ಮರಕ್ಕಿಂತ ಮರ ದೊಡ್ಡದು ಎನ್ನುವ ಗಾದೆ ಮಾತು ಇದೆ. ಸದ್ಯಕ್ಕೆ ಈ ಗಾದೆ ಮಾತನ್ನು ಕುಂಭ ರಾಶಿಯವರಿಗೆ ಸಲಹೆಯಾಗಿ ಹೇಳಲೇಬೇಕು. ಯಾಕೆಂದರೆ ಒಬ್ಬರ ಕಷ್ಟಕ್ಕಿಂತ ಮತ್ತೊಬ್ಬರ ಕಷ್ಟ ದೊಡ್ಡದಿರುತ್ತದೆ ನಾವು ನಮ್ಮ ಕಷ್ಟವನ್ನೇ ದೊಡ್ಡದು ಎಂದುಕೊಂಡು ಬಿಟ್ಟಿರುತ್ತೇವೆ. ಅಂದರೆ ಕುಂಭ ರಾಶಿಯವರು ಈ ತಿಂಗಳಲ್ಲಿ ಇಂತಹದೇ ಫಲವನ್ನು ಪಡೆಯಲಿದ್ದಾರೆ.
ಪೂರ್ತಿ ಎಲ್ಲವೂ ಯಶಸ್ಸೇ ಸಿಗುತ್ತದೆ ಕೈಕೊಂಡ ಎಲ್ಲಾ ಕಾರ್ಯಗಳು ಜಯಿಸುತ್ತದೆ, ಶುಭವಾಗುತ್ತದೆ ಎನ್ನುವ ಭರವಸೆಯೂ ನೀಡಲಾಗದು. ಹಾಗೆ ಕಷ್ಟಗಳೇ ತುಂಬಿರುತ್ತದೆ ಎಂದು ಹೇಳಲು ಆಗದು ಇಂತಹ ಮಿಶ್ರಫಲಗಳನ್ನು ಹೊಂದಿರುತ್ತಾರೆ. ಕಷ್ಟಗಳು ಇದ್ದರೂ ನಿಮಗಿಂತ ಕಷ್ಟಗಳಲ್ಲಿ ಬೇರೆಯವರು ಇದ್ದಾರೆ ಅವರಿಗೆ ಹೋಲಿಸಿದರೆ ನಿಮ್ಮ ಕಷ್ಟ ಕಡಿಮೆ ಎನ್ನಬಹುದು ಇಂತಹ ಫಲಗಳನ್ನು ಪಡೆದಿದ್ದೀರಿ.
ಈಗ ಕುಂಭ ರಾಶಿಗೆ ಸಾಡೇ ಸಾತಿ ನಡೆಯುತ್ತಿದೆ. ಹಾಗಾಗಿ ಸಹಜವಾಗಿ ಶನಿಯ ಪ್ರಭಾವದಿಂದ ಸಾಕಷ್ಟು ಅಡೆತಡೆ, ನೋ’ವು, ಅ’ವ’ಮಾ’ನ ಎಲ್ಲವನ್ನು ಎದುರಿಸಬೇಕಾಗುತ್ತದೆ. ನಡೆಯಬೇಕಾದ ಕಾರ್ಯಗಳೆಲ್ಲಾ ಕೂಡ ಮಂದಗತಿಯಲ್ಲಿ ಸಾಗುತ್ತದೆ. ವಾತಾವರಣ ಸ್ವಲ್ಪ ಬದಲಾದರು ಬಹಳ ಕಷ್ಟವನ್ನು ಅನುಭವಿಸುತ್ತೀರಿ ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರದಿಂದ ಇರಲೇಬೇಕು.
ಈ ಸುದ್ದಿ ಓದಿ:- ಧನುರ್ ರಾಶಿಯವರು ಈ ಸಲ ಗುರಿ ತಲುಪುವುದು ಪಕ್ಕಾ.! ಹೇಗಿದೆ ಗೊತ್ತಾ ಧನು ರಾಶಿಯ ಮಾಸ ಭವಿಷ್ಯ…
ಬೆಳಗ್ಗೆ ಕೆಲಸಕ್ಕೆ ಹೋಗುವುದಕ್ಕೆ ಮುನ್ನವೇ ನಿಮ್ಮ ಮನಸ್ಸು ಬಹಳ ಕದಡಿ ಹೋಗಿರುತ್ತದೆ ರಾತ್ರಿ ಮಲಗಿದ್ದರು ಮನಶಾಂತಿ ಇಲ್ಲ ಈ ರೀತಿ ಮಾನಸಿಕ ಒತ್ತಡಗಳನ್ನು ಅನುಭವಿಸುತ್ತೀರಿ. ಬಹಳ ಟೆನ್ಶನ್ ನಲ್ಲಿ ಇರುತ್ತೀರಿ ನಿಮ್ಮ ಮೇಲೆ ನಿಮಗೆ ಸಾಕಷ್ಟು ಗೊಂದಲಗಳು ಏರ್ಪಡುತ್ತದೆ, ನೀವು ತೆಗೆದುಕೊಳ್ಳುವ ನಿರ್ಧಾರಗಳನ್ನು ನೀವೇ ಅನುಮಾನಿಸುತ್ತೀರಿ.
ಆದರೆ ಎಲ್ಲಕ್ಕೂ ಕೂಡ ಒಂದು ಮಿತಿ ಇದ್ದೇ ಇರುತ್ತದೆ ನಿಮ್ಮ ಕಷ್ಟಗಳು ಕಳೆದು ಒಳ್ಳೆಯ ದಿನಗಳು ಕೂಡ ಬರಲಿದೆ ಧೈರ್ಯದಿಂದ ಇರಿ ಕುಂಭ ರಾಶಿಯವರಿಗೆ ಕೊಡಬಹುದಾದ ಇನ್ನಷ್ಟು ಸಲಹೆಗಳು ಏನೆಂದರೆ, ಮಾರ್ಚ್ ತಿಂಗಳಲ್ಲಿ ಆದಷ್ಟು ಸ್ವಂತ ನಿರ್ಧಾರಗಳಿಗೆ ಬೆಲೆ ಕೊಡಿ, ನಿಮ್ಮ ಮೇಲೆ ನೀವು ನಂಬಿಕೆ ಇಡಿ.
ನಿಮ್ಮ ತಪ್ಪುಗಳಿಂದ ನೀವು ಕಲಿಯಿರಿ ಆದರೆ ಯಾವುದೇ ಕಾರಣಕ್ಕೂ ಇನ್ನೊಬ್ಬರಿಂದ ಇನ್ಫ್ಲುಯೆನ್ಸ್ ಆಗಬೇಡಿ. ನಿಮ್ಮನ್ನು ಮೋ’ಸಗೊಳಿಸುವ ಜನರೇ ಹೆಚ್ಚಾಗಿ ಇರುತ್ತಾರೆ. ಅದೇ ರೀತಿಯಾಗಿ ಪ್ರಯಾಣಗಳ ಬಗ್ಗೆ ಎಚ್ಚರ ಇರಲಿ ಪ್ರಯಾಣದಲ್ಲಿ ಅಡಚಣೆ ಅಥವಾ ಪ್ರಯಾಣದಲ್ಲಿ ತೊಂದರೆ ಇಂತಹ ಫಲಗಳು ಇರುತ್ತವೆ ಎಂದು ಹೇಳುತ್ತಿದೆ ಮಾಸ ಭವಿಷ್ಯ.
ಈ ಸುದ್ದಿ ಓದಿ:-ಜೀವನಪೂರ್ತಿ ಆರೋಗ್ಯವಾಗಿರಲು ಈ ಸಲಹೆಗಳನ್ನು ಪಾಲಿಸಿ.!
ಹೊಸ ಉದ್ಯೋಗ ಬದಲಾಯಿಸಲು ಅಥವಾ ಹೊಸದಾಗಿ ವ್ಯಾಪಾರ ವ್ಯವಹಾರ ಆರಂಭಿಸಲು ಈ ಸಮಯದಲ್ಲಿ ಹೋಗಬೇಡಿ ಆದಷ್ಟು ತಾಳ್ಮೆಯಿಂದ ಇರಿ. ಇಷ್ಟು ವರ್ಷಗಳ ಕಷ್ಟ ಅನುಭವಿಸುತ್ತಿದ್ದ ನೀವು ಇನ್ನು ಕೆಲವೇ ತಿಂಗಳುಗಳಲ್ಲಿ ಸಾಡೇಸಾತಿಯಿಂದ ಮುಕ್ತಿ ಪಡೆಯುತ್ತೀರಿ. ಆ ಸಮಯದಲ್ಲಿ ನಿಮಗೆ ಶುಭಫಲಗಳನ್ನು ಶನಿ ಕೊಟ್ಟು ಹೋಗುತ್ತಾರೆ.
ತೃತೀಯದಲ್ಲಿ ಬುಧನಿದ್ದಾನೆ ಇದರ ಫಲವಾಗಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಾವುದೇ ಅಡೆಚಣೆ ಇರುವುದಿಲ್ಲ, ಸದ್ಯದ ಮಟ್ಟಿಗೆ ಕುಂಭ ರಾಶಿಯಲ್ಲಿ ವಿದ್ಯಾರ್ಥಿಗಳಿಗೆ ಮಾತ್ರ ಶುಭಫಲವಿದೆ ಎಂದು ಹೇಳಿದರು ಕೂಡ ತಪ್ಪಾಗುವುದಿಲ್ಲ.
ವಿದ್ಯಾರ್ಥಿಗಳು ಇದನ್ನು ಉತ್ತಮವಾಗಿ ಬಳಸಿಕೊಳ್ಳಿ ನೀವು ಉತ್ತಮ ಅಂಕಗಳನ್ನು ಪಡೆಯುವ ಒಳ್ಳೆಯ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಅಥವಾ ಇಂದು ನೀವು ಕಲಿತ ವಿದ್ಯೆಯು ಬಹುಕಾಲದವರೆಗೆ ನಿಮಗೆ ನೆರವಾಗುವ ಸಾಧ್ಯತೆ ಇದೆ, ಇದನ್ನು ಸಾಕಾರಗೊಳಿಸಿಕೊಳ್ಳಿ. ಪ್ರತಿ ಶನಿವಾರ ಶನೇಶ್ವರ ಹಾಗೂ ಆಂಜನೇಯ ಸ್ವಾಮಿಯ ದರ್ಶನ ಮಾಡಿ ಮತ್ತು ಶನೇಶ್ವರನಿಗೆ ವಿಶೇಷ ಸೇವೆ ಸಲ್ಲಿಸುವ ಮೂಲಕ ಶುಭ ಫಲಗಳಿಗಾಗಿ ಪ್ರಾರ್ಥಿಸಿಕೊಳ್ಳಿ.