ಜನವರಿ 17, 2023 ರಿಂದ ಕಟಕ ರಾಶಿಯವರಿಗೆ ಅಷ್ಟಮ ಶನಿ ಆರಂಭವಾಗಿದೆ. ಇಲ್ಲಿಂದ ಎರಡೂವರೆ ವರ್ಷದವರೆಗೆ ಅಷ್ಟಮ ಶನಿ ನಡೆಯುತ್ತಿರುತ್ತದೆ. 28 ಮಾರ್ಚ್ 2025 ರವರೆಗೂ ಕೂಡ ಕಟಕ ರಾಶಿಯವರಿಗೆ ಈ ಪ್ರಭಾವ ಇರುತ್ತದೆ. ಅಷ್ಟಮ ಶನಿ ಎಂದ ಕೂಡಲೇ ಎಲ್ಲರೂ ಭಯ ಬೀಳುತ್ತಾರೆ ಯಾಕೆಂದರೆ ಎಂಟನೇ ಮನೆಯನ್ನು ಪಾಪ ಸ್ಥಾನ ಎನ್ನಲಾಗುತ್ತದೆ.
ಆದರೆ ನೆನಪಿಡಿ ಇದೇ ಅಷ್ಟಮ ಶನಿಯನ್ನು ಆಯುಷ್ಯ ಸ್ಥಾನ ಹಾಗೂ ಅದೃಷ್ಟ ಸ್ಥಾನ ಎಂದು ಕೂಡ ಕರೆಯಲಾಗುತ್ತದೆ. ಹೀಗಾಗಿ ಇದರ ಪ್ರಭಾವದ ಬಗ್ಗೆ ಬಹಳ ಭಯ ಬೀಳುವ ಬದಲು ಧೈರ್ಯದಿಂದ ಇರಿ ಅಷ್ಟಮ ಶನಿಪ್ರಭಾವದಿಂದ ಕಟಕ ರಾಶಿಯವರಿಗೆ ನೂರೆಂಟು ಬಗೆಯ ಸಮಸ್ಯೆಗಳು ಬರಬಹುದು.
ಆದರೆ ಇದೆಲ್ಲವನ್ನು ಬಗೆಹರಿಸುವ ಶಕ್ತಿಯನ್ನು ಭಗವಂತ ನಿಮಗೆ ಕೊಡುತ್ತಾನೆ ಹಾಗೂ ಈ ಎಲ್ಲಾ ಕಷ್ಟಗಳ ಸಂದರ್ಭದಲ್ಲೂ ನಿಮಗೆ ನೆರವಾಗಲು ಭಗವಂತನು ತನ್ನ ರೂಪದಲ್ಲಿ ಯಾರನ್ನಾದರೂ ನಿಮ್ಮ ಸಹಾಯಕ್ಕೆ ಕಳುಹಿಸುತ್ತಾನೆ. ಕಟಕ ರಾಶಿಗೆ ಅಧಿಪತಿ ಚಂದ್ರನಾಗಿರುವುದರಿಂದ ಚಂದ್ರನಿಗೆ ಶನಿಯಿಂದ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ.
ಈ ಸುದ್ದಿ ಓದಿ:- LPG ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ರೂ.799 ಕ್ಕೆ ಗ್ಯಾಸ್ ಸಿಲಿಂಡರ್ ಲಭ್ಯ, ರೂ.300 ಫ್ರೀ ಸಬ್ಸಿಡಿ.!
ಹಾಗಾಗಿ ಬಹಳ ಭಯ ಬೀಳುವ ಅಗತ್ಯ ಇಲ್ಲ. ಈ ಸಂದರ್ಭದಲ್ಲಿ ಪ್ರಮುಖವಾಗಿ ಯಾವ ವಿಚಾರಗಳಲ್ಲಿ ಎಚ್ಚರಿಕೆ ಆಗಿರಬೇಕು ಎನ್ನುವುದನ್ನು ನೀವು ತಿಳಿದುಕೊಂಡರೆ ಬರುವ ಅ’ಪಾ’ಯದಿಂದ ಎಚ್ಚೆತ್ತುಕೊಂಡು ಬದುಕಬಹುದು. ಅಷ್ಟಮ ಶನಿಪ್ರಭಾವದಿಂದ ಕಟಕ ರಾಶಿಯವರಿಗೆ ಪ್ರಯಾಣದಲ್ಲಿ ತೊಂದರೆ ಆಗಬಹುದು ಹೀಗಾಗಿ ವಾಹನ ಚಾಲನೆ ಮಾಡುವಾಗ ಅಥವಾ ಚಾಲಕರಾಗಿ ವೃತ್ತಿಯಲ್ಲಿರುವವರು ಅಥವಾ ಪ್ರಯಾಣ ಮಾಡುವಾಗ ಇದರ ಬಗ್ಗೆ ಎಚ್ಚರ ಇರಲಿ. ಪ್ರಯಾಣದಲ್ಲಿ ಅ’ಪ’ಘಾ’ತ’ಗಳಾಗಿ ಸ್ವಲ್ಪ ತೊಂದರೆಗಳು ಆಗಬಹುದು.
ಪ್ರಯಾಣ ಮಾಡುವ ವಿಷಯ ಮಾತ್ರ ಅಲ್ಲದೆ ಉದ್ದೇಶದಿಂದಲೂ ಕೂಡ ತೊಡಕಾಗಬಹುದು ಹಾಗಾಗಿ ದೂರದ ಸ್ಥಳಗಳಿಗೆ ಹೋಗಿ ಯಾವುದಾದರು ಕೆಲಸ ಕಾರ್ಯ ಮಾಡಬೇಕಾಗಿದ್ದಾಗ ಎಚ್ಚರಿಕೆಯಿಂದ ಇರಿ. ಜನ್ಮ ಜಾತಕದಲ್ಲಿ ಶನಿ ಉತ್ತಮನಾಗಿದ್ದಾಗ ಈ ಸಮಸ್ಯೆಗಳು ಕೂಡ ಅಷ್ಟಾಗಿ ಕಾಡುವುದಿಲ್ಲ.
ಆಯುಷ್ಯಕ್ಕೆ ಖಂಡಿತವಾಗಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ, ಅದೃಷ್ಟವು ನಿಮ್ಮ ಬೆನ್ನ ಹಿಂದೆ ಬರುತ್ತದೆ. ಆದರೆ ನೀವು ಅದೃಷ್ಟವನ್ನು ಹುಡುಕಿ ಹೋಗಬೇಕಾದ ಜವಾಬ್ದಾರಿ ಹೊಂದಿರುತ್ತೀರಿ ಎನ್ನುವುದನ್ನು ಅಷ್ಟಮ ಶನಿ ಸೂಚಿಸುತ್ತದೆ. ಮತ್ತು ಕರ್ಮದಲ್ಲಿ ಅದೃಷ್ಟ ಎಂದು ಹೇಳುವುದರಿಂದ ಕರ್ಮ ಎಂದರೆ ಇಲ್ಲಿ ನಾವು ಆರಿಸಿಕೊಳ್ಳುವ ಉದ್ಯೋಗ ಎನ್ನಬಹುದು ಅಥವಾ ನಮ್ಮ ವ್ಯಾಪಾರ ವ್ಯವಹಾರ ಚಟುವಟಿಕೆ ಎನ್ನಬಹುದು ಇವುಗಳಲ್ಲಿ ಪ್ರಾಮಾಣಿಕವಾಗಿ ಶ್ರಮ ಹಾಕಿ ಪ್ರಯತ್ನಪಟ್ಟರೆ ಖಂಡಿತವಾಗಿ ಯಶಸ್ಸು ನಿಮ್ಮ ಹಿಂದೆ ಬರುತ್ತದೆ. ಎನ್ನುವುದನ್ನು ಇದು ಹೇಳುತ್ತದೆ.
ಈ ಸುದ್ದಿ ಓದಿ:- ಸರ್ಜರಿ ಇಲ್ಲದೇ ಪೈಲ್ಸ್ ಕ್ಲಿಯರ್ ಆಗುತ್ತದೆಯೇ.? ಹೇಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!
ಅಷ್ಟಮ ಶನಿ ಮುಗಿಯುವ ಸಮಯದಲ್ಲಿ ನಿಮಗೆ ಇನ್ನು ಹೆಚ್ಚಿನ ಉತ್ತಮ ಫಲಗಳು ದೊರೆಯುತ್ತದೆ. ಅಲ್ಲಿಯವರೆಗೂ ಪ್ರಭಾವ ಕಡಿಮೆ ಆಗಬೇಕು ಒಳ್ಳೆಯದಾಗಬೇಕು ಎಂದರೆ ಶಿವನ ದೇವಾಲಯಗಳಿಗೆ ಶನೇಶ್ವರನ ದೇವಾಲಯಕ್ಕೆ ಆಂಜನೇಯನ ದೇವಸ್ಥಾನಕ್ಕೆ ಭೇಟಿ ಕೊಡಿ. ಅಕ್ಕಿ ದಾನ ಮಾಡಿ, ಕಪ್ಪು ಎಳ್ಳನ್ನು ದಾನ ಮಾಡಿ.
ಸ್ವಾಮಿಗೆ ಎಳ್ಳಿನ ಎಣ್ಣೆಯಿಂದ ತೈಲಾಭಿಷೇಕ ಮಾಡಿಸಿ, ಶನೈಶ್ವರ ಸ್ವಾಮಿಯ ಮಂತ್ರಗಳನ್ನು ಪಠಿಸಿ, ಶನಿವಾರಗಳಂದು ಶನೇಶ್ವರ ಮತ್ತು ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದು ಸ್ವಾಮಿ ಕೃಪೆಗೆ ಪಾತ್ರರಾಗಿ. ಯಾವುದೇ ಕಾರಣಕ್ಕೂ ನೆಗೆಟಿವ್ ಆಗಿ ಯೋಚನೆ ಮಾಡಬೇಡಿ ನಿಮ್ಮ ಸೌಮ್ಯ ಸ್ವಭಾವ ಹಾಗೂ ಒಳ್ಳೆತನವನ್ನು ಇದೇ ರೀತಿ ಎಷ್ಟೇ ಪರೀಕ್ಷೆ ಬಂದರು ಕಾಪಾಡಿಕೊಳ್ಳಿ.