ಮನುಷ್ಯರಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಮಾನವ ಸಹಜವಾದ ಕೆಲವು ಸಮಸ್ಯೆಗಳು ಇದ್ದೇ ಇರುತ್ತದೆ. ಆದರೆ ಕೌಟುಂಬಿಕ ದೌ’ರ್ಜ’ನ್ಯಗಳನ್ನು ನಮ್ಮನ್ನು ಮಾನಸಿಕವಾಗಿ ಕುಗ್ಗಿಸಿ ಬದುಕಿನ ಬಗ್ಗೆ ಉತ್ಸಾಹ ಕಳೆದುಕೊಳ್ಳುವಂತೆ ಮಾಡಿಬಿಡುತ್ತವೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ವಿವಾಹದ ನಂತರ ಅನಿರೀಕ್ಷಿತವಾಗಿ ಈ ರೀತಿ ಬದುಕು ತಿರುವು ತೆಗೆದುಕೊಂಡು ಬಿಟ್ಟರೆ ಇನ್ನು ಆ ಹೆಣ್ಣಿನ ಬದುಕು ಕತ್ತಲ ಕೋಣೆಯಲ್ಲಿ ಮುಗಿದಂತೆ ಎಂದು ಇದ್ದ ಮೂಢನಂಬಿಕೆಯನ್ನು ಇಲ್ಲೊಬ್ಬ ಮಹಿಳೆ ಹುಸಿಗೊಳಿಸಿ.
ಹೆಣ್ಣು ಮನಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದನ್ನು ಸಾಧಿಸಿ ತೋರಿಸುತ್ತಾರೆ. ಎರಡು ಮಕ್ಕಳ ಜೊತೆ ಗಂಡನ ಮನೆಯಿಂದ ಆಚೆ ಬಂದ ವಿವಾಹಿತ ಮಹಿಳೆ ಎಂದು IPS ಅಧಿಕಾರಿಯಾಗಿ ಅದೆಷ್ಟೋ ಸಾಧನೆಗಳಲ್ಲಿ ಮೊದಲಿಗರಾಗಿದ್ದಾರೆ ಮತ್ತು ತನ್ನ ಅತ್ತೆ ಹಾಗೂ ಗಂಡನ ವಿರುದ್ಧ ಕೇಸ್ ಹಾಕಿ ನ್ಯಾಯಾಂಗ ಹೊರಟದಲ್ಲಿ ಗೆದ್ದು ಗಟ್ಟಿಗಿತ್ತಿ ಎನಿಸಿದ್ದಾರೆ ಮಧ್ಯಪ್ರದೇಶದ IPS ಅಧಿಕಾರಿ ಸವಿತಾ ಪ್ರಧಾನ್.
UPSC ಪಾಸ್ ಆಗುವುದು ಕಬ್ಬಿಣದ ಕಡಲೆ ಎಂದು ಭಾವಿಸಿರುವ ಯುವಜನತೆಗೆ ಇವರೊಂದು ಸ್ಪೂರ್ತಿಯಾಗಿದ್ದಾರೆ ಎಂದರೂ ತಪ್ಪಾಗಲಾರದು ಮತ್ತು ಮದುವೆ ಆದ ಬಳಿಕವೂ ಇಚ್ಛಾಶಕ್ತಿಯೊಂದಿದ್ದರೆ ಹೆಣ್ಣು ಮಕ್ಕಳಿಗೆ ಅಸಾಧ್ಯವಾದದ್ದು ಯಾವುದು ಇಲ್ಲ, ನಡೆಯುವ ದಾರಿಯಲ್ಲಿ ಸ್ಪಷ್ಟತೆ ಇದ್ದರೆ ತಡೆಯುವ ತಾಕತ್ತು ಯಾರಿಗೂ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಏಷಿಯಾದಲ್ಲೇ ಅತಿ ಕಠಿಣ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿ ಭೇದಿಸಿ ಇಂದು ದೇಶದ ಅತ್ಯ್ಯುನ್ನತ ಹುದ್ದೆಯಲ್ಲಿ ಒಂದಾದ IPS ಪದವಿ ಏರಿದ್ದಾರೆ ಸವಿತಾ ಪ್ರಧಾನ್. ಪ್ರಸ್ತುತವಾಗಿ ಇವರು ಮಧ್ಯಪ್ರದೇಶದ ಗ್ವಾಲಿಯರ್ ವಿಭಾಗದಲ್ಲಿ ಜಂಟಿ ನಿರ್ದೇಶಕರಾಗಿದ್ದಾರೆ. ಸಂದರ್ಶನ ಒಂದರಲ್ಲಿ ತಮ್ಮ ಬದುಕಿನ ಬಗ್ಗೆ ಮಾತನಾಡಿದ ಸವಿತಾ ಪ್ರಧಾನ್ ತಾವು ಜೀವನದಲ್ಲಿ ಪಟ್ಟ ಕಷ್ಟಗಳ ಬಗ್ಗೆ ಮತ್ತು ನಂತರ ಇಂದು ಇರುವ ಗೌರವದ ಬಗ್ಗೆ ಮುಕ್ತವಾಗಿ ಮಾತನಾಡಿ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ತುಂಬಿದ್ದಾರೆ.
ಹೆಣ್ಣು ಮಕ್ಕಳಿಗೆ ಮಾತ್ರವಲ್ಲದೆ IAS, IPS ಆಕಾಂಕ್ಷಿಗಳಿಗೆ ಗುರಿ ಮುಟ್ಟುವ ಸೀಕ್ರೆಟ್ ಏನು ಎನ್ನುವುದರ ಬಗ್ಗೆ ಕಿವಿಮಾತು ಕೂಡ ಹೇಳಿದ್ದಾರೆ. ಸವಿತಾ ಪ್ರಧಾನ್ ಅವರು ಮೂಲತಃ ಹಳ್ಳಿಯವರು, ಮಧ್ಯಪ್ರದೇಶದ ಸಂಸದೀಯ ಹಳ್ಳಿ ಎನ್ನುವ ಕಡು ಹಳ್ಳಿಯಲ್ಲಿ ಬಡ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ವಿದ್ಯಾಭ್ಯಾಸಕ್ಕಾಗಿ ಅನೇಕ ಕಟ್ಟುಪಾಡುಗಳನ್ನು ಎದುರಿಸಬೇಕಿತ್ತು.
ತನ್ನ ಗ್ರಾಮದಲ್ಲಿಯೇ 10ನೇ ತರಗತಿ ಪಾಸ್ ಮಾಡಿದ್ದ ಮೊದಲನೇ ಹೆಣ್ಣು ಮಗಳು ಎನಿಸಿಕೊಂಡಿದ್ದ ಇವರು ನಂತರ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆರಿಸಿಕೊಂಡಿದ್ದಕ್ಕಾಗಿ ಅನೇಕ ಒಳ್ಳೆಯ ಸಂಬಂಧಗಳು ಬಂದವು. ತಮ್ಮ ನಿರ್ಧಾರಕ್ಕೆ ವಿರುದ್ಧವಾಗಿ 17 ನೇ ವಯಸ್ಸಿನಲ್ಲಿ ಕುಟುಂಬದ ಒತ್ತಾಯಕ್ಕೆ ಮದುವೆಯಾಗಿ ಸೇರಿದ್ದು ಮಾತ್ರ ಅಕ್ಷರಶಃ ನರಕವನ್ನೇ.
ಆ ಮನೆಯಲ್ಲಿ ಅತ್ತೆಯದ್ದೇ ಮೈಲು ಗೈ, ಸೊಸೆ ಮೇಲೆ ನಿಯಃತ್ರಣ ಹೇರಲು ಸುಖಾ ಸುಮ್ಮನೆ ಬೈಯುವುದು, ಮಗನಿಗೆ ಹೇಳಿ ಹೊಡೆಸುವುದು, ಒಟ್ಟಿಗೆ ಕೂತೂ ಊಟ ಮಾಡುವಂತಿಲ್ಲ, ಅಳತೆ ಊಟ, ಅಕ್ಕ ಪಕ್ಕದವರ ಜೊತೆ ಮಾತನಾಡುವಂತಿಲ್ಲ ತನ್ನ ತವರಿಗೆ ಹೋಗುತ್ತೇನೆ ಎಂದು ಕೇಳುವಂತಿಲ್ಲ ಇಷ್ಟರ ನಡುವೆ ಸವಿತಾ ಪ್ರಧಾನವರು ಒಮ್ಮೆ ಇದೇ ರೀತಿ ಜ’ಗ’ಳ’ದಿಂದ ಬೇಸತ್ತು.
ಆ’ತ್ಮ’ಹ’ತ್ಯೆ ಮಾಡಿಕೊಳ್ಳಲು ಹೋದಿಗ ಎದುರುಗಿದ್ದರು ಅತ್ತೆ ತಡೆದಿದ್ದರಿಂದ ಮನಸ್ಸು ಚಿದ್ರವಾಗಿ ಸಾಯಬಾರದು ಸಾಧಿಸಬೇಕು ಎಂದು ಮಕ್ಕಳ ಜೊತೆ ಮನೆ ಬಿಟ್ಟು ಬಂದರು. ನಂತರ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಾ ಇಂದೋರ್ ವಿಶ್ವವಿದ್ಯಾನಿಲಯದಿಂದ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು. 2021 ರಲ್ಲಿ, ಅವರು ಖಾಂಡ್ವಾ ಮುನ್ಸಿಪಲ್ ಕಾರ್ಪೊರೇಶನ್ ನ ಮೊದಲ ಮಹಿಳಾ ಆಯುಕ್ತರಾಗಿ ಕೂಡ ಸೇವೆ ಸಲ್ಲಿಸಿ. ಸರ್ಕಾರಿ ಹುದ್ದೆ ಸಿಕ್ಕ ಮೇಲೆ ತನ್ನನ್ನು ಆ ಪರಿ ಕಾಡಿದ್ದ ಅತ್ತೆ ಹಾಗೂ ಗಂಡನ ಮೇಲೆ ಕೇಸ್ ಹಾಕಿ ಬುದ್ಧಿ ಕಲಿಸಿದ್ದಾರೆ.