Home Useful Information ಮಾರ್ಚ್ 16ರಂದು ಅಮೃತ ಸಿದ್ಧಿ ಯೋಗ, ತಪ್ಪದೇ ಈ ಒಂದು ವಸ್ತುವನ್ನು ಮನೆಗೆ ತನ್ನಿ ನಿಮ್ಮ ಏಳಿಗೆ ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ.!

ಮಾರ್ಚ್ 16ರಂದು ಅಮೃತ ಸಿದ್ಧಿ ಯೋಗ, ತಪ್ಪದೇ ಈ ಒಂದು ವಸ್ತುವನ್ನು ಮನೆಗೆ ತನ್ನಿ ನಿಮ್ಮ ಏಳಿಗೆ ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ.!

0
ಮಾರ್ಚ್ 16ರಂದು ಅಮೃತ ಸಿದ್ಧಿ ಯೋಗ, ತಪ್ಪದೇ ಈ ಒಂದು ವಸ್ತುವನ್ನು ಮನೆಗೆ ತನ್ನಿ ನಿಮ್ಮ ಏಳಿಗೆ ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ.!

 

ಒಂದು ವರ್ಷದಲ್ಲಿ ಸಾಕಷ್ಟು ಒಳ್ಳೆಯ ದಿನಗಳು ಇರುತ್ತವೆ ಮತ್ತು ಶುಭ ಮುಹೂರ್ತಗಳು ಕೂಡ ಸಿಗುತ್ತವೆ. ಅಂತಹದ್ದೇ ಒಂದು ಘಳಿಗೆ ಮಾರ್ಚ್ 16 ಶನಿವಾರದ ಮುಂಜಾನೆ 06:30 ರಿಂದ ಸಂಜೆ 4:00. ಈ ಸಮಯವನ್ನು ಅಮೃತ ಸಿದ್ದಿ ಯೋಗ ಎನ್ನಲಾಗುತ್ತಿದೆ. ಬಹಳ ವಿಶೇಷವಾದ ಈ ದಿನವೂ ತಾಯಿ ಮಹಾಲಕ್ಷ್ಮಿಗೆ ಮೀಸಲಾದ ದಿನವಾಗಿದೆ.

ಈ ದಿನದಂದು ನಾವು ಹೇಳುವ ಒಂದು ಸರಳ ಆಚರಣೆಯನ್ನು ಮಾಡಿದರೆ ಸಾಕು, ನೀವು ನಿಮ್ಮ ಜೀವನದ ಬಹುಕಾಲದ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ನಿಮ್ಮ ಇಷ್ಟಾರ್ಥ ಸಿದ್ದಿಗಾಗಿ ಈ ಸಮಯದಲ್ಲಿ ಪೂಜೆ ಸಲ್ಲಿಸುವುದರಿಂದ ಶೀಘ್ರವಾಗಿ ಅದೆಲ್ಲ ಕೈಗೂಡುತ್ತದೆ. ಬಹಳ ನಂಬಿಕೆ ಹಾಗೂ ಶ್ರದ್ಧೆಯಿಂದ ನೀವು ಈ ಪೂಜೆ ಕೈಕೊಂಡಿದ್ದೇ ಆದಲ್ಲಿ ಖಂಡಿತವಾಗಿಯೂ ತಾಯಿ ಮಹಾಲಕ್ಷ್ಮಿ ಆಶೀರ್ವಾದದಿಂದ ಬಹಳ ಒಳ್ಳೆಯದಾಗುತ್ತದೆ.

ಈ ದಿನ ಎಂದಿನಂತೆ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶುದ್ಧಿಯಾಗಿ ಮಡಿ ಬಟ್ಟೆ ಹಾಕಿಕೊಳ್ಳಿ. ಮನೆಯಲ್ಲಿ ನಿಮ್ಮ ನಿತ್ಯ ಪೂಜೆಯನ್ನು ಮುಂದುವರಿಸಿ, ನಂತರ ನಾವು ಹೇಳಿದ ಸಮಯ ಆರಂಭವಾಗಿ ಮುಕ್ತಾಯವಾಗುವುದರ ಒಳಗೆ ನೀವು ಈ ಪೂಜೆಯನ್ನು ಮಾಡಬೇಕು.

ಈ ಸುದ್ದಿ ಓದಿ:- ನೀವು ಕೇಳಿದ್ದನ್ನೆಲ್ಲ ದೇವರು ಕೊಡಬೇಕು ಎಂದರೆ ಈ ರೀತಿ ಪ್ರಾರ್ಥಿಸಿ

ಈ ಪೂಜೆಯನ್ನು ಮಾಡುವುದಕ್ಕಾಗಿ ನೀವು ದುಬಾರಿ ಬೆಲೆಯ ವಸ್ತ್ರ ದ್ರವ್ಯಗಳನ್ನು ತರುವ ಅವಶ್ಯಕತೆ ಇಲ್ಲ ನಿಮ್ಮ ಶಕ್ತಿಯನುಸಾರವಾಗಿ ಬಹಳ ಸರಳವಾಗಿ ಈ ಪೂಜೆಯನ್ನು ಮಾಡಬಹುದು. ತಾಯಿ ಮಹಾಲಕ್ಷ್ಮಿಗೆ ಇಷ್ಟವಾದ ಎರಡು ವಸ್ತುಗಳು ಹಾಗೂ ದೇವರ ಮೇಲಿರುವ ನಿಮ್ಮ ಶ್ರದ್ಧೆ, ಭಕ್ತಿ, ನಂಬಿಕೆಯಷ್ಟೇ ಈ ಪೂಜೆಗೆ ಮುಖ್ಯ.

ನಾವು ಹೇಳಿದ ಸಮಯದಲ್ಲಿ ತಾಯಿ ಮಹಾಲಕ್ಷ್ಮಿಯ ಫೋಟೋ ಇಟ್ಟುಕೊಳ್ಳಿ ಅಥವಾ ವಿಗ್ರಹ ಇದ್ದರೆ ವಿಗ್ರಹವನ್ನು ಇಟ್ಟುಕೊಳ್ಳಿ. ವಿಗ್ರಹವನ್ನು ಕೂಡ ಶುದ್ಧ ಮಾಡಿ ಅರಿಶಿನ ಕುಂಕುಮ ಹೂ ಇಟ್ಟು ಅಲಂಕರಿಸಿ ಫೋಟೋ ಅಥವಾ ವಿಗ್ರಹದ ಮುಂದೆ ಕುಳಿತುಕೊಳ್ಳಿ.

ಒಂದು ಲೋಟದಲ್ಲಿ ಹಸುವಿನ ಹಾಲನ್ನು ತೆಗೆದುಕೊಳ್ಳಿ ಈ ಹಾಲನ್ನು ಕಾಯಿಸಿರಬಾರದು ಶುದ್ಧವಾದ ಹಸುವಿನ ಹಾಲು ಸಿಕ್ಕಿದರೆ ಒಳ್ಳೆಯದು ಇಲ್ಲವಾದಲ್ಲಿ ನೀವು ಅಂಗಡಿಯಿಂದ ತರುವ ಪಾಕೆಟ್ ಹಾಲನ್ನೇ ಕಾಯಿಸುವ ಮುನ್ನ ಒಂದು ಲೋಟ ಇಟ್ಟುಕೊಳ್ಳಬಹುದು.

ಈ ಸುದ್ದಿ ಓದಿ:- ಫ್ರಿಡ್ಜ್ ಮೇಲೆ ಅಪ್ಪಿ ತಪ್ಪಿಯು ಈ 7 ವಸ್ತುಗಳನ್ನು ಇಡಬೇಡಿ, ಅಪ್ಪಿತಪ್ಪಿ ಇಟ್ಟರೆ ಹಣಕಾಸಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಚ್ಚರ.!

ಇದರ ಜೊತೆಗೆ ನಿಮ್ಮ ಶಕ್ತಿಯನುಸಾರ ಕಲ್ಲು ಸಕ್ಕರೆಯನ್ನು ಖರೀದಿಸಿ ಬಿಳಿ ಅಥವಾ ಕೆಂಪು ಬಣ್ಣದ ಕಲ್ಲುಸಕ್ಕರೆ ಯಾವುದು ಸಿಕ್ಕರೂ ಸರಿ ಅದನ್ನು ಕೂಡ ಖರೀದಿಸಿ ಸ್ವಲ್ಪ ಕಲ್ಲು ಸಕ್ಕರೆಯನ್ನು ಹಾಲಿನ ಒಳಗಡೆ ಹಾಕಿ ಮಿಕ್ಕಿದ್ದನ್ನು ಹಾಗೆ ನೀವು ನೈವೇದ್ಯ ಅರ್ಪಿಸುವ ಬಟ್ಟಲಿನಲ್ಲಿ ಇಟ್ಟುಕೊಳ್ಳಿ.

ಮೊದಲಿಗೆ ತಾಯಿ ಮಹಾಲಕ್ಷ್ಮಿಗೆ ಪೂಜೆ ಮಾಡಿ ಭಕ್ತಿಯಿಂದ ನಮಸ್ಕರಿಸಿ ನಿಮ್ಮ ಕಷ್ಟಗಳನ್ನು ಪರಿಹರಿಸುವಂತೆ ಕೇಳಿಕೊಳ್ಳಿ ಅಥವಾ ನಿಮಗೆ ಯಾವ ಕೋರಿಕೆ ನೆರವೇರಬೇಕು ಎನ್ನುವ ಇಚ್ಛೆ ಇದೆ ಅದಕ್ಕಾಗಿ ಪ್ರಾರ್ಥಿಸಿ. ಉದ್ಯೋಗ, ವ್ಯಾಪಾರ ವ್ಯವಹಾರ ಅಭಿವೃದ್ಧಿ, ಸಂತಾನ ಭಾಗ್ಯ, ಕಂಕಣ ಭಾಗ್ಯ, ಹಣಕಾಸಿನ ತೊಡಕು, ವಿದ್ಯಾಭ್ಯಾಸ ಈ ರೀತಿ ಯಾವುದೇ ಸಮಸ್ಯೆ ಇದ್ದರೂ ಕೂಡ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಅಥವಾ ಸಿದ್ದಿಗಾಗಿ ಪ್ರಾರ್ಥನೆ ಸಲ್ಲಿಸಬಹುದು.

ಪ್ರಾರ್ಥನೆ ಮುಗಿದ ಮೇಲೆ ಕಲ್ಲು ಸಕ್ಕರೆ ಹಾಗೂ ಕಲ್ಲು ಸಕ್ಕರೆ ಹಾಕಿದ ಹಾಲಿನ ನೈವೇದ್ಯ ಮಾಡಿ ನಿಮ್ಮ ಮನೆಯ ಎಲ್ಲರೂ ಕೂಡ ಆ ನೈವೇದ್ಯವನ್ನು ನಂತರ ಪ್ರಸಾದವಾಗಿ ಸೇವಿಸಿ. ನೀವು ಆಶ್ಚರ್ಯ ಪಡುವ ರೀತಿಯಲ್ಲಿ ಈ ಅಮೃತ ಸಿದ್ದಿ ಯೋಗ ಸಮಯದ ಪೂಜೆಯಿಂದ ಬಹಳ ಬೇಗ ನಿಮ್ಮ ಕೋರಿಕೆಗಳು ಈಡೇರುತ್ತವೆ.

LEAVE A REPLY

Please enter your comment!
Please enter your name here