Home Useful Information ಪೆಟ್ರೋಲ್ ಬಂಕ್ ಡೀಲರ್ ಶಿಪ್ ಪಡೆದುಕೊಳ್ಳಲು ಅರ್ಜಿ ಆಹ್ವಾನ….||

ಪೆಟ್ರೋಲ್ ಬಂಕ್ ಡೀಲರ್ ಶಿಪ್ ಪಡೆದುಕೊಳ್ಳಲು ಅರ್ಜಿ ಆಹ್ವಾನ….||

0
ಪೆಟ್ರೋಲ್ ಬಂಕ್ ಡೀಲರ್ ಶಿಪ್ ಪಡೆದುಕೊಳ್ಳಲು ಅರ್ಜಿ ಆಹ್ವಾನ….||

 

ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ರೀತಿಯ ಕೆಲಸವನ್ನು ಮಾಡು ವುದರ ಮೂಲಕ ಹಣವನ್ನು ಸಂಪಾದನೆ ಮಾಡುತ್ತಾರೆ. ಅದೇ ರೀತಿ ಯಾಗಿ ಪೆಟ್ರೋಲ್ ಬಂಕ್ ಹಾಕುವುದರ ಮೂಲಕ ಹೆಚ್ಚಿನ ಹಣವನ್ನು ಸಂಪಾದನೆ ಮಾಡಬಹುದು ಎಂದೇ ಮಾಡಬಹುದು ಹಾಗೆಂದ ಮಾತ್ರಕ್ಕೆ ಎಲ್ಲೆಂದರಲ್ಲಿ ಯಾವುದೇ ರೀತಿಯ ಒಪ್ಪಿಗೆಯನ್ನು ಪಡೆದುಕೊಳ್ಳದೆ ಸ್ವಂತವಾಗಿ ಪೆಟ್ರೋಲ್ ಬಂಕ್ ಅನ್ನು ಇಡಲು ಸಾಧ್ಯವಾಗುವುದಿಲ್ಲ.

ಅದಕ್ಕೆ ಅರ್ಜಿಯನ್ನು ಆಹ್ವಾನ ಮಾಡಲಾಗುತ್ತದೆ ಆನಂತರ ಯಾವ ಸ್ಥಳದಲ್ಲಿ ಇಡುವುದು, ಸುತ್ತಮುತ್ತ ಇರುವಂತಹ ಸ್ಥಳ ಎಲ್ಲವನ್ನು ಕೂಡ ಗಮನಿಸಿ ಆನಂತರ ಅಲ್ಲಿ ಪೆಟ್ರೋಲ್ ಬಂಕ್ ಇಡಲು ಅವಕಾಶವನ್ನು ಕಲ್ಪಿಸಿ ಕೊಡುತ್ತಾರೆ. ಅದೇ ರೀತಿಯಾಗಿ ಈ ಬಾರಿ ಪೆಟ್ರೋಲ್ ಬಂಕ್ ಡೀಲರ್ ಶಿಪ್ ಅನ್ನು ನೀವು ಪಡೆದುಕೊಳ್ಳಬೇಕು ಎಂದರೆ ಇಲ್ಲಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಹಾಗಾದರೆ ಯಾರೆಲ್ಲಾ ಈ ಒಂದು ಪೆಟ್ರೋಲ್ ಬಂಕ್ ಡೀಲರ್ ಶಿಪ್ ಅನ್ನು ಪಡೆದುಕೊಳ್ಳಲು ಬಯಸುತ್ತೀರಾ, ಅವರು ಯಾವ ವಿಧಾನಗ ಳನ್ನು ಅನುಸರಿಸುವುದರ ಮೂಲಕ ಇದಕ್ಕೆ ಅರ್ಜಿಯನ್ನು ಸಲ್ಲಿಸಬೇಕಾ ಗುತ್ತದೆ ಹಾಗೂ ಏನೆಲ್ಲ ಅರ್ಹತೆಗಳು ಇರಬೇಕು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

* ಈ ಒಂದು ಪೆಟ್ರೋಲ್ ಬಂಕ್ ಅನ್ನು ನೀವು ಮಾಡಬೇಕು ಎಂದರೆ ಗ್ರಾಮಗಳಲ್ಲಿ ತಾಲೂಕುಗಳಲ್ಲಿ ಹಾಗೂ ನ್ಯಾಷನಲ್ ಹೈವೇ ಹಾಗೂ ಸ್ಟೇಟ್ ಹೈವೇ ಇಂತಹ ಸ್ಥಳಗಳಲ್ಲಿ ನೀವು ಇದನ್ನು ಸ್ಥಾಪಿಸಬಹುದು.
* ಆನ್ಲೈನ್ ಮೂಲಕ ಇದಕ್ಕೆ ಅರ್ಜಿ ಆಹ್ವಾನ ಮಾಡಲಾಗಿದ್ದು ನೀವು ಆನ್ಲೈನ್ ನಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
* ಹಾಗಾದರೆ ಅರ್ಜಿ ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ.

ಪೆಟ್ರೋಲ್ ಬಂಕ್ ಡೀಲರ್ ಶಿಪ್ ಪಡೆದುಕೊಳ್ಳಲು ಬಯಸುವಂತಹ ವ್ಯಕ್ತಿಯ ಆಧಾರ್ ಕಾರ್ಡ್, ಫೋಟೋ, ಸಹಿ, ಎಸ್ ಎಸ್ ಎಲ್ ಸಿ ಮ್ಯಾಕ್ಸ್ ಕಾರ್ಡ್, ಪಾನ್ ಕಾರ್ಡ್, ಹಾಗೂ ಜಮೀನು ( ಸ್ವಂತ ಜಮೀನು ಅಥವಾ ಬಾಡಿಗೆಗೆ ಪಡೆದುಕೊಳ್ಳುತ್ತಿದ್ದಾರೆ ಅಥವಾ ಭೋಗ್ಯಕ್ಕೆ ಹಾಕಿಕೊಳ್ಳುತ್ತಿದ್ದರೆ ಅದರ ಒಂದು ಸಂಪೂರ್ಣವಾದಂತಹ ಮಾಹಿತಿ ಕೂಡ ಇರಬೇಕು )

* ಅರ್ಜಿ ಆಹ್ವಾನದ ಪ್ರಾರಂಭ ದಿನಾಂಕ 28 ಜೂನ್ 2023 ಹಾಗೂ ಕೊನೆಯ ದಿನಾಂಕ 27 ಸೆಪ್ಟೆಂಬರ್ 2023 ಹಾಗಾಗಿ ಈ ದಿನಾಂಕದ ಒಳಗೆ ಅರ್ಜಿಯನ್ನು ಹಾಕುವುದು ಉತ್ತಮ.
* ಇಲ್ಲಿ ನೀವು ಮೂಲ ವೆಬ್ಸೈಟ್ ಗೆ ಹೋಗಿ ಅಲ್ಲಿ ಕೇಳಿರುವಂತಹ ಎಲ್ಲ ದಾಖಲಾತಿಗಳನ್ನು ಸರಿಯಾಗಿ ಹಾಕಿ ಆನಂತರ ನೀವು ಯಾವ ಒಂದು ಪೆಟ್ರೋಲ್ ಬಂಕ್ ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು.

* ಆನಂತರ ನಿಮ್ಮ ಜಿಲ್ಲೆ ಯಾವುದು ಎನ್ನುವುದನ್ನು ಆಯ್ಕೆ ಮಾಡಿ ಆನಂತರ ನೀವು ಅಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇಡುತ್ತಿದ್ದರೆ ಗ್ರಾಮೀಣ ಪ್ರದೇಶ ಹಾಗೂ ಪಟ್ಟಣ ಪ್ರದೇಶದಲ್ಲಿ ಇಡುತ್ತಿದ್ದರೆ ಪಟ್ಟಣ ಪ್ರದೇಶ ಹೀಗೆ ಅಲ್ಲಿ ಕೇಳುವಂತಹ ಕೆಲವೊಂದಷ್ಟು ಆಯ್ಕೆಗಳನ್ನು ಸರಿಯಾಗಿ ಭರ್ತಿ ಮಾಡಿ ಹಾಗೂ ಅಲ್ಲಿ ನಿಮ್ಮ ಜನಾಂಗ ಯಾವುದು ಎನ್ನುವುದನ್ನು ಕೇಳುತ್ತದೆ ಆನಂತರ ಎಲ್ಲವನ್ನು ಸಹ ಆಯ್ಕೆ ಮಾಡಿ. ಆನಂತರ ಓಕೆ ಮಾಡಿದರೆ.

ನಿಮ್ಮ ಜಿಲ್ಲೆಯಲ್ಲಿ ಯಾವುದೆಲ್ಲ ಪೆಟ್ರೋಲ್ ಬಂಕ್ ಗಳಲ್ಲಿ ಇದಕ್ಕೆ ಅರ್ಜಿ ಆಹ್ವಾನ ಮಾಡಿದ್ದಾರೋ ಅದನ್ನು ಆಯ್ಕೆ ಮಾಡಿಕೊಳ್ಳು ವುದರ ಮೂಲಕ ನೀವು ಆನ್ಲೈನ್ ನಲ್ಲಿ ಇದಕ್ಕೆ ಅರ್ಜಿಯನ್ನು ಸಲ್ಲಿಸ ಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.

LEAVE A REPLY

Please enter your comment!
Please enter your name here