ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಿ ಇನ್ನೇನು ಒಂದು ವಾರವೇ ಆಗಿದೆ ಈ ಬಾರಿಯ ಬಿಗ್ ಬಾಸ್ ನಲ್ಲಿ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಅವರು ಕೂಡ ಪಾಲ್ಗೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 5ರಲ್ಲೂ ಕೂಡ ಅನುಭವ ಸ್ಪರ್ಧಿಸಿದ್ದರು ಸುಮಾರು ನೂರು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರುವ ಮೂಲಕ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡಿದ್ದರು. ಇದೀಗ ಬಿಗ್ ಬಾಸ್ ಸೀಸನ್ 9ರಲ್ಲಿಯೂ ಕೂಡ ಸ್ಪರ್ಧೆ ಮಾಡುವುದಕ್ಕೆ ಬಂದಿದ್ದಾರೆ ಇದು ಇವರಿಗೆ ಒಂದು ಅಡ್ವಾಂಟೇಜ್ ಅಂತಾನೇ ಹೇಳಬಹುದು. ಏಕೆಂದರೆ ಬಿಗ್ ಬಾಸ್ ಮನೆಯಲ್ಲಿ ಟಾಸ್ ಯಾವ ರೀತಿ ನೀಡುತ್ತಾರೆ ಹೇಗೆ ಗೆಲ್ಲಬಹುದು ಎಂಬ ಮೈಂಡ್ ಸೆಟ್ ಇವರಿಗೆ ಮೊದಲೇ ಇರುತ್ತದೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಏಕೆಂದರೆ ಇದಾಗಲೇ ಬಿಗ್ ಬಾಸ್ ನಲ್ಲಿ ಸ್ಪರ್ಧೆ ಮಾಡಿರುವಂತಹ ಅನುಭವ ಇವರಿಗಿದೆ ಹಾಗಾಗಿ ಅನುಪಮಾ ಗೌಡ ಅವರಿಗೆ ಈ ಬಾರಿಯ ಬಿಗ್ ಬಾಸ್ ನಲ್ಲಿ ಸಾಕಷ್ಟು ಅಡ್ವಾಂಟೇಜ್ ಗಳು ಇದೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ರೂಪೇಶ್ ರಾಜಣ್ಣ ಅವರು ಅನುಪಮಾ ಅವರ ವಿರುದ್ಧ ಕಿಡಿ ಕಾರಿದ್ದಾರೆ. ಅಷ್ಟೇ ಅಲ್ಲದೆ ಮೊಸಳೆ ಕಣ್ಣೀರು ಸುರಿಸುವ ಮೂಲಕ ನೀವು ಟಾಸ್ಕನ್ನು ಗೆದ್ದಿದ್ದೀರಿ ಎಂಬ ಮಾತನ್ನು ಹೇಳಿದ್ದಾರೆ ಜೊತೆಗೆ ನೀವು ಟಾಸ್ಕ್ ನಲ್ಲಿ ಕಣ್ಣೀರು ಇಡುವಂತಹ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅಷ್ಟಕ್ಕೂ ಅನುಪಮಾ ಗೌಡ ಅವರು ಕಣ್ಣೀರು ಇಟ್ಟಿದ್ದು ಯಾಕೆ ರೂಪೇಶ್ ರಾಜಣ್ಣ ಯಾಕೆ ಈ ರೀತಿ ಅನುಪಮಾ ಗೌಡ ಅವರಿಗೆ ಟಂಗ್ ಕೊಟ್ಟಿದ್ದಾರೆ ಎಂಬುದನ್ನು ನೋಡುವುದಾದರೆ.
ನೆನ್ನೆ ಟಾಸ್ ನಲ್ಲಿ ಹಗ್ಗ ಜಗ್ಗಾಟದ ಗಂಟು ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ ಈ ಸಮಯದಲ್ಲಿ ಅನುಪಮ ಗೌಡ ಮತ್ತು ನೇಹಾ ಗೌಡ ಇಬ್ಬರು ಕೂಡ ಒಂದು ಟೀಮ್ ನಲ್ಲಿ ಇರುತ್ತಾರೆ. ಈ ಎರಡು ಟೀಮ್ ನಡುವೆ ಹಗ್ಗ ಜಗ್ಗಾಟದ ಗಂಉ ಬಿಡಿಸುವ ಸ್ಪರ್ಧೆ ಏರ್ಪಡುತ್ತದೆ ಮೊದಲ ಸುತ್ತಿನಲ್ಲಿ ಅನುಪಮಾ ಗೌಡ ಹಾಗೂ ನೇಹಾ ಗೌಡ ಸೋಲನ್ನು ಅನುಭವಿಸುತ್ತಾರೆ. ಈ ಹಗ್ಗ ಜಗ್ಗಾಟದಲ್ಲಿ ಅರುಣ್ ಸಾಗರ್ ಹಾಗೂ ನವಾಜ್ ವಿಜೇತರಾಗುತ್ತಾರೆ ಆದರೆ ಅನುಪಮ ಗೌಡ ಸೋತಿದ್ದಕ್ಕಾಗಿ ಸ್ಪರ್ಧೆಯಲ್ಲಿ ಕಣ್ಣೀರು ಇಡುತ್ತಾರೆ. ಅಷ್ಟೇ ಅಲ್ಲದೆ ನಮಗೆ ಇನ್ನೊಂದು ಚಾನ್ಸ್ ನೀಡಿ ಎಂದು ರಿಕ್ವೆಸ್ಟ್ ಮಾಡಿಕೊಳ್ಳುತ್ತಾರೆ ಅನುಪಮಾ ಗೌಡ ಸುರಿಸಿದ ಕಣ್ಣೀರನ್ನು ನೋಡಿದಂತಹ ಮನೆಯ ಮಂದಿ ಎಲ್ಲಾ ಇವರಿಗೆ ಮತ್ತೊಂದು ಅವಕಾಶವನ್ನು ನೀಡೋಣ ಎಂದು ಎರಡನೇ ಅವಕಾಶವನ್ನು ಕಲ್ಪಿಸಿ ಕೊಡುತ್ತಾರೆ.
ಈ ಸುತ್ತಿನಲ್ಲಿ ಎಂದಿನಂತೆ ನೇಹಾ ಗೌಡ ಮತ್ತು ಅನುಪಮಾ ಗೌಡ ಒಂದು ಟೀಮ್ ನಲ್ಲಿ ಇದ್ದರೆ ಅರುಣ್ ಸಾಗರ್ ನವಾಜ್ ಇನ್ನೊಂದು ಟೀಮ್ ನಲ್ಲಿ ಇರುತ್ತಾರೆ ಹಗ್ಗ ಜಗ್ಗಾಟದ ಗಂಟು ಬಿಡಿಸುವಂತಹ ಈ ಗೇಮ್ ನಲ್ಲಿ ಅನುಪಮಾ ಗೌಡ ಮತ್ತು ನೆಹ ಗೌಡ ಅವರು ವಿಜೇತರಾಗುತ್ತಾರೆ. ಈ ಒಂದು ವಿಜಯದಿಂದ ಅನುಪಮ ಗೌಡ ಹಾಗೂ ನೇಹಾ ಗೌಡ ಅವರು ಸಂತಸವನ್ನು ವ್ಯಕ್ತಪಡಿಸುತ್ತಾರೆ. ಟಾಸ್ಕ್ ಎಲ್ಲ ಮುಗಿದ ನಂತರ ರೂಪೇಶ್ ರಾಜಣ್ಣ ಅವರು ಅನುಪಮ ಗೌಡ ಅವರ ಬಳಿ ಬಂದು ನೀವು ಕಣ್ಣೀರು ಇಡುವಂತಹ ಅಗತ್ಯವಿಲ್ಲ ಕೊಟ್ಟ ಟಾಸ್ಕನ್ನು ಅಚ್ಚುಕಟ್ಟಾಗಿ ಮಾಡಿದರೆ ಸಾಕಾಗಿತ್ತು ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದಂತಹ ಅನುಪಮ ಗೌಡ ಅವರು ನಾನು ಇದ್ದ ವಿಚಾರವನ್ನು ನೇರವಾಗಿ ಹೇಳುತ್ತೇನೆ ನನಗೆ ನಗು ಬಂದರೂ ಕೂಡ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ನಕ್ಕು ಬಿಡುತ್ತೇನೆ. ಅದೇ ರೀತಿ ಅಳುಬಂದರೂ ಕೂಡ ಅದನ್ನು ತಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಲ್ಲರ ಎದುರೇ ಅತ್ತು ಬಿಡುತ್ತೇನೆ. ನಾನೊಬ್ಬಳು ಭಾವನ ಜೀವಿ ಮನಸ್ಸಿನಲ್ಲಿ ಯಾವುದನ್ನು ಕೂಡ ಇಟ್ಟುಕೊಳ್ಳುವುದಿಲ್ಲ ಇದ್ದ ವಿಚಾರವನ್ನು ಇದ್ದಹಾಗೆ ಹೇಳಿ ಬಿಡುತ್ತೇನೆ ಎಂದು ಟಂಗ್ ಕೊಟ್ಟಿದ್ದಾರೆ. ಆದರೂ ಕೂಡ ಈ ಎಪಿಸೋಡ್ ನೋಡಿದಂತಹ ಅಭಿಮಾನಿಗಳು ಅನುಪಮಾ ಗೌಡ ಅವರು ಕಣ್ಣೀರು ಹಾಕಿ ಮೋಸ ಮಾಡಿದ್ದಾರೆ ಅಂತ ಹೇಳುತ್ತಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸರಿ, ಎಷ್ಟರ ಮಟ್ಟಿಗೆ ತಪ್ಪು ಎಂಬುವುದು ದೇವನೊಬ್ಬ ಮಾತ್ರ ಬಲ್ಲ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.