ಕನ್ನಡದ ಪವರ್ ಸ್ಟಾರ್ ಅಭಿಮಾನಿಗಳ ದೇವರು ಕರ್ನಾಟಕದ ಕಣ್ಮಣಿ ಬಡವರ ನೋವಿಗೆ ಮಿಡಿಯುತ್ತಿದ್ದ ಧೀನಬಂದು ಡಾಕ್ಟರ್ ಪುನೀತ್ ರಾಜಕುಮಾರ್ ಅವರು ಇಡೀ ಕರ್ನಾಟಕದಾದ್ಯಂತ ಒಬ್ಬ ಸ್ಟಾರ್ ಹೀರೋ ಆಗಿ ದೊಡ್ಮನೆ ಹುಡುಗನಾಗಿ ಮಾತ್ರವಲ್ಲದೇ ಪ್ರತಿಯೊಂದು ಮನೆಯ ಜನರಿಗೂ ಅವರ ಕುಟುಂಬದ ಒಬ್ಬ ಸದಸ್ಯನಂತೆ ಆತ್ಮೀಯ ಅನುಬಂಧ ಹೊಂದಿದ್ದರು. ಪುನೀತ್ ರಾಜಕುಮಾರ್ ಅವರನ್ನು ಬಾಲ್ಯದಿಂದಲೇ ನಮ್ಮ ಜನ ಮೆಚ್ಚಿಕೊಂಡಿದ್ದಾರೆ. ಅವರ ಮುಗ್ಧ ನಗು, ಅಷ್ಟು ಚಿಕ್ಕ ವಯಸ್ಸಿಗೆ ಅವರು ಹೊಂದಿದ್ದ ಆ ಅದ್ಭುತ ಪ್ರತಿಭೆ, ಜೊತೆಗೆ ಅಪೂರ್ವ ಕಂಠಸಿರಿ ಎಲ್ಲರನ್ನು ಇವರತ್ತ ಸೆಳೆಯುವಂತೆ ಮಾಡಿತ್ತು. ಬಾಲ್ಯದಿಂದಲೇ ಅಪ್ಪನೊಂದಿಗೆ ಅಭಿನಯಿಸಲು ಶುರು ಮಾಡಿದ ಪುನೀತ್ ರಾಜಕುಮಾರ್ ಅವರು ಆಡುವ ವಯಸ್ಸಿಗೆ ರಾಷ್ಟ್ರಪತಿ ಅವರಿಂದ ರಾಷ್ಟ್ರಪ್ರಶಸ್ತಿ ಗಳಿಸಿಕೊಂಡು ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದಿದ್ದರು. ಅಪ್ಪು ಎನ್ನುವ ಹೆಸರಿನಿಂದ ಖ್ಯಾತಿಯಾದ ಈ ಬಾಲ ಪ್ರತಿಭೆ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆಯೇ.
ಬಾಲ್ಯದಿಂದಲೇ ಅಪ್ಪು ಅವರು ಅಭಿನಯದೊಂದಿಗೆ ಹಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ತೀರ ಆಶ್ಚರ್ಯ ಎನಿಸುವಂತೆ ಮಾಡುವ ಸಂಗತಿ ಯಾವುದೆಂದರೆ ಭಕ್ತ ಪ್ರಹ್ಲಾದ ಸಿನಿಮಾದಂತಹ ಅಷ್ಟು ಕಠಿಣ ಶ್ಲೋಕಗಳನ್ನು ಕೂಡ ನಿರರ್ಗಳವಾಗಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ಪು ಅವರು ತಮ್ಮ ಬಾಯಿಂದ ಅದ್ಭುತವಾಗಿ ಅರ್ಥಗರ್ಭಿತವಾಗಿ ಯಾವುದೇ ಲೋಪವು ಇಲ್ಲದಂತೆ ರಾಗಬದ್ಧವಾಗಿ ಹಾಡಿದ್ದು. ಈ ಕಲೆ ಅವರಿಗೆ ಅವರ ರಕ್ತದಿಂದಲೇ ಬಂದಿದೆ ಎಂದರೆ ತಪ್ಪಾಗಲಾರದು. ಅಣ್ಣಾವ್ರು ಸಹ ಓದಿದ್ದು ತುಂಬಾ ಕಡಿಮೆ ಆಗಿದ್ದರೂ ಕೂಡ ಅವರ ಕಂಠಸಿರಿ ಅಮೋಘವಾಗಿತ್ತು. ಯಾವುದೇ ಸಂಗೀತ ತರಗತಿಗಳನ್ನು ಪಡೆಯದಿದ್ದರೂ ಕೂಡ ತುಂಬಾ ರಾಗಬದ್ಧವಾಗಿ ಒಬ್ಬ ಗಾಯಕನಿಗೆ ಸಮವಾಗಿ ಅಣ್ಣಾವ್ರು ಆಡುತ್ತಿದ್ದರು. ಕನ್ನಡದಲ್ಲಿ ದಾಖಲೆ ಮಟ್ಟದಲ್ಲಿ ದೇವರ ಸ್ತುತಿಗಳನ್ನು ಹಾಡಿರುವ ಖ್ಯಾತಿ ಡಾ. ರಾಜಕುಮಾರ್ ಅವರಿಗೆ ಸಲ್ಲುತ್ತದೆ.
ಅದರಲ್ಲೂ ಮಲೈ ಮಹದೇಶ್ವರ ಅವರ ಜಾನಪದ ಗೀತೆಗಳನ್ನು ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಸೇರಿದಂತೆ ಹಲವಾರು ದೇವರುಗಳ ಭಕ್ತಿ ಸ್ತುತಿಗಳನ್ನು ಅಣ್ಣಾವ್ರು ತಮ್ಮ ಸಿರಿಕಂಠದಲ್ಲಿ ಹಾಡಿದ್ದಾರೆ. ಮತ್ತು ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ಮಾಣಿಕ್ಯ ವೀಣಾ ಉಪನಾಲಯಂತಿ ಅಂತಹ ಸಂಸ್ಕೃತ ಶ್ಲೋಕವನ್ನು ಕೂಡ ರಾಗಬದ್ಧವಾಗಿ ಯಾವುದೇ ಕಿಂಚಿತ್ತು ಚ್ಯುತಿ ಇಲ್ಲದಂತೆ ಅಣ್ಣಾವ್ರು ಹಾಡಿದ್ದಾರೆ. ಈ ಹಾಡನ್ನು ಇಂದಿಗೂ ಕೇಳಿದರೂ ಸಹ ಎಲ್ಲರ ಮೈ ರೋಮಾಂಚನಗೊಳ್ಳುತ್ತದೆ. ಅದೇ ಸಾಲಿಗೆ ಅಣ್ಣವರ ಕಿರಿಯ ಪುತ್ರ ಪುನೀತ್ ರಾಜಕುಮಾರ್ ಅವರು ಸೇರಿದರು. ಬಾಲ್ಯದಲ್ಲಿ ಇವರು ಹಾಡಿರುವ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಕಾಣದಂತೆ ಮಾಯವಾದನು, ಅಮ್ಮ ಸೀತಮ್ಮ ತಂದೆ ಶ್ರೀರಾಮ, ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ ಇನ್ನು ಮುಂತಾದ ಹಾಡುಗಳು ಎಂದಿಗೂ ಅಜರಾಮರ.
ಇತ್ತೀಚಿಗೆ ಕೂಡ ಅಪ್ಪು ಅವರು ಸಿನಿಮಗಳಿಗಾಗಿ ಹಾಡುತ್ತಿದ್ದರು. ಆಕಾಶ್, ಬಿಂದಾಸ್, ವೀರ ಕನ್ನಡಿಗ, ಟೋನಿ, ದೊಡ್ಮನೆ ಹುಡುಗ ಇನ್ನು ಮುಂತಾದ ಅನೇಕ ಸಿನಿಮಾ ಹಾಡುಗಳಿಗೆ ಅಪ್ಪು ಅವರು ಧ್ವನಿಯಾಗಿದ್ದರು. ಜೊತೆಗೆ ಅವರ ತಂದೆಯ ಸವಿನೆಪಿಗಾಗಿ ಅವರದೇ ಆದ ಅಶ್ವಿನಿ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರತಿ ವರ್ಷವೂ ಒಂದೊಂದು ಹಾಡನ್ನು ಹಾಡುತ್ತಿದ್ದರು. ಇತ್ತೀಚಿಗೆ ಮಂತ್ರಾಲಯದಲ್ಲೂ ಕೂಡ ರಾಘವೇಂದ್ರ ಸ್ವಾಮಿ ಅವರ ವರ್ಷಾರಾಧನೆಯಲ್ಲಿ ಹಾಡಿದ್ದರು. ಮತ್ತು ಸೋಶಿಯಲ್ ಮೀಡಿಯಾದಲ್ಲಿ ಈಗ ಅಪ್ಪು ಅವರು ಕೊನೆಯದಾಗಿ ತಮ್ಮ ಕುಟುಂಬದವರ ಜೊತೆ ಹಾಡಿದ ಹಾಡೊಂದು ವೈರಲ್ ಆಗಿದೆ. ಕುಟುಂಬದವರೆದೊಂದಿಗೆ ಅಪ್ಪು ಅವರು ಕೊನೆಯದಾಗಿ ಅಣ್ಣಾವ್ರ ಸಿನಿಮಾದ ಹಾಡೊಂದನ್ನು ಹಾಡಿದ್ದಾರೆ. ಈ ಹಾಡನ್ನು ಅವರು ಆಡುವಾಗ ಅವರ ಸುತ್ತಲೂ ಅವರ ಕುಟುಂಬದ ಎಲ್ಲಾ ಹೆಣ್ಣು ಮಕ್ಕಳು ಕುಳಿತಿದ್ದಾರೆ. ಈ ವಿಡಿಯೋವನ್ನು ನೋಡಿದರೆ ಎಂಥವರ ಕರುಳು ಕೂಡ ಚುರುಕ್ ಎನ್ನುವಂತಿದೆ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.