Home Useful Information ಗೃಹಿಣಿಯರು ಮನೆಯಲ್ಲಿ ಪೂಜೆ ಮಾಡಬೇಕಾದರೆ ಪಾಲಿಸಬೇಕಾದ ಮಾಹಿತಿಗಳು.!

ಗೃಹಿಣಿಯರು ಮನೆಯಲ್ಲಿ ಪೂಜೆ ಮಾಡಬೇಕಾದರೆ ಪಾಲಿಸಬೇಕಾದ ಮಾಹಿತಿಗಳು.!

0
ಗೃಹಿಣಿಯರು ಮನೆಯಲ್ಲಿ ಪೂಜೆ ಮಾಡಬೇಕಾದರೆ ಪಾಲಿಸಬೇಕಾದ ಮಾಹಿತಿಗಳು.!

 

ಮನೆಯಲ್ಲಿರುವಂತಹ ಪ್ರತಿಯೊಬ್ಬ ಗೃಹಣಿಯು ಕೂಡ ದೇವರ ಮನೆ ಯಲ್ಲಿ ಪಾಲಿಸಬೇಕಾದಂತಹ ಕೆಲವೊಂದಷ್ಟು ಪೂಜಾ ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯ ಹೌದು. ದೇವರ ಮನೆಯಲ್ಲಿ ನಾವು ಎಲ್ಲಾ ರೀತಿಯ ನಿಯಮಗಳನ್ನು ಪಾಲಿಸಬೇಕು ಇಲ್ಲವಾದರೆ ಹಲವಾರು ಸಂಕಷ್ಟಗಳಿಗೆ ಸಿಲುಕಿಕೊಳ್ಳಬೇಕಾಗುತ್ತದೆ.

ಹಾಗಾದರೆ ಈ ದಿನ ಮನೆಯಲ್ಲಿರುವಂತಹ ಗೃಹಿಣಿಯರು ಮನೆಯಲ್ಲಿ ಅಭಿವೃದ್ಧಿ ಯಶಸ್ಸು ಎಲ್ಲಾ ಸಿಗಬೇಕು ಎಂದರೆ ದೇವರ ಮನೆಯ ವಿಚಾರವಾಗಿ ಕೆಲವೊಂದ ಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ ಹಾಗೂ ಅವುಗಳನ್ನು ಪಾಲಿಸುವುದು ಕೂಡ ಅಷ್ಟೇ ಮುಖ್ಯ ಹಾಗಾದರೆ ಈ ದಿನ ಗೃಹಿಣಿಯರು ಮನೆಯಲ್ಲಿ ಪೂಜೆ ಮಾಡುವಂತಹ ಸಮಯದಲ್ಲಿ ಪಾಲಿಸಬೇಕಾದಂತಹ ಮಾಹಿತಿಗಳು ಯಾವುವು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.!

* ದೇವರ ಮನೆಯಲ್ಲಿ ಇಡುವ ದೇವರ ಸಾಮಗ್ರಿಗಳನ್ನು ಮಲಗುವ ಹಾಸಿಗೆ ಮೇಲೆ ಇಡಬಾರದು. ಹಾಗೇನಾದರೂ ದೇವರ ಮನೆಯ ಸಾಮಗ್ರಿಗಳನ್ನು ನೀವು ಮಲಗುವ ಹಾಸಿಗೆಯ ಮೇಲೆ ಇಟ್ಟರೆ ಮನೆಯಲ್ಲಿ ಸಂಕಷ್ಟಗಳು ಎದುರಾಗಲು ಪ್ರಾರಂಭಿಸುತ್ತದೆ ಹಾಗೂ ನೀವು ಹೆಚ್ಚಿನ ದಾರಿದ್ರ್ಯಕ್ಕೆ ಗುರಿಯಾಗುತ್ತಿರಿ.

* ದೇವರ ಮನೆಯಲ್ಲಿ ಕಳಶಕ್ಕೆ ಇಡುವಂತಹ ತೆಂಗಿನ ಕಾಯಿಯ ಕಣ್ಣು ಗಳು ಕಾಣಿಸಬಾರದು ಬದಲಿಗೆ ಸ್ವಚ್ಛವಾಗಿರುವಂತಹ ತೆಂಗಿನಕಾಯಿ ಯಲ್ಲಿ ಗುಂಜು ಚೆನ್ನಾಗಿರುವಂತಹ ತೆಂಗಿನಕಾಯಿಯನ್ನು ಇಡುವುದು ಬಹಳ ಮುಖ್ಯ.
* ಅದರಲ್ಲೂ ತೆಂಗಿನಕಾಯಿಯಲ್ಲಿ ಜುಟ್ಟು ಇಲ್ಲದೆ ಇರುವಂತಹ ತೆಂಗಿನ ಕಾಯಿಯನ್ನು ಪೂಜೆಗೆ ಬಳಸಬಾರದು ಅದರಲ್ಲೂ ಕಳಶಕ್ಕೆ ಇಡಲೇ ಬಾರದು.

ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಇಡಲೇಬಾರದು ಎಚ್ಚರ.!

* ಕೆಟ್ಟಿರುವಂತಹ ತೆಂಗಿನಕಾಯಿಯನ್ನು ಕಳಶಕ್ಕೆ ಇಡಬಾರದು ಹಾಗೂ ದೇವರ ಪೂಜೆಗೆ ನೈವೇದ್ಯವನ್ನು ಸಹ ಮಾಡಬಾರದು.
* ಕಳಶ ಇಟ್ಟ ಮೇಲೆ ಪದೇ ಪದೇ ಅದನ್ನು ಮುಟ್ಟುವುದಾಗಲಿ ಅದನ್ನು ಸರಿಪಡಿಸುವುದಾಗಲಿ ಮಾಡಬಾರದು. ಒಮ್ಮೆ ಇಟ್ಟ ಕಳಶವನ್ನು ಮತ್ತೆ ಸಲ್ಲಿಸುವಂತಹ ಸಮಯದಲ್ಲಿ ಮಾತ್ರ ಮುಟ್ಟಬೇಕು.

* ಒಂದು ಬಾರಿ ಪೂಜೆಗೆ ಇಟ್ಟಂತಹ ಹೂ ಅಡಿಕೆ ವೀಳ್ಯದೆಲೆ ಮುಂತಾದ ವುಗಳನ್ನು ಮತ್ತೆ ಪೂಜೆ ಮಾಡುವಂತಹ ಸಮಯದಲ್ಲಿ ಬಳಕೆ ಮಾಡ ಬಾರದು. ಬದಲಿಗೆ ಹೊಸದಾಗಿ ತಂದಂತಹ ಹೂವು ಎಲೆ ಅಡಿಕೆ ಕಾಯಿಯನ್ನು ಬಳಸಬೇಕು.
* ಮನೆಯ ಮುಖ್ಯ ಬಾಗಿಲಿನ ಹೊಸ್ತಿಲಿನ ಮೇಲೆ ಅರಿಶಿಣ ಮತ್ತು ಕುಂಕುಮವನ್ನು ಹಾಕುವುದರಿಂದ ಮನೆಗೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಬರುವುದಿಲ್ಲ ಹಾಗೂ ಮನೆಯಲ್ಲಿರುವಂತಹ ಎಲ್ಲ ನಕಾರಾತ್ಮಕ ಶಕ್ತಿಯು ದೂರ ಹೋಗುತ್ತದೆ ಆನಂತರ ಮನೆಗೆ, ದೈವ ಕಳೆ ಬರುತ್ತದೆ.

ಬೀರುವನ್ನು ಯಾವ ದಿಕ್ಕಿಗೆ ತಿರುಗಿಸಿ ಇಟ್ಟರೆ ಸಾಲಭಾದೆಗಳು ದೂರವಾಗಿ ಲಕ್ಷ್ಮಿ ಅನುಗ್ರಹ ಸಿಗುತ್ತದೆ.!

* ಮನೆಯ ಹೊಸ್ತಿಲಿಗೆ ಅರಿಶಿಣ ಕುಂಕುಮ ಹೂವನ್ನು ಇಡುವಂತಹ ಸಮಯದಲ್ಲಿ ಹೊಸ್ತಿಲಿನ ಒಳಭಾಗದಲ್ಲಿ ನಿಂತು ಧರಿಸಬಾರದು ಹೋಗಿ ಮುಂಭಾಗದಿಂದ ಅರಿಶಿನ ಕುಂಕುಮ ಹೂವನ್ನು ಇಟ್ಟು ಪೂಜೆ ಮಾಡಬೇಕು.
* ನೀವು ಪೂಜೆ ಮಾಡುವಂತಹ ಸಮಯದಲ್ಲಿ ಮಾಡಲೇಬೇಕ ಎನ್ನುವ ಮನಸ್ಸನ್ನು ಇಟ್ಟುಕೊಂಡು ಮಾಡಬಾರದು ಬದಲಿಗೆ ಭಕ್ತಿ ಶ್ರದ್ಧೆಯಿಂದ ನೀವು ಯಾವುದೇ ಪೂಜೆಯನ್ನು ಮಾಡಿದರೆ ಆ ಪೂಜೆಯ ಸಂಪೂರ್ಣ ವಾದ ಫಲವನ್ನು ನೀವು ಪಡೆಯಬಹುದು.

* ಮನೆಯಲ್ಲಿ ಪೂಜೆ ಮಾಡುವಂತಹ ಸುಮಂಗಲಿಯರು ತಲೆ ಸ್ನಾನ ಮಾಡದೆ ದೇವರ ಮನೆಯಲ್ಲಿ ಇರುವಂತಹ ಯಾವುದೇ ಫೋಟೋ ವನ್ನು ಮುಟ್ಟಬಾರದು.
* ದೇವರ ಮನೆಯಲ್ಲಿ ಸದಾ ಕಾಲ ಪೂಜೆ ಮಾಡುವಂತ ಸಮಯದಲ್ಲಿ ಒಂದು ತಾಮ್ರದ ಚೊಂಬಿನಲ್ಲಿ ಶುದ್ಧವಾದoತಹ ನೀರನ್ನು ತುಂಬಿ ಡುವುದು ತುಂಬಾ ಒಳ್ಳೆಯದು.

ಏಲಕ್ಕಿಯ ಅದ್ಭುತ ಪ್ರಯೋಜನಗಳು.!

* ಮನೆಯಲ್ಲಿ ಪೂಜೆ ಮಾಡುವ ಸಮಯದಲ್ಲಿ ತಾಯಿ ಲಕ್ಷ್ಮಿ ದೇವಿಗೆ ಕೆಂಪು ಹೂಗಳಿಂದ ಅಲಂಕಾರ ಮಾಡಿ ಪೂಜೆ ಮಾಡುವುದು ಶ್ರೇಷ್ಠ.
* ಸುಮಂಗಲಿಯರು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಮನೆಯ ಅಂಗಳದಲ್ಲಿ ರಂಗೋಲಿಯನ್ನು ಹಾಕಿ ಪೂಜೆಯನ್ನು ಮಾಡಿದರೆ ಮನೆ ಅಭಿವೃದ್ಧಿಯಾಗುತ್ತದೆ.
* ದೇವರಿಗೆ ಪೂಜೆ ಮಾಡುವಂತ ಸಮಯದಲ್ಲಿ ಬೇರೆ ಯಾವುದೇ ರೀತಿಯ ವಿಚಾರಗಳ ಬಗ್ಗೆ ಆಲೋಚನೆ ಮಾಡಬಾರದು ಭಕ್ತಿ ಶ್ರದ್ಧೆ ಯಿಂದ ಪೂಜೆಯಲ್ಲಿ ತಲ್ಲೀನರಾಗಿರಬೇಕು.
* ಸಂಕಲ್ಪ ಮಾಡಿ ಭಕ್ತಿಯಿಂದ ಪೂಜೆ ಮಾಡಿದರೆ ಖಂಡಿತ ಫಲ ಸಿಕ್ಕೆ ಸಿಗುತ್ತದೆ.

LEAVE A REPLY

Please enter your comment!
Please enter your name here