ಪ್ರತಿಯೊಬ್ಬರಿಗೂ ಕೂಡ ಸ್ವಂತ ಸೂರಿನಡಿ ವಾಸಿಸುವ ಅನುಕೂಲತೆ ಇರಬೇಕು ಎನ್ನುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗುರಿಯಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ಹಿಡಿದು ರಾಜ್ಯದಲ್ಲೂ ಕೂಡ ಹಲವಾರು ವಸತಿ ಯೋಜನೆಗಳನ್ನು (Housing Schemes) ಕೈಗೊಳ್ಳಲಾಗಿದೆ ಆ ಪ್ರಕಾರವಾಗಿ ಬೆಂಗಳೂರಿನಲ್ಲಿ (Bangalore) ಸ್ವಂತ ಮನೆ ಹೊಂದುವ ಕನಸು ಹೊಂದಿದ್ದವರಿಗೆ ಈಗ ಅವರ ಕನಸು ನನಸಾಗುವ ಸಮಯ ಬಂದಿದೆ.
ರಾಜೀವ್ ಗಾಂಧಿ ವಸತಿ ನಿಗಮದ (RGRHCL) ಮೂಲಕ ಬೆಂಗಳೂರು ನಗರ ಜಿಲ್ಲೆಯಾದ್ಯಂತ 1 ಲಕ್ಷ ಬಹು ಮಹಡಿ ಬೆಂಗಳೂರು ವಸತಿ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿ ಈ ಕಾಮಗಾರಿ ಪೂರ್ಣಗೊಂಡಿರುವ ಬಡಾವಣೆಗಳಲ್ಲಿ ನೋಂದಣಿ (Register) ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಇರುವವರಿಗಾಗಿ ಹೆಚ್ಚಿನ ಮಾಹಿತಿ ಹೀಗಿದೆ ನೋಡಿ.
ನೋಂದಣಿಗೆ ರೆಡಿ ಇರುವ ಬಡಾವಣೆಗಳ ವಿವರ:-
1. ಕೂಗುರು ಸರ್ವೆ ನಂಬರ್69 1BHK
2. ಸಾದೇನಹಳ್ಳಿ ಸರ್ವೆ ನಂಬರ್ 30 1BHK
3. ಅಗ್ರಹಾರಪಾಳ್ಯ ಸರ್ವೆ ನಂಬರ್ 30 1BHK
4. ಚಿಕ್ಕನಹಳ್ಳಿ – ಕಾಮನಹಳ್ಳಿ ಸರ್ವೆ ನಂಬರ್ 71 1BHK
5. ಜಿ ಭಿಂಗಿಪುರ ಸರ್ವೆ ನಂಬರ್ 29 1BHK
6. ಗೂಳಿಪುರ ಸರ್ವೆ ನಂಬರ್ 67 2BHK
ಅರ್ಜಿ ಸಲ್ಲಿಸುವ ವಿಧಾನ:-
* https://ashraya.karnataka.gov.in ಈ ವೆಬ್ ಸೈಟಿಗೆ ಭೇಟಿ ನೀಡುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು ಮತ್ತು ಈ ವಸತಿ ಯೋಜನೆಗೆ ಸಂಬಂಧಪಟ್ಟ ಪೂರ್ತಿ ಮಾಹಿತಿಯನ್ನು ಕೂಡ ಪಡೆಯಬಹುದು.
* ಮುಖಪುಟ ತೆರೆದ ಮೇಲೆ ಸಿಎಂ ಬಹು ಮಹಡಿ ಬೆಂಗಳೂರು ವಸತಿ ಯೋಜನೆ 1 BHK, 2 BHK ಆಪ್ಷನ್ ಸಿಗುತ್ತದೆ ನಿಮಗೆ ಯಾವ ಮನೆ ಬೇಕು ಸೆಲೆಕ್ಟ್ ಮಾಡಿ ಅಲ್ಲಿಗೆ ಆನ್ಲೈನ್ ಅಪ್ಲಿಕೇಶನ್ ಎನ್ನುವ ಆಪ್ಷನ್ ಇರುತ್ತದೆ ಕ್ಲಿಕ್ ಮಾಡಿ ಉದಾಹರಣೆಗೆ 2 BHK ಸೆಲೆಕ್ಟ್ ಮಾಡಿ ಆನ್ಲೈನ್ ಅಪ್ಲಿಕೇಶನ್ ಕ್ಲಿಕ್ ಮಾಡಿದ್ದೀರಿ ಎಂದು ಕೊಳ್ಳೋಣ, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಮುಖ್ಯಮಂತ್ರಿಗಳ ಬಹು ಮಹಡಿ ಬೆಂಗಳೂರು ವಸತಿ ಯೋಜನೆ 2BHK ಪುಟ ಓಪನ್ ಆಗುತ್ತದೆ.
* ಅರ್ಜಿ ಸಲ್ಲಿಕೆ ಆಪ್ಷನ್ ಜೊತೆಗೆ ಯೋಜನ ಸ್ಥಳಗಳ ವಿವರ, ಲಭ್ಯವಿರುವ ಫ್ಲಾಟ್ ಗಳ ಮಾಹಿತಿ, ಫ್ಲಾಟ್ ಬುಕಿಂಗ್ ಬಗ್ಗೆ ಪೂರ್ತಿ ಮಾಹಿತಿ ಪಡೆಯಲು ಆಪ್ಷನ್ ಗಳು ಇರುತ್ತವೆ. ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದು. ಆದರೆ ಫ್ಲಾಟ್ ಬುಕಿಂಗ್ ಆಪ್ಷನ್ ನೀವು ಅರ್ಜಿ ಸಲ್ಲಿಸಿ ಮುಂಗಡ ಹಣ ಪಾವತಿ ಮಾಡಿದ ಮೇಲೆ ಓಪನ್ ಆಗುತ್ತದೆ ನೀವು ಆಗ ನಿಮಗೆ ಯಾವ ಫ್ಲಾಟ್ ಬೇಕು ಬುಕಿಂಗ್ ಮಾಡಬಹುದು.
* ನೀವು ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸಿ ಎನ್ನುವ ಆಪ್ಷನ್ ಕೆಳಗೆ ಇರುವ 2BHK ಕುರಿತು ಮಾಹಿತಿ ಎನ್ನುವುದರ ಮೇಲೆ ಕ್ಲಿಕ್ ಮಾಡಿ pdf ಫಾರಂ ಓಪನ್ ಆಗುತ್ತದೆ ಅದರಲ್ಲಿ ಈ ಅರ್ಜಿ ಸಲ್ಲಿಕೆ ಕುರಿತು ಮತ್ತು ಬೇಕಾಗುವ ದಾಖಲೆಗಳ ಕುರಿತು ಹಾಗೂ 2 BHK ವಿನ್ಯಾಸ ಯಾವ ರೀತಿ ಇರುತ್ತದೆ ಯಾವ ಫೆಸಿಲಿಟಿ ಇರುತ್ತದೆ.
ಒಟ್ಟಾರೆ ವೆಚ್ಚ ಎಷ್ಟು ಇರುತ್ತದೆ, ಮುಂಗಡ ಹಣವಾಗಿ ಎಷ್ಟು ಪಾವತಿ ಮಾಡಬೇಕು ಅದರ ಕುರಿತು ಮಾಹಿತಿ ಮತ್ತು ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು ಎನ್ನುವುದರ ಕುರಿತು ಪೂರ್ತಿ ಮಾಹಿತಿ ಇರುತ್ತದೆ. ಇದನ್ನೆಲ್ಲ ಓದಿಕೊಂಡು ನಂತರ ಅರ್ಜಿ ಸಲ್ಲಿಸು ಆಪ್ಷನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.
* ಅರ್ಜಿ ಸಲ್ಲಿಸುವ ಪುಟ ಓಪನ್ ಆಗುತ್ತದೆ ನಿಮ್ಮ ವಿಧಾನಸಭಾ ಕ್ಷೇತ್ರ ಎನ್ನುವ ಆಪ್ಷನ್ ಇರುತ್ತದೆ, ವಿವರಗಳನ್ನು ನಮೂದಿಸಿ ಅಥವಾ ಅಲ್ಲೇ ಆಪ್ಷನ್ ಇರುತ್ತದೆ ಸೆಲೆಕ್ಟ್ ಮಾಡಿ. ಪ್ರದೇಶ ಎನ್ನುವ ಆಪ್ಷನ್ ನಲ್ಲಿ ನಗರ ಎಂದು ಸೆಲೆಕ್ಟ್ ಮಾಡಿ, ಪ್ರಸ್ತುತ ವಿಳಾಸ ಎನ್ನುವ ಫಾರಂ ಓಪನ್ ಆಗುತ್ತದೆ ಅಲ್ಲಿ ವಿವರಗಳನ್ನು ನಮೂದಿಸಿ ಮುಂದುವರೆಯಿರಿ. ಅಲ್ಲಿರುವ ಪ್ರೊಸೀಜರ್ ಪ್ರಕಾರ ಅರ್ಜಿ ಸಲ್ಲಿಸಿ ಸ್ವಂತ ಮನೆ ಕನಸು ನನಸಾಗಿಸಿಕೊಳ್ಳಿ.