ಧನಸ್ಸು ರಾಶಿಯ ರಾಶಿ ಚಿಹ್ನೆಯ ಧನುಸ್ಸು ಆಗಿದೆ. ಇದು ಗುರಿಯನ್ನು ಇಟ್ಟು ಹೊಡೆಯುವುದು, ಅದೇ ರೀತಿಯಾಗಿ ಈ ರಾಶಿಯವರು ಕೂಡ ಇಂತಹದೇ ಮನಸ್ಥಿತಿ ಹೊಂದಿರುತ್ತಾರೆ. ಯಾವುದಾದರೂ ಟಾರ್ಗೆಟ್ ಫಿಕ್ಸ್ ಮಾಡಿಕೊಂಡರೆ ಅದನ್ನು ತಲುಪುವವರೆಗೂ ಇವರಿಗೆ ಸಮಾಧಾನ ಇರುವುದಿಲ್ಲ.
ಏನೇ ತಂಟೆ ತಕರಾರು ತಾಪತ್ರಯ ಬಂದರೂ ಎಲ್ಲವನ್ನೂ ಮೀರಿ ಅವರು ತಾವು ಅಂದುಕೊಂಡ ಗುರಿ ತಲುಪಿದಾಗಲೇ ಇವರಿಗೆ ನೆಮ್ಮದಿ. ನೀವು ಮಾರ್ಚ್ ತಿಂಗಳಲ್ಲಿ ಈ ರೀತಿ ಯಾವುದಾದರೂ ಗುರಿ ಇಟ್ಟುಕೊಂಡಿದ್ದರೆ ಟೆನ್ಶನ್ ಬೇಡ ಯಾಕೆಂದರೆ ಮಾರ್ಚ್ – 2024 ನಿಮಗೆ ಬಹಳ ಅದ್ಭುತವಾದ ಫಲಗಳನ್ನು ನೀಡುತ್ತಿದೆ, ನೀವು ಅಂದುಕೊಂಡಿದ್ದನ್ನು ಮಾಡುತ್ತೀರಿ.
ಈ ತಿಂಗಳ ಅರ್ಧ ಸಮಯದವರೆಗೂ ಅಂದರೆ ಮಾರ್ಚ್ 14ರವರೆಗೂ ತೃತೀಯ ಭಾವದಲ್ಲಿ ರವಿ ಇರುತ್ತಾರೆ, ಈ ಫಲದಿಂದಾಗಿ ನಿಮಗೆ ಸರ್ಕಾರಕ್ಕೆ ಸಂಬಂಧಿಸಿದ ಚಟುವಟಿಕೆಗಳು ಸರ್ಕಾರಿ ಉದ್ಯೋಗಗಳು, ಸರ್ಕಾರದ ಯೋಜನೆಗಳ ಫಲಾನುಭವಿಗಳು, ಸರ್ಕಾರಿ ಪ್ರಾಜೆಕ್ಟ್ ಗಳು ಹೀಗೆ ಸರ್ಕಾರಕ್ಕೆ ಸಂಬಂಧಿಸಿದಂತೆ ಯಾವುದಾದರೂ ಕೆಲಸ ಕಾರ್ಯದಲ್ಲಿ ತೊಡಗಿರುವವರಿಗೆಲ್ಲ ಸಮಯ ಬಹಳ ಉತ್ತಮವಾಗಿದೆ.
ನೀವು ಏನು ಅಂದುಕೊಂಡಿದ್ದೀರಾ ಅದೇ ರೀತಿ ಎಲ್ಲವೂ ಜರುಗುತ್ತದೆ. ತೃತಿಯದಲ್ಲಿರುವ ರವಿ ನಿಮ್ಮ ಕೆಲಸ ಕಾರ್ಯಗಳನ್ನು ಯಶಸ್ವಿಗೊಳಿಸುವುದರಿಂದ ಸಹಜವಾಗಿ ನೀವು ಗೌರವಕ್ಕೆ ಪಾತ್ರರಾಗುತ್ತಿರಿ ಮತ್ತು ನಿಮ್ಮನ್ನು ಎಲ್ಲರೂ ಗುರುತಿಸುವಂತೆ ಆಗುತ್ತದೆ. ತೃತಿಯ ಭಾಗದಲ್ಲಿ ರವಿಯ ಜೊತೆಗೆ ಶನಿಯು ಕೂಡ ಇರುವುದರಿಂದ ಆರೋಗ್ಯಕ್ಕೆ ಸಂಬಂಧಪಟ್ಟ ಕೆಲವು ಸಮಸ್ಯೆಗಳು ಧನುರ್ ರಾಶಿಯವರನ್ನು ಕಾಡುತ್ತದೆ.
ಶನಿಯ ಪ್ರವಾವದಿಂದ ಮಾನಸಿಕ ಒತ್ತಡಗಳು, ಮತ್ತು ಸ್ವಲ್ಪ ಗೊಂದಲಗಳು ಕೂಡ ಈ ತಿಂಗಳಲ್ಲಿ ಧನುರ್ ರಾಶಿಯವರನ್ನು ಬಾಧಿಸುತ್ತದೆ. ಎಲ್ಲರಿಗೂ ಗೊತ್ತು ರವಿ ಹಾಗೂ ಶನಿ ತಂದೆ ಮಕ್ಕಳು. ಮತ್ತು ಇವರಿಬ್ಬರಿಗೆ ಸದಾ ವಿರೋಧ ಇರುತ್ತದೆ. ಇವರಿಬ್ಬರು ನಿಮ್ಮ ರಾಶಿಯಲ್ಲಿ ಕೆಲಸ ಸಮಯ ಒಟ್ಟಿಗೆ ಇರುವುದರಿಂದ ನಿಮಗೂ ಕೂಡ ಇಂತಹದೇ ಫಲಗಳು ಸಿಗುತ್ತವೆ.
ನೀವು ನಿಮ್ಮ ತಂದೆಯ ಮಾತನ್ನು ಯೋಚಿಸುವ ಅಥವಾ ನಿಮ್ಮ ತಂದೆಯೇ ನಿಮ್ಮ ಮಾತನ್ನು ಒಪ್ಪದೇ ಇರುವ ನಿಮ್ಮ ಮಧ್ಯೆ ಸ್ವಲ್ಪ ಮನಸ್ತಾಪವಾಗುವ ಸಾಧ್ಯತೆ ಇರುತ್ತದೆ. ಆದಷ್ಟು ಈ ವಿಚಾರ ತಿಳಿದಿರುವುದರಿಂದ ಎಚ್ಚರಿಕೆಯಿಂದ ಇರಿ, ಬರುವ ಸಮಸ್ಯೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಿ. ಇದರ ಜೊತೆಗೆ ಮಾರ್ಚ್ 15ಕ್ಕೆ ಕುಜನೂ ಕೂಡ ತೃತೀಯ ಭಾವಕ್ಕೆ ಬರುತ್ತಾರೆ ಇದರಿಂದ ನಿಮ್ಮ ಸಾಧನೆಗಳು ನಿರಾತಂಕವಾಗಿ ಸಾಗುತ್ತವೆ.
ಶನಿ ಮತ್ತು ಕುಜ ಒಟ್ಟಿಗೆ ಸೇರುವುದರಿಂದ ಸಹೋದರರ ಮಧ್ಯೆ ಕೂಡ ಸ್ವಲ್ಪ ಸಣ್ಣಪುಟ್ಟ ಕಿ’ತ್ತಾ’ಟ ಅಥವಾ ಮನಸ್ತಾಪ ಬರಬಹುದು. ವಿಪರೀತಕ್ಕೆ ಏರುವುದಿಲ್ಲ ಆದರೆ ನೀವು ಕೂಡ ಇದನ್ನು ಅರ್ಥ ಮಾಡಿಕೊಂಡು ಬೆಳೆಸದೆ ಇರುವುದೇ ಒಳ್ಳೆಯದು ವಿದ್ಯಾರ್ಥಿಗಳಿಗೂ ಕೂಡ ಮಾರ್ಚ್ ತಿಂಗಳಿನಲ್ಲಿ ಶುಭಫಲಗಳು ಇವೆ. ನಿಮ್ಮ ಗುರುಗಳ ಅಥವಾ ಗುರು ಸ್ಥಾನದಲ್ಲಿರುವವರ ಮಾರ್ಗದರ್ಶನದಂತೆ ನಡೆಯುವುದರಿಂದ ಇನ್ನೂ ಉತ್ತಮ ಫಲಗಳನ್ನು ಕಾಣುತ್ತೀರಿ.
ಸ್ವಲ್ಪ ಚಂಚಲ ಸ್ವಭಾವವಿರುತ್ತದೆ, ಏಕಾಗ್ರತೆಯನ್ನು ಕಳೆದುಕೊಳ್ಳಬೇಡಿ. ಈ ತಿಂಗಳ ಅಂತ್ಯದಲ್ಲಿ ನೀವು ನಿಮ್ಮ ಸ್ನೇಹಿತರ ಜೊತೆಗೆ ಅಥವಾ ಕುಟುಂಬದ ಜೊತೆಗೆ ಟೆನ್ಶನ್ ಫ್ರೀ ಆಗಿ ಸಂತೋಷದಿಂದ ಪ್ರಯಾಣಕ್ಕೆ ಹೋಗುವ ಅಥವಾ ಶುಭ ಕಾರ್ಯಗಳಿಗೆ ಹೋಗಿ ಸಮಯ ಕಳೆಯುವ ಅವಕಾಶವನ್ನು ಪಡೆಯುತ್ತೀರಿ. ಬಹಳ ದಿನಗಳಿಂದ ನೀವು ಕಾಯುತ್ತಿದ್ದ ಸಮಯದ ಅಭಾವದಿಂದ ಸಾಧ್ಯವಾಗದೇ ಉಳಿದಿದ್ದ ಕಾರ್ಯಗಳು ಜರುಗುತ್ತವೆ. ಒಟ್ಟಾರೆಯಾಗಿ ಬಹಳ ಶುಭಫಲವನ್ನು ಈ ತಿಂಗಳಿನಲ್ಲಿ ಧನುರ್ ರಾಶಿಯವರು ಪಡೆಯಲಿದ್ದೀರಿ.