
ಆಯುರ್ವೇದದ ಪ್ರಕಾರ ಪ್ರತಿಯೊಬ್ಬರೂ ಕೂಡ ಎಡಗಡೆ ತಿರಗಿ ಮಲಗುವುದು ಬಹಳ ಒಳ್ಳೆಯದು ಎಂದೇ ಹೇಳುತ್ತಾರೆ. ಹಾಗೂ ಎಡಗಡೆ ತಿರುಗಿ ಮಲಗುವುದರಿಂದ ಗಾಢವಾದ ನಿದ್ರೆ ಬರುತ್ತದೆ ಎಂದೇ ಹೇಳುತ್ತಾರೆ. ಅದೇ ರೀತಿಯಾಗಿ ನಾವು ಬಲಗಡೆ ತಿರುಗಿ ಮಲಗುವುದ ರಿಂದ ಅಸಿಡಿಟಿ ಡಿಪಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ಹೇಳು ತ್ತಾರೆ. ಆದ್ದರಿಂದ ಎಡಗಡೆ ತಿರುಗಿ ಮಲಗುವಂತಹ ಅಭ್ಯಾಸವನ್ನು ರೂಡಿಸಿಕೊಳ್ಳುವುದು ಉತ್ತಮ.
* ಎಡಗಡೆ ಭಾಗದಲ್ಲಿ ಮಲಗುವುದರಿಂದ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುವುದಕ್ಕೆ ಸಹಕಾರಿಯಾಗುತ್ತದೆ. ಹಾಗೂ ಬಹಳ ಮುಖ್ಯವಾಗಿ ಪ್ರತಿಯೊಬ್ಬರೂ ಕೂಡ ದಕ್ಷಿಣ ಭಾಗಕ್ಕೆ ಅಥವಾ ಪೂರ್ವ ಭಾಗಕ್ಕೆ ತಲೆಹಾಕಿ ಮಲಗಿಕೊಳ್ಳುವುದು ಒಳ್ಳೆಯದು ಎಂದು ಹೇಳುತ್ತಾರೆ ಅದರಲ್ಲೂ ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿನಲ್ಲಿ ತಲೆಹಾಕಿ ಮಲಗುವುದು ಅತ್ಯಂತ ಶ್ರೇಷ್ಠ ಎಂದೇ ಹೇಳುತ್ತಾರೆ.
* ಯಾವುದೇ ಕಾರಣಕ್ಕೂ ಉತ್ತರ ದಿಕ್ಕಿಗೆ ತಲೆ ಹಾಗೂ ದಕ್ಷಿಣ ದಿಕ್ಕಿಗೆ ಕಾಲನ್ನು ಹಾಕಿ ಮಲಗಬಾರದು ಹೌದು ಈ ರೀತಿ ಮಲಗುವುದರಿಂದ ಅದು ನಮ್ಮ ಮನಸ್ಸಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಯಾವುದೇ ಒಂದು ವಿಚಾರವಾಗಿರಬಹುದು ನಮ್ಮ ಮನಸ್ಸಿನ ಸ್ಥಿತಿ ತುಂಬ ವಕ್ರವಾಗಿ ಇರುತ್ತದೆ.
ಉದಾಹರಣೆಗೆ ನೀವು ಮ್ಯಾಗ್ನೆಟ್ ಅನ್ನು ಉತ್ತರ ಹಾಗೂ ಉತ್ತರ ದಿಕ್ಕಿಗೆ ಇಟ್ಟರೆ ಅವೆರಡು ಒಟ್ಟಿಗೆ ಸೇರುತ್ತದೆ. ಅಲ್ಲಿ ಒಂದು ರೀತಿಯ ಒತ್ತಡ ಎನ್ನುವುದು ಏರ್ಪಡುತ್ತದೆ. ಅದೇ ರೀತಿಯಾಗಿ ನಮ್ಮ ತಲೆ ಭಾಗವು ಉತ್ತರ ಆಗಿರುವುದರಿಂದ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಬದಲಿಗೆ ದಕ್ಷಿಣ ದಿಕ್ಕಿಗೆ ನಮ್ಮ ತಲೆಯನ್ನು ಹಾಕಿ ಉತ್ತರ ದಿಕ್ಕಿಗೆ ಕಾಲನ್ನು ಹಾಕಿ ಮಲಗುವುದು ಒಳ್ಳೆಯದು.
* ಹಾಗಾಗಿ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ನಮ್ಮ ದೇಹ ಸಂಪೂರ್ಣವಾಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತದೆ. ಬದಲಿಗೆ ಯಾವುದೇ ರೀತಿಯ ಒತ್ತಡ ಪದೇಪದೇ ಎಚ್ಚರ ಆಗುವುದು ಈ ರೀತಿಯ ಯಾವುದೇ ರೀತಿಯ ಪರಿಸ್ಥಿತಿಗಳು ಕೂಡ ಎದುರಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ಹೆಚ್ಚಿನ ಒಳ್ಳೆಯ ಸುಖವಾದಂತಹ ನಿದ್ರೆಯನ್ನು ಮಾಡಬಹುದಾಗಿದೆ.
* ನಾವು ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಪ್ರತಿಯೊಂದು ಅಂಗಾಂಗಗಳು ಕೂಡ ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ. ಹೌದು ವಿರುದ್ಧ ದಿಕ್ಕಿನಲ್ಲಿ ನಾವು ಮಲಗಿದಾಗ ನಮ್ಮ ದೇಹವು ಯಾವುದೇ ರೀತಿಯ ಆಕರ್ಷಣೆಗೆ ಒಳಪಡುವುದಿಲ್ಲ ಬದಲಿಗೆ ಅವುಗಳ ಕೆಲಸ ಸರಾಗವಾಗಿ ನಡೆಯುತ್ತಿರುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ.
* ಅದೇ ರೀತಿಯಾಗಿ ನಾವು ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ನಮ್ಮ ಮೆದುಳಿಗೆ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ ಹಾಗೂ ರಾತ್ರಿ ಸಮಯ ಸ್ನಾನ ಮಾಡಿ ಮಲಗುವುದರಿಂದಲೂ ಕೂಡ ಗಾಢವಾದ ನಿದ್ದೆಯನ್ನು ಮಾಡಬಹುದು.
* ದಿನವಿಡೀ ನಮ್ಮ ದೇಹ ಹಲವಾರು ಕೆಲಸ ಕಾರ್ಯಗಳಲ್ಲಿ ತೊಡಗಿರು ತ್ತದೆ ಆಗ ದೇಹ ಹೆಚ್ಚು ಒತ್ತಡವನ್ನು ಅನುಭವಿಸಿರುತ್ತದೆ. ಆದ್ದರಿಂದ ರಾತ್ರಿ ಮಲಗುವ ಸಮಯದಲ್ಲಿ ಸ್ನಾನ ಮಾಡಿ ಮಲಗುವುದರಿಂದ ನಮ್ಮ ದೇಹಕ್ಕೆ ವಿಶ್ರಾಂತಿ ಸಿಗುವುದಷ್ಟೇ ಅಲ್ಲದೆ ಉತ್ತಮವಾದ ಆರೋಗ್ಯ ವನ್ನು ಸಹ ಪಡೆದುಕೊಳ್ಳುತ್ತದೆ.
* ಅದರಲ್ಲೂ ರಾತ್ರಿ ಸಮಯ ಮಲಗುವಾಗ ನಿಮ್ಮ ಅಕ್ಕ ಪಕ್ಕದಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಫೋನ್ ಇಟ್ಟುಕೊಳ್ಳಬೇಡಿ ಬದಲಿಗೆ ಬೇವಿನ ಎಣ್ಣೆಯ ದೀಪವನ್ನು ಹಚ್ಚಿ ಮಲಗುವುದರಿಂದ ಕಣ್ಣಿಗೆ ತಂಪಾದಂತಹ ಬೆಳಕು ಬೀಳುತ್ತದೆ ಹಾಗೂ ಸುಖವಾದ ನಿದ್ರೆ ಮಾಡಬಹುದು.