ದೇಶದ ಎಲ್ಲಾ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೇಂದ್ರ ಸರ್ಕಾರದ ವತಿಯಿಂದ ಸಾಕಷ್ಟು ಯೋಜನೆಗಳನ್ನು ಪರಿಚಯಿಸಲಾಗಿದೆ. ಮತ್ತು ಕಾಲ ಕಾಲಕ್ಕೆ ಆ ಯೋಜನೆಗಳಿಗೆ ಹೊಸ ಕೊಡುಗೆಗಳನ್ನು ಸೇರಿಸುವ ಮೂಲಕ ಸಂತಸವನ್ನು ಇಮ್ಮಡಿಗೊಳಿಸಲಾಗುತ್ತಿದೆ.
ಅಂತೆಯೇ ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಸರ್ಕಾರದ ಯೋಜನೆ ಒಂದರ ಪ್ರಯೋಜನವನ್ನು ಹೆಚ್ಚಿಸುವ ಮೂಲಕ ದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೇಂದ್ರ ಸಿಹಿಸುದ್ದಿ ನೀಡಿದೆ. ಇದು ಜನಸಾಮಾನ್ಯರ ಬಹು ಬೇಡಿಕೆ ವಿಚಾರವಾದ ಅಡುಗೆ ಅನಿಲದ ಬೆಲೆ (LPG rate) ಇಳಿತದ ಕುರಿತಾಗಿಯೇ ಎನ್ನುವುದೇ ಇನ್ನೂ ಸಮಾಧಾನಕರ ಸಂಗತಿಯಾಗಿದೆ.
ಪ್ರತಿ ತಿಂಗಳ ಆರಂಭದಲ್ಲಿ ಗ್ಯಾಸ್ ಬೆಲೆಗಳು ಪರಿಷ್ಕೃತವಾಗುತ್ತಿರುತ್ತವೆ ಮತ್ತು ಒಂದು ತಿಂಗಳವರೆಗೆ ಅದೇ ಬೆಲೆಯಲ್ಲಿ ಇವುಗಳನ್ನು ಖರೀದಿಸಬೇಕು. ಆದರೆ ಇದರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಯಡಿ ಗ್ಯಾಸ್ ಕನೆಕ್ಷನ್ ಪಡೆದ ಕುಟುಂಬಗಳು ಮಾತ್ರ ಪ್ರತಿ ಬುಕ್ಕಿಂಗ್ ಮೇಲೆ ರೂ.200 ಸಬ್ಸಿಡಿಯನ್ನು (Subsidy) ಪಡೆಯುತ್ತಿದ್ದವು.
ಈ ಸುದ್ದಿ ಓದಿ:- ಸರ್ಜರಿ ಇಲ್ಲದೇ ಪೈಲ್ಸ್ ಕ್ಲಿಯರ್ ಆಗುತ್ತದೆಯೇ.? ಹೇಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ (International Womens Day) ಈ ಮೊತ್ತವನ್ನು ಹೆಚ್ಚಿಗೆ ಮಾಡಿ ಮತ್ತು ವರ್ಷಗಳವರೆಗೆ ವಿಸ್ತರಿಸಿ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಘೋಷಣೆ ಮಾಡಿದ್ದಾರೆ.
ಸಿಲಿಂಡರ್ ಬೆಲೆ ಕಡಿತ ಕುರಿತಂತೆ ತಮ ಟ್ವಿಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ ಪ್ರಧಾನಿಗಳು ಮಹಿಳಾ ದಿನಾವಣೆಯ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ LPG ಸಿಲಿಂಡರ್ ಬೆಲೆಯಲ್ಲಿ ರೂ.100 ರೂಪಾಯಿ ಕಡಿಮೆ ಮಾಡಲು ನಿರ್ಧರಿಸಿದೆ.
ಇದರಿಂದ ದೇಶಾದ್ಯಂತ ಲಕ್ಷಾಂತರ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯೂ ಗಮನಾರ್ಹವಾಗಿ ಕಡಿಮೆಯಾಗುತ್ತದೆ, ವಿಶೇಷವಾಗಿ ನಮ್ಮ ನಾರಿ ಶಕ್ತಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ, ಗ್ಯಾಸ್ ಸಿಲಿಂಡರ್ ದರವನ್ನು ಕೈಗೆಟುಕುವಂತೆ ಮಾಡುವ ಮೂಲಕ, ನಾವು ಕುಟುಂಬಗಳ ಯೋಗಕ್ಷೇಮವನ್ನು ಬೆಂಬಲಿಸಲು ಮತ್ತು ಆರೋಗ್ಯಕರ ವಾತಾವರಣ ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ.
ಈ ಸುದ್ದಿ ಓದಿ:- ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಮಾರ್ಚ್ ತಿಂಗಳು ಈ 5 ರಾಶಿಯವರಿಗೆ ತುಂಬಾ ಲಕ್ಕಿ ಪ್ರತಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು, ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ.!
ಇದು ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಈಸಿ ಆಫ್ ಲಿವಿಂಗ್ (Easy of Living) ಖಾತ್ರಿಪಡಿಸುವ ನಮ್ಮ ಬದ್ಧತೆಗೆ ಅನುಗುಣವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಹೊಸ ಘೋಷಣೆಯ ಪ್ರಕಾರವಾಗಿ ಪ್ರಧಾನಮಂತ್ರಿ ಉಜ್ವಲ್ ಯೋಜನೆಯ ಫಲಾನುಭವಿಗಳಿಗೆ ರೂ. 100 ಸಬ್ಸಿಡಿ ಹೆಚ್ಚಿಸಲಾಗಿದೆ ಇನ್ನು ಮುಂದೆ ಪ್ರತಿ ಸಿಲಿಂಡರ್ ಬುಕಿಂಗ್ ಮೇಲೆ ರೂ.300 ಸಬ್ಸಿಡಿ ಪಡೆಯಲಿದ್ದಾರೆ.
ಒಂದು ವರ್ಷದಲ್ಲಿ 12 ಸಿಲಿಂಡರ್‌ಗಳನ್ನು ರಿ ಫಿಲಿಂಗ್ ಗೆ ಈ ಪ್ರಯೋಜನವನ್ನು ಪಡೆಯಬಹುದು ಇದು ಮಾರ್ಚ್ 31, 2025 ರ ವರೆಗೂ ಮುಂದುವರೆಯುತ್ತದೆ ಎಂದು ಪ್ರಧಾನಿಗಳು ಘೋಷಿಸಿದ್ದಾರೆ. ಈ ಘೋಷಣೆಯಿಂದ ಸರಕಾರಕ್ಕೆ ಹೆಚ್ಚುವರಿಯಾಗಿ 12,000 ಕೋಟಿ ರೂಪಾಯಿ ಖರ್ಚು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಬೆಲೆ ಏರಿಕೆ ಬಿಸಿಯಿಂದ ಕಂಗಾಳಾಗಿರುವ ದೇಶದ ಜನತೆಗೆ ಪ್ರತಿನಿತ್ಯದ ಅಗತ್ಯ ವಸ್ತುವಾಗಿರುವ ಸಿಲಿಂಡರ್ ಬೆಲೆ ಇಳಿಕೆಯು ನಿಜಕ್ಕೂ ಅಪಾರ ಸಮಾಧಾನವನ್ನು ತಂದಿದೆ. ಪ್ರತಿಪಕ್ಷಗಳು ಇದನ್ನು ಲೋಕಸಭಾ ಚುನಾವಣೆ ಲೆಕ್ಕಾಚಾರವನ್ನು ಮುಂದಿಟ್ಟುಕೊಂಡು ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆಯಾದರು ಇದರಿಂದ ದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ನೆರವಾಗುತ್ತಿದೆ ಎನ್ನುವುದಂತು ಸುಳ್ಳಲ್ಲ.
ಈ ಸುದ್ದಿ ಓದಿ:- ನಿಮ್ಮ ಕೈಯಲ್ಲಿರುವ ಸಂತಾನ ರೇಖೆಯ ಬಗ್ಗೆ ಅರಿಯುವುದು ಹೇಗೆ ನೋಡಿ.!
ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಫಲಾನುಭವಿಗಳು ರೂ.300 ಸಬ್ಸಿಡಿನಿಂದ ರೂ.600 ಕ್ಕೆ ಸಿಲಿಂಡರ್ ಪಡೆಯುವಂತಾಗಿದ್ದರೆ ಬೆಂಗಳೂರಿನಲ್ಲಿ ಉಳಿದ ಗ್ರಾಹಕರು ರೂ.100 ಬೆಲೆ ಇಳಿಕೆ ಕೊಡುಗೆಯಿಂದ ರೂ.799 ಕ್ಕೆ ಗ್ಯಾಸ್ ಸಿಲಿಂಡರ್ ಪಡೆಯಬಹುದಾಗಿದೆ.