ಈಗಿನ ಕಾಲದಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಆದರೂ ಆಸ್ಪತ್ರೆಗೆ ಓಡುತ್ತಾರೆ ಅಥವಾ ಹೆಣ್ಣು ಮಕ್ಕಳು ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳುವುದಕ್ಕಾಗಿ ಪಾರ್ಲರ್ ಸುತ್ತುತ್ತಾರೆ ಅಥವಾ ಸರ್ಜರಿ ಬೇಕಾದರೂ ಮಾಡಿಸಿಕೊಳ್ಳಲು ರೆಡಿಯಾಗಿರುತ್ತಾರೆ. ಆದರೆ ಈಗ ಕಳೆದ ಎರಡು ದಶಕದ ಹಿಂದೆ ಯೋಚಿಸುವುದಾದರೆ ಈ ರೀತಿ ಪದ್ಧತಿ ಇರಲಿಲ್ಲ ಆರೋಗ್ಯ ವ್ಯತ್ಯಾಸವೇ ಆಗಲಿ ಅಥವಾ ಹೆಣ್ಣು ಮಕ್ಕಳಿಗಾಗಿ ಆಗಲಿ ಮನೆಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳಿಂದ ಔಷಧಿ ಸಿದ್ಧವಾಗುತ್ತಿತ್ತು.
ಅಜ್ಜಿ ಅಮ್ಮ ಹೇಳಿಕೊಡುತ್ತಿದ್ದ ಆ ಹೆಲ್ತ್ ಟಿಪ್ಸ್ ಗಳು ಇಂದಿಗೂ ಅಷ್ಟೇ ಚೆನ್ನಾಗಿ ವರ್ಕ್ ಆಗುತ್ತಿವೆ ಎನ್ನುವುದು ಬಹಳ ವಿಶೇಷ. ನೀವು ಕೂಡ ಸುಖಾ ಸುಮ್ಮನೆ ಹಣ ಕಳೆದುಕೊಳ್ಳುವ ಬದಲು ಇನ್ನು ಮುಂದೆ ಇವುಗಳನ್ನು ಪಾಲಿಸಿ ಹಣ ಉಳಿಸಿ ಆರೋಗ್ಯ ವೃದ್ಧಿಸಿಕೊಳ್ಳಿ.
ಒಡೆದ ಹಿಮ್ಮಡಿ ಸಮಸ್ಯೆ ಇದ್ದವರು ಒಂದು ಟಬ್ ನಲ್ಲಿ ಬೆಚ್ಚಗಿನ ನೀರು ತೆಗೆದುಕೊಂಡು ಅದಕ್ಕೆ ಒಂದು ಹೋಳು ನಿಂಬೆಹಣ್ಣನ್ನು ಹಿಂಡಿ 20 ನಿಮಿಷಗಳ ಕಾಲ ಕಾಲನ್ನು ನೆನೆಸಬೇಕು ನಂತರ ನಿಂಬೆ ಸಿಪ್ಪೆಯಿಂದ ಹಿಮ್ಮಡಿಗಳನ್ನು ಉಜ್ಜಿ ಕ್ಲೀನ್ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ ಜೊತೆಗೆ ಕಾಲುಗಳಿಗೆ ಕಾಂತಿ ಬರುತ್ತದೆ, ಉಗುರುಗಳ ಕೊಳೆ ನೀಟಾಗಿ ಕ್ಲೀನ್ ಆಗುತ್ತದೆ.
ಈ ಸುದ್ದಿ ಓದಿ:- ನೀರಿನ ಟ್ಯಾಂಕ್ ಗೆ ಇಳಿಯದೆ ಕ್ಲೀನ್ ಮಾಡುವ ಸುಲಭ ವಿಧಾನ.!
* ಹಲ್ಲು ನೋವು ವಿಪರೀತ ಇದ್ದಾಗ ಒಂದು ಲೋಟ ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಬಾಯನ್ನು ಮುಕ್ಕಳಿಸಿದರೆ ಹಲ್ಲು ನೋವು ಸ್ವಲ್ಪ ಕಡಿಮೆ ಆಗುತ್ತದೆ. ಲವಂಗವನ್ನು ಹುಳುಕಲ್ಲು ಇರುವಲ್ಲಿ ಇಟ್ಟುಕೊಳ್ಳುವುದರಿಂದ ಕೂಡ ನೋವು ಕಡಿಮೆಯಾಗುತ್ತದೆ.
* ಉರಿ ಮೂತ್ರದ ಸಮಸ್ಯೆ ಇದ್ದವರು ಒಂದು ಲೋಟ ಕಲ್ಲಂಗಡಿ ಹಣ್ಣಿನ ಜ್ಯೂಸ್ ಗೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಕುಡಿಯಬೇಕು, ತಕ್ಷಣದಲ್ಲಿಯೇ ನಿಯಂತ್ರಣಕ್ಕೆ ಬರುತ್ತದೆ.
* ಮಲಬದ್ಧತೆ ಸಮಸ್ಯೆಯಿಂದ ಬಳಲುವವರು ರಾತ್ರಿ ಹೊತ್ತು ಅರ್ಧ ಚಮಚ ಮೆಂತ್ಯ ಕಾಳನ್ನು ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದು ಆ ನೀರನ್ನು ಮತ್ತು ಮೆಂತೆಕಾಳನ್ನು ಸೇವಿಸುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ.
* ವಾಕರಿಕೆ ಅಥವಾ ವಾಂತಿ ಇಂತಹ ಸಮಸ್ಯೆಗಳಿಗೆ ಶುಂಠಿಯನ್ನು ಜಜ್ಜಿ ರಸ ಮಾಡಿ ಕುಡಿದರೆ ಕ್ರಮೇಣ ಈ ಸಮಸ್ಯೆಯಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು.
* ಸಕ್ಕರೆ ಕಾಯಿಲೆ ಅಥವಾ ಬಿಪಿ ಸಮಸ್ಯೆ ಇರುವವರು ಪ್ರತಿನಿತ್ಯವು ಒಂದು ಲೋಟ ನೀರಿಗೆ ಒಂದೆರಡು ಕಾಳು ಮೆಂತ್ಯ ಹಾಕಿ ಕುದಿಸಿಕೊಂಡು ಆರಿದ ಮೇಲೆ ಕುಡಿಯಬೇಕು. ಪ್ರತಿನಿತ್ಯವು ಹೀಗೆ ಮಾಡಿಕೊಂಡು ಬಂದರೆ ಸಮಸ್ಯೆ ನಾರ್ಮಲ್ ಗೆ ಬರುತ್ತದೆ.
ಈ ಸುದ್ದಿ ಓದಿ:- ವೀಳ್ಯದೆಲೆ ಹಾಗೂ ಸುಣ್ಣದಿಂದ ಸಾಲಕ್ಕೆ ಮುಕ್ತಿ ಸಿಗುತ್ತದೆ. ಎಲೆ ಮೇಲೆ ಹೀಗೆ ಬರೆದು 21 ದಿನ ಈ ಸ್ಥಳದಲ್ಲಿ ಇಟ್ಟರೆ ಸಾಕು.!
* ಪ್ರತಿನಿತ್ಯವೂ ಚಹಾ ಅಥವಾ ಕಾಫಿಗೆ ಹಸಿ ಶುಂಠಿ ಜಜ್ಜಿ ಕುದಿಸಿ ಕುಡಿಯುವುದರಿಂದ ಉರಿಯೂತದ ಸಮಸ್ಯೆ, ಹೆಣ್ಣು ಮಕ್ಕಳ ಹೊಟ್ಟೆ ನೋವಿನ ಸಮಸ್ಯೆ, ನೆಗಡಿ ಕಫದಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಮತ್ತು ಕ್ರಮೇಣ ದೇಹದ ರೋಗ ನಿರೋಧಕ ಶಕ್ತಿಯು ಕೂಡ ಹೆಚ್ಚಾಗುತ್ತದೆ.
* ಸುಟ್ಟ ಗಾಯಗಳಾಗಿದ್ದರೆ, ಬಿದ್ದ ಗಾಯಗಳು ಆಗಿದ್ದರೆ ಅಥವಾ ಕೀಟ ಕಚ್ಚಿ ಗಾಯ ಆಗಿದ್ದರೆ ಆ ಜಾಗಗಳಿಗೆ ಅಲೋವೆರದ ರಸವನ್ನು ಹಾಕಿ ಹೀಗೆ ಮಾಡುವುದರಿಂದ ನೋವು ಹಾಗೂ ಉರಿ ಕಡಿಮೆ ಆಗುತ್ತದೆ ಮತ್ತು ಬಹಳ ಬೇಗ ಗಾಯ ಗುಣವಾಗುತ್ತದೆ.
* ಉಪ್ಪಿನ ಜೊತೆ ಶುಂಠಿ ಹಾಗೂ ಲವಂಗವನ್ನು ಸೇರಿಸಿ ಅಗಿದು ನುಂಗುವುದರಿಂದ ಕಫ ಹಾಗೂ ಗಂಟಲಿನ ಸಮಸ್ಯೆ ಸರಿ ಹೋಗುತ್ತದೆ.
* ಕಾಫಿ ಪುಡಿಯೊಂದಿಗೆ ಸಕ್ಕರೆ ಹಾಗೂ ಅಲೋವೆರಾ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿಕೊಳ್ಳುವುದರಿಂದ ಮುಖದಲ್ಲಿ ಸುಕ್ಕುಗಟ್ಟಿದ ನರಿಗೆಗಳು ಗುಣವಾಗುತ್ತದೆ ಮತ್ತು ಮುಖ ಕಾಂತಿಯುತವಾಗುತ್ತದೆ.