ಹಾವೇರಿ ಜಿಲ್ಲೆಯ ತಾಂಡ್ಯವೊಂದರ ನಿವಾಸಿಯಾಗಿದ್ದ ಕುರಿಗಾಹಿ ಹನುಮಂತ ಅವರು ಇದೀಗ ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಖ್ಯಾತಿಯಿಂದ ಸರಿಗಮಪದ ಹನುಮಂತಣ್ಣ ಆಗಿ ಫೇಮಸ್ ಆಗಿದ್ದಾರೆ. ಇವರು ಕಂಟೆಸ್ಟೆಂಟ್ ಆಗಿ ಭಾಗವಹಿಸಿದ ಸೀಸನ್ ಮುಗಿದು ಎರಡು ವರ್ಷಗಳ ಕಳೆದಿದ್ದರೂ ಕೂಡ ಜನ ಮಾನಸದಲ್ಲಿ ಇನ್ನು ಭದ್ರವಾಗಿ ಹನುಮಂತಣ್ಣ ಜಾಗ ಉಳಿಸಿ ಕೊಂಡಿದ್ದಾರೆ.
ಆಗ ಈಗ ಜೀ ಕನ್ನಡದ ಕೆಲವೊಂದು ಕಾರ್ಯಕ್ರಮಗಳನ್ನು ಕೂಡ ಕಾಣಿಸಿಕೊಳ್ಳುವ ಹನುಮಂತ ಅವರು ಒಂದು ಸಮಯದಲ್ಲಿ ಏನೇ ಮಾಡಿದರೂ ಸುದ್ದಿಯಾಗುತ್ತಿದ್ದ ಸೆಲೆಬ್ರಿಟಿ. ಇದೀಗ ತನ್ನ ಸ್ವಂತ ಊರಿನಂತ ಮುಖ ಮಾಡಿರುವ ಹನುಮಂತ ಅವರು ತನ್ನ ಹುಟ್ಟೂರಿನಲ್ಲಿ ಮನೆಯೊಂದನ್ನು ಕಟ್ಟಿದ್ದಾರೆ.
ಸರ್ಕಾರದಿಂದ ಗ್ರಾಂಟ್ ಆಗಿ ಬಂದ ಹಣದಿಂದ ಬುನಾದಿ ಹಾಕಿದ್ದ ಇವರು ಈಗ ಸ್ವಂತ ಪರಿಶ್ರಮದಿಂದ ದುಡಿದ ಹಣದಲ್ಲಿ ಮನೆಯನ್ನು ಕಟ್ಟಿ ಹೆತ್ತವರ ಮುಖದಲ್ಲಿ ನಗು ತರಿಸಿದ್ದಾರೆ. ಹನುಮಂತನ ಹೆತ್ತವರೇ ನಿರೀಕ್ಷೆ ಮಾಡಿದ ಮಟ್ಟದಲ್ಲಿ ಕುರಿ ಕಾಯುತ್ತಿದ್ದ ಹನುಮಂತ ಅವರು ತಮ್ಮ ಅದ್ಭುತವಾದ ಕಂಠದಿಂದ ಹಾಗೂ ತಾಯಿ ಶಾರದಾದೇವಿಯ ಕೃಪಾಕಟಾಕ್ಷದಿಂದ ಕರ್ನಾಟಕದ ಸೆಲೆಬ್ರಿಟಿ ಆಗಿ ಬದಲಾಗಿ ಹೋಗಿದ್ದಾರೆ.
ಅದು ಹೆತ್ತವರು ಸಂತೋಷದಿಂದ ಆನಂದ ಭಾಷ್ಪ ಇಡುವಂತೆ ಮಾಡಿದೆ. ಗೃಹಪ್ರವೇಶದ ದಿನ ಯಾರಿಗೆ ಆದರೂ ಸಂತೋಷಕ್ಕೆ ಕಣ್ಣೀರು ಬರುತ್ತದೆ ಆದರೆ ಹನುಮಂತ ಅವರು ಮಾತ್ರ ದುಃಖದಲ್ಲಿ ಕಣ್ಣೀರು ಇಟ್ಟಿದ್ದಾರೆ. ಕಾರಣ ಇಷ್ಟೇ ಮನೆಯ ವಿಶೇಷ ಸಂದರ್ಭ ಸಂಭ್ರಮ ಎಂದ ಮೇಲೆ ಅಲ್ಲಿ ಮನೆಯ ಹೆಣ್ಣು ಮಕ್ಕಳು ಇದ್ದರೆ ಅದಕ್ಕೆ ಲಕ್ಷಣ. ಈ ನಿರೀಕ್ಷೆ ಹನುಮಂತನಲ್ಲಿಯೂ ಇತ್ತು ಹಾಗಾಗಿ ಅಕ್ಕನ ನಿರೀಕ್ಷೆಯಲ್ಲಿದ್ದ ಹನುಮಂತನಿಗೆ ಅವರು ಗೈರಾಗಿರುವುದು ದುಃಖ ತರಿಸಿದೆ.
ಅಷ್ಟಕ್ಕೂ ಹನುಮಂತನ ಅಕ್ಕ ಯಾರು ಎಂದು ಇಡೀ ಕರ್ನಾಟಕಕ್ಕೆ ಗೊತ್ತಿದೆ ಆಂಕರ್ ಅನುಶ್ರೀ ಅವರನ್ನು ಹನುಮಂತ ಸ್ವಂತ ಅಕ್ಕನಂತೆ ಕಾಣುತ್ತಾರೆ. ಅನುಶ್ರೀ ಅವರು ಸಹ ಹನುಮಂತನಿಗೆ ಸಾಕಷ್ಟು ಸಹಾಯ ಮಾಡಿದ್ದು ನನ್ನ ತಮ್ಮ ಎಂದು ಹೇಳಿಕೊಳ್ಳುತ್ತಾರೆ. ಈಗಾಗಲೇ ಹನುಮಂತನಿಗೆ ಸಂಬಂಧಪಟ್ಟ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನುಶ್ರೀ ಅವರು ಈ ಬಾರಿ ಕಾರಣಾಂತರಗಳಿಂದ ಹನುಮಂತ ಕಟ್ಟಿದ ಮನೆಯ ಗೃಹಪ್ರವೇಶಕ್ಕೆ ಹೋಗಲು ಸಾಧ್ಯವಾಗಿಲ್ಲ.
ಆದರೆ ತಮ್ಮನಿಗಾಗಿ ಒಂದು ಉಡುಗೊರೆಯನ್ನು ಕೊಟ್ಟು ಕಳುಹಿಸಿದ್ದಾರೆ. ಹನುಮಂತನ ಬಳಿ ಒಂದು ಸ್ಪ್ಲೆಂಡರ್ ಬೈಕ್ ಇತ್ತು ಅದು ಬಹಳ ಹಳೆಯದಾಗಿತ್ತು, ಅದಕ್ಕೆ ಕುರುಬನ ರಾಣಿ ಎಂದು ಹೆಸರಿಟ್ಟು ಹನುಮಂತ ಓಡಿಸುತ್ತಿದ್ದರು. ಈಗ ಹನುಮಂತನಿಗೆ ಬೈಕ್ ಅವಶ್ಯಕತೆ ಇರುವುದನ್ನು ಅರಿತಿದ್ದ ಅಕ್ಕ ಅನುಶ್ರೀ ಅವರು ಕಪ್ಪು ಬಣ್ಣದ ಪಲ್ಸರ್ ಬೈಕ್ ಒಂದನ್ನು ಉಡುಗೊರೆಯಾಗಿ ಕಳುಹಿಸಿ ಕೊಟ್ಟಿದ್ದಾರೆ.
ಮೊದಲೇ ಅಕ್ಕ ಬರದಿದ್ದ ಬೇಸರದಲ್ಲಿದ್ದ ಹನುಮಂತ ಅವರು ಅನುಶ್ರೀ ಅವರು ಕೊಟ್ಟಿರುವ ಗಿಫ್ಟ್ ನೋಡಿದ ತಕ್ಷಣ ಗಳಗಳನೆ ಅತ್ತು ಕಣ್ಣೀರು ಹಾಕಿದ್ದಾರೆ. ದೀಪಾವಳಿ ಹಬ್ಬದ ದಿನದಂದು ಹನುಮಂತ ಅವರ ಗೃಹ ಪ್ರವೇಶ ಕಾರ್ಯಕ್ರಮ ನಡೆದಿದ್ದು ಈವರಿಗೆ ತನಗೆ ಸಹಾಯ ಮಾಡಿದ ಎಲ್ಲರನ್ನೂ ಕೂಡ ನೆನೆಸಿಕೊಂಡು ಆಹ್ವಾನ ಕೊಟ್ಟಿದ್ದಾರೆ.
ಸಾಕಷ್ಟು ಮಂದಿ ಈ ಕಾರ್ಯಕ್ರಮಕ್ಕೆ ಬಂದು ಹನುಮಂತನನ್ನು ಹಾರೈಸಿದರು ಕೂಡ ಅಕ್ಕ ಅನುಶ್ರೀ ಬರಲಿಲ್ಲ ಎನ್ನುವುದು ಹನುಮಂತನಿಗೆ ಬಹಳ ಬೇಸರ ತರಿಸಿದೆ. ಆ ದಿನ ಹೋಗಲು ಸಾಧ್ಯವಾಗದಿದ್ದರು ಖಂಡಿತವಾಗಿಯೂ ಮುಂದೊಂದು ದಿನ ಸಮಯ ಮಾಡಿಕೊಂಡು ಅನುಶ್ರೀ ಅವರು ತಮ್ಮನ ಮನೆಯನ್ನು ನೋಡಲು ಹೋಗೇ ಹೋಗುತ್ತಾರೆ. ಆದರೆ ಬರುತ್ತೇನೆ ಎಂದು ಭರವಸೆ ಕೊಟ್ಟು ಬರೆದಿದ್ದ ಕಾರಣ ಆ ಕ್ಷಣಕ್ಕೆ ಹನುಮಂತನಿಗೆ ಆಗಿರುವ ದುಃಖವನ್ನು ಮಾತ್ರ ಅಳೆಯಲು ಸಾಧ್ಯವಿಲ್ಲ.