Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಗಣೇಶ ಹಬ್ಬದ ನೆಪದಲ್ಲಿ ಮತ್ತೆ ಬರಲಿದ್ದಾರೆ ಅಪ್ಪು, ಗಣೇಶನೊಟ್ಟಿಗೆ ಇರುವ ಅಪ್ಪು ಪ್ರತಿಮೆ ನೋಡಿ ಅಶ್ವಿನಿ ಹೇಳಿದ್ದೇನು ಗೊತ್ತ ನಿಜಕ್ಕೂ ಕಣ್ಣೀರು ಬರುತ್ತೆ.

Posted on July 15, 2022 By Kannada Trend News No Comments on ಗಣೇಶ ಹಬ್ಬದ ನೆಪದಲ್ಲಿ ಮತ್ತೆ ಬರಲಿದ್ದಾರೆ ಅಪ್ಪು, ಗಣೇಶನೊಟ್ಟಿಗೆ ಇರುವ ಅಪ್ಪು ಪ್ರತಿಮೆ ನೋಡಿ ಅಶ್ವಿನಿ ಹೇಳಿದ್ದೇನು ಗೊತ್ತ ನಿಜಕ್ಕೂ ಕಣ್ಣೀರು ಬರುತ್ತೆ.

ಇನ್ನೇನು ಆಷಾಡ ಮುಗಿಯಿತು, ಶ್ರಾವಣ ಮಾಸದ ಆಗಮನವಾಗಲಿದೆ. ಶ್ರಾವಣದಲ್ಲಿ ಹಬ್ಬಗಳ ಸಾಲೇ ಸಾಲು ಅದರಲ್ಲೂ ಮಕ್ಕಳು ಹಾಗೂ ಯುವಕರ ಪಾಲಿನ ಪ್ರೀತಿಯ ಹಬ್ಬವಾದ ವಿನಾಯಕ ಚತುರ್ಥಿ ಹಬ್ಬದ ಸಂಭ್ರಮ ತಿಂಗಳಿಗೆ ಮುಂಚೆಯಿಂದಲೇ ಶುರುವಾಗುತ್ತದೆ ಎನ್ನಬಹುದು. ಪ್ರತಿ ವರ್ಷ ಕೂಡ ದೇಶದ ನಾನಾ ಕಡೆಗಳಲ್ಲಿ ಅದ್ದೂರಿಯಾಗಿ ಈ ಹಬ್ಬ ಜರುಗುತ್ತದೆ ಹಾಗೂ ಊರು ಊರುಗಳಲ್ಲಿ ಕೂಡ ಮಕ್ಕಳು ಹುಡುಗರು ಚಂದ ಎತ್ತಿ ಗಣೇಶನನ್ನು ಕೂರಿಸಿ ಪೂಜಿಸುವ ವಾಡಿಕೆ ಹಿಂದಿನಿಂದಲೂ ಇದೆ. ಹೀಗಾಗಿ ಈ ಉಳಿದ ಎಲ್ಲಾ ಹಬ್ಬಗಳಿಗಿಂತ ಸಮುದಾಯದವರೆಲ್ಲರನ್ನು ಒಟ್ಟಾಗಿ ಸೇರಿಸುವ ನೆಪ ಹೊಂದಿರುವುದರಿಂದ ಗಣೇಶ ಚತುರ್ಥಿ ಹೆಚ್ಚು ಪ್ರಿಯ ಹಬ್ಬ ಎಂದು ಹೇಳಬಹುದು. ಈ ಗಣೇಶ ಹಬ್ಬದ ಆಚರಣೆಯ ಸಮಯದಲ್ಲಿ ತಂದುಕೂರಿಸುವ ಗಣೇಶನ ವಿಗ್ರಹ ಒಂದು ಹೆಚ್ಚಿನ ವಿಶೇಷತೆ ಹಾಗೂ ಆಕರ್ಷಣೆ. ಪ್ರತಿ ವರ್ಷವೂ ಕೂಡ ವಿವಿಧ ವಿನ್ಯಾಸದ ಗಣೇಶನ ವಿಗ್ರಹವನ್ನು ತಂದು ಪೂಜಿಸುತ್ತಾರೆ.

ಈ ವರ್ಷ ನಮ್ಮ ಏರಿಯಾದಲ್ಲಿ ಯಾವ ರೀತಿಯ ಗಣಪತಿಯನ್ನು ಕೂರಿಸುತ್ತಾರೆ ಎಂದು ನೋಡುವುದೇ ಒಂದು ರೀತಿಯ ಕುತೂಹಲವಾಗಿರುತ್ತದೆ. ಯಾಕೆಂದರೆ ಈಗಾಗಲೇ ನಾವು ಹಲವಾರು ವರ್ಷಗಳಿಂದ ವಿಭಿನ್ನ ವಿಭಿನ್ನ ಗಣೇಶನ ವಿಗ್ರಹಗಳು ಹಾಗೂ ಎತ್ತರದ ವಿಷಯದಲ್ಲಿ ವಿನ್ಯಾಸದ ವಿಷಯದಲ್ಲಿ ಬಣ್ಣದ ವಿಚಾರದಲ್ಲಿ ವಿಭಿನ್ನತೆ ಹೊಂದಿರುವ ಗಣೇಶ ವಿಗ್ರಹಗಳನ್ನು ನೋಡಿದ್ದೇವೆ. ಎಲ್ಲರೂ ದುಡ್ಡು ಹಾಕಿ ಅದ್ದೂರಿಯಾಗಿ ಮಾಡುವ ಈ ಆಚರಣೆ ಮನಸ್ಸಿಗೆ ಅಷ್ಟೇ ಖುಷಿಯನ್ನು ಕೊಡುತ್ತದೆ. ಹಲವು ಕಡೆ ಈ ಸಂದರ್ಭದಲ್ಲಿ ನಾಟಕ ನೃತ್ಯ ಆರ್ಕೆಸ್ಟ್ರಾ ಈ ರೀತಿ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡು ಜನರಿಗೆ ಮನರಂಜನೆಯನ್ನು ನೀಡುತ್ತಾರೆ. ಈ ವರ್ಷ ಅಂತಹ ವಿಭಿನ್ನ ವಿನ್ಯಾಸದ ಗಣೇಶನ ವಿಗ್ರಹ ದ ಬಗ್ಗೆ ಆಸಕ್ತಿ ಇರುವವರಿಗೆ ಹಾಗೂ ಅದರ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುವವರಿಗೆ ಸಂತಸವಾಗುವ ವಿಷಯ ಯಾಕೆಂದರೆ ಈ ವರ್ಷ ಅಪ್ಪು ಜೊತೆಯಲ್ಲಿ ಗಣೇಶ ಬರುತ್ತಿದ್ದಾರೆ.

ಹೌದು ಇದನ್ನು ಕೇಳಿದರೆ ಆಶ್ಚರ್ಯ ಅನ್ನಿಸಬಹುದು. ಆದರೆ ಈ ರೀತಿಯ ಕಲಾಕೃತಿಗಳು ಈಗಾಗಲೇ ಕಲಾವಿದ ಕೈ ಕುಂಚದಲ್ಲಿ ಮಿಂಚಿದ್ದು ಮಾರ್ಕೆಟ್ನಲ್ಲಿ ಈಗಾಗಲೇ ಈ ರೀತಿಯ ವಿಗ್ರಹಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಹಾಗೂ ಸಾಮಾಜಿಕ ಜಾಲತಾಣದಲ್ಲೂ ಕೂಡ ಈ ವಿಗ್ರಹಗಳನ್ನು ನೋಡಿದವರು ಅದನ್ನು ಫೋಟೋ ತೆಗೆದು ಹಂಚಿಕೊಂಡು ಈ ರೀತಿ ಕೂಡ ನಾವು ದೇವರನ್ನು ಪೂಜಿಸುವ ಜೊತೆಗೆ ದೇವತಾ ಮನುಷ್ಯನನ್ನು ಪೂಜಿಸೋಣ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ. ಈಗಾಗಲೇ ಯಾವುದೇ ಊರಿನ ಜಾತ್ರೆಯಾಗಲಿ ಹಬ್ಬವಾಗಲಿ ರಥೋತ್ಸವವಾಗಲಿ ಅಲ್ಲಿ ಅಪ್ಪು ಚಿತ್ರಪಟಕ್ಕೂ ಕೂಡ ಪೂಜೆ ಸಲ್ಲುತ್ತದೆ. ಅಲ್ಲದೆ ಸಿನಿಮಾಗೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮ ಇದ್ದರೂ ಕೂಡ ಮೊದಲು ಅಪ್ಪು ಅವರ ಫೋಟೋಗೆ ನಮನ ಸಲ್ಲಿಸಿ ನಂತರ ಕಾರ್ಯಕ್ರಮವನ್ನು ಆರಂಭಿಸುತ್ತಾರೆ. ಹೀಗೆ ಪ್ರತಿ ಮನೆ ಮನೆಗಳಲ್ಲಿ ಹಾಗೂ ಪ್ರತಿ ಮನಮನಗಳಲ್ಲಿ ಅಪ್ಪುಗೆ ಪೂಜೆ ಸಲ್ಲುತ್ತಿದೆ.

ಈ ಬಾರಿ ಗಣೇಶನ ಹಬ್ಬದಲ್ಲಿ ಸಹ ಅಪ್ಪುವನ್ನು ನೆನೆದುಕೊಂಡು ಅವರದೇ ಸಿನಿಮಾದ ಸಾಲಾದ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎನ್ನುವ ಮಾತನ್ನು ಜೀವಂತವಾಗಿ ಇಡುವ ಪ್ರಯತ್ನವನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ಇದು ಸಂಪೂರ್ಣವಾಗಿ ಮಣ್ಣಿನ ವಿಗ್ರಹವಾಗಿದ್ದು ಪರಿಸರ ಸ್ನೇಹಿ ಕೂಡ ಆಗಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ಫೋಟೋಗಳಲ್ಲಿ ಅಪ್ಪು ಅವರ ಮುಖವನ್ನು ಕೈಯಿಂದ ಮುದ್ದಿಸುತ್ತಿರುವ ಗಣೇಶನ ವಿಗ್ರಹ ಹಾಗೂ ಅಪ್ಪು ಜೊತೆ ಕೈ ಹಿಡಿದುಕೊಂಡು ನಡೆಯುತ್ತಿರುವ ಗಣೇಶನ ವಿಗ್ರಹ ಈ ರೀತಿಯ ವಿನ್ಯಾಸದ ವಿಗ್ರಹಗಳು ರೆಡಿ ಆಗಿರುವುದಾಗಿ ಕಾಣಿಸುತ್ತಿವೆ. ನೀವು ಕೂಡ ಈ ಗಣೇಶ ಮೂರ್ತಿ ಅಪ್ಪು ಜೊತೆ ಇರುವುದನ್ನು ಇಷ್ಟಪಡುವುದಾದರೆ ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಮಾಹಿತಿಯನ್ನು ತಪ್ಪದೇ ಶೇರ್ ಮತ್ತು ಲೈಕ್ ಮಾಡಿ.

Viral News Tags:Appu, Ganesha, Ganesha festival, Gowri
WhatsApp Group Join Now
Telegram Group Join Now

Post navigation

Previous Post: ಮುಸ್ಲಿಂ ಮಹಿಳೆಗೆ ಹಣ ಕೊಟ್ಟ ಸಿದ್ದರಾಮಯ್ಯ, ನಿಮ್ಮ ದುಡ್ಡು ಯಾರಿಗೆ ಬೇಕು ಎಂದು ವಾಪಸ್ ಎಸೆದ ಮಹಿಳೆ, ಈ ವೈರಲ್ ವಿಡಿಯೋ ನೋಡಿ.
Next Post: ಜೋಗಿ ಸಿನಿಮಾದಲ್ಲಿ ಮಿಂಚಿದ್ದ ಜೆನಿಫರ್ ಕೊತ್ವಾಲ್ ಬದುಕು ಈಗ ಹೇಗಾಗಿದೆ ಗೊತ್ತಾ.? ನಿಜಕ್ಕೂ ಕಣ್ಣೀರು ಬರುತ್ತೆ ಈ ನಟಿ ಕಥೆ ಕೇಳಿದ್ರೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore