ಮದುವೆ, ಸಂಬಂಧ, ಕುಟುಂಬ, ಸಂಸಾರ ಹೀಗೆಂದ ಮೇಲೆ ಅಲ್ಲಿ ಎಲ್ಲಾ ವಿಚಾರಗಳು ಕೂಡ ಬರುತ್ತವೆ. ಒಂದು ಕುಟುಂಬದ ಏಳಿಗೆಗಾಗಿ ದುಡಿಯುವ ವಿಚಾರ, ವಂಶೋದ್ಧಾರಕ್ಕಾಗಿ ಸಂತಾನ ಪಡೆಯುವ ವಿಚಾರ, ಮನೆಯ ಮಕ್ಕಳಿಗೆ ಒಳ್ಳೆಯ ಆಚಾರ ವಿಚಾರ ಕಲಿಸುವ ವಿಚಾರ, ಇದು ಸೇರಿದಂತೆ ಅನೇಕ ಸೂಕ್ಷ್ಮ ವಿಚಾರಗಳು ಇರುತ್ತವೆ.
ಇದನ್ನು ಸರಿಯಾದ ರೀತಿಯಲ್ಲಿ ಯಾವುದೇ ಅಡೆತಡೆ ಇಲ್ಲದೆ ನಡೆಸಿಕೊಂಡು ಹೋಗಿ ನಾವು ಸಾರ್ಥಕ ರೀತಿಯಲ್ಲಿ ಜೀವನ ನಡೆಸಬೇಕು ಎಂದರೆ ನಮ್ಮ ಹಿರಿಯರು ಹಾಕಿಕೊಟ್ಟಿರುವ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಿದರೆ ಸಾಕು. ಯಾಕೆಂದರೆ ಎಲ್ಲವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಹಾಗೂ ನಮ್ಮ ಮಾನಸಿಕ ಪರಿಸ್ಥಿತಿಗಳನ್ನು ಅರ್ಥೈಸಿಕೊಂಡೆ ಈ ರೀತಿಯ ಪದ್ಧತಿಗಳನ್ನು ಮಾಡಿರುತ್ತಾರೆ.
ಆದರೆ ನಾವು ಅದನ್ನು ಅರ್ಧಂಬರ್ಧ ತಿಳಿದುಕೊಂಡು ಅಥವಾ ನಾವೇ ಬುದ್ಧಿವಂತರು ಎಂದುಕೊಂಡು ಹಿರಿಯರು ಹೇಳಿದ್ದನ್ನು ನಿರ್ಲಕ್ಷಿಸುತ್ತೇವೆ. ಇದೇ ಕಾರಣದಿಂದ ಇಂದು ಕಂಡು ಕೇಳರಿಯದ ಆರೋಗ್ಯ ಸಮಸ್ಯೆಗಳಿಗೆ ನಾವು ಗುರಿಯಾಗಿ ದುಡಿದ ಹಣದಲ್ಲಿ ಹೆಚ್ಚಿನ ಭಾಗವನ್ನು ಆಸ್ಪತ್ರೆಗೆ ಖರ್ಚು ಮಾಡುತ್ತಿದ್ದೇವೆ.
ಆಗಿನ ಕಾಲಕ್ಕಿಂತ ಹೆಚ್ಚು ಸಂಪಾದನೆ ಮಾಡಿದರು ಕುಟುಂಬದ ಶಾಂತಿ ಇಲ್ಲದೆ ಸಂಬಂಧಗಳಲ್ಲಿ ನಂಬಿಕೆ ಇಲ್ಲದೆ ನರಳುತ್ತಿದ್ದೇವೆ ಕೈ ತುಂಬಾ ದುಡಿದರು ಕೂಡ ಹಣ ಸಾಲದೆ ಸಾಲ ಮಾಡಿ ಸಮಸ್ಯೆಗೆ ಸಿಲುಕುತ್ತಿದ್ದೇನೆ. ನಮ್ಮ ಮಕ್ಕಳು ಇಂದು ನಮ್ಮ ಮಾತು ಕೇಳದಂತಾಗಿದ್ದಾರೆ. ಬಹಳ ಚಿಕ್ಕ ವಯಸ್ಸಿಗೆ ಮಕ್ಕಳು ಹೆತ್ತವರ ಮೇಲೆ ಕೋ’ಪಗೊಳ್ಳುತ್ತಿದ್ದಾರೆ ಹಾಗೂ ದ್ವೇ’ಷಿಸಲು ಶುರು ಮಾಡುತ್ತಿದ್ದಾರೆ.
ಇದಕ್ಕೆಲ್ಲ ಮೂಲ ಕಾರಣ ಕುಟುಂಬ ವ್ಯವಸ್ಥೆಗೆ ಇದ್ದ ಒಂದು ಅಚ್ಚುಕಟ್ಟಾದ ಬುನಾದಿಯೇ ಬಿದ್ದು ಹೋಗುತ್ತಿರುವುದು ಎಂದರೆ ಆ ಮಾತು ತಪ್ಪಾಗಲಾರದು ಎನ್ನುವುದು ನಮ್ಮ ಭಾವನೆ ಹಾಗಾಗಿ ಪ್ರತಿಯೊಬ್ಬರೂ ಕೂಡ ಸಾಧ್ಯವಾದಷ್ಟು ನಮ್ಮ ಸಂಸ್ಕೃತಿಯನ್ನು ನಮ್ಮ ಪರಂಪರೆಯಲ್ಲಿ ಪುರಾಣಗಳಲ್ಲಿ ಉಲ್ಲೇಖಿಸಿರುವುದನ್ನು ಅರಿತು ಅವರ ದೃಷ್ಟಿಕೋನವನ್ನು ಅರ್ಥೈಸಿಕೊಂಡು ಆ ಪ್ರಕಾರವಾಗಿ ಬದುಕಿದರೆ ಬದುಕು ಸರಳ.
ಯಾವ ವಿಷಯದ ಬಗ್ಗೆಯೂ ಕೂಡ ಮುಚ್ಚು ಮರೆ ಇಲ್ಲದೆ ವಿಸ್ತಾರವಾಗಿ ಎಲ್ಲವನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ರೀತಿ ಶಾಸ್ತ್ರಗಳಲ್ಲಿ ಹೇಳುವ ಪ್ರಕಾರ ದಂಪತಿಗಳು ಶೃಂಗಾರದ ವಿಚಾರದಲ್ಲಿ ಮಾಡುವ ತಪ್ಪುಗಳಿಂದ ಮನೆಗೆ ಕಷ್ಟಕಾರ್ಪಣ್ಯಗಳು, ಅನಾರೋಗ್ಯ ಸಮಸ್ಯೆಗಳು ಹಾಗೂ ಕೆಟ್ಟ ಸಂತಾನಗಳನ್ನು ಪಡೆಯಲು ಕಾರಣರಾಗುತ್ತಾರೆ.
ಹೀಗಾಗಬಾರದು ಎನ್ನುವ ಕಾರಣಕ್ಕೆ ಕೆಲ ಸಮಯಗಳಲ್ಲಿ ದಂಪತಿಗಳು ಶೃಂಗಾರದಲ್ಲಿ ತೊಡಗಬಾರದು ಎನ್ನುವುದನ್ನು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಆ ಪ್ರಕಾರವಾಗಿ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ದೇವತೆಗಳು ಸಂಚರಿಸುವ ಸಮಯ, ಆ ಕಾಲದಲ್ಲಿ ಹಾಗೂ ಸಂಜೆ ಗೋಧೂಳಿ ಸಮಯವು ಕೂಡ ಪವಿತ್ರವಾದ ಸಮಯ ಆ ಸಮಯದಲ್ಲಿ ದಂಪತಿಗಳು ಶೃಂಗಾರ ಮಾಡಬಾರದು.
ಹಬ್ಬ ಆಚರಣೆ ವ್ರತ ಮುಂತಾದವುಗಳನ್ನು ಆಚರಿಸುವ ಶುಭ ಸಂದರ್ಭದಲ್ಲಿ ಶೃಂಗಾರದಲ್ಲಿ ತೊಡಗಿ ಆ ಪಾವಿತ್ರತೆ ಹಾಳು ಮಾಡಬಾರದು, ದಂಪತಿಗಳಲ್ಲಿ ಅನಾರೋಗ್ಯ ಸಮಸ್ಯೆ ಇದ್ದಾಗ ಅಥವಾ ಅವರ ಮನಸ್ಸು ಶಾಂತವಾಗಿ ಇಲ್ಲದೆ ಇರುವಾಗ ಬಲವಂತವಾಗಿ ಶೃಂಗಾರದಲ್ಲಿ ತೊಡಗಬಾರದು.
ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಐದು ದಿನಗಳವರೆಗೆ ಹಾಗೂ ಗರ್ಭಿಣಿ ಆದಾಗ ಯಾವುದೇ ಕಾರಣಕ್ಕೂ ಶೃಂಗಾರದಲ್ಲಿ ತೊಡಗಬಾರದು. ಯಾವುದೇ ಗ್ರಹಣ ಕಾಲದಲ್ಲೂ ಕೂಡ ಶೃಂಗಾರ ನಿಷಿದ್ಧ. ಇದು ಎರಡು ದೇಹಗಳ ವಿಚಾರವಾಗದೆ ಆತ್ಮಗಳ ಮಿಲನವಾದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಮತ್ತು ಸಂಬಂಧಗಳ ಆರೋಗ್ಯಕ್ಕೆ ಕೂಡ ಒಳ್ಳೆಯದು.
ಈ ಪ್ರಕ್ರಿಯೆ ಆದಮೇಲೆ ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ, ಸ್ನಾನ ಇತ್ಯಾದಿ ಕಾರ್ಯಗಳನ್ನು ಮಾಡದೆ ದಿನದ ಚಟುವಟಿಕೆಯನ್ನು ಆರಂಭಿಸುವಂತಿಲ್ಲ. ಹೆಣ್ಣು ಮಕ್ಕಳು ಮನೆಯ ಇತರ ಕೆಲಸಗಳಾಗಲಿ, ಅಡುಗೆ ಕೆಲಸವನ್ನಾಗಲಿ ಮಾಡುವಂತಿಲ್ಲ. ಬೆಳಗ್ಗೆ ಎದ್ದು ಶುದ್ದಿಯಾಗಿ ನಂತರವಷ್ಟೇ ದೀಪಾರಾಧನೆ ಮಾಡಿ ಮನೆ ಕೆಲಸದಲ್ಲಿ ತೊಡಗಬೇಕು. ಹೀಗಿದ್ದಾಗ ಮಾತ್ರ ಮನೆ ಏಳಿಗೆ ಆಗುತ್ತದೆ.