Friday, June 9, 2023
HomeEntertainmentಪ್ರೀತಿಸಿದ ಹುಡುಗನಿಗಾಗಿ ಮನೆಬಿಟ್ಟು ಬಂದ ನಟಿ ಸುಷ್ಮಾ, ಆದ್ರೆ ಮಗುವಾದ ಮೇಲೆ ಕೈಕೊಟ್ಟ ಗಂಡ, ಇತ್ತ...

ಪ್ರೀತಿಸಿದ ಹುಡುಗನಿಗಾಗಿ ಮನೆಬಿಟ್ಟು ಬಂದ ನಟಿ ಸುಷ್ಮಾ, ಆದ್ರೆ ಮಗುವಾದ ಮೇಲೆ ಕೈಕೊಟ್ಟ ಗಂಡ, ಇತ್ತ ಕಡೆ ಗಂಡನೂ ಇಲ್ಲ, ಅತ್ತ ಕಡೆ ತವರು ಮನೆಯೂ ಇಲ್ಲ, ಸುಷ್ಮಾ ಅವರ ಕಣ್ಣೀರಿನ ಕಥೆ ನೋಡಿ.

ಖ್ಯಾತ ಸ್ಟಾರ್ ನಿರ್ದೇಶಕನ ಪತ್ನಿಯಾದ ಕಿರುತೆರೆ ಕಲಾವಿದೆ ಸುಷ್ಮಾ ಒಂಟಿಯಾಗಿ ಬದುಕುತ್ತಿರುವುದೇಕೆ.

ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿರುವ ಸುಷ್ಮಾ ಅವರು ಎಲ್ಲರಿಗೂ ಚಿರಪರಿಚಿತರು. ಆಂಕರಿಂಗ್ ಅಲ್ಲಿ ಅನುಶ್ರೀ ನಂತರ ಪಟಪಟನೆ ಮಾತನಾಡಿ ಕನ್ನಡಿಗರ ಮನ ಗೆದ್ದ ನಿರೂಪಕಿ ಅಂದರೆ ಅದು ಸುಷ್ಮಾ. ಚಿಕ್ಕಮಗಳೂರಿನ ಕೊಪ್ಪದವರಾದ ಸುಷ್ಮಾ ಬರೀ ನಿರೂಪಕಿ ಮಾತ್ರವಲ್ಲ ಭರತನಾಟ್ಯ ಪ್ರವೀಣೆಯೂ ಹೌದು. ಕಿರುತೆರೆಯಲ್ಲಿ ಜನಪ್ರಿಯ ರಾಗಿರುವ ಸುಷ್ಮಾ ಅವರು ಗುಪ್ತಗಾಮಿನಿ, ಯಾವ ಜನ್ಮದ ಮೈತ್ರಿಯೋ, ಸೊಸೆ ತಂದ ಸೌಭಾಗ್ಯ ಮುಂತಾದ ಧಾರವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಸುಷ್ಮಾ ಅವರ ವೈಯಕ್ತಿಕ ಬದುಕು ಮಾತ್ರ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಗಂಡನಿಂದ ದೂರವಾಗಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಕನ್ನಡದ ಸ್ಟಾರ್ ನಿರ್ದೇಶಕನ ಜೊತೆ ಮದುವೆಯಾಗಿದ್ದ ಸುಷ್ಮಾಗೆ ಈಗ ತನ್ನೋರು ಅನ್ನುವವರೇ ಇಲ್ಲ.

ಗಂಡನಿಲ್ಲದ ಬದುಕು, ಜೀವಕ್ಕೆ ಜೀವ ಆಗಿದ್ದ ಅಪ್ಪನ ಸಾವು, ನಿಜಕ್ಕೂ ಸುಷ್ಮಾ ಬದುಕು ಮಾತ್ರ ದುರಂತ ಅಧ್ಯಾಯ. ಸುಷ್ಮಾ ಅವರ ಕಣ್ಣೀರ ಕಥೆ ಹೀಗಿದೆ ನೋಡಿ. ನಟಿ ಹಾಗೂ ನೃತ್ಯಗಾರ್ತಿ ಮತ್ತು ನಿರೂಪಕಿ ಆಗಿರುವ ಸುಷ್ಮಾ ಅವರು ಬಾಲ್ಯದಿಂದಲೂ ಕೂಡ ಪ್ರತಿಭಾನ್ವಿತೆ. ಗುಪ್ತಗಾಮಿನಿ ಧಾರವಾಹಿಯ ತಮ್ಮ ಅಭಿನಯಕ್ಕಾಗಿ ಕರ್ನಾಟಕದ ಶ್ರೇಷ್ಠ ಕಿರುತರೆ ಪ್ರಶಸ್ತಿ ಪಡೆದುಕೊಂಡ ಕಲಾವಿದೆ.

ಆದರೆ ವೈಯಕ್ತಿಕ ಜೀವನದಲ್ಲಿ ಮಾತ್ರ ಬರೀ ನೋವು ಅಷ್ಟೇ ಕನ್ನಡದ ಎವರ್ಗ್ರೀನ್ ಸೂಪರ್ ಹಿಟ್ ಸಿನಿಮಾವಾದ ಕನ್ನಡದಲ್ಲಿ ಹೊಸದೊಂದು ಟ್ರೆಂಡ್ ಹುಟ್ಟು ಹಾಕಿದ ಮುಂಗಾರು ಮಳೆ ಎನ್ನುವ ಸೂಪರ್ ಡೂಪರ್ ಹಿಟ್ ಸಿನಿಮಾಗೆ ಕಥೆ ಬರೆದಿದ್ದ ಪ್ರೀತಮ್ ಗುಬ್ಬಿ ಅವರೇ ಸುಷ್ಮಾ ಅವರು ಪ್ರೀತಿಸಿ ಅಗ್ನಿಸಾಕ್ಷಿಯಾಗಿ ಕೈ ಹಿಡಿದಿರುವ ಪತಿ. ಇವರದ್ದು ಲವ್ ಮ್ಯಾರೇಜ್ ಒಬ್ಬರಿಗೊಬ್ಬರು ಒಬ್ಬರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು.

ಎರಡು ಕುಟುಂಬಗಳನ್ನು ಒಪ್ಪಿಸಿ ಇಬ್ಬರು 2007 ರಲ್ಲಿ ಲವ್ ಕಮ್ ಅರೇಂಜ್ ಮ್ಯಾರೇಜ್ ಆದರು. ಸೀರಿಯಲ್ ಗಳಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ಈಕೆ ನಿರೂಪಣೆ ಕಡೆ ಮುಖ ಮಾಡಿದರು. ಮದುವೆ ಆದ ಮೊದಲ ಕೆಲವು ವರ್ಷಗಳಲ್ಲಿ ಎಲ್ಲೂ ಕೂಡ ಕಾಣಿಸಿಕೊಳ್ಳಲೇ ಇಲ್ಲ. ಯಾವಾಗ ಸಂಸಾರ ನೌಕೆ ಮುಳುಗಿ ಹೋಯಿತು ಮತ್ತೆ ಬಣ್ಣದ ಲೋಕದ ಕಡೆ ಮುಖ ಮಾಡಿದರು.

ಮತ್ತೆ ಆಕೆ ಕಮ್ ಬ್ಯಾಕ್ ಮಾಡಿದ್ದು ನಿರೂಪಕಿ ಆಗಿ ಜೀ ಕನ್ನಡ ವಾಹಿನಿಯಲ್ಲಿ ಜೀನ್ಸ್ ಎನ್ನುವ ರಿಯಾಲಿಟಿ ಶೋ ಹಾಗೂ ಸೀರಿಯಲ್ ಸಂತೆ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿದರು. ಪ್ರೀತಿಸಿ ಮದುವೆ ಆಗಿದ್ದ ಸಂಸಾರದಲ್ಲಿ ವೈಮನಸ್ಸು ಎದ್ದಿದ್ದೆ ದುರಂತ. ಕೆಲ ಆಪ್ತರ ಕಡೆಯಿಂದ ಕೇಳಿ ಬಂದ ಮಾಹಿತಿಯ ಪ್ರಕಾರ ಪ್ರೀತಮ್ ಗುಬ್ಬಿ ಅವರು ಸುಷ್ಮಾ ಅವರಿಗೆ ಬಹಳ ಟಾರ್ಚರ್ ಕೊಡುತ್ತಿದ್ದರಂತೆ.

ಈ ಕಾರಣಕ್ಕಾಗಿ ಗಂಡನಿಂದ ದೂರವಾಗಿ ಒಂಟಿಯಾಗಿ ಬದುಕುತ್ತಿದ್ದಾರಂತೆ. ಅದೇನೆ ಆದರೂ ಒಬ್ಬರನ್ನೊಬ್ಬರು ಬಿಟ್ಟು ಬದುಕಬಾರದು ಎಂದು ಒಟ್ಟಿಗೆ ಸಪ್ತಪದಿ ತುಳಿದಿದ್ದರು ಆದರೆ ಮದುವೆ ಆದ ಕೆಲವೇ ಕೆಲವು ವರ್ಷಗಳಲ್ಲಿ ಸಂಸಾರ ಬಂಧನವೇ ಮುರಿದು ಬಿದ್ದಿದೆ. ಇನ್ನು ಕೆಲವು ಮಾಹಿತಿಗಳ ಪ್ರಕಾರ ಸುಷ್ಮಾ ಅವರೇ ಗಂಡನಿಂದ ದೂರವಾಗಿ ಬದುಕುತ್ತಿದ್ದಾರೆ ಎನ್ನುವ ಮಾತುಗಳು ಇವೆ.

ಇದರಲ್ಲಿ ಆಶ್ಚರ್ಯಕರ ವಿಷಯ ಏನೆಂದರೆ ಇಬ್ಬರೂ ಸಹ ಇನ್ನು ಕೋರ್ಟ್ ಮೆಟ್ಟಿಲೇರಿಲ್ಲ ಎನ್ನುವುದು. ಆದಷ್ಟು ಬೇಗ ಇವರಿಬ್ಬರ ನಡುವೆ ಇರುವ ವೈ ಮನಸು ದೂರವಾಗಿ ಇಬ್ಬರು ಸಹ ಸಂತೋಷದಿಂದ ಜೀವನ ನಡೆಸಲಿ, ಇಬ್ಬರ ನಡುವಿನ ಪ್ರೀತಿ ಕಳೆದು ಹೋಗದೆ ಶಾಶ್ವತವಾಗಿ ಉಳಿಯಲಿ ಎಂದು ಹರಸೋಣ.