ಅಪ್ಪು ಕರ್ನಾಟಕ ಕಂಡ ಶ್ರೇಷ್ಠ ವ್ಯಕ್ತಿತ್ವ, ಅಭಿನಯದಲ್ಲೂ ಬದುಕಿನಲ್ಲೂ ಈತನಿಗೆ ಹೋಲುವ, ಮತ್ತೊಬ್ಬ ಅಪ್ಪು ರೀತಿಯ ಒಬ್ಬ ನಟನಾಗಲಿ ಅಥವಾ ಅಪ್ಪು ವ್ಯಕ್ತಿತ್ವ ಮತ್ತೊಬ್ಬ ಮನುಷ್ಯನನ್ನೇ ಆಗಲಿ ನಾವು ಕಾಣಲಾರೆವು ಎನಿಸುತ್ತದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅಪ್ಪು ಅವರಿಗೆ ಪವರ್ ಸ್ಟಾರ್ ಎಂದು ಬಿರುದು ಕೊಟ್ಟಿದ್ದಾರೆ. ಈ ಟೈಟಲ್ ಗೆ ತಕ್ಕ ಹಾಗೆ ಪುನೀತ್ ಅವರ ಡ್ಯಾನ್ಸ್ ಮತ್ತು ಅಷ್ಟು ಎನರ್ಜಿ ಇಂದ ಅವರು ಮಾಡುತ್ತಿದ್ದ ಸ್ಟಂಟ್ಸ್ ಅಪ್ಪು ಅವರು ಎಂತಹ ಸಾಹಸಿ ಎನ್ನುವುದನ್ನು ನಿರೂಪಿಸುತ್ತಿತ್ತು.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ವರ್ಕೌಟ್ ಮಾಡಲು ನಿಂತರೆ, ಗಂಟೆ ಗಂಟಲೆ ಬೆವರಿಳಿಸುತ್ತಿದ್ದ ಇವರು ಈ ರೀತಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಇದು ಅಪ್ಪು ಅವರ ಒಂದು ರೂಪವಾದರೆ ಅಪ್ಪು ಅವರು ಸಮಾಜಕ್ಕೆ ತೋರಿಸದ ಇನ್ನೊಂದು ರೂಪವೇ ಇತ್ತು. ಆ ಒಳ್ಳೆಯ ಗುಣಗಳು ಆದರ್ಶಗಳು ಅವರ ಸಾವಿನ ನಂತರ ನಮಗೆ ತಿಳಿದಿದ್ದು ನಿಜಕ್ಕೂ ಇನ್ನಷ್ಟು ದುಃಖವನ್ನು ತರುತ್ತದೆ.
ಅವರು ಸಮಾಜ ಮುಖಿಯಾಗಿ ಬದುಕಿದವರು. ಬದುಕಿನ ಒಂದು ಘಟ್ಟದ ನಂತರ ಅವರು ಆಯ್ದುಕೊಳ್ಳುತ್ತಿದ್ದ ಸಿನಿಮಾ ಕಥೆಗಳು ಕೂಡ ಅದೇ ರೀತಿ ಇರುತ್ತಿದ್ದವು, ಪ್ರತಿಯೊಂದು ಸಿನಿಮಾದಲ್ಲಿ ಕೂಡ ತಮ್ಮ ಅಭಿನಯದಿಂದ ಜನರನ್ನು ಮನೋರಂಜನೆ ಪಡಿಸುವುದರ ಜೊತೆ ಸಮಾಜವನ್ನು ಎಚ್ಚರಿಸುವ ಸಂದೇಶ ಇರುವ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದರು. ಹಾಗೂ ತಾವು ತಿಳಿದ ಹೆಚ್ಚಿನ ಪಾಲು ಹಣವನ್ನು ಸಮಾಜಕ್ಕಾಗಿ ಖರ್ಚು ಮಾಡುತ್ತಿದ್ದರು.
ಅದೆಷ್ಟೋ ಶಾಲೆಗಳು ಅನಾಥಾಶ್ರಮಗಳು ವೃದ್ಧಾಶ್ರಮಗಳು ಅಪ್ಪು ಅವರಿಂದ ದೇಣಿಗೆ ಪಡೆದಿದೆ. ಮತ್ತು ಮೈಸೂರಿನ ಶಕ್ತಿ ಧಾಮಕ್ಕೆ ಠೇವಣಿ ಮಾಡಿ ಕಷ್ಟದಲ್ಲಿರುವ ಸಾವಿರಾರು ಹೆಣ್ಣು ಮಕ್ಕಳ ವಿದ್ಯಾಭ್ಯಾಸ ವಸತಿ ಊಟ ಮುಂತಾದವುಗಳಿಗಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅಭಿನಯದ ವಿಷಯದಲ್ಲಿ ಅಪ್ಪು ಅವರನ್ನು ಮೀರಿಸುವವರು ಯಾರು ಇಲ್ಲವೇ ಇಲ್ಲ. ಆಡುವ ವಯಸ್ಸಿನಲ್ಲಿ ರಾಷ್ಟ್ರಪತಿ ಅವಾರ್ಡ್ ಪಡೆದು ಬಂದ ಕರ್ನಾಟಕದ ಬಾಲ ಪ್ರತಿಭೆ ಅಪ್ಪು.
ಇಲ್ಲಿಯವರೆಗೆ ಅಪ್ಪು ಅವರಿಗೆ ಅಭಿಮಾನಿಗಳು ಮಾತ್ರ ಇದ್ದರು, ಆದರೆ ಅಪ್ಪು ಅವರ ಅಗಲಿಕೆ ನಂತರ ಅವರನ್ನು ದೇವರಂತೆ ಕಂಡು ಅವರನ್ನು ಆದರ್ಶವಾಗಿ ಇಟ್ಟುಕೊಂಡು ಬದುಕುತ್ತಿರುವ ಸಾವಿರಾರು ಅನುಯಾಯಿಗಳು ಹುಟ್ಟುಕೊಂಡಿದ್ದಾರೆ. ಇದೆಲ್ಲದರ ಜೊತೆಗೆ ಅಪ್ಪು ಅವರಿಗೆ ಕ್ರೇಜ್ ಒಂದು ಇತ್ತು, ಅವರಿಗೆ ಕಾರುಗಳ ಬಗ್ಗೆ ವಿಶೇಷ ಆಸಕ್ತಿ ಇತ್ತು.
ಅಪ್ಪು ಅವರ ಬಳಿ ಆಡಿ, ರೇಂಜ್ ರೋವರ್, ಲ್ಯಾಂಬರ್ಗಿನಿ ಸೇರಿದಂತೆ ಹಲವು ಕಂಪನಿಗಳ ದುಬಾರಿ ಬೆಲೆಯ ಕಾರುಗಳು ಇದ್ದವು ಇದರಲ್ಲಿ ವಿದೇಶಿ ಕಾರುಗಳು ಕೂಡ ಸೇರಿದ್ದವು. ಇವರ ಬಳಿ ನೀಲಿ ಬಣ್ಣದ ಲ್ಯಾಂಬೋರ್ಗಿನಿ ಕಾರು ಇತ್ತು. ಅದನ್ನು ಅವರು ಮಹಿಳಾ ದಿನದ ವಿಶೇಷತೆಗಾಗಿ ಹೆಂಡತಿಗೆ ಗಿಫ್ಟ್ ನೀಡಿದ್ದರು, ಆದರೆ ಆ ಕಾರಿನಲ್ಲಿ ಹೆಚ್ಚು ಅವರೇ ಆಚೆ ಹೋಗುತ್ತಿದ್ದರು. ಇದು ಅವರ ಫೇವರೆಟ್ ಕಾರು ಆಗಿತ್ತು.
ಇದೀಗ ಅಪ್ಪು ಅವರು ಇಲ್ಲದ ಕಾರಣ ಹಲವು ದಿನಗಳವರೆಗೆ ಅದು ನಿಂತಲ್ಲಿಯೇ ನಿಂತಿತ್ತು. ಇದೀಗ ಅಶ್ವಿನಿ ಅವರು ಆ ಕಾರನ್ನು ಅವರ ಸಹೋದರನಿಗೆ ನೀಡಿದ್ದಾರೆ. ಅವರ ಸಹೋದರ ದುಬೈನಲ್ಲಿ ಇರುವ ಕಾರಣ ಆ ಕಾರನ್ನು ಅಲ್ಲಿಗೆ ಕಳುಹಿಸಿ ಕೊಟ್ಟಿದ್ದಾರೆ. ಅಪ್ಪು ಅವರೂ ಅಗಲಿ ಹತ್ತು ತಿಂಗಳುಗಳು ಕಳೆದಿದೆ. ಆದರೆ ಅಪ್ಪು ಇಲ್ಲ ಎನ್ನುವುದನ್ನು ಇನ್ನೂ ಕೂಡ ನಂಬಲು ಕರ್ನಾಟಕದ ಜನತೆಗೆ ಸಾಧ್ಯವಾಗುತ್ತಿಲ್ಲ.