
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಬಾಗಿಲು ಕುಟುಂಬಕ್ಕೆ ಪ್ರವೇಶ ದಾರಿ ಮಾತ್ರವಲ್ಲದೆ ಕುಟುಂಬಕ್ಕೆ ಶಕ್ತಿಯನ್ನು ತರುತ್ತದೆ. ಮುಖ್ಯ ದ್ವಾರ ಒಂದು ಪರಿವರ್ತನಾ ವಲಯವಾಗಿದೆ. ಅದರ ಮೂಲಕ ನಾವು ಮನೆಯಿಂದ ಹೊರ ಪ್ರಪಂಚವನ್ನು ಪ್ರವೇಶಿಸುತ್ತೇವೆ. ಇದು ಸಂತೋಷ ಮತ್ತು ಅದೃಷ್ಟವನ್ನು ಮನೆಗೆ ಪ್ರವೇಶಿಸುವಂತಹ ಸ್ಥಳವಾಗಿದೆ.
ಈ ಕಾರಣಕ್ಕಾಗಿ ಮನೆಯ ಮುಖ್ಯ ದ್ವಾರವು ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ ಆರೋಗ್ಯ ಸಂಪತ್ತು ಮತ್ತು ಸಾಮರಸ್ಯವನ್ನು ಉತ್ತೇಜಿಸು ವಂತಹ ಕಾಸ್ಮಿಕ್ ಶಕ್ತಿ ಹರಿವನ್ನು ಉಳಿಸಿಕೊಳ್ಳಲು ಸಹ ಇದು ಸಹಾಯ ಮಾಡುತ್ತದೆ. ಇದಲ್ಲದೆ ಮನೆಯ ಮುಖ್ಯ ಬಾಗಿಲು ಮೊದಲ ಆಕರ್ಷಣೆ ಯನ್ನು ಸೃಷ್ಟಿಸುತ್ತದೆ ಎಂದು ಸಹ ಹೇಳಲಾಗುತ್ತದೆ.
ಹಾಗಾದರೆ ಈ ಮುಖ್ಯ ಬಾಗಿಲು ಯಾವ ದಿಕ್ಕಿನಲ್ಲಿ ಇರಬೇಕು ಹಾಗೆಯೇ ಈ ಮುಖ್ಯ ದ್ವಾರಕ್ಕೆ ಬಳಸುವಂತಹ ವಸ್ತುಗಳು ಯಾವುವು? ಹಾಗೆಯೇ ಈ ಮುಖ್ಯ ದ್ವಾರದ ಬಾಗಿಲಿಗೆ ವಾಸ್ತು ಯಾವ ರೀತಿ ಮಾಡ ಬೇಕು ಹಾಗೂ ಯಾವ ರೀತಿ ಮಾಡಬಾರದು, ಮುಖ್ಯ ದ್ವಾರವನ್ನು ನಿರ್ಮಿಸುವುದಕ್ಕೆ ಉತ್ತಮವಾದ ಸ್ಥಾನಗಳು ಯಾವುವು. ಹೀಗೆ ಈ ಮುಖ್ಯ ದ್ವಾರದ ಕುರಿತಾಗಿ ಹಲವಾರು ವಿಚಾರಗಳನ್ನು ಈ ದಿನ ಸಂಪೂರ್ಣವಾಗಿ ತಿಳಿದು ಕೊಳ್ಳುತ್ತಾ ಹೋಗೋಣ.
* ಮೊದಲನೆಯದಾಗಿ ಮನೆಯ ಮುಖ್ಯ ಬಾಗಿಲು ಯಾವಾಗಲೂ ಕೂಡ ಉತ್ತರ ಈಶಾನ್ಯ ಪೂರ್ವ ಅಥವಾ ಪಶ್ಚಿಮಕ್ಕೆ ಮುಖ ಮಾಡಿರಬೇಕು. ಈ ನಿದರ್ಶನಗಳನ್ನು ಶುಭ ಎಂದು ಪರಿಗಣಿಸಲಾಗುತ್ತದೆ.
* ದಕ್ಷಿಣ ನೈರುತ್ಯ ವಾಯುವ್ಯ ಅಥವಾ ಆಗ್ನೇಯ ಈ ದಿಕ್ಕುಗಳಲ್ಲಿ ಮುಖ್ಯದ್ವಾರ ಇರುವುದನ್ನು ತಪ್ಪಿಸಬೇಕು.
* ಒಂದು ಬಾಗಿಲು ದಕ್ಷಿಣ ಅಥವಾ ನೈರುತ್ಯ ದಿಕ್ಕಿನಲ್ಲಿ ಇದ್ದರೆ ಅದನ್ನು ಸೀಸದ ಲೋಹದ ಪಿರಮಿಡ್ ಮತ್ತು ಸೀಸದ ಹೆಲಿಕ್ಸ್ ಬಳಸಿ ನಿರ್ಮಿಸ ಬಹುದು.
* ಒಂದು ಬಾಗಿಲು ವಾಯುವ್ಯ ದಿಕ್ಕಿನಲ್ಲಿ ಇದ್ದರೆ ನೀವು ಹಿತ್ತಾಳೆ ಪಿರ ಮಿಡ್ ಮತ್ತು ಹಿತ್ತಾಳೆ ಹೇಲಿಕ್ಸ್ ಅನ್ನು ಬಳಸಬಹುದು.
* ಆಗ್ನೇಯ ದಿಕ್ಕಿನಲ್ಲಿ ಒಂದು ಬಾಗಿಲು ಇದ್ದರೆ ತಾಮ್ರದ ಹೆಲಿಕ್ಸ್ ಬಳಸ ಬಹುದು.
* ಮನೆಯ ಮುಖ್ಯದ್ವಾರ ಮನೆಯ ಇತರೆ ಬಾಗಿಲುಗಳಿಗಿಂತ ದೊಡ್ಡದಾ ಗಿರಬೇಕು ಮತ್ತು ಅದು ಪ್ರದಕ್ಷಿಣಾ ಕಾರವಾಗಿ ತೆರೆಯಬೇಕು.
* ಮುಖ್ಯಬಾಗಿಲಿಗೆ ಸಮಾನಾಂತರವಾಗಿ ಒಂದು ಸಾಲಿನಲ್ಲಿ ಮೂರು ಬಾಗಿಲುಗಳು ಹೊಂದುವುದನ್ನು ತಪ್ಪಿಸಬೇಕು. ಯಾವುದೇ ಕಾರಣಕ್ಕೂ ಇರಕೂಡದು ಏಕೆಂದರೆ ಇದು ಗಂಭೀರ ವಾಸ್ತು ದೋಷ ಎಂದು ಪರಿಗಣಿಸಲಾಗುತ್ತದೆ. ಮತ್ತು ಇದು ಮನೆಯ ಸಂತೋಷದ ಮೇಲೆ ತುಂಬಾ ಪರಿಣಾಮ ಬೀರುತ್ತದೆ ಎಂದು ಹೇಳಬಹುದು.
ಇನ್ನು ಮುಖ್ಯ ದ್ವಾರ ಮಾಡುವುದಕ್ಕೆ ಬಳಸುವ ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ.
* ಮರದ ಬಾಗಿಲನ್ನು ಮನೆಯ ಮುಖ್ಯದ್ವಾರಕ್ಕೆ ಬಹಳ ಶುಭ ಎಂದು ಪರಿಗಣಿಸಲಾಗುತ್ತದೆ.
* ಇನ್ನು ಮನೆಯ ಮುಖ್ಯ ದ್ವಾರ ದಕ್ಷಿಣ ದಿಕ್ಕಿಗೆ ಇದ್ದರೆ ಬಾಗಿಲಿನ ಮರ ಮತ್ತು ಲೋಹದ ಸಂಯೋಜನೆಯನ್ನು ಹೊಂದಿರಬೇಕು.
* ಇನ್ನು ಪಶ್ಚಿಮದ ದಿಕ್ಕಾಗಿದ್ದರೆ ಇದು ಲೋಹದ ಕೆಲಸಗಳನ್ನು ಹೊಂದಿರಬೇಕು.
* ಇನ್ನು ಉತ್ತರದ ಬಾಗಿಲಾಗಿದ್ದರೆ ಇದು ಹೆಚ್ಚು ಬೆಳ್ಳಿಯ ಬಣ್ಣವನ್ನು ಹೊಂದಿರಬೇಕು.
* ಹಾಗೆ ಪೂರ್ವ ದಿಕ್ಕಿನಲ್ಲಿ ಇದ್ದರೆ ಇದು ಮರದಿಂದ ಮಾಡಿರಬೇಕು. ಮತ್ತು ಸೀಮಿತ ಲೋಕದ ಪರಿಕರಗಳಿಂದ ಅಲಂಕರಿಸಿರಬೇಕು. ಮುಖ್ಯ ದ್ವಾರದ ಸುತ್ತಲಿನ ಪ್ರದೇಶವನ್ನು ಅಲಂಕರಿಸಿರಬೇಕು. ಮನೆಯ ಧನಾತ್ಮಕ ಶಕ್ತಿಯು ಈ ಮುಖ್ಯದ್ವಾರ ಆಕರ್ಷಿಸುತ್ತದೆ. ಹಾಗಾಗಿ ಡಸ್ಟ್ ಬಿನ್ ಗಳು ಮುರಿದ ಕುರ್ಚಿಗಳು ಅಥವಾ ಇನ್ಯಾವುದೇ ವಸ್ತುಗಳನ್ನು ಅಲ್ಲಿ ಇಡಕೂಡದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.