ಅನುಶ್ರೀ ಸದ್ಯಕ್ಕೆ ಕನ್ನಡದಲ್ಲಿ ಸಿಕ್ಕಾಪಟ್ಟೆ ಹೆಸರುವಾಸಿಯಾಗಿರುವ ನಿರೂಪಕಿ ನಿರೂಪಕಿ ಮಾತ್ರವಲ್ಲದೆ ನಾಯಕ ನಟಿಯಾಗಿಯೂ ಕೂಡ ಹೌದು ಹಲವು ಅಭಿನಯಿಸಿದ್ದಾರೆ. ಮಾದ ಮತ್ತು ಮಾನಸಿ ಸಿನಿಮಾದಲ್ಲಿಯೂ ಕೂಡ ಹಾಡೊಂದಕ್ಕೆ ಡಾನ್ಸ್ ಮಾಡಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಅನುಶ್ರೀ ಅಂದರೆ ಸಾಕು ಅವರ ನಿರೂಪಣೆ ಪ್ರೇಕ್ಷಕರು ಬಹಳನೇ ಇಷ್ಟ ಪಟ್ಟು ನೋಡುತ್ತಾರೆ. ಇನ್ನು ಅನುಶ್ರೀ ಅವರು ಸಾಮಾನ್ಯವಾಗಿ ಎಲ್ಲಾ ಕಾರ್ಯಕ್ರಮದಲ್ಲೂ ಕೂಡ ಅಪ್ಪು ಅವರನ್ನು ಸ್ಫರಿಸಿಕೊಳ್ಳುವುದನ್ನು ನಾವು ನೋಡುತ್ತೇವೆ.
ಅಪ್ಪು ನನ್ನ ಗುರು ಅವರೇ ನನ್ನ ಪವರ್ ಅವರೇ ನನ್ನ ಎನರ್ಜಿ ನಾನು ಯಾವುದೇ ಕಾರ್ಯಕ್ರಮ ಪ್ರಾರಂಭ ಮಾಡುವುದಕ್ಕಿಂತ ಮುಂಚೆ ಅವರನ್ನು ನೆನಪಿಸಿಕೊಳ್ಳುತ್ತೇನೆ ಅವರು ನನಗೆ ಸ್ಪೂರ್ತಿ ಇದ್ದಹಾಗೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅನುಶ್ರೀ ಅವರ ಅತೀವ ವರ್ತನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಹೌದು ಕೆಲವು ಮೂಲಗಳ ಪ್ರಕಾರ ಅನುಶ್ರೀ ಅವರು ಎಲ್ಲಾ ಕಾರ್ಯಕ್ರಮದಲ್ಲಿಯೂ ಕೂಡ ಅಪ್ಪು ಅವರ ಹೆಸರನ್ನು ಬಳಕೆ ಮಾಡುತ್ತಿದ್ದಾರೆ.
ಇದರಿಂದ ಕಾರ್ಯಕ್ರಮದ ಟಿ ಆರ್ ಪಿ ಎಚ್ ಆಗುತ್ತಿದೆ ಸಾಮಾನ್ಯವಾಗಿ ಕಾರ್ಯಕ್ರಮದ ಟಿ ಆರ್ ಪಿ ಹೆಚ್ಚಾದಾಗ ಆ ಕಾರ್ಯಕ್ರಮಕ್ಕೆ ಬರುವ ಲಾಭವು ಕೂಡ ಹೆಚ್ಚಾಗುತ್ತದೆ. ಕೇವಲ ಲಾಭದ ದೃಷ್ಟಿಯಿಂದ ಅನುಶ್ರೀ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಕೆಲವು ನೆಟ್ಟಿದರು ಟೀಕೆ ಮಾಡುತ್ತಿದ್ದಾರೆ. ಅಭಿಮಾನ ಎಂಬುದು ಮನಸ್ಸಿನಲ್ಲಿ ಇರಬೇಕು ಸಂದರ್ಭ ಸನ್ನಿವೇಶ ಎದುರಾದಾಗ ಅದನ್ನು ಒಂದೆರಡು ಬಾರಿ ಹೇಳಬಹುದು. ಆದರೆ ಅನುಶ್ರೀ ಅವರು ಮಾತ್ರ ನಡೆಸಿಕೊಡುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಕೂಡ ಅಪ್ಪು ಅವರ ಹೆಸರನ್ನು ಹೇಳುತ್ತಾರೆ.
ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರಿಗೆ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಾದ್ಯಂತ ಅಭಿಮಾನಿ ಬಳಗವಿದೆ ಹಾಗಾಗಿ ಅಪ್ಪು ಅವರಿಗೆ ಸಂಬಂಧಪಟ್ಟಂತಹ ಯಾವುದೇ ವಿಡಿಯೋ ಆಗಿರಬಹುದು ಅಥವಾ ಯಾವುದೇ ಕಾರ್ಯಕ್ರಮ ಆಗಿರಬಹುದು ಅವುಗಳು ಪ್ರಸಾರವಾದಾಗ ಹೆಚ್ಚಿನ ಜನ ವೀಕ್ಷಣೆ ಮಾಡುತ್ತಾರೆ. ಅನುಶ್ರೀ ಅವರು ಕಾರ್ಯಕ್ರಮವನ್ನು ಗೆಲ್ಲಿಸುವುದಕ್ಕಾಗಿ ಹಾಗೂ ಹೆಚ್ಚು ವೀಕ್ಷಣೆ ಪಡೆಯುವುದಕ್ಕಾಗಿ ಅಪ್ಪು ಅವರ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇದೊಂದು ಟಿ ಆರ್ ಪಿ ಗಿಮಿಕ್ ಎಂದು ಕೆಲವು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸದ್ಯಕ್ಕೆ ಕೇಳಿ ಬರುತ್ತಿರುವ ವಿವಾದ ಏನೆಂದರೆ ಅನುಶ್ರೀ ಅವರು ಅಪ್ಪು ಹೆಸರಿನಲ್ಲಿ ಅನುಶ್ರೀ ಓವರ್ ಆಕ್ಟಿಂಗ್ ಮಾಡುತ್ತಾರೆ ಎಂದು ಹೇಳುತ್ತಿದ್ದರೆ ಜನರು. ಹೌದು ಪುನೀತ್ ರಾಜಕುಮಾರ್ ಗಂಧದ ಗುಡಿ ಚಿತ್ರ ಈಗಾಗಲೇ ಬಿಡುಗಡೆ ಆಗಿದ್ದು ಜನರು ಚಿತ್ರವನ್ನ ನೋಡಿ ಕಣ್ಣೀರು ಹಾಕಿದ್ದಾರೆ. ಅದೇ ರೀತಿಯಲ್ಲಿ ನಿರೂಪಕಿ ಅನುಶ್ರೀ ಅವರು ಕೂಡ ಅಪ್ಪು ಅವರ ಗಂಧದ ಗುಡಿ ಚಿತ್ರವನ್ನ ನೋಡಿ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ. ಅವರ ಬಗ್ಗೆ ನೆಟ್ಟಿಗರು ಮತ್ತು ಟ್ರೋಲರ್ ಇಷ್ಟೆಲ್ಲ ಹೇಳುತ್ತಿದ್ದರು ಕೂಡ ಇದಕ್ಕೆ ನಿರೂಪಕಿ ಅನುಶ್ರೀ ಅವರು ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆಯನ್ನ ನೀಡಿಲ್ಲ.
ಅನುಶ್ರೀ ಅವರು ಕೆಲವು ಕಾರ್ಯಕ್ರಮಗಳಲ್ಲಿ ಅಪ್ಪು ಅವರನ್ನ ಬಹಳ ನೆನಪು ಮಾಡಿಕೊಳ್ಳುತ್ತಾರೆ ಮತ್ತು ಅಪ್ಪು ಅವರು ಅನುಶ್ರೀ ಅವರಿಗೆ ಬಹಳ ಸಹಾಯವನ್ನ ಕೂಡ ಮಾಡಿದ್ದರು. ಅಪ್ಪು ಮಾಡಿದ ಸಹಾಯವನ್ನ ಸದಾ ಸ್ಮರಿಸುವ ಅನುಶ್ರೀ ಅವರು ಹಲವು ಕಾರ್ಯಕ್ರಮಗಳಲ್ಲಿ ಅವರನ್ನ ನೆನೆಯುತ್ತಾರೆ. ಸದಾ ಅಪ್ಪು ಅವರನ್ನ ನೆನಪು ಮಾಡುವ ಕಾರಣ ಕೆಲವು ಜನರು ಹೀಗೆ ಮಾತನಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯಕ್ಕೆ ಅನುಶ್ರೀ ಈ ಪ್ರಕರಣಕ್ಕೆ ಯಾವ ರೀತಿಯ ಉತ್ತರ ನೀಡುತ್ತಾರೆ ಅಂತ ಕಾದು ನೋಡಬೇಕಾಗಿದೆ. ನಿಮ್ಮ ಪ್ರಕಾರ ಅನುಶ್ರೀ ಅವರ ನಿರೂಪಣೆ ಯಾವ ರೀತಿ ಇದೆ ಓವರ್ ಆಕ್ಟಿಂಗ್ ಅಥವಾ ಸಾಧಾರಣವಾ.? ತಪ್ಪದೇ ಕಾಮೆಂಟ್ ಮಾಡಿ