ಈಗ ಎಲ್ಲೆಡೆ ರಕ್ತಹೀನತೆ ಮತ್ತು ವಿಟಮಿನ್ ಗಳ ಡಿಫಿಷಿಯನ್ಸಿ ಕಾಯಿಲೆ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ಸಂಶೋಧನೆಗಳು ಹೇಳುವ ಪ್ರಕಾರ ಭಾರತದಲ್ಲಿ 90% ಮಹಿಳೆಯರು ಅನಿಮಿಯ ಕಾಯಿಲೆಯಿಂದ ಬಳಲುತ್ತಿದ್ದಾರೆ ರಕ್ತಹೀನತೆ ಹಲವಾರು ಕಾಯಿಲೆ ಕಾರಣಗಳಿಂದ ಉಂಟಾಗುತ್ತದೆ.
ಯಾವುದಾದರೂ ಅ’ಪ’ಘಾ’ತ’ವಾಗಿ ರಕ್ತ ಹಾನಿಯಾದಾಗ ಅಥವಾ ರಕ್ತಕಣಗಳ ವಿಘಟನೆಯಲ್ಲಿ ಅನಾರೋಗ್ಯವಾದಾಗ ಈ ಸಮಸ್ಯೆ ಆಗುತ್ತದೆ. ಇದರೊಂದಿಗೆ ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಇದ್ದರೆ ಪೋಷಕಾಂಶಯುಕ್ತ ಆಹಾರ ಸೇವಿಸುತ್ತಿದ್ದರು ಕೂಡ ನಮ್ಮ ಆ ಪೋಷಕಾಂಶಗಳು ಸರಿಯಾಗಿ ರಕ್ತ ಸೇರುವುದಿಲ್ಲ. ಅನೇಕ ಲಕ್ಷಣಗಳ ಮೂಲಕ ನಾವು ರಕ್ತ ಹೀನತೆಯನ್ನು ಗುರುತಿಸಬಹುದು.
ತಲೆ ಕೂದಲು ಉದುರುವುದು, ಉಗುರು ಪೇಲವವಾಗುವುದು, ವಿಪರೀತವಾಗಿ ಸುಸ್ತಾಗುವುದು, ಮುಖ ಕೈಕಾಲು ಊದಿಕೊಂಡಂತೆ ಆಗುವುದು, ನರಗಳ ಸೆಳೆತ, ಮೀನ ಖಂಡಗಳಲ್ಲಿ ನೋವು, ಯಾವುದರಲ್ಲೂ ಆಸಕ್ತಿ ಇಲ್ಲದಿರುವುದು, ಉಸಿರಾಡಲು ಸಮಸ್ಯೆ ಆಗುವುದು ಇನ್ನು ಮುಂತಾದ ಅನೇಕ ಲಕ್ಷಣಗಳು ಕಂಡುಬರುತ್ತದೆ.
ದೇಹಕ್ಕೆ ರಕ್ತ ಮಾತ್ರವಲ್ಲದೆ ಅನೇಕ ವಿಟಮಿನ್, ಪ್ರೋಟೀನ್, ಕ್ಯಾಲ್ಸಿಯಂ ಇನ್ನು ಮುಂತಾದ ನ್ಯೂಟ್ರಿಷಿಯನ್ ಗಳ ಅವಶ್ಯಕತೆ ಇರುತ್ತದೆ. ಅವುಗಳ ಡಿಫಿಷಿಯನ್ಸಿ ಕೂಡ ಆಗಿರುತ್ತದೆ. ಇದ್ಯಾವುದನ್ನೂ ನಿರ್ಲಕ್ಷಿಸದೆ ತಕ್ಷಣವೇ ಆರೋಗ್ಯದ ಬಗ್ಗೆ ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು. ಬಹಳ ನ್ಯಾಚುರಲ್ ಆಗಿ ಈ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು.
ಹೇಗೆಂದರೆ ಮೊದಲಿಗೆ ನಮಗೆ ಯಾವುದಾದರೂ ಆರೋಗ್ಯ ಸಮಸ್ಯೆಯಿಂದ ರಕ್ತ ಹೀನತೆ ಆಗಿದೆಯೇ ಎನ್ನುವುದನ್ನು ಕಂಡು ಹಿಡಿದು ಅದನ್ನು ಗುಣಪಡಿಸಿಕೊಳ್ಳಬೇಕು, ಸಾಮಾನ್ಯವಾಗಿ ಜೀರ್ಣಕ್ರಿಯೆಯಲ್ಲಿ ಹೈಪೋ ಅಸಿಡಿಟಿ ಅಥವಾ ಹೈಪರ್ ಅಸಿಡಿಟಿ ಆದಾಗ ನಾವು ತಿಂದ ಆಹಾರದಲ್ಲಿರುವ ಪೋಷಕಾಂಶವು ಸರಿಯಾಗಿ ಅಬ್ಸರ್ವ್ ಆಗುವುದಿಲ್ಲ.
ಮೊದಲು ಆ ಸಮಸ್ಯೆಯನ್ನು ಕಂಟ್ರೋಲ್ ಗೆ ತರಬೇಕು. ನಾವು ತಿನ್ನುವ ಆಹಾರದ ಕ್ರಮ ಬಹಳ ಪ್ರಮುಖವಾದ ಮಹತ್ವ ವಹಿಸುತ್ತದೆ. ರಾಂಗ್ ಕಾಂಬಿನೇಷನ್ ಆಹಾರಗಳ ಸೇವನೆ, ವಿಪರೀತವಾದ ಚಹಾ ಕಾಫಿ ಸೇವನೆ, ಆಲ್ಕೋಹಾಲ್ ಸೇವನೆ ಇವುಗಳು ಸ್ವಯಂ ಕೃತ್ಯ ಅಪರಾಧಗಳಾಗಿದ್ದು ನಾವು ತಿಂದ ಆಹಾರವನ್ನು ಸರಿಯಾಗಿ ಅಬ್ಸರ್ ಆಗದಂತೆ ತಡೆಯುತ್ತವೆ.
ಇವುಗಳನ್ನು ತಿಳಿದುಕೊಂಡು ದೂರ ಇಡಬೇಕು. ಕೆಲವರಿಗೆ ಗ್ಲೂಟೇನ್ ಅಂದರೆ ಮೈದಾ, ಗೋಧಿ ಹಿಟ್ಟಿನ ಪದಾರ್ಥಗಳನ್ನು ಸೇವಿಸಿದಾಗ ಎದೆ ಉರಿ ಬರುತ್ತದೆ, ಅಸಿಡಿಟಿ ಹೆಚ್ಚಾಗುತ್ತದೆ. ಈ ಗ್ಲೂಟೆನ್ ಪದಾರ್ಥಗಳು ಆಹಾರವು ಜೀರ್ಣವಾಗಿ ರಕ್ತಕ್ಕೆ ಸೇರುವ ಪ್ರಕ್ರಿಯೆಗೆ ಡಿಸ್ಟರ್ಬ್ ಮಾಡುತ್ತದೆ.
ಹಾಗಾಗಿ ಬೇಕರಿ ಉತ್ಪನ್ನಗಳಿಂದ, ಮೈದಾ ಹಾಗೂ ಗೋಧಿ ಪದಾರ್ಥಗಳಿಂದ, ಜಂಕ್ ಫುಡ್ ಗಳಿಂದ ದೂರ ಇರಬೇಕು. ಇದರ ಬದಲು ಈಗ ನಾವು ಹೇಳುವ ಈ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಿ, ನ್ಯಾಚುರಲ್ ಆಗಿ ನಿಮ್ಮ ರಕ್ತಹೀನತೆ ಸರಿ ಹೋಗುತ್ತದೆ.
ದೇಹಕ್ಕೆ ಹಲವು ರೀತಿಯ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ. ಅವುಗಳು ಸರಿಯಾಗಿ ದೇಹಕ್ಕೆ ಸೇರಿದಾಗ ರಕ್ತ ಹೀನತೆ ಸಮಸ್ಯೆ ಆಗುವುದಿಲ್ಲ. ಇದೆಲ್ಲವೂ ಸಿಗಬೇಕು ಎಂದರೆ ನಾವು ಪೋಷಕಾಂಶಯುಕ್ತ ಆಹಾರ ಪದಾರ್ಥ ಸೇವಿಸಬೇಕು. ಹಸಿರು ಸೊಪ್ಪುಗಳಲ್ಲಿ ಯಥೇಚ್ಛವಾಗಿ ಬಿ ಕಾಂಪ್ಲೆಕ್ಸ್ ಮತ್ತು ಕ್ಯಾಲ್ಸಿಯಂ ಜಿಂಕ್ ಐರನ್ ಅಂಶಗಳಿರುತ್ತವೆ.
ತಪ್ಪದೇ ಪ್ರತಿನಿತ್ಯವೂ ಒಳ್ಳೆಯ ಪ್ರಮಾಣದಲ್ಲಿ ಸೊಪ್ಪಿನ ಪಲ್ಯ ಸೇವನೆ ಮಾಡಬೇಕು. ಸೊಪ್ಪುಗಳನ್ನು ನುಗ್ಗೆ ಸೊಪ್ಪು ಬಹಳ ಉತ್ತಮ ಅದರ ಜ್ಯೂಸ್ ಮಾಡಿ ಕೂಡ ಕುಡಿಯಬಹುದು. ಎಲ್ಲಾ ರೀತಿಯ ತರಕಾರಿಗಳನ್ನು ಸೇವಿಸಬೇಕು ಅದರಲ್ಲೂ ಬೀಟ್ರೋಟ್ ಜ್ಯೂಸ್ ಕುಡಿಯುವುದು ಉತ್ತಮ ಹಾಗೂ ಹಣ್ಣುಗಳ ಸೇವನೆ ಮತ್ತು ಡ್ರೈ ಫ್ರೂಟ್ಸ್ ಗಳ ಸೇವನೆ ಬೆಸ್ಟ್.
ದಾಳಿಂಬೆ ಹಣ್ಣಿನಲ್ಲಿ ರಕ್ತಹೀನತೆಗೆ ಪರಿಹಾರ ಇದೆ ನೆಲ್ಲಿಕಾಯಿ, ಕಿತ್ತಾಳೆ, ನಿಂಬೆ, ಸಿಟ್ರಿಕ್ ಆಸಿಡ್ ಹೇರಳವಾಗಿರುವ ಹಣ್ಣುಗಳನ್ನು ಸೇವಿಸಿದರೆ ಅವು ರಕ್ತ ಶುದ್ಧಿಯಾಗಲು, ವೃದ್ಧಿಯಾಗಲು ಪ್ರಚೋದನೆ ಮಾಡುತ್ತವೆ. ಎಲ್ಲ ರೀತಿಯ ಧಾನ್ಯಗಳನ್ನು ಕೂಡ ಮೊಳಕೆ ಕಟ್ಟಿ ತಿನ್ನಬೇಕು.
ಹಾಲು ಮೊಸರು ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸಬೇಕು. ಇದರೊಂದಿಗೆ ದಿನಕ್ಕೆ ಕನಿಷ್ಠ 30 ನಿಮಿಷಗಳ ವ್ಯಾಯಾಮ ಅಥವಾ ವಾಕಿಂಗ್, ಧ್ಯಾನ, ಮೆಡಿಟೇಶನ್ ಗೆ ಸ್ವಲ್ಪ ಸಮಯ ಮೀಸಲಿಡಬೇಕು ಈ ರೀತಿ ಮಾಡುವುದರಿಂದ ಆಶ್ಚರ್ಯಕರ ರೀತಿಯಲ್ಲಿ ಆರೋಗ್ಯ ಬದಲಾಗಿರುತ್ತದೆ.