ಅಪ್ಪು ಯಾರದ್ದೇ ಮದುವೆಗೆ ಹೋದರು ಒಂದು ಬೆಲೆ ಬಾಳುವ ಉಡುಗೊರೆಯನ್ನು ತೆಗೆದುಕೊಂಡು ಹೋಗುತ್ತಿದ್ದರು ಈ ವಿಡಿಯೋ ನೋಡಿ ನಿಜಕ್ಕೂ ಇವರ ವ್ಯಕ್ತಿತ್ವ ಎಂತದ್ದು ಅಂತ ತಿಳಿಯುತ್ತದೆ. ಕರುಡಾಡ ರತ್ನನ ಬಗ್ಗೆ ಎಷ್ಟು ಹೇಳಿದರೂ ಕೂಡ ಮುಗಿಯುವುದಿಲ್ಲ ಎಷ್ಟು ಹೇಳಿದರು ಕೂಡ ಸಾಲುವುದಿಲ್ಲ ಏಕೆಂದರೆ ಈ ಪರಮಾತ್ಮ ಮಾಡಿರುವುದೆಲ್ಲವೂ ಅಂತಹದ್ದೇ ಕೆಲಸ. ಹೌದು ಅಪ್ಪು ಕೇವಲ ಒಬ್ಬ ನಟನಾಗಿರಲಿಲ್ಲ ಬದಲಿಗೆ ಸಮಾಜಮುಖಿ ಕೆಲಸವನ್ನು ಮಾಡುವಂತಹ ಉತ್ತಮ ವ್ಯಕ್ತಿಯಾಗಿದ್ದರು ನಾಗರೀಕರಾಗಿದ್ದರು ಸಮಾಜದ ಆಗುಹೋಗುಗಳ ಬಗ್ಗೆ ಹೆಚ್ಚು ಗಮನ ವಹಿಸುತ್ತಿದ್ದರು ಇನ್ನು ಸ್ನೇಹಿತರ ವಿಚಾರದ ಬಗ್ಗೆ ಇರಬಹುದು ಕುಟುಂಬಸ್ಥರ ವಿಚಾರದ ಬಗ್ಗೆ ಆಗಿರಬಹುದು ಹೇಳುವ ಹಾಗೆಯೇ ಇಲ್ಲ ಪಕ್ಕ ಫ್ಯಾಮಿಲಿ ಮ್ಯಾನ್ ಅಂತಾನೇ ಹೇಳಬಹುದು.
ಅಪ್ಪು ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಕುಟುಂಬಕ್ಕೆ ನೀಡುತ್ತಿದ್ದಂತಹ ಸಮಯ ಆಗಿರಬಹುದು ತಮ್ಮ ಬಂಧುಗಳಿಗೆ ನೀಡುತ್ತಿದ್ದಂತಹ ಸಮಯ ಆಗಿರಬಹುದು ಎಲ್ಲಿಯೂ ಕೂಡ ಕಿಂಚಿತ್ತು ಕಡಿಮೆ ಮಾಡುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಅಪ್ಪು ಅವರು ತಮ್ಮ ಸ್ವಂತ ಊರು ಆದಂತಹ ಗಾಜನರಿಗೆ ಹೋಗುತ್ತಿದ್ದರು ತದನಂತರ ತಮ್ಮ ಪತ್ನಿಯ ಊರು ಆದಂತಹ ಚಿಕ್ಕಮಗಳೂರು ಕೂಡ ತೆರಳುತ್ತಿದ್ದರು. ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಪ್ರಪಂಚ ಜ್ಞಾನವು ಇರಬೇಕು ಎಂಬ ಕಾರಣಕ್ಕಾಗಿ ವಿದೇಶಿ ಟ್ರಿಪ್ ಕೂಡ ಹೋಗುತ್ತಿದ್ದರು ಒಟ್ಟಾರೆಯಾಗಿ ಹೇಳುವುದಾದರೆ ಅಪ್ಪು ಅವರು ಎಲ್ಲ ರೀತಿಯಲ್ಲೂ ಕೂಡ ಒಂದು ಕೊಂಡು ಹೋಗುವಂತಹ ವ್ಯಕ್ತಿಯಾಗಿದ್ದರು.
ಇನ್ನು ವಿಚಾರಕ್ಕೆ ಬರುವುದಾದರೆ ಅಪ್ಪು ಅವರಗೆ ಯಾವುದೇ ಆಹ್ವಾನ ಪತ್ರಿಕೆ ಕೊಟ್ಟರೂ ಕೂಡ ತಪ್ಪದೆ ಹೋಗುತ್ತಿದ್ದರು ಮದುವೆ ಇರಬಹುದು ಸಮಾರಂಭ ಇರಬಹುದು ಅಥವಾ ಇನ್ನಿತರ ಯಾವುದೇ ಕಾರ್ಯಕ್ರಮ ಇರಬಹುದು ಯಾರಾದರೂ ಅಪ್ಪು ಅವರ ಮನೆಗೆ ಹೋಗಿ ಆಹ್ವಾನವನ್ನು ನೀಡಿದರೆ ಅಪ್ಪು ಅವರು ಎಷ್ಟೇ ಕೆಲಸದಲ್ಲಿ ನಿಮಿತ್ತವಾಗಿದ್ದರೂ ಕೂಡ ಬಿಡುವು ಮಾಡಿಕೊಂಡು ಅವಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಇನ್ನು ಮದುವೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ ಕೂಡ ಅಪ್ಪು ಅವರು ತಪ್ಪದೇ ಆ ಒಂದು ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಅಂದ ಹಾಗೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆ ಕಾರ್ಯಕ್ರಮಕ್ಕೆ ಹೋದಾಗ ಹೂಗುಚ್ಛ ನೀಡುವುದು ಸಾಂಪ್ರದಾಯ.
ಆದರೆ ಅಪ್ಪು ಅವರು ಯಾರೇ ಮದುವೆಗೆ ಹೋದರು ಕೂಡ ಹೂ ಗುಚ್ಛವನ್ನು ನೀಡುತ್ತಿರಲಿಲ್ಲ ಇದಕ್ಕೆ ಮುಖ್ಯ ಕಾರಣ ಹೂ ಗುಚ್ಛವನ್ನು ನೀಡಿದರೆ ಅದರಿಂದ ಯಾವುದೇ ರೀತಿಯಾದಂತಹ ಉಪಯೋಗವಾಗುವುದಿಲ್ಲ ಅಂತ. ಶ್ರೀಮಂತರ ಮದುವೆಗೆ ಯಾವುದೇ ರೀತಿಯಾದಂತಹ ಉಡುಗೊರೆಗಳ ಅಪೇಕ್ಷೆ ಇರುವುದಿಲ್ಲ ಅಥವಾ ನಿರೀಕ್ಷೆಯು ಕೂಡ ಇರುವುದಿಲ್ಲ. ಆದರೆ ಸಾಮಾನ್ಯ ವರ್ಗದ ಮತ್ತು ಬಡವರ್ಗದ ಅವರ ಮದುವೆಗೆ ಹೋದರೆ ಅಲ್ಲಿ ಖಂಡಿತವಾಗಿಯೂ ಕೂಡ ಯಾವುದಾದರೂ ಒಂದು ಉಡುಗೊರೆಯನ್ನು ನಿರೀಕ್ಷೆ ಮಾಡೇ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಹೂಗುಚ್ಛ ನೀಡಿದರೆ ಅದರಿಂದ ಯಾವುದೇ ರೀತಿಯಾದಂತಹ ಪ್ರಯೋಜನವಾಗುವುದಿಲ್ಲ ಎಂಬ ಸತ್ಯವನ್ನು ಅಪ್ಪು ಅವರು ಮನಗೊಂಡಿದ್ದರು.
ಈ ಕಾರಣಕ್ಕಾಗಿಯೇ ಅಪ್ಪು ಅವರು ಶ್ರೀಮಂತರಿರಲಿ ಬಡವರಿರಲಿ ಸಾಮಾನ್ಯ ವರ್ಗದವರಿರಲಿ ಯಾರದ್ದೆ ಮದುವೆಗೆ ಹೋದರು ಕೂಡ ಚಿನ್ನದ ಸರವಂದನ್ನು ಉಡುಗೊರೆಯಾಗಿ ತೆಗೆದುಕೊಂಡು ಹೋಗುತ್ತಿದ್ದರು. ಸದ್ಯಕ್ಕೆ ಅಪ್ಪು ಅವರು ಮದುವೆಯೊಂದರ ಕಾರ್ಯಕ್ರಮಕ್ಕೆ ಭಾಗವಹಿಸಿ ವರನಿಗೆ ಚಿನ್ನದ ಸರವೊಂದನ್ನು ಉಡುಗೊರೆಯಾಗಿ ಹಾಕುತ್ತಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ಅಪ್ಪು ಅವರು ನಿಜಕ್ಕೂ ಕೂಡ ದೈವ ಮಾನವ ಸಹಾಯ ಮಾಡುವುದರಲ್ಲಿ ಎತ್ತಿದ ಕೈ ಎಂಬ ವಿಚಾರವನ್ನು ಹೇಳುತ್ತಿದ್ದರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.
https://www.instagram.com/tv/CiCH1CqJ9MT/?igshid=YmMyMTA2M2Y=