Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಇದ್ದಕ್ಕಿದ್ದ ಹಾಗೇ ಅಪ್ಪು ಅವರ ಮನೆ ತೊರೆದ ಗನ್ ಮ್ಯಾನ್ ಚಲಪತಿ ಕಾರಣವೇನು ಗೊತ್ತಾ.?

Posted on June 18, 2022 By Kannada Trend News No Comments on ಇದ್ದಕ್ಕಿದ್ದ ಹಾಗೇ ಅಪ್ಪು ಅವರ ಮನೆ ತೊರೆದ ಗನ್ ಮ್ಯಾನ್ ಚಲಪತಿ ಕಾರಣವೇನು ಗೊತ್ತಾ.?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಡೀ ಕರ್ನಾಟಕಕ್ಕೆ ಹೆಮ್ಮೆಯ ಪುತ್ರ ಅಪ್ಪು ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ವಿಪರೀತ ಪ್ರೀತಿ ಹಾಗೂ ಅಭಿಮಾನ ಅಪ್ಪು ಅವರು ಒಂದು ಆದರ್ಶ ವ್ಯಕ್ತಿಯಂತೆ ಬದುಕಿ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಜವಾದ ಶ್ರೀಮಂತ ಎಂದೇ ಹೇಳಬಹುದು. ಅಪ್ಪು ಅವರು ತುಂಬಾ ಶಿಸ್ತುಬದ್ಧ ಜೀವನ ನಡೆಸುತ್ತಿದ್ದರು ಅವರ ಊಟ ತಿಂಡಿ ಡಯಟ್ ನಿದ್ದೆ ಎಲ್ಲವೂ ಕೂಡ ಸಮಯಕ್ಕೆ ಸರಿಯಾಗಿ ಪಾಲಿಸುತ್ತಿದ್ದರು. ಆದರೂ ಕೂಡ ಇಂತಹ ಗಟ್ಟಿಮುಟ್ಟಾಗಿದ್ದ ವ್ಯಕ್ತಿ ಸಾವಿನ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಷ್ಟೋ ಜನರು ಮೊದಲಿಗೆ ಒಂದೆರಡು ಕ್ಷಣ ಖಂಡಿತವಾಗಿಯೂ ಅಪ್ಪು ಅವರಿಗೆ ನಿಜವಾಗಲೂ ಹೃ’ದ’ಯಾ’ಘಾ’ತವಾಗಿದೆಯೇ ಎಂದು ಅನುಮಾನ ಪಟ್ಟರು. ಇಡೀ ಸಮಾಜಕ್ಕೆ ಮಾದರಿಯಾಗಿದ್ದ ಹಾಗೂ ಕರ್ನಾಟಕದ ಜನತೆಯ ಸೇವೆಯನ್ನು ಯಾರಿಗೂ ತಿಳಿಯದಂತೆ ಮಾಡುತ್ತಿದ್ದರು ಪುನೀತ್ ರಾಜಕುಮಾರ್ ಅವರು.

ಈಗ ಅಪ್ಪು ಅವರನ್ನು ಕಳೆದುಕೊಂಡು ಅಪ್ಪು ಅವರ ಕುಟುಂಬ ಸಿನಿಮಾರಂಗ ಮಾತ್ರವಲ್ಲದೆ ಇಡೀ ಕರುನಾಡು ನೋ’ವಿನಲ್ಲಿದೆ. ಅಪ್ಪು ಮೇಲೆ ಕನ್ನಡದ ಜನತೆ ಅಷ್ಟೊಂದು ಪ್ರೀತಿ ಇಟ್ಟಿದ್ದರು ಈ ಪ್ರೀತಿಗೆ ಸಾಕ್ಷಿ ಅಪ್ಪು ಅವರು ಅಗಲಿದ ದಿನ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ಅಭಿಮಾನಿಗಳ ಜನಸಂಖ್ಯೆ ಎಂದೇ ಹೇಳಬಹುದು. ಅಪ್ಪು ಎನ್ನುವ ಒಬ್ಬ ಕಲಾವಿದನ ಸಾವು ಸಾಮಾನ್ಯ ಸಾವಾಗಿರದೆ ಇಡೀ ಕರ್ನಾಟಕಕ್ಕೆ ಸೂತಕದ ಛಾಯೆ ನಿರ್ಮಿಸಿತ್ತು. ಯಾಕೆಂದರೆ ಕರುನಾಡಿನ ಮನೆ ಮನೆಗಳಲ್ಲೂ ಸಹ ಜನ ತಮ್ಮ ಕುಟುಂಬದ ಒಬ್ಬ ವ್ಯಕ್ತಿಯನ್ನೇ ಕಳೆದುಕೊಂಡ ರೀತಿ ಭಾವದಲ್ಲಿದ್ದರು. ಅಪ್ಪು ಅವರು ಬಾಲ್ಯದಿಂದಲೇ ಸಿನಿಮಾಗಳಲ್ಲಿ ನಟಿಸಿದ್ದರು. ನಮ್ಮ ತಂದೆಯ ಜೊತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಪುನೀತ್ ರಾಜಕುಮಾರ್ ಅವರು ಚಿಕ್ಕವಯಸ್ಸಿನಲ್ಲಿಯೇ ಬೆಟ್ಟದ ಹೂವು ಎನ್ನುವ ಸಿನಿಮಾದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ್ದರು. ಬಾಲ್ಯದಿಂದ ತುಂಬಾ ಚುರುಕಾಗಿದ್ದ ಈ ಕಲಾವಿದನ ಅಭಿನಯಕ್ಕೆ ಮನಸೋಲದವರೇ ಇಲ್ಲ. ಜೊತೆಗೆ ಅಪ್ಪು ಅವರು ಹಾಡುಗಳನ್ನು ಸಹ ಹಾಡುತ್ತಿದ್ದರು.

ಜೊತೆಗೆ ಹಿರಣ್ಯಕಶ್ಯಪುವಿನ ಅಂತಹ ಪಾತ್ರಗಳ ಎದುರಿಗೆ ನಿಂತು ಭಕ್ತ ಪ್ರಹ್ಲಾದನ ಡೈಲಾಗ್ ಗಳನ್ನು ಸರಾಗವಾಗಿ ಹೇಳುತ್ತಿದ್ದ ಚತುರತೆಯನ್ನು ನೋಡಿದ ಯಾರಿಗೆ ಆದರೂ ಖಂಡಿತ ಅಪ್ಪು ಇಷ್ಟವಾಗಿ ಹೋಗುತ್ತಿದ್ದರು. ಬೆಳೆಯುತ್ತಿದ್ದಂತೆ ಪುನೀತ್ ರಾಜಕುಮಾರ್ ಅವರು ಅಭಿನಯದಿಂದ ಕೊಂಚ ಬ್ರೇಕ್ ತೆಗೆದುಕೊಂಡು ಬಿಸಿನೆಸ್ ಕಡೆ ತಮ್ಮ ಆಸಕ್ತಿಯನ್ನು ಮುಂದುವರಿಸಿದ್ದರು. ಆದರೆ ಪುನೀತ್ ರಾಜಕುಮಾರ್ ಅವರ ಮೇಲೆ ಹಲವಾರು ಅಪವಾದಗಳು ಕೇಳುತ್ತ ಬರುತ್ತಿದ್ದವು ಆದರೆ ಅದು ಯಾವುದು ನಿಜ ಸುದ್ದಿ ಆಗಿರಲಿಲ್ಲ. ಇದೆಲ್ಲಾ ಅಣ್ಣಾವ್ರ ಕಿವಿಗೆ ಬರುತ್ತಿದ್ದಂತೆ ಮಗನಿಗೆ ಬಿಸಿನೆಸ್ ನಿಲ್ಲಿಸುವ ಬಗ್ಗೆ ರಾಜಕುಮಾರ್ ಅವರು ಹೇಳಿದರು. ನಂತರ ತಮ್ಮ ಕುಟುಂಬದ ಪ್ರೊಡಕ್ಷನ್ ಕೆಲಸಗಳನ್ನು ನೋಡಿಕೊಳ್ಳುವುದರಲ್ಲಿ ತಾಯಿಗೆ ಸಹಾಯ ಮಾಡಲು ನಿಂತ ಪುನೀತ್ ರಾಜಕುಮಾರ್ ಅವರು ಹಲವು ವರ್ಷಗಳವರೆಗೆ ವಜ್ರೇಶ್ವರಿ ಕಂಬೈನ್ಸ್ ಪ್ರೊಡಕ್ಷನ್ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದನು. ಮತ್ತೊಮ್ಮೆ ಒಂದು ಒಳ್ಳೆಯ ಕಥೆಯ ಜೊತೆಗೆ ಜೊತೆಗೆ ಸಿನಿಮಾರಂಗಕ್ಕೆ ಮರು ಎಂಟ್ರಿ ಕೊಡಲು ಕಾಯುತ್ತಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ 2000ನೇ ಇಸವಿಯಲ್ಲಿ ಅಪ್ಪು ಎನ್ನುವ ಸಿನಿಮಾದ ಕಥೆ ಇಷ್ಟವಾಗಿತ್ತು.

ಅಪ್ಪು ಎನ್ನುವ ಅದ್ಭುತ ಪ್ರೇಮಕಥೆಯ ಜೊತೆಗೆ ಸಿನಿಮಾ ಲೋಕಕ್ಕೆ ಮತ್ತೊಮ್ಮೆ ಕಂಬ್ಯಾಕ್ ಮಾಡಿದ ಪುನೀತ್ ರಾಜಕುಮಾರ್ ಅವರು ನಂತರದ ದಿನಗಳಲ್ಲಿ ಒಂದೊಂದಾಗಿ ವಿಭಿನ್ನ ರೀತಿಯ ಕಥೆಗಳನ್ನು ಇಟ್ಟುಕೊಂಡು ಸಿನಿಮಾಗಳನ್ನು ಮಾಡುತ್ತಾ ಮತ್ತೊಮ್ಮೆ ಕನ್ನಡಿಗರ ಮನಗೆದ್ದರು. ಬೆಳೆಯುತ್ತಿದ್ದಂತೆ ತುಂಬಾ ಪ್ರಬುದ್ಧತೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದ ಅಪ್ಪು ಅವರು ತಮ್ಮ ಸಿನಿಮಾಗಳ ಕಥೆಗಳ ಆಯ್ಕೆಯ ವಿಚಾರದಲ್ಲಿ ಕೂಡ ತುಂಬ ಯೋಚನೆಮಾಡಿ ನಿರ್ಧಾರ ತೆಗೆದು ಕೊಳ್ಳುತ್ತಿದ್ದರು. ಇವರು ಮಾಡುತ್ತಿದ್ದ ಸಿನಿಮಾದ ಕಥೆಗಳು ಎಂಟರ್ಟೈನ್ಮೆಂಟ್ ಜೊತೆಗೆ ಜನರಿಗೆ ಒಂದು ಒಳ್ಳೆಯ ಸಂದೇಶವನ್ನು ಕೂಡ ನೀಡುತ್ತಿತ್ತು. ಹಾಗಾಗಿ ಪುನೀತ್ ರಾಜಕುಮಾರ್ ಅವರ ಸಿನಿಮಾಗಳನ್ನು ಕಂಡರೆ ಅಭಿಮಾನಿಗಳು ಬಹಳ ಇಷ್ಟಪಟ್ಟು ನೋಡುತ್ತಿದ್ದರು. ಅಪ್ಪು ಅವರನ್ನು ಜನ ಸಿನಿಮಾಗಳಲ್ಲಿ ಮಾತ್ರವಲ್ಲದೆ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕೂಡ ನೋಡಿ ಮೆಚ್ಚಿಕೊಂಡಿದ್ದರು. ಕನ್ನಡದ ಕೋಟ್ಯಾಧಿಪತಿ ಎನ್ನುವ ಕಾರ್ಯಕ್ರಮ ಹಾಗೂ ಫ್ಯಾಮಿಲಿ ಪವರ್ ಎನ್ನುವ ಎರಡು ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಿದ್ದರು. ಇಡೀ ಕುಟುಂಬವೇ ಒಟ್ಟಿಗೆ ಕೂತು ನೋಡಲು ಇಷ್ಟಪಡುತ್ತಿದ್ದ ಎರಡು ಕಾರ್ಯಕ್ರಮಗಳಲ್ಲೂ ಕೂಡ ಅದ್ಭುತವಾಗಿ ನಿರೂಪಣೆ ಮಾಡುತ್ತಿದ್ದ ಪುನೀತ್ ರಾಜಕುಮಾರ್ ಅವರು ಈ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು ಹಾಗೂ ಅವರು ಯಾವಾಗಲೂ ಜನರ ಒಳಿತಿನ ಬಗ್ಗೆ ಯೋಚಿಸುತ್ತಿದ್ದರು.

ಉಳಿದ ಎಲ್ಲಾ ಸೆಲೆಬ್ರಿಟಿಗಳಿಗೆ ಎಂತಲೂ ಹೆಚ್ಚಾಗಿ ಪುನೀತ್ ರಾಜಕುಮಾರ್ ಅವರೇ ಸಮಾಜ ಸೇವೆಗೆ ಹೆಚ್ಚಿನ ಸಮಯ ಹಾಗೂ ಹಣವನ್ನು ಮುಡಿಪಾಗಿಟ್ಟಿದ್ದರು. ಆದರೆ ಈ ವಿಚಾರಗಳು ಹೆಚ್ಚಾಗಿ ಬೆಳಕಿಗೆ ಬಂದಿದ್ದು ಅವರು ನಮ್ಮನ್ನೆಲ್ಲಾ ಅಗಲಿ ಹೋದಮೇಲೆಯೇ ಎನ್ನುವುದೇ ಬೇಸರದ ವಿಷಯ. ಅವರ ಅಗಲಿಕೆಯ ನೋವಿನ ದುಃಖವನ್ನು ಅಪ್ಪು ಅವರ ಕುಟುಂಬಸ್ಥರು ಅರಗಿಸಿಕೊಂಡು ಜೊತೆಗೆ ವಾಸ್ತವವನ್ನು ಒಪ್ಪಿಕೊಂಡು ಸಹಜ ಬದುಕಿನತ್ತ ಗಮನ ಹರಿಸುತ್ತಿದ್ದಾರೆ. ಜೊತೆಗೆ ಅಪ್ಪು ಅವರ ಗನ್ ಮ್ಯಾನ್ ಆಗಿದ್ದ ಚಲಪತಿ ಅವರು ಕೂಡ ಅಪ್ಪು ಮನೆ ತೊರೆದು ಸ್ವಂತ ಊರಿನ ಕಡೆ ಹೊರಟಿದ್ದಾರೆ. ಈ ಬಗ್ಗೆ ಮಾಧ್ಯಮದ ಜೊತೆ ಮಾಹಿತಿ ಹಂಚಿಕೊಂಡಿರುವ ಚಲಪತಿ ಅವರು ಅಪ್ಪು ಅವರು ಇಲ್ಲದೆ ಇದ್ದಾಗಲೂ ಅಶ್ವಿನಿ ಅವರಿಗೆ ಬಾಡಿ ಗಾರ್ಡ್ ಆಗಿ ಕೆಲಸ ಮಾಡಿದ್ದೆ. ಆದರೆ ಈಗ ಇಲ್ಲಿ ಹೆಚ್ಚಿನ ಕೆಲಸವಿಲ್ಲ ಪ್ರತಿದಿನ ಬಂದು ಸುಮ್ಮನೆ ಕುಳಿತು ಹೋಗಲು ತುಂಬಾ ಬೇಸರವಾಗುತ್ತಿದೆ ಹಾಗಾಗಿ ನಾನು ಬೇರೆ ಯಾವ ನಟನಿಗೂ ಮತ್ತೆ ಬಾಡಿಗಾರ್ಡ್ ಆಗಲು ಇಷ್ಟಪಡುವುದಿಲ್ಲ. ಅಪ್ಪು ಸರ್ ನನ್ನನ್ನು ಕುಟುಂಬದ ಸದಸ್ಯರ ರೀತಿ ನೋಡಿಕೊಂಡಿದ್ದರು ಇಲ್ಲಿ ಇದ್ದಷ್ಟು ನನಗೆ ಅವರ ನೆನಪು ಹೆಚ್ಚಾಗಿ ಕಾಡುತ್ತಿದೆ ಹಾಗಾಗಿ ನಾನು ಸ್ವಂತ ಊರಿನ ಕಡೆ ಹೊರಡುವ ನಿರ್ಧಾರ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಚಲಪತಿ ಅವರ ಈ ನಿರ್ಧಾರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ.

Cinema Updates Tags:Appu, Chalapathi
WhatsApp Group Join Now
Telegram Group Join Now

Post navigation

Previous Post: ಲಕ್ಷ್ಮಿ ಮಗಳು ಬೀದಿ ಬದಿಯಲ್ಲಿ ಸೋಪ್ ಮಾರುತ್ತಿದ್ದಾರೆ, ಅವಕಾಶವಿಲ್ಲದೆ ಬೀದಿಗೆ ಬಿದ್ದ ಐಶ್ವರ್ಯ ಭಾಸ್ಕರನ್
Next Post: ಊಟ ಇಲ್ಲದೆ ಬೇಕಾದ್ರು ಬದುಕುತ್ತಿನಿ ಸೆ-ಕ್ಸ್ ಇಲ್ಲದೆ ಬದುಕಲು ಸಧ್ಯಾವಿಲ್ಲ ಎಂಬ ಶಾ-ಕಿಂಗ್ ಹೇಳಿಕೆ ಕೊಟ್ಟ ಸಮಂತಾ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore