ಎರಡು ಮತ್ತು ಏಳರ ಮನೆಯ ಅಧಿಪತಿ ಸಕಲ ಸುಖ ಸಂಪತ್ತು ಸಮೃದ್ಧಿ ಐಶ್ವರ್ಯವನ್ನು ಕೊಡುವ ಗ್ರಹ ಎಂದು ಶುಕ್ರ ಗ್ರಹವನ್ನು ಕರೆಯಲಾಗುತ್ತದೆ. ಮಾರ್ಚ್ 7ರಿಂದ ಮಕರ ರಾಶಿಯಿಂದ ಕುಂಭ ರಾಶಿಗೆ ಧನಾಧಿಪತಿಯು ಸಂಚಾರ ಮಾಡುತ್ತಿದ್ದಾರೆ ಈ ಸಂಕ್ರಮಣವು ದ್ವಾದಶ ರಾಶಿಗಳೆಲ್ಲದರ ಮೇಲೂ ಕೂಡ ಪರಿಣಾಮ ಬೀರುತ್ತದೆ.
ಕೆಲವು ರಾಶಿಗಳಿಗೆ ಸಾಧಾರಣ ಫಲಗಳಿದ್ದರೆ ಈ ಆರು ರಾಶಿಗಳಿಗೆ ಮಾತ್ರ ವಿಪರೀತ ಧನ ಯೋಗವಿದೆ. ಮಾರ್ಚ್ 7ರಿಂದ 31ರವರೆಗೆ ಈ ಆರು ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಸಮಯವಾಗಿದ್ದು, ಈ ರಾಶಿಗಳ ದಶಾಭುಕ್ತಿ ಅಥವಾ ಅಂತರ ಭುಕ್ತಿಗಳಲ್ಲಿಯೂ ಶುಕ್ರನಿದ್ದರೆ ಇನ್ನೂ ಅದ್ಭುತ. ಯಾವ ರಾಶಿಗಳು ಈ ಅದೃಷ್ಟ ಪಡೆದಿವೆ ಎನ್ನುವುದನ್ನು ಸಹ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
* ಮೇಷ ರಾಶಿ:- ಮೇಷ ರಾಶಿ ಹಾಗೂ ಮೇಷ ಲಗ್ನದಲ್ಲಿ ಜನಿಸಿದವರಿಗೆ ಒಂದು ಮತ್ತು ಏಳರ ಅಧಿಪತಿ ಏಕದಶಮಾ ಸ್ಥಾನದಲ್ಲಿದ್ದಾನೆ. ಇದು ಇವರಿಗೆ ಅತ್ಯಂತ ಶುಭದಾಯಕವಾಗಿದ್ದು, ವಿಪರೀತ ಧನಲಾಭದ ಯೋಗವನ್ನು ಸೂಚಿಸುತ್ತಿದೆ. ನಿಮ್ಮ ನಿರೀಕ್ಷೆಯ ಪ್ರಕಾರದ ಉದ್ಯೋಗ ಪಡೆಯುತ್ತೀರಿ ಅಥವಾ ಉದ್ಯೋಗದಲ್ಲಿ ಬಡ್ತಿ ಹೊಂದುತ್ತೀರಿ, ವ್ಯಾಪಾರ ವ್ಯವಹಾರ ಅಭಿವೃದ್ಧಿ ಆಗುತ್ತದೆ ಹೀಗೆ ನೀವು ಯಾವುದೇ ಕಾರ್ಯ ಮಾಡಿದರು ಎಲ್ಲದರಲ್ಲೂ ಈ ಸಮಯದಲ್ಲಿ ಜಯ ಸಿಗುತ್ತದೆ.
ಈ ಸುದ್ದಿ ಓದಿ:- ಸಿಂಹ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಇದೊಂದು ಶಕ್ತಿ ನಿಮಗೆ ಬಹಳ ಧೈರ್ಯ ಕೊಡುತ್ತದೆ.!
* ವೃಷಭ ರಾಶಿ:- ಒಂದು ಮತ್ತು ಆರರ ಅಧಿಪತಿ ಹತ್ತರ ಭಾವದಲ್ಲಿದ್ದಾರೆ. ಈ ರಾಶಿಯವರಿಗೂ ಕೂಡ ವಿಪರೀತ ರಾಜಯೋಗ. ಆರರ ಸ್ಥಾನವು ಇವರಿಗೆ ಸಂಪತ್ತಿನ ಸ್ಥಾನ ಹೆಸರು ಕೀರ್ತಿ ಪ್ರತಿಷ್ಠೆಯ ಸ್ಥಾನ. ಇದರ ಪ್ರಭಾವದಿಂದಾಗಿ ವೃಷಭ ರಾಶಿಯವರು ಏನಾದರೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿದ್ದರೆ ಅವರ ಪ್ರಯತ್ನ ಹಾಗೂ ಶ್ರದ್ಧೆಗೆ ತಕ್ಕನಾದ ಫಲವನ್ನು ಈ ಬಾರಿ ಪಡೆಯುತ್ತಾರೆ.
* ಕಟಕ ರಾಶಿ:- ನಾಲ್ಕು ಮತ್ತು ಹನ್ನೊಂದರ ಅಧಿಪತಿ ಪ್ರಬಲವಾದ ಅಷ್ಟರ ಭಾವದಲ್ಲಿದ್ದಾರೆ. ಇದು ನಿಮಗೆ ಸೈಟ್ ಕಾರು ಬಂಗಾರ ಖರೀದಿಸುವ ಯೋಗವನ್ನು ತರುತ್ತದೆ, ನಿಮ್ಮ ನಿರೀಕ್ಷೆಗೂ ಮೀರಿದ ಹೆಚ್ಚಿನ ಸಂಪತ್ತನ್ನು ಪಡೆಯಲಿದ್ದೀರಿ. ಒಂದು ವೇಳೆ ನೀವು ಮಿಥುನ ಲಗ್ನದಲ್ಲಿ ಜನಿಸಿ ಶುಕ್ರ ದೇಶೆ ಏನಾದರೂ ನಡೆಯುತ್ತಿದ್ದರೆ ನಿಮ್ಮ ಯೋಗಕ್ಕೆ ಸರಿಸಾಟಿ ಬೇರೆ ಯಾರು ಇಲ್ಲ.
* ಸಿಂಹ ರಾಶಿ:- ಮೂರು ಮತ್ತು ಹತ್ತರ ಅಧಿಪತಿ ಸಪ್ತಮ ಭಾವದಲ್ಲಿ ಇರುವುದರಿಂದ ವ್ಯಾಪಾರಾಭಿವೃದ್ಧಿ, ಧನಾಭಿವೃದ್ದಿ ಯೋಗಗಳು ಸಿಂಹ ರಾಶಿಯವರಿಗೆ ಇದೆ. ಶುಕ್ರನ ಬದಲಾವಣೆಯು ನಿಮಗೆ ಬಹಳ ಲಾಭವನ್ನು ತರುತ್ತಿದೆ. ಈ ಸಮಯದಲ್ಲಿ ನೀವು ಯಾವುದೇ ಕಾರ್ಯ ಮಾಡಬೇಕು ಎಂದುಕೊಂಡರೂ ಕೂಡ ಅದರಲ್ಲಿ ಜಯ ಕಾಣುತ್ತೀರಿ.
ಈ ಸುದ್ದಿ ಓದಿ:- ಧನುರ್ ರಾಶಿಯವರು ಈ ಸಲ ಗುರಿ ತಲುಪುವುದು ಪಕ್ಕಾ.! ಹೇಗಿದೆ ಗೊತ್ತಾ ಧನು ರಾಶಿಯ ಮಾಸ ಭವಿಷ್ಯ…
* ಧನುರ್ ರಾಶಿ:- ಧನುರ್ ರಾಶಿಯವರಿಗೆ ಆರು ಮತ್ತು ಹನ್ನೊಂದನೇ ಅಧಿಪತಿ ತೃತಿಯ ಭಾವದಲ್ಲಿದ್ದಾರೆ. ಕಲೆ ಮತ್ತು ಸೃಜನಶೀಲತೆಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಈ ರಾಶಿಯವರು ಇದರ ಅದ್ಭುತ ಲಾಭಗಳನ್ನು ಪಡೆಯಲಿದ್ದಾರೆ. ನೀವು ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಫಲಗಳನ್ನು ಪಡೆದಿದ್ದೀರಿ, ಇದರ ಸದುಪಯೋಗ ಪಡೆದುಕೊಳ್ಳಿ.
ಕುಂಭ ರಾಶಿ:- ನಾಲ್ಕು ಮತ್ತು ಒಂಭತ್ತರ ಭಾಗ್ಯಾಧಿಪತಿ ಹಾಗೂ ಕೇಂದ್ರಾಧಿಪತಿ ಒಂದರ ಕವತದಿರುವುದು ನಿಮಗೆ ಅನೇಕ ಶುಭಫಲಗಳನ್ನು ತರುತ್ತಿದೆ ನಿರಂತರವಾಗಿ ಈ ಸಮಯ ಪೂರ್ತಿ ನೀವು ಧನ ಲಾಭಗಳನ್ನು ಪಡೆಯುತ್ತೀರಿ.
ಈ ಸುದ್ದಿ ಓದಿ:- LPG ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ರೂ.799 ಕ್ಕೆ ಗ್ಯಾಸ್ ಸಿಲಿಂಡರ್ ಲಭ್ಯ, ರೂ.300 ಫ್ರೀ ಸಬ್ಸಿಡಿ.!
ಇದನ್ನು ನೀವು ಅರ್ಥ ಮಾಡಿಕೊಂಡು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಎಷ್ಟು ದಿನಗಳ ಕ’ಷ್ಟ ಕಾರ್ಪಣ್ಯಗಳನ್ನು ಪರಿಹರಿಸಿಕೊಳ್ಳಬಹುದು. ಶುಕ್ರನ ಆರಾಧನೆಯನ್ನು ಮಾಡುವುದರಿಂದ, ಶುಕ್ರನಿಗೆ ಸಂಬಂಧಪಟ್ಟ ಸ್ತೋತ್ರಗಳನ್ನು ಪಠಿಸುವುದರಿಂದ ಮೇಲಿನ ಆರು ರಾಶಿಯವರು ಈ ಯೋಗವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು.