ಮನೆಯಲ್ಲಿ ಹಳೆ ನೈಟಿಗಳು ಇದ್ದೇ ಇರುತ್ತದೆ. ಹೆಚ್ಚಿನ ಜನ ಹಳೆ ನೈಟಿ ಗಳನ್ನು ಸಣ್ಣ ಸಣ್ಣದಾಗಿ ಕತ್ತರಿಸಿಕೊಂಡು ಅದನ್ನು ಅಡುಗೆ ಮನೆಯಲ್ಲಿ ಕೆಲಸ ಮಾಡುವುದಕ್ಕೆ ಅಂದರೆ ಬಿಸಿ ಪಾತ್ರೆಗಳನ್ನು ಹಿಡಿಯುವುದಕ್ಕೆ ಬಟ್ಟೆಗಳನ್ನು ಉಪಯೋಗಿಸುತ್ತಾರೆ ಹಾಗೂ ಕೆಲವೊಂದಷ್ಟು ಜನ ಶುಚಿ ಮಾಡುವುದಕ್ಕೆ ಮನೆಯನ್ನು ಒರೆಸುವುದಕ್ಕೆ ಇಂಥ ಕೆಲವೊಂದಷ್ಟು ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಾರೆ.
ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಕೆಲಸ ನಿಮ್ಮ ಮನೆಯ ಭಾರಿ ಕೆಲಸಕ್ಕೆ ಬರುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಹಳೆ ನೈಟಿ ಏನಾದರೂ ನಿಮ್ಮ ಮನೆಯಲ್ಲಿ ಇದ್ದರೆ ನೀವು ಕೂಡ ಈ ಒಂದು ವಿಧಾನವನ್ನು ಅನುಸರಿಸಿ ಈ ವಿಧವಾಗಿ ಉಪಯೋಗಿಸುವುದರಿಂದ ಮತ್ತಷ್ಟು ಪ್ರಯೋಜನಗಳನ್ನು ಪಡೆದು ಕೊಳ್ಳಬಹುದು.
ಈ ಸುದ್ದಿ ಓದಿ:- ಬಂಗಿನ ಸಮಸ್ಯೆ ಇದ್ದವರು ಈ ಟಿಪ್ಸ್ ಫಾಲೋ ಮಾಡಿ.!
ಹಾಗಾದರೆ ಅದನ್ನು ಹೇಗೆ ತಯಾರಿಸಿಕೊಳ್ಳುವುದು ಅದಕ್ಕೂ ಮೊದಲು ಯಾವ ಕೆಲವು ವಿಧಾನಗಳನ್ನು ನಾವು ಅನುಸರಿಸಬೇಕಾಗುತ್ತದೆ ಎಂದು ಈಗ ತಿಳಿಯೋಣ. ಮೊದಲು ಹಳಿಯದಾಗಿರುವಂತಹ ಕಾಟನ್ ನೈಟಿಯನ್ನು ನೀವು ನೆಲದ ಮೇಲೆ ಅಗಲವಾಗಿ ಹಾಕಿಕೊಳ್ಳಬೇಕು ಆನಂತರ ಅದರ ಮೇಲ್ಭಾ ಗವನ್ನು ಕತ್ತರಿಸಿ ಆಚೆ ತೆಗೆಯಬೇಕು ಏಕೆಂದರೆ ಅದನ್ನು ಯಾವುದೇ ಕೆಲಸಗಳಿಗೆ ಕೂಡ ಉಪಯೋಗಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.
ಕೆಳಗಿನ ಭಾಗ ಅಗಲವಾಗಿ ಇರುತ್ತದೆ ಹಾಗೂ ಸಮನಾದಂತಹ ಬಟ್ಟೆ ಅಳತೆ ನಿಮಗೆ ಸಿಗುತ್ತದೆ. ಆದ್ದರಿಂದ ಇದು ನಿಮಗೆ ಭಾರಿ ಕೆಲಸಕ್ಕೆ ಅಂದರೆ ಬಹಳಷ್ಟು ಕೆಲಸಕ್ಕೆ ಪ್ರಯೋಜನಕಾರಿಯಾಗಿರುತ್ತದೆ ಎಂದೇ ಹೇಳಬಹುದು. ಈ ರೀತಿ ಮೇಲ್ಭಾಗವನ್ನು ಕತ್ತರಿಸಿ ತೆಗೆದ ನಂತರ ಕೆಳಗಿನ ಭಾಗವನ್ನು ಅಗಲವಾಗಿ ಇಟ್ಟುಕೊಳ್ಳಬೇಕು ಆನಂತರ ಅದು ಸಮನಾಗಿ ಬರುವ ಹಾಗೆ ಕತ್ತರಿಸಿಕೊಳ್ಳಬೇಕು.
ಈ ಸುದ್ದಿ ಓದಿ:- ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಹಣೆಬರಹ ಹೇಗಿರುತ್ತೆ ಎಂದು.!
ಈ ರೀತಿ ಕತ್ತರಿಸಿಕೊಂಡಂತಹ ನೈಟಿಯನ್ನು ನೀವು ಎರಡರಿಂದ ಮೂರು ನೈಟಿಯನ್ನು ಸಹ ಇದೇ ರೀತಿಯಾಗಿ ತೆಗೆದುಕೊಂಡು ಸರಿಯಾದ ಅಳತೆಯಲ್ಲಿ ನೈಟಿಯ ಮೇಲ್ಭಾಗವನ್ನು ಕತ್ತರಿಸಿ ಆಚೆ ತೆಗೆಯಬೇಕು. ಹಾಗೆಯೇ ಕೆಳಗಿನ ಭಾಗ ಎಲ್ಲವನ್ನು ಸಹ ಸಮನಾದ ಅಳತೆಯಲ್ಲಿ ಕತ್ತರಿಸಿ ಇಟ್ಟುಕೊಳ್ಳಬೇಕು ಈ ರೀತಿ ಇಟ್ಟುಕೊಂಡಂತಹ ಎಲ್ಲಾ ಪೀಸ್ ಅನ್ನು ಒಂದು ಕಡೆಯಿಂದ ಸ್ಟಿಚ್ ಮಾಡುತ್ತಾ ಬರಬೇಕು.
ಒಂದರ ಮೇಲೆ ಒಂದರಂತೆ ಇಟ್ಟು ಅದನ್ನು ಹಾಸಿಗೆಯ ಮೇಲೆ ಹಾಕುವಂತ ಕವರ್ ರೀತಿಯಾಗಿ ಉಪಯೋಗಿಸಬಹುದು ಅಥವಾ ಮಕ್ಕಳನ್ನು ಮಲಗಿಸು ವಂತಹ ಬೆಡ್ ರೀತಿಯಾಗಿಯೂ ಸಹ ಬಳಸಬಹುದು ಇಂತಹ ಒಂದು ಸಂದರ್ಭದಲ್ಲಿ ಒಂದೇ ಒಂದು ನೈಟಿ ಇದ್ದರೆ ಸಾಕಾಗುವದಿಲ್ಲ ಮಕ್ಕಳನ್ನು ಮಲಗಿಸುವಂತಹ ಬೆಡ್ ಬೇಕು ಎಂದರೆ ಎರಡರಿಂದ ಮೂರು ನೈಟಿಯನ್ನು ತೆಗೆದು ಕೊಂಡು
ಈ ಸುದ್ದಿ ಓದಿ:- ಕೊಳೆತ ಟೊಮೆಟೊ ಅನ್ನು ಯಾವುದೇ ಕಾರಣಕ್ಕೂ ಕಸಕ್ಕೆ ಎಸೆಯಬೇಡಿ ಇದು ಮನೆಯ ದೊಡ್ಡ ಕೆಲಸಕ್ಕೆ ಬರುತ್ತದೆ.!
ಅದರ ಸುತ್ತ ಹೊಲಿಗೆಯನ್ನು ಹಾಕಿ ನಂತರ ಮಧ್ಯ ಭಾಗದಲ್ಲಿಯೂ ಕೂಡ ಚಿಕ್ಕ ಚಿಕ್ಕದಾಗಿ ಹೊಲಿಗೆಯನ್ನು ಹಾಕಿ ಆನಂತರ ಇದನ್ನು ಉಪ ಯೋಗಿಸಬಹುದು. ಈ ರೀತಿ ನಾವೇ ನಮ್ಮ ಮನೆಯಲ್ಲಿ ಸುಲಭವಾಗಿ ತಯಾರಿಸಿಕೊಳ್ಳುವುದರಿಂದ ಇದನ್ನು ಎಷ್ಟು ಬಾರಿ ಓಗೆದರೂ ಕೂಡ ಅದು ಹಾಳಾಗುವುದಿಲ್ಲ.
ಬದಲಿಗೆ ಅದು ಕಾಟನ್ ಬಟ್ಟೆ ಆಗಿರುವುದ ರಿಂದ ಎಷ್ಟೇ ನೀರು ಇದ್ದರೂ ಸಹ ಅದನ್ನು ಹೀರಿಕೊಳ್ಳುವಂತಹ ಅಂಶ ಅದರಲ್ಲಿ ಇರುತ್ತದೆ. ಹಾಗಾಗಿ ಇಂತಹ ಬಟ್ಟೆಗಳನ್ನು ಉಪಯೋಗಿಸಿ ಇಂತಹ ಬಹಳ ಪ್ರಮುಖವಾದಂತಹ ಕೆಲಸ ಕಾರ್ಯಗಳಿಗೆ ಉಪಯೋ ಗಿಸುವುದರಿಂದ ನಾವು ಮತ್ತಷ್ಟು ಪ್ರಯೋಜನವನ್ನು ಪಡೆದುಕೊಳ್ಳ ಬಹುದಾಗಿದೆ ಎಂದೇ ಹೇಳಬಹುದು. ಅದೇ ರೀತಿಯಾಗಿ ಮೊದಲೇ ಹೇಳಿದಂತೆ ಇದನ್ನು ಹಾಸಿಗೆಯ ಮೇಲೆ ಹಾಸಿಗೆ ಕವರ್ ಆಗಿಯೂ ಸಹ ಉಪಯೋಗಿಸಬಹುದು.