ಕನ್ನಡ ಚಲನಚಿತ್ರ ರಂಗಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕರುನಾಡ ರಾಜಕುಮಾರ, ಯುವಕರ ಪಾಲಿಗೆ ಸ್ಪೂರ್ತಿ ತುಂಬುವ ಯುವರತ್ನ, ಮಕ್ಕಳಿಗೆ ಪ್ರೀತಿಯ ಅಪ್ಪು, ಹಿರಿಯರ ಜೊತೆಗೆ ವಿನಯದಿಂದ ವರ್ತಿಸುತ್ತಿದ್ದ ನಮ್ಮ ಬಸವ, ಪ್ರತಿಕ್ಷಣವನ್ನು ಕೂಡ ಬಿಂದಾಸ್ ಆಗಿ ಜೀವಿಸುತ್ತಿದ್ದ ಅರಸು, ಆಕಾಶದ ಅಷ್ಟು ವಿಶಾಲವಾದ ಮನಸ್ಸನ್ನು ಹೊಂದಿದ್ದ, ಪೃಥ್ವಿ ತೂಕದ ಘನತೆ ಹೊಂದಿದ್ದ ವಂಶಿ, ಭಾಷೆಯ ವಿಚಾರವಾಗಿ ಬಂದರೆ ವೀರ ಕನ್ನಡಿಗ. ಅಭಿನಯದ ವಿಷಯದಲ್ಲಿ ನಟಸಾರ್ವಭೌಮ, ಬೆಲೆಕಟ್ಟಲಾಗದ ಬೆಟ್ಟದ ಹೂವು, ಅಭಿಮಾನಿಗಳ ಮನದಲ್ಲಿ ಎಂದೂ ಮಿನುಗುವ ನಕ್ಷತ್ರ, ವಿಶ್ವದಾದ್ಯಂತ ಕೋಟ್ಯಂತರ ಮನೆಗಳನ್ನು ಗೆದ್ದ ಕನ್ನಡದ ಕೋಟ್ಯಾಧಿಪತಿ, ಎಂತಹ ಸ್ಟಂಟ್ಸ್ ಗಳೇ ಆದರೂ ಡ್ಯೂಪ್ ಇಲ್ಲದೆ ಮಾಡುತ್ತಿದ್ದ ಅಂಜನಿಪುತ್ರ ಹೀಗೆ ಅಪ್ಪು ಎನ್ನುವ ಮಹಾನ್ ವ್ಯಕ್ತಿತ್ವದ ಬಗ್ಗೆ ಎಷ್ಟು ಹೊಗಳಿದರೂ ಕೂಡ ಪದಗಳೇ ಸಾಲದು.
ನಾನಾ ವೇಷ ತೊಟ್ಟು ತೆರೆ ಮೇಲೆ ಅಭಿಮಾನಿಗಳನ್ನು ರಂಜಿಸಿದ ಪುನೀತ್ ಅಭಿನಯವನ್ನು ನೋಡಿ ಆಶ್ಚರ್ಯ ಪಡದವರಿಲ್ಲ ಹಾಗೂ ಮೆಚ್ಚದವರಿಲ್ಲ ಆದರೆ ಅವರ ನಿಜ ವ್ಯಕ್ತಿತ್ವ ತಿಳಿದ ಮೇಲೆ ಅವರ ಸಲುವಾಗಿ ಕಣ್ಣೀರಿಡದ ಹಾಗೂ ಅವರಿಗೆ ಕೈ ಮುಗಿಯದ ಯಾವ ಮನುಜನೂ ಇಲ್ಲ ಎನ್ನಬಹುದು. ಒಬ್ಬ ಮೇರು ನಟನ ಮಗನಾಗಿ ಹುಟ್ಟಿ ಮನುಷ್ಯ ಎಷ್ಟು ಸರಳವಾಗಿ ಹಾಗೂ ಸಂತೋಷವಾಗಿ ಅರ್ಥಪೂರ್ಣವಾಗಿ ಮತ್ತು ತಾನಿಲ್ಲದಾಗಲೂ ಕೂಡ ಇತರ ಜನರಿಗೆ ಹೇಗೆ ಸ್ಪೂರ್ತಿಯಾಗಿ ಬದುಕಬಹುದು ಎನ್ನುವುದನ್ನು ಹೇಳಿಕೊಟ್ಟು ಹೋದ ದೇವತಾ ಮನುಷ್ಯ ಪುನೀತ್ ರಾಜಕುಮಾರ್ ಅವರು. ಪುನೀತ್ ರಾಜಕುಮಾರ್ ಅವರು ಡಾಕ್ಟರ್ ರಾಜಕುಮಾರ್ ಅವರ ಕಿರಿಯ ಪುತ್ರ, ಪಾರ್ವತಮ್ಮ ರಾಜಕುಮಾರ್ ಅವರ ಮುದ್ದಿನ ಮಗ, ಶಿವಣ್ಣ ಹಾಗೂ ರಾಘಣ್ಣನ ಪ್ರೀತಿಯ ಸಹೋದರ ಮತ್ತು ಮಡದಿ ಹಾಗೂ ಮಕ್ಕಳ ಪಾಲಿಗಂತೂ ಅಪ್ಪುವೇ ಎಲ್ಲಾ.
ಬದುಕಿನಲ್ಲಿ ಎಲ್ಲವೂ ಇತ್ತು. ಹಲವಾರು ಬಿಸಿನೆಸ್ ಗಳು, ಕೋಟ್ಯಂತರ ಹಣ, ಪ್ರೀತಿಯಿಂದ ವರಿಸಿದ ಮಡದಿ, ಕರ್ನಾಟಕವೇ ಹೆಮ್ಮೆಪಡುವಂಥ ಮಕ್ಕಳು, ಕೈ ತುಂಬಾ ಬಿಡುವು ಇಲ್ಲದಷ್ಟು ಕೆಲಸ, ಲೆಕ್ಕವಿಟ್ಟು ಹೇಳಲಾಗದಷ್ಟು ಅಭಿಮಾನಿಗಳ ಪ್ರೀತಿ ಒಬ್ಬ ಸಾಮಾನ್ಯ ಮನುಷ್ಯನಿಗೆ ಈ ಎಲ್ಲಾ ಸಿಕ್ಕಿ ಬಿಟ್ಟರೆ ಅವನು ಯಾವ್ಯಾವ ರೀತಿಯಲ್ಲಿ ಮೆರೆಯುತ್ತಾನೆ ಗೊತ್ತಿಲ್ಲ ಆದರೆ ಪುನೀತ್ ರಾಜಕುಮಾರ್ ಅವರದು ಮಾತ್ರ ಚಿನ್ನತಂತಹ ವ್ಯಕ್ತಿತ್ವ. ದೇವರು ತನಗೆ ಕೊಟ್ಟಿದ್ದರಲ್ಲಿ ಬಹುತೇಕ ಪಾಲನ್ನು ಬಡ ಜನರಿಗಾಗಿ ನಿರ್ಗತಿಕರಿಗಾಗಿ ಹಾಗೂ ಅಸಹಾಯಕರಾಗಿ ಗೌಪ್ಯವಾಗಿ ಹಂಚಿಹೋದ ನೊಂದವರ ಪಾಲಿನ ಕಣ್ಣೀರೊರೆಸುವ ದೇವರು. ಬಹುತೇಕ ಕನ್ನಡಿಗರ ಪಾಲಿಗೆ ಅಪ್ಪುವೇ ದೇವರು ಎಂದರೂ ಪಕೂಡ ತಪ್ಪಾಗಲಾಗದು. ಇದಕ್ಕೆ ಆ ದೇವರಿಗೂ ಕೂಡ ಹೊಟ್ಟೆಕಿಚ್ಚು ಬಂದು ಅಪ್ಪುವನ್ನು ಅವರ ಜೊತೆ ಕರೆದುಕೊಂಡು ಹೋಗಿಬಿಟ್ಟರು ಎನಿಸುತ್ತದೆ. ಅಪ್ಪುವನ್ನು ಕಳೆದುಕೊಂಡು ಇಡೀ ಕರ್ನಾಟಕವೇ ಹೇಳದಾಗದಷ್ಟು ನೋವನ್ನು ಅನುಭವಿಸುತ್ತಿದೆ.
ಆದರೆ ದಿಢೀರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಅವರ ಹೊಸ ಫೋಟೋ ಒಂದು ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಅಪ್ಪು ಅವರು ಉದ್ದ ಕೂದಲು ಹಾಗೂ ಉದ್ದ ಗಡ್ಡ ಬಿಟ್ಟು ಕಾಣಿಸಿಕೊಂಡಿದ್ದಾರೆ. ಹಿಂದೊಮ್ಮೆ ರಾಪಿಡ್ ರಶ್ಮಿ ಅವರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ ಅಪ್ಪು ಅವರು ಹೇಳಿದ್ದರು, ನನಗೆ ಯಶ್ ಅವರಂತೆ ಉದ್ದ ಗಡ್ಡ ಬಿಡಲು ಇಷ್ಟ ಆದರೆ ನನಗೆ ಆ ರೀತಿ ಆಗುವುದೇ ಇಲ್ಲ ಎಂದು ಹೇಳಿದ್ದರು. ಈಗ ಅಭಿಮಾನಿ ಒಬ್ಬ ಅವರ ಕೈಚಳಕದಿಂದ ಅಪ್ಪು ಅವರಿಗೆ ಅವರಿಷ್ಟದ ಗೆಟಪ್ ಕೊಟ್ಟು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳೆಲ್ಲರೂ ಮತ್ತೊಮ್ಮೆ ಅಪ್ಪುವಿಗಾಗಿ ಕಣ್ಣೀರು ಸುರಿಸುತ್ತಿದ್ದಾರೆ.