
ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಹಲವಾರು ಮಾಹಿತಿಗಳನ್ನು ತಿಳಿದುಕೊಂಡಿರುವುದು ಒಳ್ಳೆಯದು ಎಂದರೆ ತಮ್ಮ ಮಕ್ಕಳನ್ನು ಯಾವ ರೀತಿಯಾಗಿ ಬೆಳೆಸಬೇಕು ಯಾವ ಗುಣಗಳನ್ನು ಹೇಳಿಕೊಡಬೇಕು. ಅವರು ಚಿಕ್ಕವರಾಗಿದ್ದಾಗಲೇ ಯಾವುದರ ಬಗ್ಗೆ ಹೆಚ್ಚು ಆಸಕ್ತಿ ಹೊಂದಬೇಕು ಹೀಗೆ ಅವರಿಗೆ ಅನುಕೂಲವಾಗುವಂತೆ ಕೆಲವೊಂದು ಮಾಹಿತಿಗಳನ್ನು ಹೇಳಿಕೊಡುವುದು ಒಳ್ಳೆಯದು.
ಹಾಗಾದರೆ ಈ ದಿನ ಪೋಷಕರು ತಮ್ಮ ಜೀವನದಲ್ಲಿ ಯಾವ ರೀತಿಯಾದಂತಹ ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡಿರಬೇಕು. ಹಾಗೇನಾ ದರೂ ನೀವು ತಿಳಿದು ಕೊಳ್ಳದೆ ಇದ್ದರೆ ಯಾವ ರೀತಿಯ ಸಮಸ್ಯೆಗಳು ಎದುರಾಗಬಹುದು. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲ ವಾರು ಮಾಹಿತಿಗಳ ಬಗ್ಗೆ ತಿಳಿದು ಕೊಳ್ಳುತ್ತಾ ಹೋಗೋಣ. ಹಾಗಾದರೆ ಪೋಷಕರಿಗೆ ಯಾವ ಕೆಲವು ಕಿವಿ ಮಾತುಗಳು ಅನುಕೂಲವಾಗುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಯೋಣ.
.
* 3 ರಿಂದ 6 ವರ್ಷ ವಯಸ್ಸಿನ ಮಕ್ಕಳಿಗೆ ಮೆದುಳಿನ ಬೆಳವಣಿಗೆ ಆಗುತ್ತಿರುತ್ತದೆ. ಈ ಸಮಯದಲ್ಲಿ ಅವರು ಏನೆಲ್ಲ ಗ್ರಹಿಸುತ್ತಾರೋ ಅದನ್ನೇ ವಾಸ್ತವ ಎಂದು ತಿಳಿಯುತ್ತಾರೆ. ಇಂತಹ ಕಾಲ್ಪನಿಕ ಜೀವನದಿಂದ ದೂರವಿಡಲು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ.
* ಮನೆಯಲ್ಲಿ ಮಕ್ಕಳನ್ನು ಒಂಟಿಯಾಗಿ ಇರಲು ಬಿಡಬೇಡಿ. ಅವರ ಜೊತೆ ಇದ್ದು ಅವರಿಗೆ ಪ್ರೀತಿ ಕೊಡಿ.
* ಮಕ್ಕಳು ಖಾಲಿ ಪುಸ್ತಕ ಇದ್ದಂತೆ ಬೆಳವಣಿಗೆ ಆದಂತೆ ಒಳ್ಳೆಯದನ್ನು ಉಳಿಸಬೇಕು ಕೆಟ್ಟದನ್ನು ಅಳಿಸಬೇಕು ಇದು ಪೋಷಕರ ಮುಖ್ಯ ಕರ್ತವ್ಯ
* ಟಿವಿ, ಮೊಬೈಲ್, ಕಂಪ್ಯೂಟರ್ ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳ ಗೀಳು ಹತ್ತದಂತೆ ಎಚ್ಚರ ವಹಿಸಿ.
* ದೈಹಿಕ ಚಟುವಟಿಕೆಗೆ ಓಟ, ಸೈಕಲ್ ಸವಾರಿ ಹಾಗೂ ಗ್ರಾಮೀಣ ಕ್ರೀಡೆ ಆಡಿಸಿ.
* ಮಕ್ಕಳನ್ನು ಮನೆಯಲ್ಲಿ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡುಗುವಂತೆ ಹೇಳಿ.
* ಮನೆಯ ಬಳಿಯೇ ವಾಕಿಂಗ್,ಯೋಗ, ಧ್ಯಾನ ವ್ಯಾಯಾಮ ಅಭ್ಯಾಸ ಮಾಡಿಸಿ.
* ಸಂಬಂಧಿಕರು ಹಾಗೂ ಮಕ್ಕಳ ಸ್ನೇಹಿತರ ಜತೆ ಆಗಾಗ್ಗೆ ಪೋನ್‌ನಲ್ಲಿ ಮಾತನಾಡಿಸುತ್ತಿರಿ.
* ತಾತ ಅಜ್ಜಿಯರ ಬಳಿ ಮಕ್ಕಳನ್ನು ಆಡಲು, ಮಾತನಾಡಲು ಬಿಡಿ.
* ತಾರಸಿ ಅಥವಾ ಮನೆ ಬಳಿ ಇರುವ ಜಾಗದಲ್ಲಿ, ತೋಟದಲ್ಲಿ ಗಿಡ ಬೆಳೆಸುವುದನ್ನು ಕಲಿಸಿ.
* ಜಂಕ್ ಫುಡ್‌ಗಳಿಂದ ದೂರವಿಟ್ಟು ಪೌಷ್ಟಿಕ, ಆರೋಗ್ಯಕರ ಆಹಾರದ ಅರಿವು ಮೂಡಿಸಿದರೆ ಒಳ್ಳೆಯದು.
* ಊಟದ ಮಹತ್ವ ತಿಳಿಸಿ. ಊಟವನ್ನು ವ್ಯರ್ಥ ಮಾಡಬಾರದು ಎಂದು ಮನವರಿಕೆ ಮಾಡಿ.
* ಮಕ್ಕಳಿಗೆ ಶುಚಿತ್ವದ ಅರಿವು ಮೂಡಿಸುವುದು ಒಳ್ಳೆಯದು. ಊಟಕ್ಕೆ ಮುಂಚೆ ಕೈ ತೊಳೆಯುವುದು, ಸ್ನಾನ ಮಾಡುವುದು ಇನ್ನೂ ಹಲವಾರು ವಿಷಯಗಳ ಬಗ್ಗೆ ಅರಿವು ಮೂಡಿಸಬೇಕು.
* ಮಕ್ಕಳ ಎದುರು ಜಗಳ ಆಡಬೇಡಿ, ಕೆಟ್ಟ ಶಬ್ದಗಳನ್ನು ಉಪಯೋಗಿಸ ಬೇಡಿ.
* ಅವರ ಮನಸ್ಸು ತುಂಬಾ ಸೂಕ್ಷ್ಮ, ಮುಂದೆ ಆ ಪದಗಳನ್ನು ಅವರು ಕಲಿಯುತ್ತಾರೆ.
* ಆರ್ಥಿಕ ಸಮಸ್ಯೆಗಳನ್ನು ಮಕ್ಕಳ ಮುಂದೆ ಚರ್ಚೆ ಮಾಡಬೇಡಿ.
* ಮಕ್ಕಳ ಮುಂದೆ ಸುಳ್ಳು ಹೇಳೋದು, ಕೋಪ ಮಾಡಿಕೊಳ್ಳೋದು ಮಾಡಬೇಡಿ. ನೀವು ಏನು ಮಾಡುತ್ತೀರಿ ಅದನ್ನೇ ಕಲಿಯುತ್ತಾರೆ.
* ಚಿಕ್ಕ ವಯಸ್ಸಿನಲ್ಲೇ ಜವಾಬ್ದಾರಿಯನ್ನು ಕಲಿಸಬೇಕು. ತಮ್ಮ ಕೆಲಸ ತಾವೇ ಮಾಡಿಕೊಳ್ಳುವಷ್ಟು ಬುದ್ದಿವಂತರನ್ನಾಗಿ ಮಾಡಬೇಕು.
* ಮಕ್ಕಳನ್ನು ಮತ್ತೊಂದು ಮಗುವಿಗೆ ಹೋಲಿಸಿ ಮಾತನಾಡುವುದು ಬಿಡಬೇಕು.
* ಮಕ್ಕಳಿಗೆ ತಪ್ಪು ಮಾಡಿದ ಕೂಡಲೇ ಹೊಡೆಯುವುದು ಅಥವಾ ಬಯ್ಯುವುದು ಇದನ್ನು ಮೊದಲು ಬಿಟ್ಟುಬಿಡಿ. ಈ ರೀತಿ ಮಾಡುವು ದರಿಂದ ಮಕ್ಕಳು ತಪ್ಪು ಮಾಡಿದರೆ ಹೊಡೆಯುತ್ತಾರೆ ಅಷ್ಟೇ ಎನ್ನುವ ಮನಸ್ಥಿತಿಯಲ್ಲಿ ಇರುತ್ತಾರೆ ಬದಲಿಗೆ ಒಳ್ಳೆಯ ಮಾತಿನಿಂದ ಅವರು ತಪ್ಪು ಮಾಡದೆ ಇರುವ ರೀತಿ ನೋಡಿಕೊಳ್ಳುವುದು ಉತ್ತಮ.
* ಪ್ರೀತಿ ಮತ್ತು ಹೊಗಳಿಕೆಯಿಂದ ಮಕ್ಕಳಲ್ಲಿ ಧನಾತ್ಮಕ ಭಾವನೆ ಹುಟ್ಟುವಂತೆ ಮಾಡಬೇಕು.