ಅಪ್ಪು ದಾನ ಧರ್ಮ ಮಾಡುವುದರಲ್ಲಿ ಎತ್ತಿದ ಕೈ ಎಂದಿಗೂ ಕೂಡ ತಾನು ಮಾಡಿದಂತಹ ದಾನ ಧರ್ಮವನ್ನು ಮತ್ತೊಬ್ಬರೊಟ್ಟಿಗೆ ಹೇಳಿಕೊಳ್ಳುತ್ತಿರಲಿಲ್ಲ. ಅಷ್ಟೇ ಅಲ್ಲದೆ ಸಹಾಯ ಪಡೆದಂತಹ ವ್ಯಕ್ತಿಗೂ ಕೂಡ ನಾನೇ ಇದನ್ನು ಮಾಡಿದ್ದೇನು ಎಂಬುದನ್ನು ಯಾರಿಗೂ ಕೂಡ ಹೇಳಬಾರದು ಎಂಬ ಮಾತನ್ನು ತೆಗೆದುಕೊಳ್ಳುತ್ತಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೂ ಕೂಡ ತಿಳಿಯಬಾರದು ಅಂತಹ ವ್ಯಕ್ತಿತ್ವವನ್ನು ಒಳಗೊಂಡಿದ್ದರು. ಇಂತಹ ಒಳ್ಳೆಯ ವ್ಯಕ್ತಿ ಇದ್ದಕ್ಕಿದ್ದ ಹಾಗೆ ನಮ್ಮೆಲ್ಲರನ್ನು ಬಿಟ್ಟು ಹೋದರು ಅಂದರೆ ಆ ದಿನವನ್ನು ಯಾರಿಂದಲೂ ಕೂಡ ಊಹೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅಷ್ಟೇ ಅಲ್ಲದೆ ಅಪ್ಪು ಅವರು ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ನಮ್ಮಿಂದ ಈಗಲೂ ಕೂಡ ಸಾಧ್ಯವಾಗುತ್ತಿಲ್ಲ.
ಅಪ್ಪು ಕೇವಲ ನಟ ಮಾತ್ರ ಅಲ್ಲ ಅದ್ಬುತ ಡ್ಯಾನ್ಸರ್ ಉತ್ತಮ ಸಂಗೀತಗಾರ ಇನ್ನ ಸಮಾಜ ಸೇವೆ ವಿಷಯದಲ್ಲಿ ಹೇಳಬೇಕಾದ ಅಗತ್ಯವೇ ಇಲ್ಲ. ಏಕೆಂದರೆ ನಿಮ್ಮೆಲ್ಲರಿಗೂ ಕೂಡ ಈಗಾಗಲೇ ತಿಳಿದಿದೆ ಅಪ್ಪು ಅವರು ವಿಧಿವಶಾರಾದ ಮೇಲೆ ಅವರು ಎಷ್ಟು ಸಹಾಯ ಮಾಡಿದರು ಎಂಬ ವಿಚಾರ ತಿಳಿದೇ ಇದೆ. ಇನ್ನು ಸಮಾಜಸೇವೆ ವಿಚಾರವನ್ನು ಬಿಟ್ಟು ದೇಶಭಿಮಾನ ಹಾಗೂ ನಾಡು ನುಡಿ ನೆಲ ಜಲದ ವಿಚಾರಕ್ಕೆ ಬಂದರೆ ಅವರೇ ಮೊದಲು ನಿಂತುಕೊಳ್ಳುತ್ತಿದ್ದರು ಕನ್ನಡದ ಮೇಲೆ ಅಷ್ಟೊಂದು ಅಪಾರ ಪ್ರೀತಿಯನ್ನು ಹೊಂದಿದ್ದರು. ಅಪ್ಪು ಅವರ ಬಳಿ ಸಮಸ್ಯೆ ಅಂತ ಹೋದಾಗ ಅದನ್ನು ಬಗೆಹರಿಸುತ್ತಿದ್ದರು ಅಪ್ಪು ಅವರ ಮನೆಗೆ ಹೋಗಿ ಬರಿಗೈನಲ್ಲಿ ಬಂದಂತಹ ವ್ಯಕ್ತಿಗೆ ಇಲ್ಲ ಅಂತಾನೆ ಹೇಳಬಹುದು.
ಇದೆಲ್ಲ ಒಂದು ಕಡೆಯಾದರೆ ಅಪ್ಪು ಅವರು ಕನ್ನಡದ ಕೋಟ್ಯಾಧಿಪತಿ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದದ್ದು ನಿಮಗೆಲ್ಲರಿಗೂ ತಿಳಿದೇ ಇದೆ ಸುಮಾರು ನಾಲ್ಕು ಸೀಸನ್ಗಳನ್ನು ನಡೆಸಿ ಕೊಟ್ಟರು. ಸಾಮಾನ್ಯವಾಗಿ ನಟ ಆಗಿರ ಬಹುದು ನಿರೂಪಕ ಆಗಿರಬಹುದು ಯಾವುದೇ ಕಾರ್ಯಕ್ರಮ ನಡೆಸಿಕೊಟ್ಟರು ಕೂಡ ಅದಕ್ಕೆ ಇಂತಿಷ್ಟು ಸಂಭಾವನೆ ಅಂತ ಮೊದಲೇ ನಿಗದಿ ಮಾಡಿರುತ್ತಾರೆ. ಹಾಗಾಗಿ ಅಪ್ಪು ಅವರಿಗೂ ಕೂಡ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಒಂದು ಸೀಸನ್ಗೆ ಎಂಟು ಕೋಟಿ ಅಂತ ನಿಗದಿ ಮಾಡಿದ್ದರು. ಪ್ರತಿ ಸೀಸನ್ನಲ್ಲಿಯೂ ಪಡೆದಂತಹ ಸಂಭಾವನೆಯನ್ನು ಅಪ್ಪು ಅವರು ಎಂದಿಗೂ ಕೂಡ ತಮ್ಮ ವೈಯಕ್ತಿಕ ವಿಚಾರಗಳಿಗೆ ಖರ್ಚು ಮಾಡಿಲ್ಲ. ಹೌದು ಅಪ್ಪು ಅವರು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಿಂದ ಬಂದಂತಹ ಹಣವನ್ನು ಶಕ್ತಿಧಾಮ ಎಂಬ ಸಂಸ್ಥೆಗೆ ವಿನಿಯೋಗ ಮಾಡುತ್ತಿದ್ದರು.
ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ಅವರು ನಿರ್ಮಾಣ ಮಾಡಿದಂತಹ ಶಕ್ತಿ ಧಾಮ ಎಂಬ ಸಂಸ್ಥೆ ಮೈಸೂರಿನಲ್ಲಿ ಇರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಇಲ್ಲಿ ಸುಮಾರು 1800ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದರೆ. ಅದರಲ್ಲಿಯೂ ಕೂಡ ಎಲ್ಲರೂ ಬಡವರ್ಗದಿಂದ ಬಂದಂತಹ ಹೆಣ್ಣು ಮಕ್ಕಳೆ ಹಾಗಾಗಿ ಈ ಹೆಣ್ಣು ಮಕ್ಕಳಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ಮತ್ತು ಶಿಕ್ಷಣ ನೀಡುವುದು ಸಲುವಾಗಿ ಬೇಕಾದಂತಹ ಎಲ್ಲಾ ಸವಲತ್ತುಗಳನ್ನು ಅಪ್ಪು ಅವರು ಒದಗಿಸಿ ಕೊಡುತ್ತಿದ್ದರು. ಈ ಒಂದು ಸಂಸ್ಥೆಯನ್ನು ಮುನ್ನಡೆಸಿ ಕೊಡುವುದಕ್ಕೆ ಅಪ್ಪು ಅವರು ಕನ್ನಡದ ಕೋಟ್ಯಾಧಿಪತಿ ಎಂಬ ಕಾರ್ಯಕ್ರಮದಿಂದ ಬರುತ್ತಿದ್ದಂತಹ ಸಂಭಾವನೆಯನ್ನು ವಿನಿಯೋಗ ಮಾಡುತ್ತಿದ್ದರು. ಈ ವಿಚಾರವನ್ನು ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಆದಂತಹ ಭಗವಾನ್ ಸತ್ಯ ಅವರು ಬಿಚ್ಚಿಟ್ಟಿದ್ದಾರೆ. ಭಗವಾನ್ ಸತ್ಯ ಹಾಗೂ ರಾಜಕುಮಾರ್ ಕುಟುಂಬಕ್ಕೆ ಅವಿನ ಭಾವನ ಸಂಬಂಧ ಈ ಕುಟುಂಬದ ಬಹುತೇಕ ವಿಚಾರಗಳು ಭಗವಾನ್ ಅವರಿಗೆ ತಿಳಿದೆ ಇತ್ತು.
ಸಂದರ್ಶನದಲ್ಲಿ ಮಾತನಾಡಬೇಕಾದರೆ ಅಪ್ಪು ಅವರು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಿಂದ ಬರುತ್ತಿದ್ದಂತಹ ಸಂಭಾವನೆ ಹಣವನ್ನು ಶಕ್ತಿಧಾಮ ಕೇಂದ್ರಕ್ಕಾಗಿ ವಿನಿಯೋಗ ಮಾಡುತ್ತಿದ್ದರು ಎಂಬ ವಿಚಾರವನ್ನು ಬಾಯಿ ಬಿಟ್ಟಿದ್ದಾರೆ. ನಿಜಕ್ಕೂ ಅಪ್ಪು ಅವರ ಸಮಾಜ ಸೇವೆಯನ್ನು ನಾವೆಲ್ಲರೂ ಮೆಚ್ಚಲೇಬೇಕು ಅಷ್ಟೇ ಅಲ್ಲದೆ ಇವರ ವ್ಯಕ್ತಿತ್ವಕ್ಕೆ ನಾವು ಒಂದು ಸಲಾಂ ಹೊಡೆಯಲೇಬೇಕು. ಏಕೆಂದರೆ ತಮಗೆ ಬರುವಂತಹ ಸಂಭಾವನೆಯನ್ನು ಅವರ ವೈಯಕ್ತಿಕ ವಿಚಾರಕ್ಕೆ ಬಳಕೆ ಮಾಡದೆ ಕೇವಲ ಸಮಾಜಕ್ಕಾಗಿ ಬಡ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಇಂತಹ ಒಳ್ಳೆಯ ಮನಸ್ಸನ್ನು ಹೊಂದಿದ್ದಕ್ಕೆ ಏನೋ ಅಪ್ಪು ಅವರು ಇಷ್ಟು ಬೇಗ ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದು ಅಂತ ಅನಿಸುತ್ತದೆ. ನಿಜಕ್ಕೂ ದೇವರಿಗೂ ಕೂಡ ಹಿಡಿ ಶಾಪವಿರಲಿ ನಮ್ಮ ಅಪ್ಪು ಅವರನ್ನು ಕರೆದುಕೊಂಡಿದ್ದಕ್ಕಾಗಿ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ಶೇರ್ ಮಾಡಿ ಮತ್ತು ಲೈಕ್ ಮಾಡಿ.