾನ ಆಸ್ತಿ ಇಟ್ಟಿದ್ದಾನ ಎಂಬುವುದನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಹುಡುಗರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಇತ್ತೀಚಿನ ದಿನದಲ್ಲಿ ಮದುವೆ ಎಂಬುದು ಒಂದು ದಂದೆ ಆಗಿದೆ ಅಂತಾನೆ ಹೇಳಬಹುದು. ಅತಿಯಾದ ಆಮೀಶಕ್ಕೆ ಒಳಗಾದಂತಹ ಯುವತಿಯರು ತಮಗೆ ತಕ್ಕ ಜೋಡಿಯನ್ನು ಆಯ್ಕೆ ಮಾಡಿಕೊಳ್ಳುವುದನ್ನು ಬಿಟ್ಟು ತಮಗೆ ತದ್ವಿರುದ್ಧವಾಗಿದ್ದರು ಪರವಾಗಿಲ್ಲ ಆದರೆ ಸಿರಿವಂತನಾಗಿದ್ದರೆ ಸಾಕು ಎಂಬ ಮನಸ್ಥಿತಿಗೆ ಬಂದು ಬಿಟ್ಟಿದ್ದಾರೆ. ಹಾಗಾಗಿ ಆಸ್ತಿ ಇರುವಂತಹ ಯುವಕ ಆಗಿರಬಹುದು ಅಥವಾ ಮುದುಕನೇ ಆಗಿರಬಹುದು ತನ್ನ ಜೀವಿತಾವಧಿಯಲ್ಲಿ ಮೂರರಿಂದ ನಾಲ್ಕು ಮದುವೆಯಾಗುತ್ತಾನೆ. ನಿಷ್ಠಾವಂತ ಯುವಕ ಆಸ್ತಿ ಇಲ್ಲದ ಯುವಕ ಒಂದು ಮದುವೆಯಾಗುವುದಕ್ಕೂ ಕೂಡ ಪರದಾಡುತ್ತಾನೆ ಇಂದಿನ ಕಾಲ ಹದಗಿಟ್ಟಿದೆ ಎಂಬುದಕ್ಕೆ ಇದೇ ಸಾಕ್ಷಿ.
ಇತ್ತೀಚೆಗೆ ಪಾಂಡಿಚೆರಿಯಲ್ಲಿ ನಡೆದ ಒಂದು ವಿವಾಹ ಎಲ್ಲರನ್ನೂ ಶಾ.ಕ್ ಆಗುವಂತೆ ಮಾಡಿದೆ ಪಾಂಡಿಚೆರಿಯ ಮನುಕುಲದ ವಿನಾಯಕ ದೇವಸ್ಥಾನದಲ್ಲಿ ಸರಳವಾಗಿ ಒಂದು ಮದುವೆ ನೆರವೇರಿದೆ. ಇಲ್ಲಿ ವಧುವಿಗೆ 24 ವರ್ಷ ವಯಸ್ಸು ಇನ್ನು ವರನಿಗೆ ಬರೋಬ್ಬರಿ 76 ವರ್ಷ ವಯಸ್ಸು ಈ ಮದುವೆಯಾಗಲು ವಧು-ದಕ್ಷಿಣೆ ರೂಪದಲ್ಲಿ ಬರೋಬ್ಬರಿ 2 ಕೋಟಿ 50 ಲಕ್ಷ ರೂಪಾಯಿ ಹಣವನ್ನು ನೀಡಲಾಗಿದೆ. ಈ ಜೋಡಿಗೆ ಶುಭವಾಗಲಿ ಶೀಘ್ರ ಸಂತಾನ ಪ್ರಾಪ್ತಿಯಾಗಲಿ ಅಂತ ಬಂಧು ಬಾಂಧವರು ಆಶೀರ್ವದಿಸಿದ್ದಾರೆ. ಹೌದು ಸ್ನೇಹಿತರೆ ಇಂಥ ಹಲವು ವಿಚಿತ್ರ ವಿವಾಹ ಸಂಬಂಧಗಳಿಗೆ ನಾವು ಇಂದು ಸಾಕ್ಷಿಯಗುತ್ತಿದ್ದೇವೆ. ವಯಸ್ಸಿನ ಅಂತರ ಇದ್ದರೆ ಮದುವೆಯಾಗುವುದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ.
ಆದರೆ ಯಾವುದೇ ಸ್ವಾರ್ಥಕ್ಕಾಗಿ ಒಬ್ಬರು ಇನ್ನೊಬ್ಬರ ಜೀವನ ಬಲಿ ಕೊಡುವುದು ಸರಿಯಲ್ಲ ಅಲ್ಲವೇ ಕೇವಲ ಹಣಕ್ಕಾಗಿ ಮದುವೆಯಾದರೆ ಆ ಸಂಬಂಧ ಉಳಿಯುವುದಾದರು ಹೇಗೆ.? ಮದುವೆ ಅಂದ್ರೆ ಅಲ್ಲಿ ಗಂಡು ಹೆಣ್ಣಿನ ವಯಸ್ಸು ಬಹಳ ಮುಖ್ಯ ಹೆಚ್ಚು ವಯಸ್ಸಿನ ಅಂತರ ಇದ್ದಷ್ಟು ಸಂಸಾರದಲ್ಲಿ ಸಮಸ್ಯೆಗಳು ತಲೆದೂರುವುದು ಹೆಚ್ಚು. ಹಾಗಾಗಿ ಮದುವೆ ಆಗುವಾಗ ಸಾಕಷ್ಟು ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲವಾದರೆ ಜೀವನ ಪರ್ಯಂತ ಒಟ್ಟಿಗೆ ಇರುವುದು ಬಹಳ ಕಷ್ಟ ಅದೇನೇ ಇರಲಿ ಸದ್ಯ ಪಾಂಡಿಚೇರಿಯ ಈ ನವ ವಿವಾಹಿತ ಜೋಡಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.