ಪ್ರತಿನಿತ್ಯ ನಾವು ಬಾತ್ರೂಮ್ ಅನ್ನು ಸ್ವಚ್ಛ ಮಾಡಲು ಸಾಧ್ಯವಿಲ್ಲ ಏಕೆ ಎಂದರೆ ಪ್ರತಿನಿತ್ಯ ಅದನ್ನು ಉಜ್ಜುತ್ತಾ ಕುಳಿತುಕೊಂಡರೆ ಬೇರೆ ಕೆಲಸ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಪ್ರತಿನಿತ್ಯವೂ ಕೂಡ ಅದರಲ್ಲಿ ಕೊಳೆ ಇರುತ್ತದೆ ಎಂಬ ಅರ್ಥ ಅಲ್ಲ. ಬದಲಿಗೆ ಬೇರೆ ಕೆಲಸಗಳು ಇರುವುದರಿಂದ ನಾವು ದೊಡ್ಡ ದೊಡ್ಡ ಕೆಲಸಗಳನ್ನು ವಾರಕ್ಕೆ ಒಮ್ಮೆ ಅಥವಾ 15 ದಿನಕ್ಕೆ ಒಮ್ಮೆ ಸ್ವಚ್ಛ ಮಾಡುತ್ತೇವೆ.
ಅದೇ ರೀತಿಯಾಗಿ ನಮ್ಮ ಬಾತ್ರೂಮ್ ಅನ್ನು ಸಹ ನಾವು ಒಂದು ವಾರಕ್ಕೆ ಅಥವಾ ಹತ್ತು ದಿನಕ್ಕೆ ಒಮ್ಮೆ ಕ್ಲೀನ್ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಬಾತ್ರೂಮ್ ಸಂಪೂರ್ಣವಾಗಿ ಅಶುಚಿಯಿಂದ ಕೂಡಿರುತ್ತದೆ ಎಂದೇ ಹೇಳಬಹುದು.
ಆದ್ದರಿಂದ ಪ್ರತಿಯೊಬ್ಬರ ಮನೆಯಲ್ಲಿರುವಂತಹ ಬಾತ್ರೂಮ್ ಅನ್ನು ವಾರಕ್ಕೆ ಒಮ್ಮೆಯಾದರೂ ಸಂಪೂರ್ಣವಾಗಿ ಸ್ವಚ್ಛ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಅಲ್ಲಿ ಕೆಲವೊಂದಷ್ಟು ಕ್ರಿಮಿ ಕೀಟಗಳು ಉತ್ಪತ್ತಿಯಾಗಿ ಅದರಿಂದ ನಮಗೆ ಆರೋಗ್ಯದಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.
ಈ ಸುದ್ದಿ ಓದಿ:- ನಿಶ್ಯಕ್ತಿ, ಸುಸ್ತು, ಕಣ್ಣು ಉರಿ, ಏನೇ ಇರಲಿ ಈ ಮನೆ ಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!
ಆದ್ದರಿಂದ ನಾವು ನಮ್ಮ ಬಾತ್ರೂಮ್ ಅನ್ನು ಆದಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ. ಇನ್ನು ಕೆಲವೊಂದಷ್ಟು ಜನರ ಮನೆಯಲ್ಲಿ ಬಾತ್ರೂಮ್ ಅನ್ನು ಎಷ್ಟೇ ಸ್ವಚ್ಛ ಮಾಡಿದರು ಕೂಡ ಅಲ್ಲಿ ಕೆಲವೊಂದು ಕಲೆಗಳು ಹಾಗೆ ಉಳಿದಿರುತ್ತದೆ. ಪ್ರತಿನಿತ್ಯ ನಾವು ಬಾತ್ರೂಮ್ ನಲ್ಲಿ ನೀರನ್ನು ಬಳಸುತ್ತಿರುವುದ ರಿಂದ ನೀರು ಪದೇ ಪದೇ ಬೀಳುವುದರಿಂದ ಆ ಸ್ಥಳದಲ್ಲಿ ಒಂದು ರೀತಿಯ ಕೊಳೆ ಇರುತ್ತದೆ.
ಅದನ್ನು ಹೋಗಲಾಡಿಸುವುದಕ್ಕೆ ಹಾಗೂ ಬಾತ್ರೂಮ್ ಟೈಲ್ಸ್ ಗಳಲ್ಲಿ ಇರುವಂತಹ ಕೊಳೆಯನ್ನು ದೂರ ಮಾಡುವುದಕ್ಕೆ ಈಗ ನಾವು ಹೇಳುವಂತಹ ಈ ಒಂದು ದ್ರವವನ್ನು ಹಚ್ಚಿದರೆ ಸಾಕು. ನಿಮ್ಮ ಬಾತ್ರೂಮ್ ಫಳಫಳನೆ ಹೊಳೆಯುತ್ತದೆ. ಹಾಗಾದರೆ ಬಾತ್ರೂಮ್ ಅನ್ನು ಸಂಪೂರ್ಣವಾಗಿ ಸ್ವಚ್ಛ ಮಾಡುವುದು ಹೇಗೆ ಅದನ್ನು ಸ್ವಚ್ಛ ಮಾಡುವುದಕ್ಕೆ ಯಾವ ಕೆಲವು ವಸ್ತುಗಳು ಬೇಕಾಗುತ್ತದೆ ಹಾಗೂ ಯಾವ ವಿಧಾನವನ್ನು ಅನುಸರಿಸುವುದರ ಮೂಲಕ ಇಡೀ ಬಾತ್ರೂಮ್ ಅನ್ನು ಸ್ವಚ್ಛ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.
ಇದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು
* 3 ರಿಂದ 4 ನಿಂಬೆಹಣ್ಣು
* 2 ಚಮಚ ಪುಡಿ ಉಪ್ಪು
* 1 ಚಮಚ ಅಡುಗೆ ಸೋಡಾ
* 3 ಚಮಚ ಡಿಟರ್ಜೆಂಟ್ ಪೌಡರ್
ಇಷ್ಟನ ಸಹ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳ ಬೇಕು ಆನಂತರ ಇದನ್ನು ತಣ್ಣಗಾಗಲು ಬಿಟ್ಟು.
ಈ ಸುದ್ದಿ ಓದಿ:- ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ
ಆನಂತರ ಈ ಒಂದು ನೀರನ್ನು ನಿಮ್ಮ ಇಡೀ ಬಾತ್ರೂಮ್ ಟೈಲ್ಸ್ ಮೇಲ್ಭಾಗಕ್ಕೆ ಹಾಗೂ ಕೆಳಗಡೆ ಎಲ್ಲದಕ್ಕೂ ಹಾಕಿ ಒಂದು ಗಂಟೆ ಸಮಯ ಹಾಗೆ ಬಿಡಬೇಕು. ಆನಂತರ ಒಂದು ಬ್ರಷ್ ಸಹಾಯದಿಂದ ಎಲ್ಲವನ್ನು ಸಹ ಉಜ್ಜಿದರೆ ಸಾಕು ಟೈಲ್ಸ್ ಮೇಲೆ ಇರುವಂತಹ ಯಾವುದೇ ಕೊಳೆ ಇದ್ದರೂ ಅದು ಸಂಪೂರ್ಣವಾಗಿ ಸುಲಭವಾಗಿ ಹೋಗುತ್ತದೆ.
ಹೆಚ್ಚಿನ ಶ್ರಮ ಪಡುವ ಅವಶ್ಯಕತೆ ಇಲ್ಲ. ಅದರಲ್ಲೂ ಮೇಲೆ ಹೇಳಿದ ಇಷ್ಟೂ ಪದಾರ್ಥಗಳು ಕೂಡ ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ಇದ್ದೇ ಇರುತ್ತದೆ. ಆದ್ದರಿಂದ ಈ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ನೀವು ಸುಲಭವಾಗಿ ನಿಮ್ಮ ಇಡೀ ಬಾತ್ರೂಮ್ ಅನ್ನು ಯಾವುದೇ ರೀತಿಯ ಶ್ರಮ ಪಡದೆ ಸುಲಭವಾಗಿ ಮಾಡಬಹುದು. ಈ ಒಂದು ವಿಧಾನ ಬಹಳ ಸುಲಭವಾಗಿದ್ದು ಮಹಿಳೆಯರಿಗೆ ಇದು ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು.