ಗುಪ್ತಗಾಮಿನಿ ಎನ್ನುವ ಈ ಟಿವಿಯಲ್ಲಿ ಪ್ರಸಾರವಾದ ಈ ಧಾರಾವಾಹಿಯು 90ರ ದಶಕದಲ್ಲಿ ಜನಿಸಿದ ಎಲ್ಲರ ಬಾಲ್ಯದ ನೆನಪಾಗಿದೆ. ಈ ಧಾರಾವಾಹಿಯು ನಟಿ ಸುಷ್ಮಾ ರಾವ್ ಅವರ ವೃತ್ತಿ ಬದುಕಿನಲ್ಲಿಯೇ ಒಂದು ಮೈಲುಗಲ್ಲಾಯಿತು. ಭಾವನ ಎನ್ನುವ ಆ ಪಾತ್ರವೂ ಇಂದಿಗೂ ಕೂಡ ಜನ ಅವರನ್ನು ಗುಪ್ತಗಾಮಿನಿಯ ಭಾವನ ಪಾತ್ರದಲ್ಲಿ ಗುರುತಿಸುವಷ್ಟು ಜನಪ್ರಿಯತೆ ತಂದುಕೊಟ್ಟಿತು.
ಎಸ್ ನಾರಾಯಣ್ ಅವರ ನಿರ್ದೇಶನದ ಭಗೀರತಿ ಎನ್ನುವ ಧಾರವಾಹಿ ಮೂಲಕ ಸೀರಿಯಲ್ ಪ್ರಪಂಚಕ್ಕೆ ಕಾಲಿಟ್ಟ ಸುಷ್ಮಾ ರಾವ್ ಅವರು ಈವರಿಗೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ ಇವರು ಪ್ರಮುಖ ಪಾತ್ರಧಾರಿ ಆಗಿ ಗುಪ್ತಗಾಮಿನಿ, ಸೊಸೆ ತಂದ ಸೌಭಾಗ್ಯ ಇನ್ನು ಮುಂತಾದ ಧಾರವಾಹಿಗಳಲ್ಲಿ ನಟಿಸಿದ್ದಾರೆ ಮತ್ತು ಅತಿಥಿ ಪಾತ್ರಧಾರಿ ಆಗಿ ಕೂಡ ಕನ್ನಡದ ಖ್ಯಾತ ಧಾರಾವಾಹಿ ಪುಟ್ಟಗೌರಿ ಮದುವೆ ಧಾರಾವಾಹಿಯ ಆರಂಭದ ದಿನಗಳಲ್ಲಿ ಟೀಚರ್ ಪಾತ್ರ ನಿರ್ವಹಿಸಿದ್ದರು.
ಇದಾದ ಬಳಿಕ ರಿಯಾಲಿಟಿ ಶೋಗಳನ್ನು ಹೋಸ್ಟ್ ಮಾಡುವ ಅಥವಾ ಇವೆಂಟ್ಗಳನ್ನು ನಿರೂಪಣೆ ಮಾಡುವತ್ತ ವಾಲಿದ ಇವರು ಕನ್ನಡದ ಖ್ಯಾತ ನಿರೂಪಕಿಯರಲ್ಲಿ ಒಬ್ಬರು ಕೂಡ. ಸುಮಾರು 10 ವರ್ಷಗಳ ಬಳಿಕ ಅಂದರೆ ಸೊಸೆ ತಂದ ಸೌಭಾಗ್ಯ ಧಾರಾವಾಹಿ ಮುಗಿದ ಬಳಿಕ ಬಿಗ್ ಗ್ಯಾಪ್ ತೆಗೆದುಕೊಂಡಿದ್ದ ಸುಷ್ಮಾ ರಾವ್ ಅವರು ಕೆಲವು ಕಾರ್ಯಕ್ರಮಗಳ ನಿರೂಪಣೆಯಲ್ಲಿ ಮಾತ್ರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದರು.
ಇದೀಗ ಮತ್ತೆ ಧಾರಾವಾಹಿಯಲ್ಲಿ ತಾವೊಂದು ಪಾತ್ರವಾಗಿ ಬಣ್ಣ ಹಚ್ಚಿದ್ದಾರೆ. ಈ ಬಾರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿಯ ಅಕ್ಕ ಪಾತ್ರಧಾರಿ ಭಾಗ್ಯ ಆಗಿ ಇವರು ಕಾಣಿಸಿಕೊಂಡಿದ್ದಾರೆ. ಅಕ್ಕತಂಗಿಯ ಭಾಂದವ್ಯ ಸಾರುವ ಧಾರಾವಾಹಿ ಇದಾಗಿದ್ದು.
ಈ ಧಾರಾವಾಹಿಯಲ್ಲಿ ಅಕ್ಕತಂಗಿ ಎನ್ನುವ ಪವಿತ್ರ ಸಂಬಂಧದ ಬಗ್ಗೆ ಹಾಗೂ ಗಂಡನ ಹೆಂಡತಿ ನಡುವೆ ಇರುವ ಭಾಂದವ್ಯದ ಬಗ್ಗೆ ಒಬ್ಬ ಮಾಧ್ಯಮ ವರ್ಗದ ಗೃಹಿಣಿ ಅತ್ತೆ ಮಾವನಿಗೆ ಹೊಂದಿಕೊಳ್ಳುವುದರ ಜೊತೆಗೆ ತವರು ಮನೆಯ ಜವಾಬ್ದಾರಿ ನಿಭಾಯಿಸುವ, ಎಲ್ಲರ ಮಾತಿಗೂ ತಲೆ ಬಾಗುವ ಮುಗ್ಧಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಬಗ್ಗೆ ಸಂದರ್ಶನ ಒಂದರಲ್ಲಿ ಮಾತಿಗೆ ಸಿಕ್ಕ ಸುಷ್ಮಾ ಅವರು ತಮ್ಮ ಪಾತ್ರದ ಬಗ್ಗೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ನಿಜವಾದ ಬದುಕಿನಲ್ಲಿ ನನಗೆ ತಂಗಿಯರು ಇಲ್ಲ ಆದರೆ ಧಾರಾವಾಹಿ ಮೂಲಕ ನಾನು ಅಕ್ಕ-ತಂಗಿ ಬಾಂಧವ್ಯದ ಸ್ವಾದ ಅನುಭವಿಸುತ್ತಿದ್ದೇನೆ. ನಮ್ಮ ಭಾಗ್ಯಲಕ್ಷ್ಮಿ ತಂಡದಲ್ಲಿ ಎಲ್ಲರೂ ಕೂಡ ಬಹಳ ಬೇಗನೆ ಹೊಂದಿಕೊಂಡಿದ್ದೇವೆ. ನನಗೆ ಸೀರಿಯಲ್ ಅಲ್ಲಿ ಅಭಿನಯಿಸಲು ಬಹಳ ಭಯ ಇತ್ತು.
ಈವರೆಗೆ ಹಲವು ಧಾರವಾಹಿಗಳ ಆಫರ್ ಬಂದಿತ್ತು ಆದರೆ ಎಲ್ಲವೂ ಕೂಡ ರಿಮೇಕ್ ಧಾರಾವಾಹಿಗಳು ಆಗಿದ್ದವು, ನನಗೆ ಮೊದಲಿಂದಲೂ ಸ್ವಮೇಕ್ ಕಥೆಗಳಲ್ಲಿ ಅಭಿನಯಿಸುವುದು ಇಷ್ಟ ಹಾಗಾಗಿ ಯಾವುದನ್ನು ಒಪ್ಪಿಕೊಂಡಿರಲಿಲ್ಲ. ಅದಲ್ಲದೆ ಸೀರಿಯಲ್ ಎಂದ ಮೇಲೆ ಕಮಿಟ್ಮೆಂಟ್ ಇರುತ್ತದೆ. ವೈಯಕ್ತಿಕವಾಗಿ ಏನೇ ಕೆಲಸ ಇದ್ದರೂ ಕೂಡ ಆ ಪಾತ್ರ ಒಪ್ಪಿಕೊಂಡ ಮೇಲೆ ಅದನ್ನು ನಾವೇ ನಿಭಾಯಿಸಬೇಕು.
ಎಷ್ಟೋ ಬಾರಿ ನನ್ನ ವೈಯಕ್ತಿಕ ಸಮಸ್ಯೆಗಳ ನಡುವೆಯೂ ತಂದೆ ತೀರಿ ಹೋದಾಗ, ತಾಯಿ ಆಸ್ಪತ್ರೆಯಲ್ಲಿದ್ದಾಗ ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ಅದೇ ಭಯ ಈಗಲೂ ಒಪ್ಪಿಗೆ ನೀಡಲು ಕಾಡಿತ್ತು ಆದರೆ ಧಾರಾವಾಹಿ ಸಾರದ ಬಗ್ಗೆ ನಿರ್ದೇಶಕರು ಕೊಟ್ಟ ಸ್ಪಷ್ಟತೆಯಿಂದಾಗಿ ಮತ್ತೆ ಧಾರಾವಾಹಿ ಮಾಡಲು ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.