ಸಿಂಹ ರಾಶಿಯವರಿಗೆ ಗುರುವಿನ ಬಲ ಇದ್ದೇ ಇದೆ. ಆದರೆ ಮಾರ್ಚ್ ತಿಂಗಳಲ್ಲಿ ಇವರು ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಕಳೆದುಕೊಂಡು ಬಹಳ ಚಡಪಡಿಕೆ ಅನುಭವಿಸುತ್ತಾರೆ. ಅವರು ನಿರೀಕ್ಷೆ ಮಾಡಿದ ಮಟ್ಟದಲ್ಲಿ ಯಶಸ್ಸನ್ನು ಕಾಣುವುದಿಲ್ಲ ಇದಕ್ಕೆಲ್ಲ ಶ್ರಮದ ಕೊರತೆಯ ಕಾರಣ ಎಂದರು ಕೂಡ ತಪ್ಪಾಗುವುದಿಲ್ಲ ಮತ್ತು ಇದಕ್ಕೆ ಪರೋಕ್ಷವಾಗಿ ಮಾರ್ಚ್ ತಿಂಗಳಿನಲ್ಲಿ ಸಿಂಹ ಲಾಶಿಯವರಿಗೆ ಶನಿ ಪ್ರಭಾವ ಕೂಡ ಇರುವುದರಿಂದ ಇದು ಸಹ ಕಾರಣವಾಗುತ್ತಿದೆ.
ಇದರಿಂದ ದೊಡ್ಡ ಆಘಾತ ಎಂದು ಭಯಪಡುವ ಅಗತ್ಯ ಇಲ್ಲ ಶನಿ ಪ್ರಭಾವವು ನಿಮ್ಮನ್ನು ಸೋಂಬೇರಿಯಾಗಿ ಮಾಡಬಹುದು ಅಂದರೆ ಮಂದಗತಿಯಲ್ಲಿ ಕೆಲಸ ಕಾರ್ಯಗಳು ಸಾಗುವ ರೀತಿ ಮಾಡಬಹುದು. ಶನಿಪ್ರಭಾವ ನಿಧಾನ ಪ್ರಗತಿ ಎನ್ನುವುದನ್ನು ಸೂಚಿಸುತ್ತದೆ.
ನೀವು ಎಷ್ಟೇ ಪ್ಲಾನ್ ಗಳನ್ನು ಹಾಕಿಕೊಂಡರೂ ಅದು ಕಾರ್ಯರೂಪಕ್ಕೆ ಬರದಂತೆ ತಡೆ ಅಥವಾ ನಿಮ್ಮ ಆಲೋಚನೆಗಳ ಮೇಲೆ ನಿಮಗೆ ಅನುಮಾನ ಅಥವಾ ನಿಮ್ಮವರಿಂದಲೇ ನಿಮಗೆ ಸಹಕಾರ ಇಲ್ಲದೆ ಇರುವುದು, ನಿಮ್ಮಲ್ಲಿಯೇ ಆಸಕ್ತಿಯ ಕೊರತೆ, ನೀವು ಎಷ್ಟೇ ಪ್ರಯತ್ನ ನಿಮ್ಮನ್ನು ಅಷ್ಟು ಲವಲವಿಕೆಯಿಂದ ಕೆಲಸ ಮಾಡಲು ಬಿಡದೆ ಯಾವುದಾದರೂ ಮಾತನಾಡಿ ನಿಮ್ಮ ಉತ್ಸಾಹವನ್ನು ನಿಮ್ಮವರೇ ಕುಗ್ಗಿಸುವಂಥದ್ದು ಇಂತಹ ಕಾರಣಗಳಿಂದಾಗಿ ನೀವು ಅಂದುಕೊಂಡ ಕೆಲಸಗಳು ನಿರೀಕ್ಷೆಯಂತೆ ಚುರುಕಾಗಿ ನಡೆಯದೆ ವಿಳಂಬವಾಗುತ್ತದೆ.
ಈ ಸುದ್ದಿ ಓದಿ:- ಕಟಕ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಸಮಸ್ಯೆ ಹಲವು ಆದರೂ ಧೈರ್ಯಗೆಡಬೇಡಿ.!
ನೀವು ಅಂದುಕೊಂಡಂತೆ ಪ್ರತಿಫಲ ಅಥವಾ ಲಾಭ ಸಿಗುವುದಿಲ್ಲ ಆದರೆ ಆರ್ಥಿಕ ನಷ್ಟ ಕೂಡ ಆಗುವುದಿಲ್ಲ. ಗುರುಬಲ ಇರುವುದರಿಂದ ಇದು ಸುಧಾರಿಸುತ್ತದೆ ಆದರೆ ದೊಡ್ಡ ದೊಡ್ಡ ಕಮಿಟ್ಮೆಂಟ್ ಗಳಲ್ಲಿ ಸಿಲುಕಿಕೊಳ್ಳಬೇಡಿ. ಈ ಮಾಸ ಪೂರ್ತಿ ನಿಮಗೆ ಗುರುಬಲದ ಜೊತೆಗೆ ಮತ್ತೊಂದು ಗ್ರಹದ ಪ್ರಭಾವದಿಂದ ಬರಲಿರುವ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ ಮತ್ತು ಪುಣ್ಯ ಫಲಗಳು ಸಿಗುತ್ತಿವೆ.
ಈ ಗ್ರಹವೇ ಕುಜ ಗ್ರಹ ಮಾರ್ಚ್ 15 ರ ವರೆಗೂ ಕೂಡ ಷಷ್ಠಮ ಸ್ಥಾನದಲ್ಲಿರುವ ಕುಜಗ್ರಹವು ನಿಮಗೆ ತೀಕ್ಷ್ಣ ಫಲಿತಾಂಶಗಳನ್ನು ನೀಡುತ್ತಿದ್ದಾನೆ. ಕುಜನು ನಿಮಗೆ ಮಾನಸಿಕವಾಗಿ ಧೈರ್ಯ ತುಂಬುತ್ತಾನೆ ಯಾರು ನಿಮ್ಮ ದಾರಿಗೆ ಅಡ್ಡ ಹಾಕಲು ಬಂದರು ಅವರ ಕೆಟ್ಟ ದೃಷ್ಟಿಗಳಿಂದ ನಿಮ್ಮನ್ನು ಪರಿಹಾರ ಮಾಡುತ್ತಾರೆ.
ನಿಮಗೆ ಬರಬಹುದಾದ ಅನೇಕ ತೊಂದರೆಗಳ ಪರಿಣಾಮವನ್ನು ಕಡಿಮೆಗೊಳಿಸಿ, ಸ್ವಲ್ಪದಲ್ಲಿಯೇ ನಿಮ್ಮನ್ನು ಬಚಾವ್ ಮಾಡುತ್ತಾರೆ ಹಾಗೂ ಇತರ ಪಾಪ ಗ್ರಹಗಳ ತೊಂದರೆಗಳಿಂದ ನಿಮ್ಮನ್ನು ಕಾಪಾಡುತ್ತಾರೆ. ಇದೆಲ್ಲವನ್ನು ಎದುರಿಸುವ ಸಾಹಸವನ್ನು ಈ ಕುಜ ಗ್ರಹವು ನೀಡುತ್ತದೆ.
ಈ ಸುದ್ದಿ ಓದಿ:-ಕಟಕ ರಾಶಿಗೆ ಅಷ್ಟಮ ಶನಿ ಅಂತ್ಯ ಯಾವಾಗ.? ಇನ್ನು ಎಷ್ಟು ವರ್ಷವಿದೆ, ಇಲ್ಲಿದೆ ನೋಡಿ ಮಾಹಿತಿ.!
ಅಷ್ಟಮದಲ್ಲಿ ಕುಜಗ್ರಹ ಇರುವ ಬಲದಿಂದ ಮನೆ ಕಟ್ಟುವ ಯೋಗ ಅಥವಾ ಪ್ರಾಪರ್ಟಿಗಳಿಗಿರುವ ತೊಂದರೆಗಳನ್ನು ಪರಿಹರಿಸಿಕೊಳ್ಳುವ ಯೋಗ, ಶತ್ರುನಾಶ, ಕೋರ್ಟ್ ಕಚೇರಿ ಕೇಸ್ ಇತ್ಯರ್ಥ ಇಂತಹ ಫಲಗಳು ಸಿಗುತ್ತವೆ ಎಂದು ಕೂಡ ಹೇಳಲಾಗುತ್ತದೆ. ಇದೆಲ್ಲವನ್ನು ಕೂಡ ಸಿಂಹ ರಾಶಿಯವರು ಮಾರ್ಚ್ 15ರವರೆಗೆ ಪಡೆಯುತ್ತಾರೆ.
ಮಾರ್ಚ್ ತಿಂಗಳ ಅಂತ್ಯದಲ್ಲಿ ಮಾರ್ಚ್ 25ರ ಬಳಿಕ ಸಿಂಹ ರಾಶಿಗೆ ಭಾಗ್ಯಾಧಿಪತಿಯಾಗಿರುವ ಗುರು ಗ್ರಹವು ಬುಧ ಗ್ರಹದ ಜೊತೆಗೆ ಸೇರುತ್ತದೆ. ಭಾಗ್ಯದಲ್ಲಿರುವ ಗುರುವನ್ನು ಬುಧನು ಬಂದು ಸೇರಿದಾಗ ಇದು ವಿದ್ಯಾರ್ಥಿಗಳ ಜೀವನದ ಮಟ್ಟಿಗೆ ಬಹಳ ಅತ್ಯುತ್ತಮ ಫಲಗಳನ್ನು ನೀಡುತ್ತದೆ.
ಸಿಂಹ ರಾಶಿಯ ವಿದ್ಯಾರ್ಥಿಗಳು ಅಥವಾ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸಿಂಹ ರಾಶಿಯವರು ಬಹಳ ಅತ್ಯುನ್ನತ ಫಲಿತಾಂಶಗಳನ್ನು ಈ ತಿಂಗಳಿನಲ್ಲಿ ಗುರು ಹಾಗೂ ಬುಧನ ಸಂಗಮದ ಫಲವಾಗಿ ಪಡೆಯುತ್ತಾರೆ. ಈ ಮಾಸದಲ್ಲಿ ನವಗ್ರಹ ಆರಾಧನೆ ಮಾಡಿ ಶುಭವಾಗುತ್ತದೆ.