ಪ್ರತಿ ವರ್ಷವೂ ಕೂಡ ಸ್ವತಂತ್ರ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಲಾಲ್ಬಾಗ್ ನಲ್ಲಿ 15 ದಿನಗಳ ಕಾಲ ಹೂವಿನ ಮೇಳವನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಲ್ಲಿನ ಪ್ರತಿಷ್ಠಿತ ಪ್ರವಾಸಿ ತಾಣಗಳು ಮತ್ತು ವಿಶೇಷ ಬಗೆಯ ಹೂವುಗಳು ಹಣ್ಣುಗಳು ಮತ್ತು ಪ್ರಾಣಿ ಪಕ್ಷಿ ಅರಮನೆಗಳು ಇನ್ನು ಮುಂತಾದ ವಿಭಿನ್ನ ಶೈಲಿಯ ಚಿತ್ರಗಳನ್ನು ಹೂವಿನಿಂದ ಅಲಂಕಾರ ಮಾಡಲಾಗುತ್ತದೆ. ಈ ಒಂದು ಲಾಲ್ಬಾಗ್ ಶೋ ಅನ್ನು ನೋಡುವುದಕ್ಕೆ ಕರ್ನಾಟಕ ಮಾತ್ರವಲ್ಲದೆ ಭಾರತದಾದ್ಯಂತ ಹಾಗೂ ವಿದೇಶದಿಂದಲೂ ಕೂಡ ಪ್ರವಾಸಿಗರು ಬರುತ್ತಾರೆ. ಆದರೆ ಈ ಬಾರಿ ಲಾಲ್ ಬಾಗ್ ನಲ್ಲಿ ನಡೆಯುವಂತಹ ಪುಷ್ಪ ಪ್ರದರ್ಶನವನ್ನು ವಿಭಿನ್ನ ರೀತಿಯಲ್ಲಿ ನಡೆಸಬೇಕು ಹಾಗೂ ಅಪ್ಪು ಅವರಿಗೆ ಗೌರವನ್ನು ಸಲ್ಲಿಸಬೇಕು ಎಂಬ ಕಾರಣಕ್ಕಾಗಿ.
76ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್ ಬಾಗ್ ನಲ್ಲಿ ನಡೆಯುವಂತಹ ಪುಷ್ಪ ಪ್ರದರ್ಶನಕ್ಕೆ ಅಪ್ಪು ಅವರ ಹೆಸರನ್ನು ಇಡಲಾಗಿದೆ. ಅಷ್ಟೇ ಅಲ್ಲದೆ ಅಪ್ಪು ಅವರ ಮಾದರಿಯಲ್ಲೇ ಹೂವಿನಿಂದ ಅಲಂಕಾರ ಮಾಡಲಾಗದಂತಹ ಪ್ರತಿಮೆ ಒಂದನ್ನು ಸ್ಥಾಪನೆ ಮಾಡಿದ್ದಾರೆ ಅಪ್ಪುವಿನ ಪಕ್ಕದಲ್ಲಿ ಡಾಕ್ಟರ್ ರಾಜಕುಮಾರ್ ಅವರ ಪ್ರತಿಮೆಯನ್ನು ಕೂಡ ಅನಾವರಣಗೊಳಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದಯೇ ಮುನಿರತ್ನಂ ಅವರು ಈ ಒಂದು ವಿಚಾರವನ್ನು ಶಿವಣ್ಣ ಹಾಗೂ ರಾಘವೇಂದ್ರ ರಾಜಕುಮಾರ್ ಮತ್ತು ಅಶ್ವಿನಿ ಮನೆಗೆ ಹೋಗಿ ಪ್ರಸ್ತಾವನೆ ಮಾಡಿದ್ದರು. ಈ ರೀತಿ ಮಾಡುತ್ತಿದ್ದೇವೆ ಅಂತ ಅದಕ್ಕೆ ಈ ಮೂರು ಜನರು ಕೂಡ ಅಸಮತಿಯನ್ನು ನೀಡಿದ್ದರು ಈಗ ಲಾಲ್ ಬಾಗ್ ದಲ್ಲಿ ಅಪ್ಪು ಮತ್ತು ಅಣ್ಣಾವ್ರ ಪ್ರತಿಮೆಯನ್ನು ನಿರ್ಮಾಣ ಮಾಡಿ ಹೂವಿನಿಂದ ಅಲಂಕಾರ ಮಾಡಲಾಗಿದೆ.
ಈ ಬಾರಿ ನಡೆಯುವಂತಹ ಪುಷ್ಪ ಪ್ರದರ್ಶನಕ್ಕೆ ಸುಮಾರು 15 ಲಕ್ಷ ಅಧಿಕ ಸಂಖ್ಯೆಯ ಜನ ಬರುತ್ತಾರೆ ಎಂದು ಕೆಲವು ಮಾಹಿತಿಗಳ ಪ್ರಕಾರ ತಿಳಿದು ಬಂದಿದೆ. ಆದರೂ ಕೂಡ ಅಪ್ಪು ಅವರನ್ನು ಈ ರೀತಿ ನೋಡುತ್ತಿರುವುದಕ್ಕೆ ಅಭಿಮಾನಿಗಳು ನಿಜಕ್ಕೂ ತುಂಬಾನೇ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಲಾಲ್ ಬಾಗ್ ನಲ್ಲಿ ನಿರ್ಮಾಣವಾಗಿರುವಂತಹ ಈ ಹೂವಿನ ಮೇಳ ಯಾವ ರೀತಿ ನಡೆಯುತ್ತಿದೆ ಎಂಬುದನ್ನು ವೀಕ್ಷಣೆ ಮಾಡುವುದಕ್ಕೆ ಶಿವಣ್ಣ ಹಾಗೂ ಅವರ ಧರ್ಮಪತ್ನಿ ಗೀತಾ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಡಾಕ್ಟರ್ ರಾಜಕುಮಾರ್ ಪರಿವಾರವೇ ಲಾಲ್ ಬಾಗ್ ಗೆ ಹೋಗಿದೆ. ಈ ಸಂದರ್ಭದಲ್ಲಿ ಪ್ರೀತಿಯ ತಮ್ಮ ಮತ್ತು ಅಪ್ಪನನ್ನು ಕಂಡಂತಹ ಶಿವಣ್ಣ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ಸದ್ಯಕ್ಕೆ ಶಿವಣ್ಣ ಅವರು ವೀಕ್ಷಣೆ ಮಾಡಿದಂತಹ ಈ ಫೋಟೋಸ್ ಮತ್ತು ವೀಡಿಯೋಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದನ್ನು ನೋಡಿದಂತಹ ಅಭಿಮಾನಿಗಳು ಒಂದು ಕ್ಷಣ ದಿಗ್ಭ್ರಮಿತರಾಗಿದ್ದಾರೆ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬ ಮಾದರಿಯಲ್ಲಿ ಅಪ್ಪು ಅವರು ನಮ್ಮ ಜೊತೆ ಶಾರೀರಿಕವಾಗಿ ಇಲ್ಲದೆ ಇದ್ದರೂ ಮಾನಸಿಕವಾಗಿ ಇದ್ದಾರೆ ಜೊತೆಗೆ ನಾವು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿಯೂ ಕೂಡ ಅವರು ಇರುತ್ತಾರೆ ಎಂಬುದಕ್ಕೆ ಇದೇ ನಿದರ್ಶನ ಸಾಕ್ಷಿ ಅಂತ ಹೇಳಬಹುದು. ಅಪ್ಪು ಅವರನ್ನು ನಾವು ಕಳೆದುಕೊಂಡು 9 ತಿಂಗಳಾಗಿದ್ದರು ಕೂಡ ಅಪ್ಪು ಅವರನ್ನು ಮರೆಯುವುದಕ್ಕೆ ಅವರ ನೆನಪಿಲ್ಲದೆ ಒಂದು ಕ್ಷಣವೂ ಕೂಡ ಬದುಕುವುದಕ್ಕೆ ಸಾಧ್ಯವಾಗುತ್ತಿಲ್ಲ. ಲಾಲ್ ಬಾಗ್ ನಲ್ಲಿ ನಡೆಸಲಾಗುತ್ತಿರುವಂತಹ ಅಪ್ಪು ಪುಷ್ಪ ಪ್ರದರ್ಶನ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.