ಪ್ರೀತಿ ಎನ್ನುವುದು ಈ ಪ್ರಪಂಚದ ವಿಶೇಷವಾದ ಅನುಭವ. ಪ್ರೀತಿ ಎನ್ನುವ ಈ ಪದದ ಮೇಲೆ ಅದೆಷ್ಟೋ ಕವನಗಳು ಕವಿತೆಗಳು ಸಿನಿಮಾಗಳು ಮತ್ತು ಕಾವ್ಯಗಳು ಕೂಡ ರಚನೆ ಆಗಿದೆ. ಪ್ರೀತಿ ಎನ್ನುವ ಈ ಎರಡರ ಭಾವನೆಯನ್ನು ಅನುಭವಿಸಲು ಸಾಧ್ಯವೇ ಹೊರತು ಎರಡು ಮಾತಿನಲ್ಲಿ ವಿವರಿಸಲು ಅಸಾಧ್ಯ.
ಈ ಪ್ರೀತಿಯ ಪರಿಚಯ ಒಮ್ಮೆ ಆದರೆ ಎಂತಹ ಕಲ್ಲೆದೆಯಲ್ಲೂ ಕೂಡ ಹೂವು ಅರಳಿಸುತ್ತದೆ, ಜೀವನದಲ್ಲಿ ಮತ್ತೇನು ಇಲ್ಲ ನಾನು ಸಂಪೂರ್ಣವಾಗಿ ಸೋತೆ ಎನ್ನುವ ವ್ಯಕ್ತಿಯು ಕೂಡ ಪ್ರೀತಿಯ ಸ್ಪರ್ಶ ಸಿಕ್ಕಿದರೆ ಮತ್ತೆ ಫೀನಿಕ್ಸ್ ರೀತಿ ಮೇಲೆದ್ದು ಬರುತ್ತಾನೆ. ಪ್ರೀತಿ ಎನ್ನುವ ಹನಿ ಸಿಂಚನ ಎಷ್ಟು ಸಿಕ್ಕಿದರೂ ತೀರದ ದಾಹ ಹಾಗೂ ಸಿಗದಿದ್ದರೆ ಅಷ್ಟೇ ಭಯಂಕರದ ಬಾಯಾರಿಕೆ ಎನ್ನಬಹುದು.
ಈ ಪ್ರೀತಿಯಲ್ಲಿ ಸರಸ, ವಿರಸ, ಕೋ’ಪ, ಕರುಣೆ, ಜ’ಗ’ಳ ಮ’ನ’ಸ್ತಾ’ಪ, ಒಂಟಿತನ ವಿ’ರ’ಹ ಎಲ್ಲವೂ ಕೂಡ ಇರುತ್ತದೆ. ಅತಿಯಾಗಿ ಪ್ರೀತಿ ಇರುವವರ ಮಧ್ಯೆ ಜ’ಗ’ಳ’ವೂ ಆಗುತ್ತಿರುತ್ತದೆ. ಯಾಕೆಂದರೆ ಅವರಲ್ಲಿ ನಾನು ಪ್ರೀತಿಸಿದವರು ನನ್ನ ಜೊತೆ ಮಾತ್ರ ಚೆನ್ನಾಗಿರಬೇಕು ಎನ್ನುವ ಪ್ರೊಸೆಸಿವ್ ನೆಸ್ ಇರುತ್ತದೆ.
ಅವರು ಸ್ವಲ್ಪ ಬೇರೆಯವರ ಜೊತೆ ಸಲುಗೆಯಿಂದಿದ್ದರು ಎಲ್ಲಿ ಕೈ ತಪ್ಪಿ ಹೋಗುತ್ತಾರೆ ಎನ್ನುವ ಭ’ಯ ಆತಂಕದ ಜೊತೆ ಇದೇ ಕಾರಣಕ್ಕಾಗಿ ಕೋ’ಪ ಬಂದು ಜಗಳವಾಗಿ ಮನಸ್ತಾಪವಾಗುತ್ತದೆ. ಪ್ರೀತಿ ಹೇಳಿಕೊಂಡರೆ ಎಲ್ಲವೂ ಸ್ಪಷ್ಟ ಆದರೆ ಕೆಲವೊಮ್ಮೆ ಪ್ರೀತಿಯನ್ನು ಹೇಳಿಕೊಳ್ಳದೆ ಅವರನ್ನು ಅಗಾಧವಾಗಿ ಪ್ರೀತಿಸುತ್ತಿರುತ್ತಾರೆ.
ಈ ರೀತಿ ಪ್ರೀತಿಯಲ್ಲಿ ಇರುವವರಿಗೆ ತಾನು ಪ್ರೀತಿಸುವ ವ್ಯಕ್ತಿಗೂ ಕೂಡ ತನ್ನ ಮೇಲೆ ಪ್ರೀತಿ ಇದೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಅನೇಕ ಸುಳಿವುಗಳು ಸಿಗುತ್ತದೆ. ಈ ಮೇಲೆ ನಾವು ಹೇಳಿದಂತೆ ನೀವು ಯಾರನ್ನಾದರೂ ಪ್ರೀತಿಸುತ್ತಿದ್ದಾರೆ ಎಂದರೆ ಆ ವ್ಯಕ್ತಿಯು ನಿಮ್ಮ ಜೊತೆ ನಡೆದುಕೊಳ್ಳುವ ರೀತಿಯ ಮೇಲೆ ಪ್ರೀತಿ ಇದೆ ಎಂದು ಅರ್ಥ ಮಾಡಿಕೊಳ್ಳಬಹುದು.
ಅವರು ನಿಮ್ಮ ಸಣ್ಣ ಸಣ್ಣ ವಿಚಾರಗಳನ್ನು ಗಮನಿಸಿ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ವ್ಯಕ್ತಿರಾಗಿರುತ್ತಾರೆ. ಮತ್ತು ಯಾವಾಗಲೂ ನಿಮ್ಮ ಹಿಂದೆ ಮುಂದೆ ಸುಳಿದಾಡಲು ಕಾರಣ ಹುಡುಕಿಕೊಂಡು ಬರುವ ವ್ಯಕ್ತಿಗೆ ಖಂಡಿತವಾಗಿಯೂ ನಿಮ್ಮ ಮೇಲೆ ಪ್ರೀತಿ ಇರುತ್ತದೆ. ಆದರೆ ನಿಮ್ಮ ಬಳಿ ಪ್ರೀತಿ ಹೇಳಿಕೊಳ್ಳುವ ಮುನ್ನ ಅವರಿಗೆ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯ ಇರುವುದಿಲ್ಲ.
ನಿಮ್ಮನ್ನು ನೋಡಿದರೆ, ನಿಮ್ಮ ಧ್ವನಿ ಕೇಳಿದರೆ ಅವರ ಮುಖದಲ್ಲಿ ಕಳೆ ಬರುತ್ತದೆ ಈ ರೀತಿಯ ಪ್ರೀತಿಯು ಇರುತ್ತದೆ ಮತ್ತೆ ಕೆಲವರು ಇದನ್ನು ಬೇರೆ ರೀತಿ ಅನುಭವಿಸುತ್ತಾರೆ. ಅವರು ಯಾರಿಂದಲಾದರೂ ವಿಪರೀತವಾಗಿ ಕೀಟಲೆಗೆ ಒಳಗಾಗುತ್ತಿದ್ದರೆ ಚಿಕ್ಕ ಮಕ್ಕಳಂತೆ ತಮ್ಮನ್ನು ಯಾರಾದರೂ ಅತಿಯಾಗಿ ಕಾಡುತ್ತಿದ್ದರೆ ಕೋ’ಪ ತರುತ್ತಿದ್ದರೆ ಅವರು ಕೂಡ ನಿಮ್ಮ ಮೇಲಿರುವ ಅತಿಯಾದ ಪ್ರೀತಿಯಿಂದ ಈ ರೀತಿ ಮಾಡುತ್ತಿರಬಹುದು.
ಆದರೆ ನೀವು ಬೇಜಾರು ಮಾಡಿಕೊಂಡರೆ ಕ’ಣ್ಣೀ’ರಿ’ಟ್ಟ’ರೆ, ಕ’ಷ್ಟದಲ್ಲಿದ್ದರೆ ಅವರಿಗೆ ನೋಡಲು ಆಗುವುದಿಲ್ಲ. ಅವರಷ್ಟೇ ನಿಮ್ಮನ್ನು ಗೋಳು ಹಾಕಿಕೊಂಡರು ಬೇರೆಯವರು ನಿಮಗೆ ಅದೇ ರೀತಿ ಮಾಡಿದರೆ ಅವರು ಸಹಿಸುವುದಿಲ್ಲ. ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ, ಈ ರೀತಿ ಕೂಡ ಪ್ರೀತಿ ಮಾಡುವವರು ಇರುತ್ತಾರೆ. ಒಟ್ಟಿನಲ್ಲಿ ಪ್ರೀತಿ ಎಂದರೆ ಕಾಳಜಿ ಒಬ್ಬರಿಗೊಬ್ಬರು ನೆರವಾಗುವ ರೀತಿ, ಒಬ್ಬರಿಗಾಗಿ ಮತ್ತೊಬ್ಬರು ಪ್ರಾಣವನ್ನೇ ಕೊಡುವಷ್ಟು ಅರ್ಪಣೆ ಎಂದು ಹೇಳಬಹುದು.
https://youtu.be/ENkN4aLE7wc?si=3n6Jz-ucJTA-A7XT