ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳು ಮಾತ್ರವಲ್ಲದೆ ಮನೆ ಒಳಗಿನ ಪ್ರತಿಯೊಂದು ವಸ್ತುಗಳ ಮೌಲ್ಯವನ್ನು ತಿಳಿಸಲಾಗಿದೆ. ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳು ಕೂಡ ಆ ಮನೆ ಹಾಗೂ ಮನೆಯಲ್ಲಿರುವ ಸದಸ್ಯರ ಮೇಲೆ ಸಕರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ ಹಾಗಾಗಿ ವಾಸ್ತುಶಾಸ್ತ್ರದಲ್ಲಿ ಯಾವುದು ಹೇಗಿರಬೇಕು ಎನ್ನುವ ನಿಯಮವನ್ನು ತಿಳಿಸಲಾಗಿದೆ.
ಇದು ಮನೆಯಲ್ಲಿರುವ ಫ್ರಿಡ್ಜ್ ಗೂ ಕೂಡ ಅನ್ವಯಿಸುತ್ತದೆ. ಫ್ರಿಜ್ ಈಗ ಎಲ್ಲರ ಮನೆಯಲ್ಲೂ ಇರುವಂತಹ ಯಂತ್ರವಾಗಿದೆ ಮತ್ತು ನಾವು ಪ್ರತಿದಿನವೂ ಕೂಡ ಇದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದೇವೆ. ಈ ಫ್ರಿಡ್ಜ್ ಮೇಲೆ ಜನರು ತಿಳಿಯದೇ ಕೆಲ ವಸ್ತುಗಳನ್ನು ಇಡುವುದರಿಂದ ಭವಿಷ್ಯದಲ್ಲಿ ಬಹಳಷ್ಟು ಹಣಕಾಸಿನ ನಷ್ಟವನ್ನು ಹೊಂದುತ್ತಾರೆ. ಹಾಗಾದರೆ ಯಾವ ವಸ್ತುಗಳನ್ನು ಫ್ರಿಡ್ಜ್ ಮೇಲೆ ಇಡಬಾರದು ಎನ್ನುವ ಮಾಹಿತಿ ಹೀಗಿದೆ ನೋಡಿ.
ಈ ಸುದ್ದಿ ಓದಿ:- ಬುಧವಾರದ ಪಕ್ಷಿಗಳಿಗೆ ಮಿಸ್ ಮಾಡದೆ ಈ ಕಾಳು ತಿನ್ನಿಸಿ, ನೀವು ಅಂದುಕೊಂಡ ಕೆಲಸ 100% ವಾರದೊಳಗೆ ಆಗುತ್ತೆ.!
1. ವಾಸ್ತು ಶಾಸ್ತ್ರದ ಪ್ರಕಾರವಾಗಿ ಯಾವುದೇ ಕಾರಣಕ್ಕೂ ಔಷಧಿಗಳನ್ನು ಫ್ರಿಡ್ಜ್ ಮೇಲೆ ಇಡಬಾರದು. ವಾಸ್ತುಶಾಸ್ತ್ರ ಮಾತ್ರವಲ್ಲದೆ ವೈದ್ಯಕೀಯವಾಗಿ ಕೂಡ ಈ ಸಲಹೆ ನೀಡಲಾಗುತ್ತದೆ. ಯಾಕೆಂದರೆ ಫ್ರಿಡ್ಜ್ ಮೇಲಿನ ಭಾಗದಲ್ಲಿ ಉಷ್ಣಾಂಶ ಅಧಿಕವಾಗಿರುತ್ತದೆ, ಇದರಿಂದ ಔಷಧಿಗಳ ಪವರ್ ನಶಿಸುತ್ತದೆ. ಇದೇ ಕಾರಣವನ್ನು ವಾಸ್ತು ಶಾಸ್ತ್ರದಲ್ಲೂ ನೀಡಲಾಗಿದೆ. ಯಾವ ಔಷಧಿಗಳನ್ನು ಫ್ರಿಡ್ಜ್ ಮೇಲೆ ಇಟ್ಟು ಉಪಯೋಗಿಸುತ್ತಾರೆ ಅವುಗಳು ಸತ್ವ ಕಳೆದುಕೊಳ್ಳುತ್ತವೆ ಎಂದು ಹೇಳಲಾಗಿದೆ.
* ಫ್ರಿಡ್ಜ್ ವಿದ್ಯುತ್ ಕಾಂತಿಯ ವಿಕಿರಣಗಳನ್ನು ಹೊರ ಸೂಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರವಾಗಿ ಇದು ನಕಾರಾತ್ಮಕ ಅಂಶವಾಗಿದೆ. ಆಹಾರ, ಹಣ್ಣು, ಬ್ರೆಡ್ ಈ ರೀತಿ ಯಾವುದೇ ತಿನ್ನುವ ಪದಾರ್ಥವನ್ನು ಫ್ರಿಡ್ಜ್ ಮೇಲೆ ಇಡುವುದರಿಂದ ಇವುಗಳ ಮೇಲು ಕೂಡ ವಿದ್ಯುತ್ ಕಾಂತೀಯ ವಿಕಿರಣಗಳು ಪ್ರಹರಿಸುತ್ತವೆ. ಇದು ಆಹಾರವನ್ನು ಬಹಳ ಬೇಗ ಹಾಳು ಮಾಡುವುದು ಮಾತ್ರವಲ್ಲದೆ ಸೇವಿಸಿದ ವ್ಯಕ್ತಿಗಳ ಆರೋಗ್ಯದ ಮೇಲೂ ಮತ್ತು ಮನಸ್ಸಿನ ಮೇಲೂ ದುಷ್ಪರಿಣಾಮ ಬೀರುತ್ತದೆ ಹಾಗಾಗಿ ಫ್ರಿಡ್ಜ್ ಮೇಲೆ ಇವುಗಳನ್ನು ಇಡಬಾರದು ಎಂದು ಹೇಳಲಾಗಿದೆ.
ಈ ಸುದ್ದಿ ಓದಿ:- ಈ ಎಲೆ ಎಲ್ಲೇ ಸಿಕ್ಕರೂ ಬಿಡಲೇಬೇಡಿ, ಸಾಕಷ್ಟು ಶ್ರೀಮಂತರಾಗುತ್ತೀರಿ.!
* ಹಣ ಮತ್ತು ಬಂಗಾರ ಇವುಗಳನ್ನು ಕೂಡ ಫ್ರಿಡ್ಜ್ ಮೇಲೆ ಇಡಬಾರದು ಇದು ಕೂಡ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಕೆಲವರು ತಮಗೆ ತಕ್ಷಣ ಹಣ ಸಿಗಲಿ ಎಂದು ಅಥವಾ ಯಾವುದೋ ಅವಸರದಲ್ಲಿ ತಮ್ಮ ಒಡವೆಗಳನ್ನು ಅಥವಾ ಹಣವನ್ನು ಫ್ರಿಡ್ಜ್ ಮೇಲಿನ ಕವರ್ ಗೆ ಹಾಕಿ ಅಥವಾ ಫ್ರಿಡ್ಜ್ ಮೇಲೆ ಇಟ್ಟು ಹೋಗುತ್ತಾರೆ. ಹೀಗೆ ಮಾಡುವುದರಿಂದ ನೀವು ಅಪಾರ ಹಣಕಾಸಿನ ನ’ಷ್ಟವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗಿ ಬರುತ್ತದೆ ಎಂದು ಹೇಳುತ್ತದೆ ಶಾಸ್ತ್ರ.
* ಸಾಮಾನ್ಯವಾಗಿ ಈಗ ಮನೆ ಒಳಗೂ ಕೂಡ ಒಳಾಂಗಣ ಸಸ್ಯಗಳನ್ನು ಬೆಳೆಯಲಾಗುತ್ತಿದೆ. ವಾಸ್ತು ಸಸ್ಯಗಳಾಗಿರುತ್ತವೆ ಅಥವಾ ಅಲಂಕಾರಿಕ ಸಸ್ಯಗಳಾಗಿರುತ್ತವೆ ಅಥವಾ ದೈವೀ ಗುಣವುಳ್ಳ ಸಸ್ಯಗಳನ್ನು ಹಾಕಿಕೊಂಡಿರುತ್ತಾರೆ. ಈ ರೀತಿ ಸಸ್ಯಗಳನ್ನು ನೆಟ್ಟು ಅವುಗಳ ಪಾಟ್ ಫ್ರಿಡ್ಜ್ ಮೇಲೆ ಇಡುವುದರಿಂದ ಆ ಗಿಡಗಳಿಗೆ ಇರುವ ಶಕ್ತಿ ನಶಿಸಿ ಹೋಗುತ್ತದೆ ಅವುಗಳಿಂದ ಯಾವುದೇ ಪ್ರಭಾವ ಉಂಟಾಗುವುದಿಲ್ಲ ಎಂದು ಹೇಳುತ್ತದೆ ವಾಸ್ತು ಶಾಸ್ತ್ರ ಅದರಲ್ಲೂ ಬಿದರು ಗಿಡಗಳನ್ನು ಈ ರೀತಿ ಲೋಹದ ಮೇಲೆ ಇಡಲೇಬಾರದು ಇವು ಪರಸ್ಪರ ವಿರುದ್ಧ ಎಂದು ತಿಳಿಸಲಾಗಿದೆ.
ಈ ಸುದ್ದಿ ಓದಿ:- ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆಯಾ? ಎಲ್ಲಾ ಕಡೆ ಹಣ ಇಲ್ಲ ಅಂತಲೇ ಹೇಳಿಕೊಂಡು ಬರುತ್ತಿದ್ದೀರಾ.? ಇದಕ್ಕೆ ಪರಿಹಾರ ಇಲ್ಲಿದೆ ನೋಡಿ.!
* ಫ್ರಿಡ್ಜ್ ಮೇಲೆ ಜಾಗ ಇರುವುದರಿಂದ ಮಕ್ಕಳ ಪುಸ್ತಕಗಳನ್ನು ಅಥವಾ ಅವರ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಅಥವಾ ಅವರು ಆಟ ಪಾಠಗಳಲ್ಲಿ ಗಳಿಸಿದ ಸಾಧನೆಯ ಟ್ರೋಫಿಗಳನ್ನು ಫ್ರಿಡ್ಜ್ ಮೇಲೆ ಜನ ಇಟ್ಟು ಬಿಡುತ್ತಾರೆ. ನೆನಪಿಡಿ ನೀವು ಈ ರೀತಿ ಮಾಡುವುದರಿಂದ ಇದರ ನಕಾರಾತ್ಮಕ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಈ ಮೇಲೆ ತಿಳಿಸಿದಂತೆ ಫ್ರಿಡ್ಜ್ ಮೇಲೆ ಇಡುವ ವಸ್ತುಗಳ ಮೇಲೆ ನಕಾರಾತ್ಮಕ ಶಕ್ತಿ ಪ್ರಭಾವ ಬೀರುವುದರಿಂದ ಇದು ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಮಾಡಿ ಸಾಧನೆಯನ್ನು ಕುಂಠಿತಗೊಳಿಸುತ್ತದೆ.