ಅಪ್ಪು ಅವರು ಕನ್ನಡ ಚಲನ ಚಿತ್ರರಂಗಕ್ಕೆ ಪವರ್ ಸ್ಟಾರ್ ಆಗಿದ್ದರು. ರಾಜ್ ಕುಟುಂಬಕ್ಕೆ ಕೀರ್ತಿ ಕಳಸದಂತಿದ್ದರು ಆದರೆ ಕರ್ನಾಟಕದ ಪ್ರತಿ ಮನೆಗೂ ಕೂಡ ಮನೆ ಮಗ ಎಂದು ಅನಿಸಿಕೊಂಡಿದ್ದು ತುಂಬಾ ವಿಶೇಷ. ನಟನೆ ವಿಷಯದಿಂದ ಪುನೀತ್ ರಾಜಕುಮಾರ್ ಅವರಿಗೆ ಬಾಲ್ಯದಿಂದಲೂ ಅಪಾರ ಸಂಖ್ಯೆ ಅಭಿಮಾನಿಗಳು ಕರ್ನಾಟಕದಲ್ಲಿ ಇದ್ದಾರೆ. ಆದರೆ ಬೆಳೆಯುತ್ತಾ ಪುನೀತ್ ರಾಜಕುಮಾರ್ ಅವರು ಅಳವಡಿಸಿಕೊಂಡ ವ್ಯಕ್ತಿತ್ವಕ್ಕೆ ಇಡೀ ಕರ್ನಾಟಕ ಮಾತ್ರವಲ್ಲದೆ ಭಾರತ ಹಾಗೂ ವಿಶ್ವದಾದ್ಯಂತ ಪುನೀತ್ ಅವರಿಗೆ ಅಭಿಮಾನಿಗಳು ಇದ್ದಾರೆ. ಅಪ್ಪು ಇಲ್ಲದೆ ಅನಾಥರಾಗಿರುವ ಅಪ್ಪು ಅಭಿಮಾನಿಗಳು ಅವರಿಲ್ಲದೆ ಎಂಟು ತಿಂಗಳುಗಳನ್ನು ಕಣ್ಣೀರಿನಿಂದಲೇ ಕಳೆದಿದ್ದಾರೆ. ಅವರು ಇನ್ನು ಎಂದಿಗೂ ನಮ್ಮ ಮುಂದೆ ಬರುವುದಿಲ್ಲ ಎನ್ನುವ ಸತ್ಯವನ್ನೇ ನಮ್ಮವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದು ಎಂದಿಗೂ ಆರದ ಗಾಯವಾಗಿ ಎಲ್ಲರ ಹೃದಯವನ್ನು ಸುಡುತ್ತಿರುತ್ತದೆ.
ಅಪ್ಪು ಅವರು ಇಲ್ಲದಿದ್ದರೂ ಸಹ ಅಪ್ಪು ಮೇಲಿನ ಅಭಿಮಾನ ಕನ್ನಡಿಗರಿಗೆ ಕಡಿಮೆಯಾಗಿಲ್ಲ. ಅವರ ಅಂತಿಮ ದರ್ಶನಕ್ಕೆ ಇದುವರೆಗೆ ಭಾರತದ ಯಾವೊಬ್ಬ ಸೆಲೆಬ್ರಿಟಿಗೂ ಕೂಡ ಸೇರದಷ್ಟು ಜನ ಬಂದು ಅಂತಿಮ ದರ್ಶನ ಪಡೆದು ದಾಖಲೆ ಮಾಡಿದ್ದರು. ಈಗಲೂ ಸಹ ಮಳೆ ಬಿಸಿಲಿಗೂ ಲೆಕ್ಕಿಸದೆ ಸಾವಿರಾರು ಕಿಲೋಮೀಟರ್ ದೂರಗಳಿಂದ ಬಂದು ಅಪ್ಪು ಅವರ ಸ-ಮಾ-ಧಿ-ಯನ್ನು ದರ್ಶನ ಮಾಡಿ ಅಭಿಮಾನಿಗಳು ಹೋಗುತ್ತಿದ್ದಾರೆ. ಅಪ್ಪು ಅವರು ಹೋದ ದಿನದಿಂದಲೂ ಕೂಡ ಕರ್ನಾಟಕದ ಒಂದಲ್ಲ ಒಂದು ಗ್ರಾಮದಲ್ಲಿ ಅಪ್ಪು ಹೆಸರಿನಲ್ಲಿ ಏನಾದರೂ ವಿಶೇಷ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಅವರ ಪರಮಾತ್ಮ ಸಿನಿಮಾದಲ್ಲಿ ಅವರೇ ಹೇಳಿರುವ ಒಂದು ಸಾಲಿನಂತೆ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಮಾತು ಈಗ ಅವರ ವಿಷಯಕ್ಕೆ ಅನ್ವಯಿಸುತ್ತಿದೆ ಎನ್ನಬಹುದು. ಅಪ್ಪು ಇಲ್ಲದಿದ್ದರೂ ಕೂಡ ಅವರ ಮೇಲಿನ ಅಭಿಮಾನವನ್ನು ಅಭಿಮಾನಿಗಳು ಮೆರೆಯುತ್ತಿದ್ದಾರೆ.
ಅಪ್ಪು ಅವರ ಹೆಸರಿನಲ್ಲಿ ಈಗಾಗಲೇ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಪ್ರಯುಕ್ತ ಅನ್ನದಾನ ರಕ್ತದಾನ ನೇತ್ರದಾನ ಹಾಗೂ ಅಂಗಾಂಗ ದಾನ ಈ ರೀತಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿದ್ದಾರೆ. ಅದರಲ್ಲೂ ನೇತ್ರದಾನದ ವಿಷಯದಲ್ಲಿ ಅಪ್ಪು ಅವರು ನೇತ್ರದಾನ ಮಾಡಿದ್ದರಿಂದ ಅಭಿಮಾನಿಗಳು ಕೂಡ ಈ ಹಿಂದೆ ಎಂದಿಗೂ ದಾಖಲಾಗದಷ್ಟು ಸಂಖ್ಯೆಯಲ್ಲಿ ನೇತ್ರದಾನಕ್ಕೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ ಅದು ಕೂಡ ಅಪ್ಪು ಅವರ ಮಾರ್ಗದರ್ಶನದಿಂದ ಎನ್ನಬಹುದು. ಅದಲ್ಲದೆ ಅಪ್ಪು ಅವರ ಹೆಸರಿನಲ್ಲಿ ಅವರಂತೆ ಹಲವರು ಸಮಾಜ ಸೇವೆ ಮಾಡಲು ಬಡವರಿಗೆ ದಾನ ಧರ್ಮ ಮಾಡಲು ಮತ್ತು ನೊಂದವರ ಕಣ್ಣೀರು ಒರೆಸುವ ಕಾರ್ಯಗಳನ್ನು ತಮ್ಮ ಕೈಯಿಂದ ಆದಷ್ಟು ಮಾಡುತ್ತಿದ್ದಾರೆ. ಹೀಗೆ ಅತಿ ಕಡಿಮೆ ವಯಸ್ಸಿಗೆ ನಮ್ಮನ್ನೆಲ್ಲ ಅಪ್ಪು ಅಗಲಿ ಹೋದರು ಎಲ್ಲರಿಗೂ ಬದುಕುವ ರೀತಿಯನ್ನು ಶೈಲಿಯನ್ನು ತಿದ್ದಿ ಹೇಳಿಕೊಟ್ಟು ಹೋದರು. ಈಗ ಅಭಿಮಾನಿಗಳು ಅದೇ ಹಾದಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ.
ಇಲ್ಲಿಗೆ ಮುಗಿಯದ ಅಪ್ಪು ಅಭಿಮಾನ ಈಗ ಅಪ್ಪು ಅವರ ಸ್ಮಾರಕ ನಿರ್ಮಾಣದ ತನಕ ಮುಂದುವರಿದಿದೆ. ಬೆಂಗಳೂರಿನ ವಿಜಯನಗರ ಸಮೀಪದ ಹೊಸಪೇಟೆ ಗ್ರಾಮ ಅಪ್ಪು ಅವರ ಫೇವರೆಟ್ ಪ್ಲೇಸ್ ಆಗಿತ್ತು, ಹೊಸಪೇಟೆಯಲ್ಲಿ ಅಪ್ಪು ಅವರ 70.4 ಅಡಿ ಎತ್ತರದ ಸ್ಮಾರಕವನ್ನು ಅಭಿಮಾನಿಗಳು ನಿರ್ಮಿಸಿದ್ದರು ಈಗ ಅದೇ ರೀತಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಳಗೆರೆ ಗ್ರಾಮದಲ್ಲೂ ಕೂಡ ಅಪ್ಪು ಅವರ ಸ್ಮಾರಕವನ್ನು ನಿರ್ಮಾಣ ಮಾಡಿ ಸುತ್ತಲು ಕಾರಂಜಿ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. ಇದೇ ರೀತಿ ಇನ್ನೂ ಹಲವಾರು ಊರುಗಳಲ್ಲಿ ರಸ್ತೆಗಳಿಗೆ ಮತ್ತು ಸರ್ಕಲ್ಗಳಿಗೆ ಅಪ್ಪು ಅವರ ಹೆಸರನ್ನು ಇಟ್ಟು ಗೌರವಿಸಲಾಗುತ್ತಿದೆ. ಅಭಿಮಾನಿಗಳ ಈ ರೀತಿ ಕೆಲಸಗಳಿಂದ ಅಪ್ಪು ಅವರ ಹೆಸರು ವಿಶ್ವಮಟ್ಟದಲ್ಲಿ ದಾಖಲೆ ಮಾಡುತ್ತಿದೆ. ಅಪ್ಪು ಅವರ ಪ್ರತಿಮೆ ಪ್ರತಿ ಜಿಲ್ಲೆಯಲ್ಲು ನಿರ್ಮಾಣ ಆಗಬೇಕು ಎಂಬುದು ನಮ್ಮ ಆಶಾಯ ಇದಕ್ಕೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ.