ಅಪ್ಪು ಅಭಿಮಾನಿಗಳಿಂದ ಬಂತು ದರ್ಶನ್ ಗೆ ಖಡಕ್ ಎಚ್ಚರಿಕೆ
ಈ ಫ್ಯಾನ್ ವಾರ್ ಗಳಿಗೆ ಕೊನೆ ಎಂಬುದೇ ಇಲ್ಲವಂತಾಗಿದೆ ಹೌದು ದರ್ಶನ್(Darshan) ಮೇಲೆ ಚಪ್ಪಲಿ ಎಸೆತ ಆದ ಪ್ರಕರಣದ ನಂತರ ದಿನದಿಂದ ದಿನಕ್ಕೆ ಫ್ಯಾನ್ ವಾರ್ ಗಳು ಮಿತಿಮೀರಿ ನಡೆಯುತ್ತಿದೆ. ಅದರಲ್ಲಿಯೂ ಕೂಡ ದರ್ಶನ್ ಹುಬ್ಬಳ್ಳಿಗೆ ಹೋಗಿ ಬಂದ ಮೇಲೆ ಅಂತೂ ಇದರ ತೀವ್ರತೆ ಹೆಚ್ಚಾಗಿದೆ. ಹೌದು ಹೊಸಪೇಟೆಯಲ್ಲಿ ನಟ ದರ್ಶನ್ ಅವರ ಮೇಲೆ ಕಿಡಿಗೇಡಿ ಒಬ್ಬರು ಚಪ್ಪಲಿಯನ್ನು ಎಸೆಯುತ್ತಾರೆ ಇದರಿಂದ ದರ್ಶನ್ ಅಭಿಮಾನಿಗಳು ಅಪ್ಪು(Appu) ಅಭಿಮಾನಿಗಳ ಮೇಲೆ ಬಹಳಷ್ಟು ಆ.ಕ್ರೋ.ಶ.ವನ್ನು ವ್ಯಕ್ತಪಡಿಸುತ್ತಾರೆ. ಆದರೆ ಅಪ್ಪು ಅಭಿಮಾನಿಗಳು ನಾವು ಇಂತಹ ಹೀನ ಕೃತ್ಯವನ್ನು ಮಾಡಿಲ್ಲ ಬದಲಾಗಿ ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡೋಣ ಅಂತ ಹೇಳುತ್ತಾರೆ.
ಆದರೂ ಕೂಡ ಮನನೊಂದಂತಹ ದರ್ಶನ್ ಅಭಿಮಾನಿಗಳು ಅಪ್ಪು ಅಭಿಮಾನಿಗಳ ವಿರುದ್ಧ ಹಾಗೂ ರಾಜ್ಯ ವಂಶದ ಬಗ್ಗೆ ಅವಹೇಳನಕಾರಿ ಪೋಸ್ಟರ್ ಗಳನ್ನು ಮತ್ತು ಹವ್ಯಾಚ್ಯ ಶಬ್ದಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಬಳಕೆ ಮಾಡುತ್ತಿದ್ದಾರೆ ಎಂಬುದು ಅಪ್ಪು ಅಭಿಮಾನಿಗಳ ವಾದವಾಗಿದೆ. ಹಾಗಾಗಿ ದಿನದಿಂದ ದಿನಕ್ಕೆ ಈ ಒಂದು ಪ್ರಕರಣ ಹೆಚ್ಚಾಗುತ್ತಲೇ ಇರುವುದರಿಂದ ಇದೀಗ ಕರ್ನಾಟಕದಾದ್ಯಂತ ಡಾ. ರಾಜಕುಮಾರ್(Dr.RajKumar) ಅಭಿಮಾನಿಗಳ ಸಂಘ ಹಾಗೂ ಶಿವರಾಜಕುಮಾರ್(Shiva Rajkumar) ಸೇನೆ, ರಾಘವೇಂದ್ರ ರಾಜಕುಮಾರ್ ಅಭಿಮಾನಿ ಬಳಗ ಹಾಗೂ ಅಪ್ಪು(Puneeth Rajkumar) ಅಭಿಮಾನಿ ಬಳಗ ಈ ನಾಲ್ವರು ಅಭಿಮಾನಿ ಸಂಘಗಳು ಒಟ್ಟಾಗಿ ಬೆಂಗಳೂರಿನ ಗಾಂಧಿನಗರದಲ್ಲಿ ಇರುವಂತಹ ಫಿಲಂ ಚೇಂಬರ್ ಬಳಿ ನೆನ್ನೆ ಅಂದರೆ ಡಿಸೆಂಬರ್ 29ನೇ ತಾರೀಕು ಬೃಹತ್ ಪ್ರತಿಭಟನೆಯನ್ನು ಮಾಡಿದ್ದಾರೆ.
ಅಷ್ಟೇ ಅಲ್ಲದೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದರ್ಶನ್ ಅವರ ವಿರುದ್ಧ ದೂರನ್ನು ಸಲ್ಲಿಸಿದರೆ ದರ್ಶನ್ ಅಭಿಮಾನಿಗಳು ರಾಜ ವಂಶದ ಬಗ್ಗೆ ಅವಹೇಳನಕಾರಿ ಪೋಸ್ಟರ್ ಗಳನ್ನೂ ಹಾಕಿದ್ದಾರೆ. ದರ್ಶನ್ ಕೂಡ ಇದಕ್ಕೆ ಮರು ಪ್ರತಿಕ್ರಿಯೆ ನೀಡುತ್ತಿಲ್ಲ ತಮ್ಮ ಅಭಿಮಾನಿಗಳಿಗೆ ಅವರು ಬುದ್ಧಿವಾದವನ್ನು ಹೇಳಬೇಕಿತ್ತು ಆದರೂ ಕೂಡ ಅವರು ಆ ಕೆಲಸವನ್ನು ಮಾಡಿಲ್ಲ. ಬದಲಾಗಿ ಹುಬ್ಬಳ್ಳಿಯಲ್ಲಿ ಶರ್ಟ್ ಕಲರ್ ಮೇಲೆ ಎತ್ತಿ ನಮ್ಮನ್ನು ನೋಡಿ ಉರಿದುಕೊಳ್ಳುವವರಿಗೆ ಇನ್ನಷ್ಟು ಉರಿಸೋಣ ಎಂದು ಪ್ರಚೋದನಾತ್ಮಕ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಇದರಿಂದ ಅಭಿಮಾನಿಗಳ ವರ್ತನೆ ಇನ್ನಷ್ಟು ಹೆಚ್ಚಾಗಿದೆ ಇವೆಲ್ಲದಕ್ಕೂ ನೀವು ಕಡಿವಾಣ ಹಾಕಲೇಬೇಕು ಇಲ್ಲವಾದರೆ ನಾವು ಇನ್ನಷ್ಟು ಉಗ್ರ ಹೋರಾಟ ಮತ್ತು ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅಷ್ಟೇ ಅಲ್ಲದೆ 26ನೇ ತಾರೀಕಿನಂದು ಕ್ರಾಂತಿ ಸಿನಿಮಾ ಬಿಡುಗಡೆ ಮಾಡುತ್ತೇವೆ ಅಂತ ದರ್ಶನ್ ಹಾಗೂ ಕ್ರಾಂತಿ ಸಿನಿಮಾದವರು ಹೇಳಿಕೊಂಡಿದ್ದಾರೆ. ನೀವು ಅಪ್ಪು ಅಭಿಮಾನಿಗಳಿಗೆ ಹೀಗೆಯೇ ನಿಂದಿಸುತ್ತಾ ಬಂದರೆ ಅದೇಗೆ ಸಿನಿಮಾವನ್ನು ರಿಲೀಸ್ ಮಾಡುತ್ತಿರ ನಾವು ನೋಡೇ ಬಿಡುತ್ತೇವೆ. ಕ್ರಾಂತಿ(Kranti) ಸಿನಿಮಾ ಬಿಡುಗಡೆಯಾಗುವ ದಿನಾಂಕದಂದು ಅಂದರೆ ಜನವರಿ 26ನೇ ತಾರೀಕಿನಂದು ಬೆಂಗಳೂರನ್ನು ಬಂದ್ ಮಾಡಿಸ್ತೀವಿ, ಎಲ್ಲಾ ಥಿಯೇಟರ್ ಗಳನ್ನು ಮುಚ್ಚಿಸುತ್ತೇವೆ ಈ ಸಿನಿಮಾವನ್ನು ಹೇಗೆ ರಿಲೀಸ್ ಮಾಡಿಸುತ್ತಿರೋ ನಾವು ನೋಡೇ ಬಿಡುತ್ತೇವೆ ಎಂದು ದರ್ಶನ್ ಅವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ನೀವು ನಿಮ್ಮ ಅಭಿಮಾನಿಗಳಿಗೆ ಕರೆದು ಬುದ್ಧಿವಾದವನ್ನು ಹೇಳಬೇಕು, ಈ ರೀತಿ ಪ್ರಚೋದನಾತ್ಮಕ ಹೇಳಿಕೆಯನ್ನು ಎಲ್ಲೂ ಕೂಡ ನೀಡಬಾರದು, ಇದು ನಿಮಗೆ ಕೊನೆ ಅವಕಾಶ ನೀವು ಇದೇ ರೀತಿ ಮುಂದುವರಿಸಿದರೆ ನಮ್ಮ ಇನ್ನೊಂದು ವರಸೆಯನ್ನು ನೋಡಬೇಕಾಗುತ್ತದೆ ಎಂದು ಅಪ್ಪು ಅಭಿಮಾನಿಗಳು ಸಂಜೆ ಮತ್ತು ಅವರ ಅಭಿಮಾನಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಕೇವಲ ಈ ಇದಿಷ್ಟು ಮಾತ್ರವಲ್ಲದೆ ದರ್ಶನ್ ಅವರ ಸುಮಾರು 80 ಜನ ಅಭಿಮಾನಿಗಳ ಮೇಲೆ ದೂರು ದಾಖಲಿಸಿದ್ದು ಸಾವಿರದ ಇಪ್ಪತ್ತು ಕೇಸ್ ಗಳನ್ನು ಅವರ ಮೇಲೆ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯಾರು ಅವಹೇಳನಕಾರಿ ಪೋಸ್ಟರ್ ಹಾಕಿದ್ದರು ಅವರ ಅಕೌಂಟ್ ಗಳನ್ನು ಬ್ಯಾನ್ ಮಾಡಿಸಿದ್ದಾರೆ. ಒಂದು ವೇಳೆ ಬೆಂಗಳೂರು ಬಂದ್ ಮಾಡಿಸಿದರೆ ಕ್ರಾಂತಿ ಸಿನಿಮಾದ ಗತಿ ಏನು ಎಂಬುವುದೇ ಇದೀಗ ದರ್ಸನ್ ಅವರ ಅಭಿಮಾನಿಗಳ ದೊಡ್ಡ ಪ್ರಶ್ನೆಯಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.