ನಾವು ಪ್ರತಿನಿತ್ಯ ಉಪಯೋಗಿಸುವಂತಹ ಎಣ್ಣೆಯನ್ನು ಹೋಲಿಸಿದರೆ ತೆಂಗಿನ ಎಣ್ಣೆಯು ನಮಗೆ ಆರೋಗ್ಯಕರವಾದ ಮತ್ತು ನಮ್ಮ ದೇಹಕ್ಕೆ ಯಾವುದೇ ರೀತಿಯ ಹಾನಿಯನ್ನು ಉಂಟುಮಾಡದೇ ಇರುವಂತಹ ಎಣ್ಣೆ ಎಂದು ಹೇಳಬಹುದು. ಹೌದು ಬೇರೆ ಯಾವುದೇ ಎಣ್ಣೆ ಗಳಿಗಿಂತ ತೆಂಗಿನ ಎಣ್ಣೆ ತುಂಬಾ ಒಳ್ಳೆಯದು. ಇದನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ಹೆಚ್ಚುತ್ತದೆ ಎಂದು ಆಯುರ್ವೇದದ ಪ್ರಕಾರ ವೈದ್ಯರ ಪ್ರಕಾರ ತಿಳಿದು ಬಂದಿದೆ.
ಹೌದು ಅಷ್ಟರಮಟ್ಟಿಗೆ ಇದು ತನ್ನಲ್ಲಿ ಔಷಧೀ ಯ ಗುಣಗಳನ್ನು ಹೊಂದಿದೆ ಎಂದು ಹೇಳಬಹುದು. ತೆಂಗಿನ ಎಣ್ಣೆ ಯನ್ನು ಕೇರಳ ಪ್ರದೇಶದವರು ಅಡುಗೆಗೆ ಉಪಯೋಗಿಸಿದರೆ ನಮ್ಮ ಕರ್ನಾಟಕದಲ್ಲಿ ತೆಂಗಿನ ಎಣ್ಣೆಯನ್ನು ತಲೆಗೆ ಹಚ್ಚುವುದಕ್ಕೆ ಕೆಲವೊಂದು ಚರ್ಮದ ಸಮಸ್ಯೆ ಉಂಟಾದಾಗ ಅದಕ್ಕೆ ಹಚ್ಚುವುದಕ್ಕೆ ಹೀಗೆ ವಿವಿಧ ರೀತಿಯಲ್ಲಿ ಉಪಯೋಗಿಸುತ್ತೇವೆ.
ಹೆಂಗಸರು ಈ ಕೆಲಸ ಮಾಡಬಾರದು, ಒಂದು ವೇಳೆ ಈ ತಪ್ಪು ಮಾಡಿದ್ರೆ ನೆಮ್ಮದಿಯ ಜೀವನ ಹಾಳಾಗುತ್ತದೆ.!
ಹಸಿ ತೆಂಗಿನ ಕಾಯಿಯಿಂದ ತಯಾರು ಮಾಡಲಾಗುವ ತೆಂಗಿನ ಎಣ್ಣೆಯಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣ ಲಕ್ಷಣಗಳು ತುಂಬಿವೆ. ಇತ್ತೀಚಿನ ದಿನಗಳಲ್ಲಂತೂ ಮಾರುಕಟ್ಟೆಯಲ್ಲಿ ತೆಂಗಿನ ಎಣ್ಣೆ ಸುಲಭ ವಾಗಿ ಲಭ್ಯವಾಗುತ್ತದೆ. ಒಟ್ಟಾರೆಯಾಗಿ ತೆಂಗಿನ ಎಣ್ಣೆಯನ್ನು ಪ್ರತಿ ಯೊಬ್ಬರೂ ಕೂಡ ಉಪಯೋಗಿಸಿಯೇ ಇರುತ್ತೇವೆ.
ಅದರಲ್ಲೂ ತೆಂಗಿನ ಎಣ್ಣೆ ಎಂದ ತಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದು ತಮಿಳು ನಾಡು ಹಾಗೂ ಕೇರಳದಲ್ಲಿ ಮಾಡುವಂತಹ ಕೆಲವೊಂದಷ್ಟು ರುಚಿಕರ ವಾದಂತಹ ಅಡುಗೆಗಳು ಹೌದು. ಏಕೆಂದರೆ ಅವರು ಯಾವುದೇ ಅಡುಗೆ ಯನ್ನು ಮಾಡಿದರು ಅದಕ್ಕೆ ತೆಂಗಿನ ಎಣ್ಣೆಯನ್ನು ಉಪಯೋಗಿಸಿ ಮಾಡಿರುತ್ತಾರೆ. ಆದ್ದರಿಂದ ಅದು ಅಷ್ಟೊಂದು ರುಚಿಕರವಾಗಿಯೂ ಆರೋಗ್ಯಕರವಾಗಿಯೂ ಇರುತ್ತದೆ.
ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಆಗುವ ಪ್ರಯೋಜನಗಳು.!
ಅವರು ತೆಂಗಿನ ಎಣ್ಣೆಯನ್ನು ಬಿಟ್ಟು ಬೇರೆ ಯಾವುದೇ ರೀತಿಯ ಎಣ್ಣೆಯನ್ನು ಅಡುಗೆಗಳಿಗೆ ಉಪ ಯೋಗಿಸುವುದಿಲ್ಲ. ಇದು ನಾವೆಲ್ಲರೂ ಅಂದುಕೊಂಡ ಹಾಗೆ ನೆನ್ನೆ ಮೊನ್ನೆಗಳಿಂದ ಅವರು ಇದನ್ನು ಉಪಯೋಗಿಸುತ್ತಿಲ್ಲ ಬದಲಿಗೆ ಶತಮಾ ನಗಳಿಂದಲೂ ಅಂದರೆ ನಮ್ಮ ತಾತ ಮುತ್ತಾತನ ಕಾಲದಿಂದಲೂ ಕೂಡ ಅವರು ಇದನ್ನೇ ಅರೂಢಿಸಿಕೊಂಡಿದ್ದಾರೆ.
ಇಂಗು ತೆಂಗು ಇವೆರಡಿದ್ದರೆ ಮಂಗವೂ ಕೂಡ ಅಡುಗೆ ಮಾಡಬಲ್ಲದು ” ಎಂಬ ನಾಣ್ಣುಡಿಯಂತೆ ತೆಂಗಿನ ಮರದ ಪ್ರತಿಯೊಂದು ಭಾಗವು ಕೂಡ ಮನುಷ್ಯನಿಗೆ ಒಂದಲ್ಲೊಂದು ರೀತಿಯಲ್ಲಿ ಸಮಯಕ್ಕೆ ತಕ್ಕಂತೆ ಸಹಾಯ ಕ್ಕೆ ಬಂದೇ ಬರುತ್ತದೆ. ಹಾಗಾದರೆ ಈ ದಿನ ತೆಂಗಿನ ಎಣ್ಣೆಯನ್ನು ನಾವು ಉಪಯೋಗ ಮಾಡುವುದರಿಂದ ಯಾವುದೆಲ್ಲ ರೀತಿಯ ಪ್ರಯೋಜನ ಗಳು ಸಿಗುತ್ತದೆ ಹಾಗೂ ಅದು ನಮಗೆ ಯಾವ ರೀತಿಯ ಆರೋಗ್ಯ ಪ್ರಯೋಜನವನ್ನು ಉಂಟು ಮಾಡುತ್ತದೆ ಎನ್ನುವಂತಹ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
ಗೃಹಿಣಿಯರು ಮನೆಯಲ್ಲಿ ಪೂಜೆ ಮಾಡಬೇಕಾದರೆ ಪಾಲಿಸಬೇಕಾದ ಮಾಹಿತಿಗಳು.!
* ತೆಂಗಿನ ಎಣ್ಣೆಯು ಮೂಳೆಗಳನ್ನು ಬಲವಾಗಿಡುತ್ತದೆ.
* ಹಲ್ಲಿನಲ್ಲಿ ಉಂಟಾದಂತಹ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಬಹಳ ಅದ್ಭುತವಾದ ಕೆಲಸ ಮಾಡುತ್ತದೆ.
* ಸ್ಟ್ರೆಚ್ ಮಾರ್ಕ್ ಗಳನ್ನು ಕಡಿಮೆ ಮಾಡುತ್ತದೆ.
* ಚರ್ಮದ ಆರೋಗ್ಯವನ್ನು ಹೆಚ್ಚು ಮಾಡುತ್ತದೆ ಅದರಲ್ಲೂ ಚರ್ಮ ಹೆಚ್ಚು ಕಾಂತಿಯುತವಾಗುವುದಕ್ಕೆ ಇದು ಸಹಾಯ ಮಾಡುತ್ತದೆ.
* ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಸಹಾಯಮಾಡುತ್ತದೆ.
* ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ.
* ಜೀರ್ಣ ಕ್ರಿಯೆಗೆ ಒಳ್ಳೆಯದು.
* ಥೈರಾಯಿಡ್ ಸಮಸ್ಯೆಯನ್ನು ನಿವಾರಿಸುತ್ತದೆ.
* ಮಧುಮೇಹ ನಿಯಂತ್ರಣಕ್ಕೆ ಸಹಾಯಮಾಡುತ್ತದೆ.
* ತುಟಿಗಳನ್ನು ರಕ್ಷಣೆ ಮತ್ತು ಸಮತೋಲನದಲ್ಲಿಡಲು ಪ್ರಯೋಜನ ಕಾರಿ.
* ಹೃದಯ ರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು
* ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
* ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
* ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
* ಕಿಡ್ನಿ ಆರೋಗ್ಯವನ್ನು ಸುಧಾರಿಸುತ್ತದೆ.
* ವೈರಲ್ ಸೋಂಕುಗಳಿಂದ ರಕ್ಷಿಸುತ್ತದೆ.
* ಫಂಗಲ್ ಸೋಂಕುಗಳಿಂದಲೂ ಸಹ ರಕ್ಷಿಸುತ್ತದೆ.
* ಹೊಟ್ಟೆ ಮತ್ತು ಕರುಳಿನ ಹುಳಗಳಿಂದ ರಕ್ಷಿಸುತ್ತದೆ.
* ಮೂಲವ್ಯಾಧಿಗೆ ಒಳ್ಳೆಯದು.
* ಕೂದಲನ್ನು ಮೃದುವಾಗಿಸುತ್ತದೆ ಮತ್ತು ಕೂದಲು ಉದುರದಂತೆ ತಡೆಯುತ್ತದೆ.