ಅಕ್ಟೋಬರ್ 29, 2021 ಕರ್ನಾಟಕದ ಕಣ್ಮಣಿಯೊಂದು ಕಳೆದು ಹೋದ ದಿನ. ಕನ್ನಡ ಚಲನಚಿತ್ರರಂಗದ ಪವರ್ ಸ್ಟಾರ್, ದೊಡ್ಮನೆಯ ರಾಜಕುಮಾರ, ಅಭಿಮಾನಿಗಳ ಪಾಲಿನ ದೇವರು, ರಾಜ್ ಕುಟುಂಬದ ಕೀರ್ತಿ ಕಲಶ ಎಲ್ಲಕ್ಕಿಂತ ಹೆಚ್ಚಾಗಿ ನಗುವಿನ ಒಡೆಯ ಅಂದು ಹೃದಯ ಬಡಿತ ನಿಲ್ಲಿಸಿದ ದಿನ. ಮಕ್ಕಳ ಪ್ರೀತಿಯ ಅಪ್ಪು, ದೊಡ್ಡವರ ಪಾಲಿನ ಪುನೀತ್, ಯೂತ್‌ಗಳ ಸ್ಟೈಲ್ ಐಕಾನ್ ರಾಜರತ್ನ ಅಂದು ಮಣ್ಣಲ್ಲಿ ಮಣ್ಣಾಗಿ ಹೋದರು. ಇದುವರೆಗೂ ಕಾಣಿಸಿಕೊಳ್ಳುತ್ತಿದ್ದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಕೂಡ ನಗುಮುಖದೊಂದಿಗೆ ಎಲ್ಲರ ಜೊತೆ ಮಾತನಾಡುತ್ತ ಕಾಲ ಕಳೆಯುತ್ತಿದ್ದ ಈ ಅರಸ ಎಲ್ಲರ ಮನಸ್ಸನ್ನು ದುಃಖದ ಕಡಲಲ್ಲಿ ಮುಳುಗಿಸಿ ದೇವರ ಕೈ ಹಿಡಿದು ಹೋದರು. ಅಂದಿನಿಂದ ಇಂದಿಗೂ ಕೂಡ ಕರ್ನಾಟಕದ ಪಾಲಿಗೆ ಬೆಳಕೊಂದು ಆರಿದ ಭಾವ. ಅಪ್ಪು ಅವರು ಇಲ್ಲದೆ ಎಂಟು ತಿಂಗಳುಗಳು ಕಳೆದರೂ ಕೂಡ ಆ ನೋವು ಇನ್ನು ಕಡಿಮೆಯಾಗಿಲ್ಲ.
ಅಭಿಮಾನಿಗಳ ದುಃಖವಂತೂ ಹೇಳತೀರದು. ಅವರ ಸಾವಿನ ಬಳಿಕ ಪ್ರತಿದಿನವೂ ಕೂಡ ಅಪ್ಪು ಅವರನ್ನು ನೆನೆಯದ ಜೀವ ಈ ಕರ್ನಾಟಕದಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಈ ಅಭಿಮಾನಕ್ಕೆ ಕಾರಣ ಅಪ್ಪು ಅವರು ಒಂದು ನಟ ಎನ್ನುವುದಕ್ಕಿಂತ ಮಿಗಿಲಾಗಿ ಅಪ್ಪು ಅವರು ಒಬ್ಬ ಸಮಾಜ ಸೇವಕ ಎನ್ನುವುದು. ಸಿನಿಮಾದಿಂದ ಜಾಹೀರಾತುಗಳ ನಟನೆಯಿಂದ ಹಾಡುಗಾರಿಕೆಯಿಂದ ರಿಯಲ್ ಎಸ್ಟೇಟ್ ಮತ್ತು ಸಿನಿಮಾ ನಿರ್ಮಾಣ ಹೋಟೆಲ್ ಮುಂತಾದ ಎಲ್ಲಾ ಬಿಸಿನೆಸ್ ಇಂದ ಅಪ್ಪು ಅವರು ಕೋಟ್ಯಾಂತರ ರೂಗಳನ್ನು ಗಳಿಸುತ್ತಿದ್ದರು. ಆದರೆ ತಾವು ಗಳಿಸಿದ ಎಲ್ಲಾ ಹಣದಿಂದ ಅವರು ಮತ್ತಷ್ಟು ಶ್ರೀಮಂತರಾಗಲು ಯೋಚನೆ ಮಾಡಲಿಲ್ಲ ಬದಲಿಗೆ ಕೆರೆ ನೀರನ್ನು ಕೆರೆಗೆ ಚೆಲ್ಲುವಂತೆ ಅಭಿಮಾನಿಗಳ ಅಭಿಮಾನದಿಂದ ಪಡೆದ ಆ ಹಣದಲ್ಲಿ ಅವರ ಸೇವೆಗಾಗಿಯೇ ಒಂದಿಷ್ಟು ಮೊತ್ತವನ್ನು ಮೀಸಲಿಟ್ಟರು.
ಅವರು ವೃದ್ಧಾಶ್ರಮ ಅನಾಥಾಶ್ರಮ ಗೋಶಾಲೆ ಮತ್ತು ಹೆಣ್ಣು ಮಕ್ಕಳಿಗಾಗಿ ಶಕ್ತಿ ಧಾಮ ಸೇರಿದಂತೆ ಹಲವಾರು ಟ್ರಸ್ಟ್ ಗಳಿಗೆ ಹಣವನ್ನು ದೇಣಿಗೆ ರೂಪದಲ್ಲಿ ನೀಡುತ್ತಿದ್ದರು. ಪುನೀತ್ ಅವರು ನೊಂದವರ ಪಾಲಿನ ಕಣ್ಣೀರುವ ಒರೆಸುವ ದೇವರವಾಗಿದ್ದರು. ಹೀಗಾಗಿ ಅವರ ಕಚೇರಿಯ ಬಳಿ ಸಾವಿರದ ಜನರು ಸಹಾಯಕ್ಕಾಗಿ ಬಂದು ನಿಲ್ಲುತ್ತಿದ್ದರು ಆದರೆ ಯಾರೊಬ್ಬರನ್ನೂ ಕೂಡ ಖಾಲಿ ಕೈಯಲ್ಲಿ ಕಳುಹಿಸದ ಈ ಸಾಹುಕಾರ ಪ್ರತಿಯೊಬ್ಬರಿಗೂ ಕೂಡ ತಮ್ಮಿಂದ ಆದಷ್ಟು ಸೇವೆಯನ್ನು ಮಾಡುತ್ತಿದ್ದರು. ಇಷ್ಟೆಲ್ಲಾ ಜನರಿಗಾಗಿ ಮಾಡುತ್ತಿದ್ದ ಇವರನ್ನು ಕಳೆದುಕೊಂಡ ಅಭಿಮಾನಿಗಳ ದುಃಖ ಎಷ್ಟಿರಬಹುದು ಎನ್ನುವುದನ್ನು ಅಂದಾಜಿಸಲು ಕೂಡ ಕಷ್ಟ. ಅವರು ಅಭಿಮಾನಿಗಳ ಪಾಲಿಗೆ ಮಾತ್ರವಲ್ಲದೆ ಕುಟುಂಬಸ್ಥರ ಜೊತೆಗೂ ಅಷ್ಟೇ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡಿದ್ದರು. ಶಿವಣ್ಣ ರಾಘಣ್ಣ ಮತ್ತು ಸಹೋದರಿಯರು ಅಪ್ಪು ಎಂದರೆ ಪ್ರಾಣ ಬಿಡುವಷ್ಟು ಪ್ರೀತಿಸುತ್ತಿದ್ದರು. ಇನ್ನು ಅಪ್ಪು ಪತ್ನಿ ಅಶ್ವಿನಿ ಇಬ್ಬರು ಹೆಣ್ಣು ಮಕ್ಕಳ ಪಾಲಿಗಂತೂ ಪುನೀತ್ ಅವರೇ ಸರ್ವಸ್ವ ಆಗಿದ್ದರು.
ಈಗ ಅಪ್ಪು ಅವರು ಇಲ್ಲದ ದುಃಖ ಅವರ ಕುಟುಂಬದ ಎಲ್ಲಾ ಸದಸ್ಯರ ಮುಖದಲ್ಲೂ ಕಾಣುತ್ತಿದೆ. ಅದರಲ್ಲೂ ಅಶ್ವಿನಿ ಅವರು ಅಪ್ಪು ಅವರನ್ನು ಕಳೆದುಕೊಂಡ ಬಳಿಕ ಎಲ್ಲಿಯೂ ಕೂಡ ಒಂದು ಮಾತು ಸಹ ಆಡಿಲ್ಲ. ಮೌನವಾಗಿ ಎಲ್ಲ ದುಃಖವನ್ನು ಎದೆಯಲ್ಲಿ ಬಚ್ಚಿಟ್ಟುಕೊಂಡು ಪುನೀತ್ ಅವರ ಎಲ್ಲಾ ಕನಸು ಹಾಗೂ ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ಹಾಕಿಕೊಂಡಿರುವ ಇವರು ಪುನೀತ್ ಅವರ ಕಚೇರಿಯಲ್ಲಿ ಕುಳಿತು ಮುಂದಿನ ಕೆಲಸಗಳ ಕಡೆ ಗಮನ ಕೊಡುತ್ತಿದ್ದಾರೆ. ಆದರೆ ಇತ್ತೀಚಿಗೆ ಅಶ್ವಿನಿ ಅವರ ಮಗುವೊಂದನ್ನು ಎತ್ತಿಕೊಂಡು ಮುದ್ದಿಸುತ್ತಿರುವ ಹಾಗೂ ಅದರಲ್ಲಿ ನಗುಮುಖದಿಂದ ಕಾಣಿಸಿಕೊಂಡಿರುವ ಫೋಟೋ ಒಂದು ವೈರಲ್ ಆಗುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ಸಮಾಧಾನ ಕೂಡ ಪಟ್ಟುಕೊಳ್ಳುತ್ತಿದ್ದಾರೆ ಇದು ಅಶ್ವಿನಿ ಅವರ ಆಫೀಸಿನ ಬಳಿ ಸಹಾಯಕ್ಕೆಂದು ಬಂದಿದ್ದ ಒಬ್ಬ ತಾಯಿಯನ್ನು ನೋಡಿ ಅಶ್ವಿನಿ ಅವರು ಆ ಮಗುವನ್ನು ಎತ್ತಿಕೊಂಡು ಮುದ್ದಾಡಿಸುತ್ತಿರುವ ಸಮಯದಲ್ಲಿ ತೆಗೆದ ಫೋಟೋ ಆಗಿದೆ.