ಕಟಕ ರಾಶಿಯವರು ಈಗಾಗಲೇ ಬಹಳ ದಿನಗಳಿಂದ ಸಮಸ್ಯೆಗಳನ್ನು ಅನುಭವಿಸುತ್ತಾ ಬಂದಿದ್ದಾರೆ, ಅಷ್ಟಮದಲ್ಲಿ ಶನಿ ಇರುವುದರಿಂದ ಇದು ಮುಂದುವರೆಯುತ್ತದೆ ಎಂದೇ ಹೇಳಬಹುದು. ಶನಿಯು ಪಾಪಗ್ರಹವಾಗಿದ್ದಾನೆ ಹಾಗೂ ಈ ಸಂದರ್ಭದಲ್ಲಿ ಇನ್ನು ತೀಕ್ಷ್ಣವಾಗಿ ತನ್ನ ಪ್ರಭಾವ ಬೀರಲಿದ್ದಾನೆ ಇದನ್ನು ಎದುರಿಸಲು ಸಿದ್ಧರಾಗಬೇಕು.
ಮುಖ್ಯವಾಗಿ ದೈಹಿಕ ಆರೋಗ್ಯಕ್ಕಿಂತಲೂ ಮಾನಸಿಕ ಆರೋಗ್ಯದ ಮೇಲೆ ಇದು ದುಷ್ಪರಿಣಾಮ ಬೀಳುತ್ತದೆ. ನಿಮಗೆ ಈ ಮಾರ್ಚ್ ತಿಂಗಳು ಪೂರ್ತಿ ಮಾನಸಿಕ ಒತ್ತಡ, ಗೊಂದಲಗಳು, ಕಿರಿಕಿರಿ ತಪ್ಪಿದ್ದಲ್ಲ. ಆದರೆ ಬದುಕಿನಲ್ಲಿ ಇದು ಬಹಳ ಉತ್ತಮ ಪಾಠವಾಗಿ ಬದುಕಿನ ಪೂರ್ತಿ ನಿಮಗೆ ನೆನಪಿನಲ್ಲಿ ಇರುತ್ತದೆ.
ಹಾಗಾಗಿ ಇದನ್ನು ಸಂಪೂರ್ಣವಾಗಿ ಕೆಟ್ಟ ಫಲ ಎಂದು ಕೂಡ ಹೇಳಲು ಆಗುವುದಿಲ್ಲ ಸಮಾಧಾನದಿಂದ ನೀವು ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಹೋಗಬೇಕು. ಇದೇ ಸ್ಥಾನದಲ್ಲಿ ರವಿಯು ಕೂಡ ಒಟ್ಟಿಗೆ ಸೇರುತ್ತಿರುವುದರಿಂದ ರವಿ ಹಾಗೂ ಶನಿಯ ಸಂಯೋಗವು ನಿಮಗೆ ಅಷ್ಟೊಂದು ಉತ್ತಮವಾದ ಪರಿಣಾಮವನ್ನು ಕೊಡುವುದಿಲ್ಲ. ನಿಮಗೆ ಬಹಳ ಇನ್ ಸೆಕ್ಯೂರ್ ಫೀಲ್ ಮಾಡಿಸುತ್ತದೆ.
ಈ ಸುದ್ದಿ ಓದಿ:- ಕಟಕ ರಾಶಿಗೆ ಅಷ್ಟಮ ಶನಿ ಅಂತ್ಯ ಯಾವಾಗ.? ಇನ್ನು ಎಷ್ಟು ವರ್ಷವಿದೆ, ಇಲ್ಲಿದೆ ನೋಡಿ ಮಾಹಿತಿ.!
ಉದ್ಯೋಗ ಸ್ಥಳದಲ್ಲಿಯೂ ಕೂಡ ನೀವು ಮಾಡಿದ ಕೆಲಸ ಸರಿ ಇದೆಯಾ? ತಪ್ಪಿದೆಯಾ? ಎನ್ನುವ ಗೊಂದಲಕ್ಕೆ ಒಳಗಾಗುತ್ತೀರಿ ಅಥವಾ ಬದುಕಿನಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬಂದರು ನಾನು ಮಾಡಿದ್ದು ಸರಿ ತಪ್ಪು ಎನ್ನುವ ಭಯದಲ್ಲಿ ಗೊಂದಲದಲ್ಲಿ ಆತಂಕದಲ್ಲಿ ಇರುತ್ತೀರಿ ಹೊರತು ನೆಮ್ಮದಿ ಅಂತೂ ಇರುವುದಿಲ್ಲ.
ಬಹಳಷ್ಟು ಭಯದ ವಾತಾವರಣದಲ್ಲಿನೀವು ಈ ತಿಂಗಳನ್ನು ಕಳೆಯಲಿದ್ದೀರಿ, ಆದರೆ ಸಮಾಧಾನಕರ ಸಂಗತಿ ಏನೆಂದರೆ ನಿಮಗೆ ಮಾರ್ಚ್ 14 ರಿಂದ ಗುರುಬಲವು ಲಭಿಸಲಿದೆ. ಗುರುಬಲದಿಂದಾಗಿ ಕೆಲ ಉತ್ತಮ ಫಲಗಳನ್ನು ಪಡೆಯುತ್ತೀರಿ, ಗುರು ಗ್ರಹ ನೀಡಬೇಕಿದ್ದ ಬಹುತೇಕ ಫಲಗಳು ಶನಿಪ್ರಭಾವವನ್ನು ತಡೆಯುವುದರಲ್ಲಿ ಕಳೆಯುತ್ತದೆ.
ಆದರೆ ವಿದ್ಯಾರ್ಥಿಗಳಿಗೆ ಶುಭಫಲಗಳಿವ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವವರು ಅಥವಾ ಪ್ರಮುಖವಾದ ಪರೀಕ್ಷೆಗಳನ್ನು ಕೈಗೊಳ್ಳುತ್ತಿರುವ ಕಟಕ ರಾಶಿಯ ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ತಕ್ಕ ಫಲವನ್ನು ಖಂಡಿತವಾಗಿಯೂ ಪಡೆಯುತ್ತಾರೆ. ಮಾರ್ಚ್ 25ರ ನಂತರ ಬುಧನು ನಿಮ್ಮ ದಶಮ ಸ್ಥಾನವಾದ ಮೇಷ ರಾಶಿಗೆ ಪ್ರವೇಶ ಪಡೆಯುತ್ತಿದ್ದಾನೆ.
ಈ ಸುದ್ದಿ ಓದಿ:-LPG ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ರೂ.799 ಕ್ಕೆ ಗ್ಯಾಸ್ ಸಿಲಿಂಡರ್ ಲಭ್ಯ, ರೂ.300 ಫ್ರೀ ಸಬ್ಸಿಡಿ.!
ಇದರಿಂದ ಕೂಡ ಕೆಲ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು, ಇದೇ ಸ್ಥಾನದಲ್ಲಿ ರಾಹು, ಕೇತು ಕೂಡ ಸೇರುತ್ತಿದ್ದಾರೆ. ರಾಹುವಿನ ಫಲದಿಂದಾಗಿ ಅನಿರೀಕ್ಷಿತ ಧನಲಾಭ ಅಥವಾ ಹೂಡಿಕೆಗಳಲ್ಲಿ ಲಾಭ ಅಥವಾ ವ್ಯಾಪಾರ ವ್ಯವಹಾರ ಅಭಿವೃದ್ಧಿ ಏಳಿಗೆ ಸಾಧ್ಯತೆ ಇರುತ್ತದೆ ಆದರೆ ಉಳಿದ ಗ್ರಹಗಳ ಫಲವನ್ನು ನಿರ್ಲಕ್ಷಿಸದೆ ಬಹಳ ಎಚ್ಚರಿಕೆಯಿಂದ ನಿರ್ಧಾರಗಳನ್ನು ಕೈಕೊಂಡು ಈ ಲಾಭವನ್ನು ಪಡೆದುಕೊಳ್ಳಬೇಕು.
ಮತ್ತು ಕೇತುವಿನ ಪ್ರಭಾವದಿಂದಾಗಿ ನಿಮಗೆ ಕಷ್ಟಗಳನ್ನು ಎದುರಿಸುವಂತಹ ಧೈರ್ಯ ಸಾಮರ್ಥ್ಯ ಬರುತ್ತದೆ. ಕೇತು ವಿಕ್ರಮವನ್ನು ಸೂಚಿಸುವುದರಿಂದ ನಿಮ್ಮ ಹೋರಾಟಕ್ಕೆ ತಕ್ಕ ಫಲ ದೊರೆಯುತ್ತದೆ. ಮಾರ್ಚ್ ತಿಂಗಳ ಅಂತ್ಯದಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಆದರೆ ಮಾರ್ಚ್ ತಿಂಗಳ ಪೂರ್ತಿ ಒಟ್ಟಾರೆಯಾಗಿ ಹೇಳುವುದಾದರೆ ಸಮಸ್ಯೆ ಪ್ರಮಾಣ ನೋವಿನ ಪ್ರಮಾಣ ತುಸು ಹೆಚ್ಚಾಗಿಯೇ ಇದೆ.
ತಾಳ್ಮೆ ಮತ್ತು ಹಠವನ್ನು ಬಿಡದೆ ಬದುಕಿನಲ್ಲಿ ಮುನ್ನುಗ್ಗಿ ಮತ್ತು ಎಲ್ಲಾ ಗ್ರಹ ದೋಷಗಳ ಪರಿಹಾರಕ್ಕಾಗಿ ನವಗ್ರಹಗಳ ಆರಾಧನೆಯನ್ನು ಮಾಡಿ ತಂದೆ ತಾಯಿಯರಿಗೆ ಗೌರವಿಸಿ, ಆಶೀರ್ವಾದ ಪಡೆಯಿರಿ ಮತ್ತು ಪ್ರತಿ ಶನಿವಾರದಂದು ಶನೇಶ್ವರ ಹಾಗೂ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆಯಿರಿ ಎಲ್ಲವೂ ಒಳಿತಾಗುತ್ತದೆ. ಈ ಸಮಯ ಕಳೆದು ಹೋದ ನಂತರ ಮುಂದೆ ಬಹಳ ಉತ್ತಮವಾದ ದಿನಗಳು ನಿಮಗಾಗಿ ಕಾದಿವೆ.